ಒಟಿಟಿಯಲ್ಲೂ ‘ಲವ್ ಮಾಕ್ಟೇಲ್​ 2’ ಹವಾ; ಅಮೇಜಾನ್ ಪ್ರೈಮ್​ ವಿಡಿಯೋ ಟ್ರೆಂಡಿಂಗ್​ನಲ್ಲಿ ನಂಬರ್ ಒನ್​ ಸ್ಥಾನ

ಒಟಿಟಿಯಲ್ಲೂ ‘ಲವ್ ಮಾಕ್ಟೇಲ್​ 2’ ಹವಾ; ಅಮೇಜಾನ್ ಪ್ರೈಮ್​ ವಿಡಿಯೋ ಟ್ರೆಂಡಿಂಗ್​ನಲ್ಲಿ ನಂಬರ್ ಒನ್​ ಸ್ಥಾನ
‘ಲವ್ ಮಾಕ್ಟೇಲ್ 2’ ಚಿತ್ರದ ಪೋಸ್ಟರ್

‘ಲವ್​ ಮಾಕ್ಟೇಲ್​​’ ಚಿತ್ರದಲ್ಲಿ ಆದಿ (ಡಾರ್ಲಿಂಗ್​ ಕೃಷ್ಣ) ಹಾಗೂ ನಿಧಿ (ಮಿಲನಾ ನಾಗರಾಜ್​) ಮದುವೆ ಆಗಿತ್ತು. ಆದರೆ, ನಿಧಿ ಕ್ಯಾನ್ಸರ್​ನಿಂದ ಸಾಯುತ್ತಾಳೆ. ಆ ಬಳಿಕ ಆದಿ ಒಂಟಿ ಆಗುತ್ತಾನೆ. ಆದಿಗೆ ಮದುವೆ ಮಾಡಿಸೋ ಪ್ರಯತ್ನವೇ ಪಾರ್ಟ್​ ಎರಡರ ಹೈಲೈಟ್​.

TV9kannada Web Team

| Edited By: Rajesh Duggumane

Mar 17, 2022 | 7:47 PM

ಡಾರ್ಲಿಂಗ್ ಕೃಷ್ಣ (Darling Krishna) ನಟಿಸಿ, ನಿರ್ದೇಶಿಸಿದ್ದ ‘ಲವ್ ಮಾಕ್ಟೇಲ್’ ಸಿನಿಮಾ ( (Love Mocktail ) ಸೂಪರ್ ಹಿಟ್​ ಆಗಿತ್ತು. ಈ ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಒಳ್ಳೆಯ ಕಮಾಯಿ ಮಾಡಿತ್ತು. ಇದೇ ಜೋಶ್​ನಲ್ಲಿ ‘ಲವ್​ ಮಾಕ್ಟೇಲ್​ 2’ (Love Mocktail 2) ಮಾಡಿದ್ದರು ಡಾರ್ಲಿಂಗ್​ ಕೃಷ್ಣ. ಮೊದಲ ಪಾರ್ಟ್​ಗೂ ಎರಡನೇ ಪಾರ್ಟ್​ಗೂ ಲಿಂಕ್​ ಕೊಟ್ಟು, ಸಾಕಷ್ಟು ನಗಿಸುವ ಪಂಚಿಂಗ್​ ಡೈಲಾಗ್​ಗಳನ್ನು ಇಟ್ಟಿದ್ದರು ನಿರ್ದೇಶಕ ಕೃಷ್ಣ. ಚಿತ್ರಮಂದಿರಗಳಲ್ಲಿ ಈ ಸಿನಿಮಾ ಒಳ್ಳೆಯ ಸದ್ದು ಮಾಡಿತ್ತು. ಈಗ ಒಟಿಟಿಯಲ್ಲೂ ‘ಲವ್​ ಮಾಕ್ಟೇಲ್​ 2’ ಹವಾ ಸೃಷ್ಟಿ ಮಾಡುತ್ತಿದೆ.

‘ಲವ್​ ಮಾಕ್ಟೇಲ್​​’ ಚಿತ್ರದಲ್ಲಿ ಆದಿ (ಡಾರ್ಲಿಂಗ್​ ಕೃಷ್ಣ) ಹಾಗೂ ನಿಧಿ (ಮಿಲನಾ ನಾಗರಾಜ್​) ಮದುವೆ ಆಗಿತ್ತು. ಆದರೆ, ನಿಧಿ ಕ್ಯಾನ್ಸರ್​ನಿಂದ ಸಾಯುತ್ತಾಳೆ. ಆ ಬಳಿಕ ಆದಿ ಒಂಟಿ ಆಗುತ್ತಾನೆ. ಆದಿಗೆ ಮದುವೆ ಮಾಡಿಸೋ ಪ್ರಯತ್ನವೇ ಪಾರ್ಟ್​ ಎರಡರ ಹೈಲೈಟ್​. ಈ ಚಿತ್ರವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಇತ್ತೀಚೆಗೆ ಈ ಸಿನಿಮಾ ಅಮೇಜಾನ್​ ಪ್ರೈಮ್​ ವಿಡಿಯೋದಲ್ಲಿ ರಿಲೀಸ್​ ಆಗಿದೆ. ಈ ಚಿತ್ರವನ್ನು ಸಿನಿಪ್ರಿಯರು ಒಟಿಟಿಯಲ್ಲೂ ಇಷ್ಟಪಟ್ಟಿದ್ದಾರೆ.

ಕೊವಿಡ್​ ನಿಧಾನವಾಗಿ ಕಡಿಮೆ ಆಗಿದೆ. ಆದಾಗ್ಯೂ ಕೆಲ ಫ್ಯಾಮಿಲಿ ಆಡಿಯನ್ಸ್​ ಚಿತ್ರಮಂದಿರಕ್ಕೆ ಹೆಜ್ಜೆ ಹಾಕೋಕೆ ಹಿಂಜರಿದಿದ್ದಾರೆ. ಚಿತ್ರಮಂದಿರದಲ್ಲಿ ಸಿನಿಮಾ ಮಿಸ್​ ಮಾಡಿಕೊಂಡವರು ಈಗ ಒಟಿಟಿಯಲ್ಲಿ ಚಿತ್ರವನ್ನು ವೀಕ್ಷಣೆ ಮಾಡುತ್ತಿದ್ದಾರೆ. ಹೀಗಾಗಿ, ಅಮೇಜಾನ್​ ಪ್ರೈಮ್​ ವಿಡಿಯೋ ಟ್ರೆಂಡಿಂಗ್​ ಲಿಸ್ಟ್​ನಲ್ಲಿ ಈ ಸಿನಿಮಾ ಮೊದಲ ಸ್ಥಾನದಲ್ಲಿ ಇದೆ. ಇದು ಡಾರ್ಲಿಂಗ್ ಕೃಷ್ಣ ಹಾಗೂ ನಿರ್ಮಾಪಕಿ ಮಿಲನಾ ನಾಗರಾಜ್​ ಖುಷಿಯನ್ನು ಹೆಚ್ಚಿಸಿದೆ.

‘ಲವ್ ಮಾಕ್ಟೇಲ್ 2’ನಲ್ಲಿ ಡಾರ್ಲಿಂಗ್ ಕೃಷ್ಣ ನಾಯಕನಾಗಿ ಕಾಣಿಸಿಕೊಂಡಿರುವುದಲ್ಲದೇ ಚಿತ್ರವನ್ನು ನಿರ್ದೇಶಿಸಿದ್ದಾರೆ. ನಿಜ ಜೀವನದ ಜೋಡಿಯಾದ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಅವರ ‘ಲವ್ ಮಾಕ್ಟೇಲ್’ ಈ ಹಿಂದೆ ಮೋಡಿ ಮಾಡಿತ್ತು. ಆದ್ದರಿಂದಲೇ ಚಿತ್ರದ ಎರಡನೇ ಭಾಗದ ಬಗ್ಗೆ ನಿರೀಕ್ಷೆಗಳು ಗರಿಗೆದರಿದ್ದವು. ಈ ನಿರೀಕ್ಷೆಯನ್ನು ಚಿತ್ರ ಹುಸಿ ಮಾಡಿಲ್ಲ. ಮೃತ ಪಟ್ಟ ನಿಧಿಯನ್ನು ಪಾರ್ಟ್​ 2ನಲ್ಲಿ ಮತ್ತೆ ತೆರೆಮೇಲೆ ತರೋ ಪ್ರಯತ್ನವೂ ಆಗಿತ್ತು.

ಇದನ್ನೂ ಓದಿ: ‘ಲವ್​ ಮಾಕ್ಟೇಲ್​ 3’ ಕೂಡ ಬರುತ್ತಾ? ಗೆದ್ದ ಖುಷಿಯಲ್ಲಿ ಡಾರ್ಲಿಂಗ್​ ಕೃಷ್ಣ ನೀಡಿದ ಉತ್ತರ ಇಲ್ಲಿದೆ..

ಬೆಂಗಾಲಿ ಹುಡುಗಿಯಾಗಿ ಬದಲಾದ ‘ಲವ್​ ಮಾಕ್ಟೇಲ್​ 2’ ನಟಿ ರೇಚಲ್​ ಡೇವಿಡ್​

Follow us on

Related Stories

Most Read Stories

Click on your DTH Provider to Add TV9 Kannada