ಪ್ರಶಾಂತ್​ ನೀಲ್​ ನಿರ್ದೇಶನದ ‘ಸಲಾರ್​’ ಚಿತ್ರಕ್ಕೆ ವಿಲನ್​ ಆದ ಪೃಥ್ವಿರಾಜ್​; ವಿಷಯ ಲೀಕ್ ಮಾಡಿದ ಪ್ರಭಾಸ್

‘ಸಲಾರ್’ ಸಿನಿಮಾಗೆ ವಿಲನ್​ ಯಾರು ಎನ್ನುವ ವಿಚಾರವನ್ನು ಚಿತ್ರತಂಡ ಈವರೆಗೆ ಬಿಟ್ಟುಕೊಟ್ಟಿಲ್ಲ. ಈಗಾಗಲೇ ಚಿತ್ರತಂಡ ಹಲವು ಹಂತದ ಶೂಟ್​ ಮುಗಿಸಿದೆ. ಸಿನಿಮಾದಲ್ಲಿ ಶ್ರುತಿ ಹಾಸನ್​ ನಾಯಕಿಯಾಗಿ ನಟಿಸುತ್ತಿದ್ದಾರೆ. ಈಗ ಚಿತ್ರದ ಬಗ್ಗೆ ಹೊಸ ಅಪ್​ಡೇಟ್​ ಸಿಕ್ಕಿದೆ.

ಪ್ರಶಾಂತ್​ ನೀಲ್​ ನಿರ್ದೇಶನದ ‘ಸಲಾರ್​’ ಚಿತ್ರಕ್ಕೆ ವಿಲನ್​ ಆದ ಪೃಥ್ವಿರಾಜ್​; ವಿಷಯ ಲೀಕ್ ಮಾಡಿದ ಪ್ರಭಾಸ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Mar 09, 2022 | 3:38 PM

‘ಬಾಹುಬಲಿ 2’ (Bahubali 2) ತೆರೆಗೆ ಬಂದ ನಂತರದಲ್ಲಿ ಪ್ರಭಾಸ್ (Prabhas) ನಟನೆಯ ಒಂದು ಸಿನಿಮಾ ಮಾತ್ರ ರಿಲೀಸ್​ ಆಗಿದೆ. ಅದು ‘ಸಾಹೋ’ ಚಿತ್ರ. ಈ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಮಕಾಡೆ ಮಲಗಿತು. ಮುಂದಿನ ಸಿನಿಮಾ ‘ರಾಧೆ ಶ್ಯಾಮ್​’ನಲ್ಲಿ (Radhe Shyam) ಆ್ಯಕ್ಷನ್​ ಬದಿಗಿಟ್ಟು ಲವರ್ ಬಾಯ್​ ಆಗಿ ಕಾಣಿಸಿಕೊಳ್ಳುವ ಸಾಹಸಕ್ಕೆ ಪ್ರಭಾಸ್​ ಮುಂದಾಗಿದ್ದಾರೆ. ಈ ಸಿನಿಮಾ ಮಾರ್ಚ್​ 11ರಂದು ತೆರೆಗೆ ಬರುತ್ತಿದೆ. ಇದರ ಜತೆಜತೆಗೆ ಹಲವು ಸಿನಿಮಾ ಕೆಲಸಗಳಲ್ಲಿ ಅವರು ಬ್ಯುಸಿ ಇದ್ದಾರೆ. ಪ್ರಭಾಸ್​ ನಟನೆಯ ‘ಸಲಾರ್’ ಬಗ್ಗೆ ಈಗ ಹೊಸ ಅಪ್​ಡೇಟ್​ ಒಂದು ಸಿಕ್ಕಿದೆ. ಈ ಚಿತ್ರಕ್ಕೆ ಮಲಯಾಳಂ ನಟ ಪೃಥ್ವಿರಾಜ್​ ಸುಕುಮಾರನ್​ ವಿಲನ್​ ಆಗಲಿದ್ದಾರೆ ಎಂದು ವರದಿ ಆಗಿದೆ. ಅಚ್ಚರಿಯ ವಿಚಾರ ಎಂದರೆ, ಪ್ರಭಾಸ್​ ಅವರೇ ಈ ವಿಚಾರ ಲೀಕ್ ಮಾಡಿದ್ದಾರೆ.

‘ಸಲಾರ್’ ಸಿನಿಮಾಗೆ ವಿಲನ್​ ಯಾರು ಎನ್ನುವ ವಿಚಾರವನ್ನು ಚಿತ್ರತಂಡ ಈವರೆಗೆ ಬಿಟ್ಟುಕೊಟ್ಟಿಲ್ಲ. ಈಗಾಗಲೇ ಚಿತ್ರತಂಡ ಹಲವು ಹಂತದ ಶೂಟ್​ ಮುಗಿಸಿದೆ. ಸಿನಿಮಾದಲ್ಲಿ ಶ್ರುತಿ ಹಾಸನ್​ ನಾಯಕಿಯಾಗಿ ನಟಿಸುತ್ತಿದ್ದಾರೆ. ಈಗ ಚಿತ್ರದ ಬಗ್ಗೆ ಹೊಸ ಅಪ್​ಡೇಟ್​ ಸಿಕ್ಕಿದೆ. ಪೃಥ್ವಿರಾಜ್​ ಅವರು ವಿಲನ್​ ಆಗಿ ಕಾಣಿಸಿಕೊಳ್ಳುತ್ತಿದ್ದು, ಈ ವಿಚಾರ ಸಿನಿ ಪ್ರಿಯರ ಕುತೂಹಲ ಹೆಚ್ಚಿಸಿದೆ.

ಪ್ರಶಾಂತ್​ ನೀಲ್​ ಈಗಾಗಲೇ ತಮ್ಮ ಕಸುಬುದಾರಿಕೆ ತೋರಿಸಿದ್ದಾರೆ. ಅವರು ಪ್ರತಿ ಪಾತ್ರ ಆಯ್ಕೆ ವೇಳೆ ಸಾಕಷ್ಟು ಎಚ್ಚರಿಕೆ ವಹಿಸುತ್ತಾರೆ. ‘ಸಲಾರ್​’ ಸಿನಿಮಾ ವಿಲನ್ ಆಯ್ಕೆ ಬಗ್ಗೆ ಹೆಚ್ಚು ಗಮನ ವಹಿಸಿದ್ದಾರೆ. ಸಾಕಷ್ಟು ಲೆಕ್ಕಾಚಾರ ಹಾಕಿ ಪೃಥ್ವಿರಾಜ್​ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಮಲಯಾಳಂ ಚಿತ್ರರಂಗದಲ್ಲಿ ಪೃಥ್ವಿರಾಜ್​ ಈಗಾಗಲೇ ದೊಡ್ಡ ಮಟ್ಟದ ಛಾಪು ಮೂಡಿಸಿದ್ದಾರೆ. ಅವರು ಯಾವುದೇ ಪಾತ್ರ ಕೊಟ್ಟರೂ ಅದನ್ನು ಕೇವಲ ನಟಿಸದೇ ಜೀವಿಸಿ ತೋರಿಸುತ್ತಾರೆ. ಈ ಮೊದಲು ಕೂಡ ಅವರು ವಿಲನ್ ರೀತಿಯ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಪೃಥ್ವಿರಾಜ್​ ಅವರು​ ‘ಸಲಾರ್​’ ಸಿನಿಮಾದಲ್ಲಿ ಮುಖ್ಯವಿಲನ್​ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಂದರ್ಶನವೊಂದರಲ್ಲಿ ಪ್ರಭಾಸ್ ಈ ಬಗ್ಗೆ ಹೇಳಿಕೊಂಡಿದ್ದಾರೆ. ಪ್ರಶಾಂತ್​ ನೀಲ್​ ಈ ಬಗ್ಗೆ ಶೀಘ್ರವೇ ಘೋಷಣೆ ಮಾಡುವ ಸಾಧ್ಯತೆ ಇದೆ ಇದೆ.

‘ರಾಧೆ ಶ್ಯಾಮ್​’ ಪ್ರಚಾರ ಕಾರ್ಯದಲ್ಲಿ ಪ್ರಭಾಸ್ ಬ್ಯುಸಿ ಆಗಿದ್ದಾರೆ. ಪ್ರಭಾಸ್​ಗೆ ಜತೆಯಾಗಿ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಮಾರ್ಚ್​ 11ರಂದು ವಿಶ್ವಾದ್ಯಂತ ತೆರೆಗೆ ಬರುತ್ತಿದೆ.

ಇದನ್ನೂ ಓದಿ: ಪ್ರಭಾಸ್​ ಹುಟ್ಟುಹಬ್ಬದ ದಿನವೇ ಫ್ಯಾನ್ಸ್​ಗೆ ಬೇಸರ ಮೂಡಿಸಿದ ಪ್ರಶಾಂತ್​ ನೀಲ್​; ‘ಸಲಾರ್’​ ಟೀಮ್​ ಎಡವಿದ್ದೆಲ್ಲಿ?

‘ಸಲಾರ್​’ಗೂ ‘ಕೆಜಿಎಫ್​’ ಫಾರ್ಮುಲಾ; ಎರಡು ಪಾರ್ಟ್​​ನಲ್ಲಿ ಬರಲಿದೆ ಪ್ರಭಾಸ್​-ಪ್ರಶಾಂತ್​ ನೀಲ್​ ಸಿನಿಮಾ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ