‘ಸಲಾರ್​’ಗೂ ‘ಕೆಜಿಎಫ್​’ ಫಾರ್ಮುಲಾ; ಎರಡು ಪಾರ್ಟ್​​ನಲ್ಲಿ ಬರಲಿದೆ ಪ್ರಭಾಸ್​-ಪ್ರಶಾಂತ್​ ನೀಲ್​ ಸಿನಿಮಾ

‘ಸಲಾರ್​’ಗೂ ‘ಕೆಜಿಎಫ್​’ ಫಾರ್ಮುಲಾ; ಎರಡು ಪಾರ್ಟ್​​ನಲ್ಲಿ ಬರಲಿದೆ ಪ್ರಭಾಸ್​-ಪ್ರಶಾಂತ್​ ನೀಲ್​ ಸಿನಿಮಾ
ಪ್ರಭಾಸ್​-ಪ್ರಶಾಂತ್​ ನೀಲ್​

‘ಬಾಹುಬಲಿ’ ಸರಣಿ ಒಪ್ಪಿಕೊಂಡ ಬಳಿಕ ಪ್ರಭಾಸ್​ ಖ್ಯಾತಿ ಹೆಚ್ಚಿದೆ ನಿಜ. ಆದರೆ, ಅವರು ನೀಡುತ್ತಿರುವ ಸಿನಿಮಾ ಸಂಖ್ಯೆ ಕಡಿಮೆ ಆಗಿದೆ. ವರ್ಷಕ್ಕೆ ಒಂದು ಸಿನಿಮಾ ತೆರೆಗೆ ತರುತ್ತಿದ್ದ ಅವರಿಗೆ ಈಗ ಅದು ಸಾಧ್ಯವಾಗುತ್ತಿಲ್ಲ.

TV9kannada Web Team

| Edited By: Rajesh Duggumane

Jan 30, 2022 | 5:05 PM

ಇತ್ತೀಚಿನ ವರ್ಷಗಳಲ್ಲಿ ಹಲವು ಸಿನಿಮಾಗಳು ಎರಡು ಪಾರ್ಟ್​ನಲ್ಲಿ ತೆರೆಕಾಣುತ್ತಿವೆ. ಎಸ್​.ಎಸ್​. ರಾಜಮೌಳಿ (SS Rajamouli) ನಿರ್ದೇಶನದ ‘ಬಾಹುಬಲಿ’ ಚಿತ್ರ ಎರಡು ಪಾರ್ಟ್​ನಲ್ಲಿ ಬಿಡುಗಡೆ ಆದ ನಂತರದಲ್ಲಿ ಈ ಟ್ರೆಂಡ್​ ಜೋರಾಗಿದೆ. ಕನ್ನಡದ ‘ಕೆಜಿಎಫ್​’ ಸಿನಿಮಾ ಎರಡು ಪಾರ್ಟ್​ಗಳಲ್ಲಿ ರಿಲೀಸ್​ ಆಗುತ್ತಿದೆ. ಅಲ್ಲು ಅರ್ಜುನ್​ ನಟನೆಯ ‘ಪುಷ್ಪ’ (Pushpa Movie) ಕೂಡ ಇದೇ ಹಾಡಿ ಹಿಡಿದಿದೆ. ಈಗ ಮತ್ತೊಂದು ಚಿತ್ರ ಇದೇ ಫಾರ್ಮುಲಾ ಅಳವಡಿಕೆಗೆ ಸಜ್ಜಾಗಿದೆ ಎಂಬ ಮಾತು ಟಾಲಿವುಡ್​ ಅಂಗಳದಲ್ಲಿ ಜೋರಾಗಿದೆ. ಖ್ಯಾತ ನಟ ಪ್ರಭಾಸ್ (Prabhas)​ ಹಾಗೂ ಜನಪ್ರಿಯ ನಿರ್ದೇಶಕ ಪ್ರಶಾಂತ್​ ನೀಲ್​ ಒಟ್ಟಾಗಿ ಕೆಲಸ ಮಾಡುತ್ತಿರುವ ‘ಸಲಾರ್​’ ಸಿನಿಮಾ ಕೂಡ ಎರಡು ಪಾರ್ಟ್​ಗಳಲ್ಲಿ ಬರಲಿದೆ ಎಂಬ ಸುದ್ದಿ ಜೋರಾಗಿದೆ. ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರಬರಬೇಕಿದೆ.

‘ಬಾಹುಬಲಿ’ ಸರಣಿ ಒಪ್ಪಿಕೊಂಡ ಬಳಿಕ ಪ್ರಭಾಸ್​ ಖ್ಯಾತಿ ಹೆಚ್ಚಿದೆ ನಿಜ. ಆದರೆ, ಅವರು ನೀಡುತ್ತಿರುವ ಸಿನಿಮಾ ಸಂಖ್ಯೆ ಕಡಿಮೆ ಆಗಿದೆ. ವರ್ಷಕ್ಕೆ ಒಂದು ಸಿನಿಮಾ ತೆರೆಗೆ ತರುತ್ತಿದ್ದ ಅವರಿಗೆ ಈಗ ಅದು ಸಾಧ್ಯವಾಗುತ್ತಿಲ್ಲ. 2013ರಿಂದ 2022ರವರೆಗೆ ಪ್ರಭಾಸ್​ ನಟನೆಯ ನಾಲ್ಕು ಸಿನಿಮಾಗಳು ಮಾತ್ರ ರಿಲೀಸ್​ ಆಗಿವೆ. ಅದರಲ್ಲಿ ‘ಸಾಹೋ’ ಚಿತ್ರ ಮಕಾಡೆ ಮಲಗಿತ್ತು. ಹೀಗಾಗಿ, ಅವರು ಸಾಲುಸಾಲು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಆದರೆ, ಪ್ರಭಾಸ್​ ಎದುರು ಪ್ರಶಾಂತ್​ ನೀಲ್ ವಿಶೇಷ ಮನವಿ ಒಂದನ್ನು ಇಟ್ಟಿದ್ದರು. ಇದನ್ನು ಪ್ರಭಾಸ್​ ಒಪ್ಪಿಕೊಡಿದ್ದಾರೆ ಎನ್ನಲಾಗುತ್ತಿದೆ.

‘ಸಲಾರ್​’ ಕೆಲಸಗಳನ್ನು ಬೇಗ ಪೂರ್ಣಗೊಳಿಸುವಂತೆ ಪ್ರಭಾಸ್​ ಕೋರಿದ್ದರು. ಆದರೆ, ಇದಕ್ಕೆ ನೋ ಎಂದಿದ್ದಾರೆ ಪ್ರಶಾಂತ್​ ನೀಲ್​. ಅವರ ನಿರ್ದೇಶನದ ‘ಕೆಜಿಎಫ್​ 2’ ಇನ್ನೂ ರಿಲೀಸ್​ ಆಗಿಲ್ಲ. ಇದರ ಪ್ರಚಾರ ಕಾರ್ಯಕ್ಕೆ ಅವರು ಹೆಚ್ಚು ಒತ್ತು ನೀಡಬೇಕು. ಹೀಗಾಗಿ, ನಿಧಾನವಾಗಿ ‘ಸಲಾರ್​’ ಕೆಲಸ ಮಾಡುವುದಾಗಿ ಪ್ರಶಾಂತ್​ ನೀಲ್​ ಹೇಳಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ಎರಡು ಪಾರ್ಟ್​ನಲ್ಲಿ ‘ಸಲಾರ್​’ ತೆರೆಗೆ ತರೋಕೆ ಸಿದ್ಧತೆ ನಡೆದಿದೆ ಎನ್ನಲಾಗುತ್ತಿದೆ.

‘ಸಲಾರ್​’ ಕಥೆಯನ್ನು ತುಂಬಾನೇ ವಿಸ್ತೃತವಾಗಿ ಹೇಳುವ ಅವಶ್ಯಕತೆ ಇದೆ. ಹೀಗಾಗಿ, ಒಂದೇ ಪಾರ್ಟ್​ನಲ್ಲಿ ಎಲ್ಲವನ್ನೂ ತುರುಕುವ ಬದಲು, ಎರಡು ಪಾರ್ಟ್​ಗಳಲ್ಲಿ ಸಿನಿಮಾ ತೆರೆಗೆ ತರಲು ಚಿಂತನೆ ನಡೆದಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಚಿತ್ರತಂಡದಿಂದ ಇನ್ನಷ್ಟೇ ಮಾಹಿತಿ ಬರಬೇಕಿದೆ. ‘ಪುಷ್ಪ’ ಚಿತ್ರತಂಡಕ್ಕೂ ಶೂಟಿಂಗ್​ ಆರಂಭವಾದ ನಂತರದಲ್ಲಿ ಎರಡು ಪಾರ್ಟ್​​ನಲ್ಲಿ ತರುವ ಆಲೋಚನೆ ಹುಟ್ಟಿಕೊಂಡಿತ್ತು.

ಇದನ್ನೂ ಓದಿ: Prabhas: ‘ಸಲಾರ್​’ ವಿಡಿಯೋ ಲೀಕ್​: ಕಿಡಿಗೇಡಿಗಳ ಕೆಲಸದಿಂದ ಪ್ರಭಾಸ್​ ಅಭಿಮಾನಿಗಳಿಗೆ ಪದೇಪದೇ ನಿರಾಸೆ

ಪ್ರಭಾಸ್​ ಹುಟ್ಟುಹಬ್ಬದ ದಿನವೇ ಫ್ಯಾನ್ಸ್​ಗೆ ಬೇಸರ ಮೂಡಿಸಿದ ಪ್ರಶಾಂತ್​ ನೀಲ್​; ‘ಸಲಾರ್’​ ಟೀಮ್​ ಎಡವಿದ್ದೆಲ್ಲಿ?

Follow us on

Related Stories

Most Read Stories

Click on your DTH Provider to Add TV9 Kannada