AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಭಾಸ್​ ಹುಟ್ಟುಹಬ್ಬದ ದಿನವೇ ಫ್ಯಾನ್ಸ್​ಗೆ ಬೇಸರ ಮೂಡಿಸಿದ ಪ್ರಶಾಂತ್​ ನೀಲ್​; ‘ಸಲಾರ್’​ ಟೀಮ್​ ಎಡವಿದ್ದೆಲ್ಲಿ?

‘ಹ್ಯಾಪಿ ಬರ್ತ್​ಡೇ ಪ್ರಭಾಸ್​’ ಎಂಬ ವಾಕ್ಯ ಬಿಟ್ಟರೆ ಈ ಪೋಸ್ಟರ್​ನಲ್ಲಿ ಬೇರೇನೂ ಇಲ್ಲ. ಕೊನೇ ಪಕ್ಷ ಪ್ರಭಾಸ್​ ಅವರ ಒಂದು ಫೋಟೋ ಕೂಡ ಇಲ್ಲ. ಇದನ್ನು ಕಂಡು ಫ್ಯಾನ್ಸ್​ ಬೇಸರ ಮಾಡಿಕೊಂಡಿದ್ದಾರೆ.

ಪ್ರಭಾಸ್​ ಹುಟ್ಟುಹಬ್ಬದ ದಿನವೇ ಫ್ಯಾನ್ಸ್​ಗೆ ಬೇಸರ ಮೂಡಿಸಿದ ಪ್ರಶಾಂತ್​ ನೀಲ್​; ‘ಸಲಾರ್’​ ಟೀಮ್​ ಎಡವಿದ್ದೆಲ್ಲಿ?
ಪ್ರಶಾಂತ್ ನೀಲ್, ಪ್ರಭಾಸ್
TV9 Web
| Edited By: |

Updated on: Oct 24, 2021 | 7:50 AM

Share

ಪ್ಯಾನ್​ ಇಂಡಿಯಾ ಸ್ಟಾರ್​ ಪ್ರಭಾಸ್​ ಅವರು ಶನಿವಾರ (ಅ.23) ಹುಟ್ಟುಹಬ್ಬ ಆಚರಿಸಿಕೊಂಡರು. ಅವರ ಅಭಿಮಾನಿಗಳು ಭರ್ಜರಿಯಾಗಿ ಸಂಭ್ರಮಿಸಿದರು. 42ನೇ ವಸಂತಕ್ಕೆ ಕಾಲಿಟ್ಟ ಪ್ರಭಾಸ್​ಗೆ ಎಲ್ಲರಿಂದಲೂ ಶುಭಾಶಯಗಳ ಮಳೆ ಸುರಿಸಲಾಗಿದೆ. ಬಹುನಿರೀಕ್ಷಿತ ‘ರಾಧೆ ಶ್ಯಾಮ್​’ ಸಿನಿಮಾದಿಂದ ಟೀಸರ್​ ಬಿಡುಗಡೆ ಆಗಿದ್ದು, ಜನರಿಂದ ಸಖತ್​ ಮೆಚ್ಚುಗೆ ಸಿಗುತ್ತಿದೆ. ಇದರ ಜೊತೆಗೆ ‘ಸಲಾರ್​’ ಮತ್ತು ‘ಆದಿಪುರುಷ್​’ ಚಿತ್ರತಂಡದಿಂದ ಏನಾದರೂ ಅಪ್​ಡೇಟ್​ ಸಿಗಬಹುದು ಎಂದು ಅಭಿಮಾನಿಗಳು ಕಾದಿದ್ದರು. ಆದರೆ ಕೊನೇ ಕ್ಷಣದಲ್ಲಿ ಆಗಿದ್ದೇ ಬೇರೆ.

ಪ್ರಶಾಂತ್​ ನೀಲ್​ ನಿರ್ದೇಶಿಸುತ್ತಿರುವ ‘ಸಲಾರ್​’ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇದೆ. ‘ಕೆಜಿಎಫ್​’ ಚಿತ್ರದ ಬಳಿಕ ಅವರು ಕೈಗೆತ್ತಿಕೊಂಡ ಸಿನಿಮಾ ಇದಾಗಿರುವುದರಿಂದ ಹೈಪ್​ ಜೋರಾಗಿದೆ. ಹೊಂಬಾಳೆ ಪ್ರೊಡಕ್ಷನ್​ ನಿರ್ಮಾಣ ಮಾಡುತ್ತಿರುವುದು ಕೂಡ ನಿರೀಕ್ಷೆ ಹೆಚ್ಚಲು ಕಾರಣ ಆಗಿದೆ. ಆದರೆ ಪ್ರಭಾಸ್​ ಬರ್ತ್​ಡೇ ದಿನ ‘ಸಲಾರ್​’ ತಂಡ ಹಂಚಿಕೊಂಡ ಪೋಸ್ಟರ್​ ನಿರಾಸೆ ಮೂಡಿಸಿದೆ.

ಕೇವಲ ‘ಹ್ಯಾಪಿ ಬರ್ತ್​ಡೇ ಪ್ರಭಾಸ್​’ ಎಂಬ ವಾಕ್ಯ ಬಿಟ್ಟರೆ ಈ ಪೋಸ್ಟರ್​ನಲ್ಲಿ ಬೇರೇನೂ ಇಲ್ಲ. ಕೊನೇ ಪಕ್ಷ ಪ್ರಭಾಸ್​ ಅವರ ಒಂದು ಫೋಟೋ ಕೂಡ ಇಲ್ಲ. ಇದನ್ನು ಕಂಡು ಅವರ ಫ್ಯಾನ್ಸ್​ ಬೇಸರ ಮಾಡಿಕೊಂಡಿದ್ದಾರೆ. ಪ್ರಶಾಂತ್​ ನೀಲ್​ ಈ ರೀತಿ ಮಾಡಲು ಕಾರಣ ಏನು ಎಂದು ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. ಸದ್ಯ ಇದಕ್ಕೆ ಪ್ರಶಾಂತ್​ ನೀಲ್​ ಉತ್ತರ ನೀಡಿಲ್ಲ.

ಇನ್ನು, ‘ಆದಿಪುರುಷ್’​ ಚಿತ್ರತಂಡದಿಂದಲೂ ಇದೇ ರೀತಿ ಆಗಿದೆ. ಖ್ಯಾತ ನಿರ್ದೇಶಕ ಓಂ ರಾವುತ್​ ಅವರು ‘ಆದಿಪುರುಷ್’ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ. ಅವರು ಕೂಡ ಪ್ರಭಾಸ್​ ಹುಟ್ಟುಹಬ್ಬದ ಸಲುವಾಗಿ ಯಾವುದೇ ಹೊಸ ಅಪ್​ಡೇಟ್​ ಹಂಚಿಕೊಂಡಿಲ್ಲ. ಕಾಟಾಚಾರಕ್ಕೆ ಎಂಬಂತೆ ಒಂದು ಪೋಸ್ಟರ್​ ಬಿಡುಗಡೆ ಮಾಡಲಾಗಿದೆ. ಅದು ಕೂಡ ಯಾವುದೋ ಹಳೇ ಫೋಟೋಶೂಟ್​ನ ಚಿತ್ರ ಬಳಸಿಕೊಂಡು ಈ ಪೋಸ್ಟರ್​ ವಿನ್ಯಾಸ ಮಾಡಲಾಗಿದೆ. ಆ ಫೋಟೋಗೂ, ಆದಿಪುರುಷ್​ ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲ. ಈ ಎಲ್ಲ ಬೆಳವಣಿಗೆಗಳಿಂದಾಗಿ ಪ್ರಭಾಸ್​ ಫ್ಯಾನ್ಸ್​ ಬೇಸರ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:

ಯಶ್​ಗೆ ಭೀಮನ ಪಾತ್ರ, ಪ್ರಶಾಂತ್​ ನೀಲ್​ ನಿರ್ದೇಶನ; ಹೀಗೊಂದು ನಕಲಿ ಸಿನಿಮಾದ ಟ್ರೇಲರ್​ಗೆ ಲಕ್ಷಾಂತರ ವೀವ್ಸ್​

Prabhas: ‘ಸಲಾರ್​’ ವಿಡಿಯೋ ಲೀಕ್​: ಕಿಡಿಗೇಡಿಗಳ ಕೆಲಸದಿಂದ ಪ್ರಭಾಸ್​ ಅಭಿಮಾನಿಗಳಿಗೆ ಪದೇಪದೇ ನಿರಾಸೆ

VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
VIDEO: 6 ಎಸೆತಗಳಲ್ಲಿ 7 ರನ್​: ಡೆಲ್ಲಿ ಕ್ಯಾಪಿಟಲ್ಸ್​ಗೆ ಇದೆಂಥ ಸೋಲು..!
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್