ದುನಿಯಾ ವಿಜಯ್ ನಿರ್ದೇಶನದ ‘ಭೀಮ’ ಚಿತ್ರದ ಮೇಕಿಂಗ್ ವಿಡಿಯೋ ಕಂಡು ಕಣ್ಣರಳಿಸಿದ ಫ್ಯಾನ್ಸ್
‘ಭೀಮ’ ಚಿತ್ರಕ್ಕೆ ಮೊದಲ ಹಂತದ ಶೂಟಿಂಗ್ ಮುಕ್ತಾಯ ಆಗಿದೆ. ದುನಿಯಾ ವಿಜಯ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾದ ಮೇಕಿಂಗ್ ವೀಡಿಯೋ ಇಲ್ಲಿದೆ..
ನಟನಾಗಿ ಮಾತ್ರವಲ್ಲದೇ ನಿರ್ದೇಶಕನಾಗಿಯೂ ಗೆದ್ದು ಬೀಗಿದವರು ದುನಿಯಾ ವಿಜಯ್ (Duniya Vijay). ಮೊದಲ ಬಾರಿಗೆ ಅವರು ಆ್ಯಕ್ಷನ್-ಕಟ್ ಹೇಳಿದ್ದ ‘ಸಲಗ’ ಸಿನಿಮಾ (Salaga Movie) ಸೂಪರ್ ಹಿಟ್ ಆಯಿತು. ಆ ಬಳಿಕ ಅವರು ಕೈಗೆತ್ತಿಕೊಂಡ ಸಿನಿಮಾ ‘ಭೀಮ’. ಪೋಸ್ಟರ್ ಮತ್ತು ಶೀರ್ಷಿಕೆ ಮೂಲಕ ಗಮನ ಸೆಳೆದಿರುವ ಈ ಚಿತ್ರಕ್ಕೆ ಈಗ ಭರದಿಂದ ಶೂಟಿಂಗ್ ನಡೆಯುತ್ತಿದೆ. ಮೊದಲ ಹಂತದ ಚಿತ್ರೀಕರಣ ಮುಕ್ತಾಯಗೊಳಿಸಿರುವ ಚಿತ್ರತಂಡ ಮೇಕಿಂಗ್ ವಿಡಿಯೋ ಹಂಚಿಕೊಂಡಿದೆ. ದುನಿಯಾ ವಿಜಯ್ ಅವರು ನಿರ್ದೇಶಕನ ಕ್ಯಾಪ್ ಧರಿಸಿ ಯಾವ ರೀತಿ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ ಎಂಬುದರ ಝಲಕ್ ಈ ವಿಡಿಯೋದಲ್ಲಿದೆ. ಹಲವು ಕಾರಣಗಳಿಂದಾಗಿ ಈ ಸಿನಿಮಾ ಕೌತುಕ ಮೂಡಿಸಿದೆ. ‘ಭೀಮ’ (Bheema Movie) ಚಿತ್ರದಲ್ಲಿ ವಿಜಯ್ ಅವರು ಯಾವ ಕಥೆಯನ್ನು ಹೇಳಲಿದ್ದಾರೆ ಎಂಬುದನ್ನು ತಿಳಿಯಲು ಫ್ಯಾನ್ಸ್ ಕಾದಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: May 22, 2022 09:55 AM
Latest Videos