AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸದ್ದಿಲ್ಲದೆ ಅಮೇಜಾನ್​ ಪ್ರೈಮ್ ವಿಡಿಯೋಗೆ ಕಾಲಿಟ್ಟ ‘ಕೆಜಿಎಫ್​ 2’; ಸಿನಿಮಾ ನೋಡೋಕೆ ಹಲವು ಷರತ್ತು

‘ಕೆಜಿಎಫ್ 2’ ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ಬಿಡುಗಡೆ ಆಗಿತ್ತು. ಈಗ ಒಟಿಟಿಯಲ್ಲೂ ಐದೂ ಭಾಷೆಗಳಲ್ಲಿ ಚಿತ್ರ ರಿಲೀಸ್ ಆಗಿದೆ. ಈ ಸಿನಿಮಾವನ್ನು ನೀವು ರೆಂಟ್ ಪಡೆಯಬಹುದು. ಇದಕ್ಕೆ 199 ರೂಪಾಯಿ ಪಾವತಿಸಬೇಕು.

ಸದ್ದಿಲ್ಲದೆ ಅಮೇಜಾನ್​ ಪ್ರೈಮ್ ವಿಡಿಯೋಗೆ ಕಾಲಿಟ್ಟ ‘ಕೆಜಿಎಫ್​ 2’; ಸಿನಿಮಾ ನೋಡೋಕೆ ಹಲವು ಷರತ್ತು
ಯಶ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: May 16, 2022 | 6:44 PM

‘ಕೆಜಿಎಫ್ 2’ ಸಿನಿಮಾ (KGF: Chapter) ಬಾಕ್ಸ್ ಆಫೀಸ್​ನಲ್ಲಿ 1200 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಬಾಲಿವುಡ್​ನಲ್ಲಿ ಈ ಸಿನಿಮಾ 427 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಸಿನಿಮಾ ಒಟಿಟಿಯಲ್ಲಿ ಯಾವಾಗ ತೆರೆಕಾಣಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇತ್ತು. ಈ ಚಿತ್ರ ಚಿತ್ರಮಂದಿರದಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿರುವಾಗಲೇ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ (Amazon Prime Video) ಪ್ರಸಾರ ಕಂಡಿದೆ. ನೀವು ಅಮೇಜಾನ್​ ಪ್ರೈಮ್ ವಿಡಿಯೋ ಚಂದಾದಾರರಾದರೆ ಈ ಸಿನಿಮಾವನ್ನು ವೀಕ್ಷಿಸುವುದಕ್ಕೆ ಸಾಧ್ಯವಿಲ್ಲ! ಈ ಸಿನಿಮಾ ನೋಡಬೇಕು ಎಂದರೆ ನೀವು ಹೆಚ್ಚುವರಿಯಾಗಿ ಹಣ ಪಾವತಿಸಬೇಕು.

‘ಕೆಜಿಎಫ್ 2’ ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ಬಿಡುಗಡೆ ಆಗಿತ್ತು. ಈಗ ಒಟಿಟಿಯಲ್ಲೂ ಐದೂ ಭಾಷೆಗಳಲ್ಲಿ ಚಿತ್ರ ರಿಲೀಸ್ ಆಗಿದೆ. ಈ ಸಿನಿಮಾವನ್ನು ನೀವು ರೆಂಟ್ ಪಡೆಯಬಹುದು. ಇದಕ್ಕೆ 199 ರೂಪಾಯಿ ಪಾವತಿಸಬೇಕು. ಹಾಗಿದ್ದರೆ ಮಾತ್ರ ನೀವು ‘ಕೆಜಿಎಫ್ 2’ ವೀಕ್ಷಿಸಬಹುದು.

ಇದನ್ನೂ ಓದಿ
Image
ಒಟಿಟಿಯಲ್ಲಿ ‘ಬೀಸ್ಟ್’ ಸಿನಿಮಾ; ‘ಕೆಜಿಎಫ್ 2’ ಎದುರು ಬಂದ ಸಿನಿಮಾಗೆ ಲಾಭವೋ? ನಷ್ಟವೋ?
Image
‘ಬೀಸ್ಟ್​’ ನಿರ್ದೇಶಕ ನೆಲ್ಸನ್​ ದಿಲೀಪ್​ ಕುಮಾರ್​ ಸಿನಿಮಾದಲ್ಲಿ ಶಿವರಾಜ್​ಕುಮಾರ್​-ರಜನಿಕಾಂತ್​ ನಟನೆ?
Image
Bairagee Song: ಹೊಸ ಅವತಾರದಲ್ಲಿ ಶಿವಣ್ಣ; ಅಭಿಮಾನಿಗಳ ಮನಗೆದ್ದ ಬೈರಾಗಿ ಚಿತ್ರದ ‘ನಕರನಖ’
Image
ಕನ್ನಡದ ‘ಟಾಕೀಸ್​’ ಲಾಂಚ್​ ಮಾಡಿದ ಶಿವಣ್ಣ; ಇದರಲ್ಲಿ ಇದ್ದಾರೆ ಸಾವಿರಕ್ಕೂ ಹೆಚ್ಚು ಕಲಾವಿದರು

199 ರೂಪಾಯಿ ಪಾವತಿಸಿ ಸಿನಿಮಾ ರೆಂಟ್ ಪಡೆದು ಒಮ್ಮೆ ಸಿನಿಮಾ ನೋಡೋಕೆ ಆರಂಭಿಸಿದರೆ 48 ಗಂಟೆಗಳ ಅವಧಿಯಲ್ಲಿ ವೀಕ್ಷಣೆ ಪೂರ್ಣಗೊಳಿಸಬೇಕು. ಒಂದೊಮ್ಮೆ ನೀವು ಸಿನಿಮಾ ರೆಂಟ್​ಗೆ ಪಡೆದು ವೀಕ್ಷಿಸದೆ ಇದ್ದರೆ ಹಣ ಪಾವತಿಸಿದ ಸಮಯದಿಂದ 30 ದಿನಗಳ ಕಾಲ ಇದರ ವ್ಯಾಲಿಡಿಟಿ ಇರಲಿದೆ. ಈ ಅವಧಿಯಲ್ಲಿ ಯಾವಾಗ ಬೇಕಾದರೂ ಸಿನಿಮಾ ವೀಕ್ಷಿಸಬಹುದು.

ಜೀ5 ಆ್ಯಪ್​ನಲ್ಲಿ ಈ ಮೊದಲು ಸಾಕಷ್ಟು ಸಿನಿಮಾಗಳು ಇದೇ ಮಾದರಿಯಲ್ಲಿ ರಿಲೀಸ್ ಆಗಿವೆ. ಸಲ್ಮಾನ್ ಖಾನ್ ನಟನೆಯ ‘ರಾಧೆ’ ಚಿತ್ರವನ್ನು ಇದೇ ರೀತಿಯಲ್ಲಿ ರಿಲೀಸ್ ಮಾಡಲಾಗಿತ್ತು. ಆದರೆ, ಅಮೇಜಾನ್​ ಪ್ರೈಮ್​ ವಿಡಿಯೋದಲ್ಲಿ ಈ ರೀತಿಯ ಪ್ರಯೋಗ ನಡೆದಿರಲಿಲ್ಲ. ಈಗ ‘ಕೆಜಿಎಫ್ 2’ ಮೂಲಕ ಸಿನಿಮಾಗಳನ್ನು ರೆಂಟ್​​ಗೆ ನೀಡುವ ತಂತ್ರವನ್ನು ಆರಂಭಿಸಿದೆ.

‘ಕೆಜಿಎಫ್’ ಸಿನಿಮಾ ಬಾಲಿವುಡ್​ನಲ್ಲಿ ಸಖತ್ ಹಿಟ್ ಆಗಿತ್ತು. ಈ ಚಿತ್ರದ ಸೀಕ್ವೆಲ್ ಆಗಿ ತೆರೆಗೆ ಬಂದಿದ್ದು ‘ಕೆಜಿಎಫ್ 2’ ಚಿತ್ರ. ಗರುಡನನ್ನು ಹತ್ಯೆ ಮಾಡಿದ ರಾಕಿ ಹೇಗೆ ತನ್ನ ಅಧಿಪತ್ಯ ಸಾಧಿಸುತ್ತಾನೆ ಅನ್ನೋದನ್ನು ‘ಕೆಜಿಎಫ್ 2’ ಸಿನಿಮಾದಲ್ಲಿ ತೋರಿಸಲಾಗಿದೆ. ಪ್ರಶಾಂತ್ ನೀಲ್ ಅವರು ಚಿತ್ರವನ್ನು ಅದ್ಭುತವಾಗಿ ಕಟ್ಟಿಕೊಡುವ ಮೂಲಕ ಭೇಷ್ ಎನಿಸಿಕೊಂಡಿದ್ದಾರೆ. ಬಾಲಿವುಡ್ ಮಂದಿ ಕೂಡ ಸಿನಿಮಾವನ್ನು ಸಖತ್ ಇಷ್ಟಪಟ್ಟಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪಾಕ್ ಎಸೆದಿದ್ದ ಶೆಲ್​ಗಳನ್ನು ವೀಕ್ಷಿಸಿದ ರಕ್ಷಣಾ ಸಚಿವ ರಾಜನಾಥ್​ ಸಿಂಗ್
ಪಾಕ್ ಎಸೆದಿದ್ದ ಶೆಲ್​ಗಳನ್ನು ವೀಕ್ಷಿಸಿದ ರಕ್ಷಣಾ ಸಚಿವ ರಾಜನಾಥ್​ ಸಿಂಗ್
ವಿಜಯ್ ಶಾ ವಿರುದ್ಧ ಎಫ್​ಐಅರ್ ದಾಖಲಿಸಲು ಸೂಚಿಸಲಾಗಿದೆ: ಪರಮೇಶ್ವರ್
ವಿಜಯ್ ಶಾ ವಿರುದ್ಧ ಎಫ್​ಐಅರ್ ದಾಖಲಿಸಲು ಸೂಚಿಸಲಾಗಿದೆ: ಪರಮೇಶ್ವರ್
ಒಂದು ಟಗರನ್ನಿಟ್ಟುಕೊಂಡಿರುವ ರೌಡಿಯೊಬ್ಬ ಹೊಟ್ಟೆಪಾಡಿಗೆ ಕುರಿ ಕಾಯ್ತೀನಿ ಅಂದ
ಒಂದು ಟಗರನ್ನಿಟ್ಟುಕೊಂಡಿರುವ ರೌಡಿಯೊಬ್ಬ ಹೊಟ್ಟೆಪಾಡಿಗೆ ಕುರಿ ಕಾಯ್ತೀನಿ ಅಂದ
ಹೇಗಿದ್ದಾರೆ ನೋಡಿ ಅರ್ಜುನ್ ಜನ್ಯ ಮಗಳು; ತಂದೆಯನ್ನು ಅಭಿನಂದಿಸಿದ ರಜಿತಾ
ಹೇಗಿದ್ದಾರೆ ನೋಡಿ ಅರ್ಜುನ್ ಜನ್ಯ ಮಗಳು; ತಂದೆಯನ್ನು ಅಭಿನಂದಿಸಿದ ರಜಿತಾ
ಬೆಂಗಳೂರಿನಲ್ಲಿ ಬೆತ್ತಲೆ ಕಳ್ಳನ ಕೈಚಳಕ: ವಿಡಿಯೋ ನೋಡಿ
ಬೆಂಗಳೂರಿನಲ್ಲಿ ಬೆತ್ತಲೆ ಕಳ್ಳನ ಕೈಚಳಕ: ವಿಡಿಯೋ ನೋಡಿ
ಬಾಳೆಗಿಡ ನೆಲಕಚ್ಚಿದ್ದು ಕಂಡು ಆಘಾತಕ್ಕೊಳಗಾಗಿ ಪ್ರಜ್ಞೆತಪ್ಪಿ ಬಿದ್ದ ರೈತ
ಬಾಳೆಗಿಡ ನೆಲಕಚ್ಚಿದ್ದು ಕಂಡು ಆಘಾತಕ್ಕೊಳಗಾಗಿ ಪ್ರಜ್ಞೆತಪ್ಪಿ ಬಿದ್ದ ರೈತ
ರಾಮನಗರ ಜಿಲ್ಲೆಯ ಹಲವೆಡೆ ಭಾರಿ ಮಳೆ: ಮಾಗಡಿಯಲ್ಲಿ ಮನೆಗಳಿಗೆ ನುಗ್ಗಿದ ನೀರು
ರಾಮನಗರ ಜಿಲ್ಲೆಯ ಹಲವೆಡೆ ಭಾರಿ ಮಳೆ: ಮಾಗಡಿಯಲ್ಲಿ ಮನೆಗಳಿಗೆ ನುಗ್ಗಿದ ನೀರು
ಚಲಿಸುತ್ತಿದ್ದ ಬಸ್​ನಲ್ಲಿ ಬೆಂಕಿ, ಐವರು ಸಾವು
ಚಲಿಸುತ್ತಿದ್ದ ಬಸ್​ನಲ್ಲಿ ಬೆಂಕಿ, ಐವರು ಸಾವು
Daily Devotional: ಕಾಲುಂಗುರ ಕಳೆದು ಹೋದರೆ ಅದರ ಮುನ್ಸೂಚನೆ ಏನು?
Daily Devotional: ಕಾಲುಂಗುರ ಕಳೆದು ಹೋದರೆ ಅದರ ಮುನ್ಸೂಚನೆ ಏನು?
ಈ ದಿನ ಜ್ಯೇಷ್ಠ ನಕ್ಷತ್ರ, ಸಿದ್ಧಯೋಗ: ಯಾವ ರಾಶಿಗಳಿಗೆ ಶುಭ ದಿನ ತಿಳಿಯಿರಿ
ಈ ದಿನ ಜ್ಯೇಷ್ಠ ನಕ್ಷತ್ರ, ಸಿದ್ಧಯೋಗ: ಯಾವ ರಾಶಿಗಳಿಗೆ ಶುಭ ದಿನ ತಿಳಿಯಿರಿ