ಕಮಲ್​ ಹಾಸನ್ ಜೊತೆ ಪ್ರಶಾಂತ್​ ನೀಲ್​ ಸಿನಿಮಾ? ಹೈ-ವೋಲ್ಟೇಜ್​ ಕಾಂಬಿನೇಷನ್​ ಬಗ್ಗೆ ಹೊಸ ಗುಸುಗುಸು

ಕಮಲ್​ ಹಾಸನ್ ಜೊತೆ ಪ್ರಶಾಂತ್​ ನೀಲ್​ ಸಿನಿಮಾ? ಹೈ-ವೋಲ್ಟೇಜ್​ ಕಾಂಬಿನೇಷನ್​ ಬಗ್ಗೆ ಹೊಸ ಗುಸುಗುಸು
ಕಮಲ್​ ಹಾಸನ್​, ಪ್ರಶಾಂತ್​ ನೀಲ್​, ಜ್ಯೂ. ಎನ್​ಟಿಆರ್​

Kamal Haasan | Prashanth Neel: ಈ ಬಗ್ಗೆ ಕಮಲ್​ ಹಾಸನ್​, ಜ್ಯೂ. ಎನ್​ಟಿಆರ್​ ಅಥವಾ ಪ್ರಶಾಂತ್​ ನೀಲ್​ ಕಡೆಯಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಆದರೆ ಅನೇಕ ಕಡೆಗಳಲ್ಲಿ ಹೀಗೊಂದು ವರದಿ ಪ್ರಕಟ ಆಗಿದೆ.

TV9kannada Web Team

| Edited By: Madan Kumar

May 22, 2022 | 5:55 PM

ಯಾವಾಗ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಬ್ಲಾಕ್​ ಬಸ್ಟರ್​ ಹಿಟ್​ ಆಯಿತೋ ಆಗಲೇ ನಿರ್ದೇಶಕ ಪ್ರಶಾಂತ್​ ನೀಲ್​ (Prashanth Neel) ಅವರ ಖ್ಯಾತಿ ಕೂಡ ರಾಷ್ಟ್ರಮಟ್ಟದಲ್ಲಿ ಹೆಚ್ಚಿತು. ಎಲ್ಲ ಸೂಪರ್​ ಸ್ಟಾರ್​ ನಟರು ಕೂಡ ಪ್ರಶಾಂತ್​ ನೀಲ್​ ಜೊತೆ ಕೆಲಸ ಮಾಡಲು ಹಾತೊರೆಯುತ್ತಿದ್ದಾರೆ. ದೊಡ್ಡ ದೊಡ್ಡ ಪ್ರೊಡಕ್ಷನ್​ ಹೌಸ್​ಗಳು ಕೂಡ ಅವರ ಚಿತ್ರಕ್ಕೆ ಬಂಡವಾಳ ಹೂಡಲು ಮುಂದೆ ಬಂದಿವೆ. ಆದರೆ ಈ ಸಂದರ್ಭದಲ್ಲಿ ಪ್ರಶಾಂತ್​ ನೀಲ್​ ಅವರು ಯಾರ ಚಿತ್ರಕ್ಕೆ ಗ್ರೀನ್​ ಸಿಗ್ನಲ್​ ನೀಡ್ತಾರೆ ಅನ್ನೋದು ಮುಖ್ಯ. ಜ್ಯೂ. ಎನ್​ಟಿಆರ್​ ಜೊತೆ ಅವರು ಸಿನಿಮಾ ಮಾಡ್ತಾರೆ ಎನ್ನುವ ಮಾತು ಮೊದಲಿನಿಂದಲೂ ಕೇಳಿಬರುತ್ತಿತ್ತು. ಅದು ನಿಜವಾಗಿದೆ. ಮೇ 20ರಂದು ಜ್ಯೂ. ಎನ್​ಟಿಆರ್​ (Jr NTR) ಜನ್ಮದಿನದ ಪ್ರಯುಕ್ತ ಹೊಸ ಸಿನಿಮಾ ಅನೌನ್ಸ್​ ಆಯಿತು. ಈ ಚಿತ್ರದ ಬಗ್ಗೆ ಇನ್ನಷ್ಟು ಅಪ್​ಡೇಟ್​ ಕೇಳಿಬರುತ್ತಿದೆ. ಅಚ್ಚರಿಯ ವಿಷಯ ಏನೆಂದರೆ, ಇದೇ ಸಿನಿಮಾದಲ್ಲಿ ಖ್ಯಾತ ನಟ ಕಮಲ್​ ಹಾಸನ್​ (Kamal Haasan) ಕೂಡ ಅಭಿನಯಿಸಲಿದ್ದಾರೆ ಎಂಬ ಬಗ್ಗೆ ಈಗ ಗಾಸಿಪ್​ ಹರಡಿದೆ. ಈ ವಿಷಯ ಕೇಳಿ ಫ್ಯಾನ್ಸ್​ ಸಖತ್​ ಥ್ರಿಲ್​ ಆಗಿದ್ದಾರೆ.

ಪ್ರಶಾಂತ್​ ನೀಲ್​ ನಿರ್ದೇಶನದ ಸಿನಿಮಾದಲ್ಲಿ ಎಲ್ಲ ಪಾತ್ರಗಳೂ ಸ್ಟ್ರಾಂಗ್​ ಆಗಿರುತ್ತವೆ. ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದಲ್ಲಿ ಅದು ಸಾಬೀತಾಗಿದೆ. ಈಗ ಅವರ ಮುಂಬರುವ ಚಿತ್ರಕ್ಕೆ ಹೀರೋ ಯಾರು ಎಂಬುದನ್ನು ಕೇಳುವಷ್ಟೇ ಕುತೂಹಲದಲ್ಲಿ ವಿಲನ್​ ಯಾರು ಎಂದು ಕೇಳುತ್ತಾರೆ ಅಭಿಮಾನಿಗಳು. ಜ್ಯೂ. ಎನ್​ಟಿಆರ್​ ಮತ್ತು ಪ್ರಶಾಂತ್​ ನೀಲ್​ ಕಾಂಬಿನೇಷನ್​ನ ಸಿನಿಮಾದಲ್ಲಿ ಕಮಲ್​ ಹಾಸನ್​ ವಿಲನ್​ ಪಾತ್ರ ಮಾಡುತ್ತಾರೆ ಎಂಬ ಗುಸುಗುಸು ಕೇಳಿಬರುತ್ತಿದೆ.

ಇದನ್ನೂ ಓದಿ: ‘ಪ್ರಶಾಂತ್​ ನೀಲ್​ ಅವರಿಂದ ಭಾರತೀಯ ಚಿತ್ರರಂಗಕ್ಕೆ ನೂರಾರು ಕೋಟಿ ರೂ. ನಷ್ಟ’: ವಿವರ ನೀಡಿದ ಆರ್​ಜಿವಿ

ಈ ಬಗ್ಗೆ ಚಿತ್ರತಂಡದಿಂದ ಯಾರೋ ಪ್ರತಿಕ್ರಿಯೆ ನೀಡಿಲ್ಲ. ಕಮಲ್​ ಹಾಸನ್​, ಜ್ಯೂ. ಎನ್​ಟಿಆರ್​ ಅಥವಾ ಪ್ರಶಾಂತ್​ ನೀಲ್​ ಕಡೆಯಿಂದ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಆದರೆ ಅನೇಕ ಕಡೆಗಳಲ್ಲಿ ಹೀಗೊಂದು ವರದಿ ಪ್ರಕಟ ಆಗಿದೆ. ಪ್ರಶಾಂತ್​ ನೀಲ್​ ಹೇಳಿರುವ ಕಥೆ ಕೇಳಿ ಕಮಲ್​ ಹಾಸನ್​ ಇಷ್ಟಪಟ್ಟಿದ್ದಾರೆ. ಅವರು ಜ್ಯೂ. ಎನ್​ಟಿಆರ್ ಎದುರು ವಿಲನ್​ ಆಗಿ ಕಾಣಿಸಿಕೊಳ್ಳಲು ಒಪ್ಪಿದ್ದಾರೆ ಎಂದೆಲ್ಲ ಹೇಳಲಾಗುತ್ತಿದೆ. ಒಂದು ವೇಳೆ ಈ ಸುದ್ದಿ ನಿಜವಾದರೆ ಇದೊಂದು ಹೈ-ವೋಲ್ಟೇಜ್​ ಕಾಂಬಿನೇಷನ್​ನ ಸಿನಿಮಾ ಆಗಲಿದೆ. ಈ ಚಿತ್ರಕ್ಕೆ ತಾತ್ಕಾಲಿಕವಾಗಿ ‘ಎನ್​ಟಿಆರ್​ 31’ ಎಂದು ಶೀರ್ಷಿಕೆ ಇಡಲಾಗಿದೆ.

ಇದನ್ನೂ ಓದಿ: ‘ಉಗ್ರಂ’ ಮತ್ತು ‘ಸಲಾರ್​’ ಕಥೆ ನಡುವೆ ಹೋಲಿಕೆ; ಎಲ್ಲ ಅನುಮಾನಗಳಿಗೆ ತೆರೆ ಎಳೆದ ಪ್ರಶಾಂತ್​ ನೀಲ್​

ಪೋಸ್ಟರ್​ಗಳ ಮೂಲಕ ತಲೆಗೆ ಹುಳ ಬಿಟ್ಟ ಪ್ರಶಾಂತ್​ ನೀಲ್​:

‘ಕೆಜಿಎಫ್​ 2’ ಹಾಗೂ ‘ಸಲಾರ್​’ ಜೊತೆಗೆ ‘ಎನ್​ಟಿಆರ್​31’ ಚಿತ್ರದ ಪೋಸ್ಟರ್​ ಅನ್ನು ಜೋಡಿಸಿ, ತಮ್ಮ ಫೇಸ್​ ಬುಕ್​ ಹಾಗೂ ಟ್ವಿಟರ್​ ಖಾತೆಯಲ್ಲಿ ಪ್ರಶಾಂತ್​ ನೀಲ್ ಹಂಚಿಕೊಂಡಿದ್ದಾರೆ. ಮೂರು ಸಿನಿಮಾಗಳ ಪೋಸ್ಟರ್​ಗಳನ್ನು ಒಟ್ಟಿಗೆ ಜೋಡಿಸಿರುವುದರಿಂದ ಸಿನಿಪ್ರಿಯರ ಮನದಲ್ಲಿ ಹೊಸ ಪ್ರಶ್ನೆ ಮೂಡಿದೆ. ‘ಕೆಜಿಎಫ್​ 2’, ‘ಸಲಾರ್​’ ಹಾಗೂ ‘ಎನ್​ಟಿಆರ್​ 31’ ಚಿತ್ರಗಳ ಕಥೆ ಒಂದಕ್ಕೊಂದು ಕನೆಕ್ಟ್​ ಆಗಿದೆ ಎಂದು ಜನರು ಊಹಿಸುತ್ತಿದ್ದಾರೆ. ಅದನ್ನು ಕಮೆಂಟ್​ಗಳ ಮೂಲಕ ತಿಳಿಸಲಾಗುತ್ತಿದೆ. ಆದರೆ ಈ ಕಮೆಂಟ್​ಗಳಿಗೆ ಪ್ರಶಾಂತ್​ ನೀಲ್​ ಅವರು ಸದ್ಯಕ್ಕೆ ಪ್ರತಿಕ್ರಿಯೆ ನೀಡಿಲ್ಲ. ‘ಸಲಾರ್​’, ‘ಕೆಜಿಎಫ್​ 2’, ‘ಎನ್​ಟಿಆರ್​ 31’ ಮಾತ್ರವಲ್ಲದೇ ‘ಬಘೀರ’ ಚಿತ್ರದ ಕಥೆ ಕೂಡ ಇವುಗಳಿಗೆ ಕನೆಕ್ಟ್​ ಆಗಿರಬಹುದೇ ಎಂದು ಫ್ಯಾನ್ಸ್​ ಪ್ರಶ್ನಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ

Follow us on

Related Stories

Most Read Stories

Click on your DTH Provider to Add TV9 Kannada