‘ರೆಬೆಲ್ ಸ್ಟಾರ್’ 70ನೇ ಜನ್ಮದಿನಕ್ಕೆ ಕೇಕ್ ಕತ್ತರಿಸಿ ವಿಶೇಷ ಮಾತುಗಳನ್ನು ಹಂಚಿಕೊಂಡ ಸುಮಲತಾ ಅಂಬರೀಷ್
Ambareesh Birthday: ‘ರೆಬೆಲ್ ಸ್ಟಾರ್’ ಅಂಬರೀಷ್ ಅವರ ಜನ್ಮದಿನವನ್ನು (ಮೇ 29) ಸುಮಲತಾ ಆಚರಿಸಿದ್ದಾರೆ. ಅಂಬಿ ಅಮರ ಎಂಬುದನ್ನು ಅವರು ಮತ್ತೆ ಹೇಳಿದ್ದಾರೆ.
Updated on:May 29, 2022 | 8:53 AM

Sumalatha Ambareesh celebrates 70th Birthday of Rebel Star Ambareesh

Sumalatha Ambareesh celebrates 70th Birthday of Rebel Star Ambareesh

‘ಸಾಕಷ್ಟು ನೆನಪುಗಳು, ಜೀವಮಾನಕ್ಕಾಗುವಷ್ಟು ಖುಷಿ ಮತ್ತು ಅಪರಿಮಿತವಾದ ಪ್ರೀತಿಯನ್ನು ನೀಡಿ ನೀವು ನಮ್ಮನ್ನು ಬಿಟ್ಟು ಹೋದ್ರಿ’ ಎಂದಿದ್ದಾರೆ ಸುಮಲತಾ. ಅಭಿಮಾನಿಗಳು ಕೂಡ ಈ ಸಂದರ್ಭದಲ್ಲಿ ಅಂಬಿ ಕುರಿತ ನೆನಪುಗಳನ್ನು ಮೆಲುಕು ಹಾಕುತ್ತಿದ್ದಾರೆ.

‘ವಿಶಾಲ ಹೃದಯದ ವ್ಯಕ್ತಿಗೆ 70 ವರ್ಷ ಎಂಬುದು ಸಣ್ಣ ಸಂಖ್ಯೆ. ನೀವು ಯಾವಾಗಲೂ ಜೀವಂತವಾಗಿರುತ್ತೀರಿ. ಅಂಬಿ ಫಾರೆವರ್. ಅಂಬಿ ಅಮರ’ ಎಂದು ಹೇಳುವ ಮೂಲಕ ‘ರೆಬೆಲ್ ಸ್ಟಾರ್’ ಹುಟ್ಟುಹಬ್ಬವನ್ನು ಸುಮಲತಾ ಆಚರಿಸಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ಅಂಬರೀಷ್ ಅವರು ನೀಡಿದ ಕೊಡುಗೆ ಅಪಾರ. ಅವರನ್ನು ಆರಾಧಿಸುವ ಅಪಾರ ಸಂಖ್ಯೆಯ ಅಭಿಮಾನಿಗಳು ಇಂದು ಜನ್ಮದಿನದ ಪ್ರಯುಕ್ತ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.
Published On - 8:53 am, Sun, 29 May 22



















