AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಯಕಿ ಪ್ರಧಾನ ಸಿನಿಮಾ ಮಾಡ್ತಾರಾ ಪ್ರಶಾಂತ್​ ನೀಲ್​? ಇಂಥ ಗಾಸಿಪ್​ ಹರಡಲು ಕಾರಣ ಇಲ್ಲಿದೆ..

Prashanth Neel: ರಾಕಿ ಭಾಯ್​ ನಿಧನದ ನಂತರ ಸಲಾರ್​ನ ಆಶ್ರಯದಲ್ಲಿ ಶಾಂತಿ ಬೆಳೆಯುತ್ತಾಳೆ. ಆಕೆಯ ಆಯಾಮದಿಂದಲೂ ಪ್ರಶಾಂತ್​ ನೀಲ್​ ಒಂದು ದೊಡ್ಡ ಕಥೆಯನ್ನು ಹೇಳಬಹುದು.

ನಾಯಕಿ ಪ್ರಧಾನ ಸಿನಿಮಾ ಮಾಡ್ತಾರಾ ಪ್ರಶಾಂತ್​ ನೀಲ್​? ಇಂಥ ಗಾಸಿಪ್​ ಹರಡಲು ಕಾರಣ ಇಲ್ಲಿದೆ..
ಪ್ರಶಾಂತ್ ನೀಲ್
TV9 Web
| Edited By: |

Updated on:May 29, 2022 | 11:52 AM

Share

‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಸೂಪರ್​ ಹಿಟ್​ ಆದ ಬಳಿಕ ಎಲ್ಲೆಲ್ಲೂ ಪ್ರಶಾಂತ್​ ನೀಲ್​ (Prashanth Neel) ಅವರ ಗುಣಗಾನ ಮಾಡಲಾಗುತ್ತಿದೆ. ಈ ಕನ್ನಡದ ನಿರ್ದೇಶಕನ ಪ್ರತಿಭೆ ವಿಶ್ವವ್ಯಾಪಿ ಹರಡಿದೆ. ಬೃಹತ್​ ಸಿನಿಮಾ ಮೂಲಕ ದೊಡ್ಡ ಮಟ್ಟದಲ್ಲಿ ಗೆಲುವು ಸಾಧಿಸಿದ ಪ್ರಶಾಂತ್​ ಅವರು ಸಾಕಷ್ಟು ನಿರ್ದೇಶಕರಿಗೆ ಮಾದರಿ ಆಗಿದ್ದಾರೆ. ಅವರಿಗೆ ಕೋಟ್ಯಂತರ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಪ್ರಶಾಂತ್​ ನೀಲ್​ ನಿರ್ದೇಶನ ಮಾಡಲಿರುವ ಮುಂದಿನ ಸಿನಿಮಾಗಳ (Prashanth Neel Next Movie) ಬಗ್ಗೆ ಭಾರೀ ಕೌತುಕ ಸೃಷ್ಟಿ ಆಗಿದೆ. ಈ ನಡುವೆ ಅನೇಕ ಬಗೆಯ ಅಂತೆ-ಕಂತೆಗಳು ಕೂಡ ಕೇಳಿಬರುತ್ತಿವೆ. ಪ್ರಶಾಂತ್​ ನೀಲ್​ ಅವರು ಒಂದು ಸ್ತ್ರೀ ಪ್ರಧಾನ ಕಥೆಯುಳ್ಳ ಸಿನಿಮಾ ಮಾಡುತ್ತಾರೆ ಎಂಬ ಗಾಸಿಪ್​ ಕೂಡ ಹಬ್ಬಿದೆ. ಆದರೆ ಆ ಕುರಿತು ಯಾರಿಂದಲೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಅಷ್ಟಕ್ಕೂ ಈ ರೀತಿ ಗಾಸಿಪ್​ ಹಬ್ಬಲು ಕಾರಣ ಏನು? ‘ಕೆಜಿಎಫ್​: ಚಾಪ್ಟರ್​ 2’ (KGF Chapter 2) ಸಿನಿಮಾ ಕಥೆ! ಹೌದು, ಈ ಚಿತ್ರದ ಕಥೆಯಲ್ಲಿ ಬರುವ ಒಂದು ಚಿಕ್ಕ ಘಟನೆಯನ್ನು ಇಟ್ಟುಕೊಂಡು ಇನ್ನೊಂದು ಸಿನಿಮಾ ಮಾಡಲಾಗುತ್ತದೆ ಎಂಬ ಗಾಸಿಪ್​ ಹರಡಿದೆ.

ಗರುಡನ ಆಳ್ವಿಕೆಯಲ್ಲಿ ನರಾಚಿ ಎಂಬುದು ಅಕ್ಷರಶಃ ನರಕ ಆಗಿರುತ್ತದೆ. ನಂತರ ಆ ಜಾಗವನ್ನು ರಾಕಿ ಭಾಯ್​ ವಶ ಮಾಡಿಕೊಳ್ಳುತ್ತಾನೆ. ಗರುಡನ ನಿಧನದ ನಂತರ ರಾಕಿ ಭಾಯ್​ ಆಡಳಿತದಲ್ಲಿ ನಾರಾಚಿಯ ಸ್ವರೂಪ ಬದಲಾಗುತ್ತದೆ. ಅಲ್ಲಿ ಕೆಲಸ ಮಾಡುವವರಿಗೆ ಒಳ್ಳೆಯ ಮನೆ, ಊಟ, ಆಶ್ರಯ ಸಿಗುವ ರೀತಿಯಲ್ಲಿ ರಾಕಿ ಭಾಯ್​ ನೋಡಿಕೊಳ್ಳುತ್ತಾನೆ. ಅಲ್ಲಿ ಜನಿಸುವ ಒಂದು ಹೆಣ್ಣು ಮುಗುವಿಗೆ ಶಾಂತಿ ಎಂದು ಹೆಸರು ಇಡುತ್ತಾನೆ. ಆ ಮಗುವಿನ ಪಾತ್ರದ ಬಗ್ಗೆ ಕೆಲವರು ಮಾತನಾಡುತ್ತಿದ್ದಾರೆ.

ಇದನ್ನೂ ಓದಿ: ಪ್ರಶಾಂತ್​ ನೀಲ್​ ನಿರ್ದೇಶನದ ‘ಸಲಾರ್​’ ಚಿತ್ರಕ್ಕೆ ವಿಲನ್​ ಆದ ಪೃಥ್ವಿರಾಜ್​; ವಿಷಯ ಲೀಕ್ ಮಾಡಿದ ಪ್ರಭಾಸ್

ಇದನ್ನೂ ಓದಿ
Image
ಕಮಲ್​ ಹಾಸನ್ ಜೊತೆ ಪ್ರಶಾಂತ್​ ನೀಲ್​ ಸಿನಿಮಾ? ಹೈ-ವೋಲ್ಟೇಜ್​ ಕಾಂಬಿನೇಷನ್​ ಬಗ್ಗೆ ಹೊಸ ಗುಸುಗುಸು
Image
3 ಚಿತ್ರಗಳ ಪೋಸ್ಟರ್​ ಒಟ್ಟಿಗೆ ಜೋಡಿಸಿದ ಪ್ರಶಾಂತ್​ ನೀಲ್​; ಫ್ಯಾನ್ಸ್​ ತಲೆಯಲ್ಲಿ ಮೂಡಿದೆ ದೊಡ್ಡ ಪ್ರಶ್ನೆ
Image
‘ಪ್ರಶಾಂತ್​ ನೀಲ್​ ಅವರಿಂದ ಭಾರತೀಯ ಚಿತ್ರರಂಗಕ್ಕೆ ನೂರಾರು ಕೋಟಿ ರೂ. ನಷ್ಟ’: ವಿವರ ನೀಡಿದ ಆರ್​ಜಿವಿ
Image
ಪ್ರಶಾಂತ್​ ನೀಲ್​ ಕಣ್ಣು ತಪ್ಪಿಸಿ ಪ್ರಭಾಸ್​ ವಿಡಿಯೋ ಲೀಕ್​? ಸಲಾರ್​ ಸೆಟ್​​ನಲ್ಲಿ ಕಿತಾಪತಿ

ರಾಕಿ ಭಾಯ್​ ನಿಧನದ ನಂತರ ಸಲಾರ್​ನ ಆಶ್ರಯದಲ್ಲಿ ಶಾಂತಿ ಬೆಳೆಯುತ್ತಾಳೆ. ಆಕೆಯ ಆಯಾಮದಿಂದಲೂ ಒಂದು ದೊಡ್ಡ ಕಥೆಯನ್ನು ಹೇಳಬಹುದು. ಈ ರೀತಿಯ ಒಂದು ಸ್ಪಿನ್​ ಆಫ್​ ಸಿನಿಮಾವನ್ನು ಪ್ರಶಾಂತ್ ನೀಲ್​ ಮಾಡಬಹುದು ಎಂದು ಗಾಸಿಪ್​ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ‘ಉಗ್ರಂ’ ಮತ್ತು ‘ಸಲಾರ್​’ ಕಥೆ ನಡುವೆ ಹೋಲಿಕೆ; ಎಲ್ಲ ಅನುಮಾನಗಳಿಗೆ ತೆರೆ ಎಳೆದ ಪ್ರಶಾಂತ್​ ನೀಲ್​

ಪ್ರಶಾಂತ್​ ನೀಲ್​ ಅವರು ಈಗಾಗಲೇ ‘ಸಲಾರ್​’ ಸಿನಿಮಾದ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಆ ಬಳಿಕ ಅವರು ಜ್ಯೂ. ಎನ್​ಟಿಆರ್​ ಜೊತೆ ಒಂದು ಸಿನಿಮಾ ಮಾಡಲಿದ್ದಾರೆ. ಈ ನಡುವೆ ‘ಕೆಜಿಎಫ್​ 3’ ಸಿನಿಮಾ ಕೂಡ ಸೆಟ್ಟೇರಬೇಕಿದೆ. ಈ ಎಲ್ಲ ಪ್ರಾಜೆಕ್ಟ್​ಗಳ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 11:52 am, Sun, 29 May 22

ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್