ರಕ್ಷಿತ್ ಶೆಟ್ಟಿ (Rakshit Shetty) ನಟನೆಯ ‘777 ಚಾರ್ಲಿ’ ಸಿನಿಮಾ (777 Chaelie Movie) ತೆರೆಗೆ ಬರೋಕೆ ರೆಡಿ ಆಗಿದೆ. ಜೂನ್ 10ರಂದು ರಿಲೀಸ್ ಆಗುತ್ತಿರುವ ಈ ಚಿತ್ರವನ್ನು ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾದಿದ್ದಾರೆ. ಇದು ಪ್ಯಾನ್ ಇಂಡಿಯಾ ಸಿನಿಮಾ. ಶ್ವಾನ ಮತ್ತು ಮನುಷ್ಯನ ನಡುವಿನ ಬಾಂಧವ್ಯದ ಬಗ್ಗೆ ಸಿನಿಮಾದಲ್ಲಿ ಹೇಳಲಾಗುತ್ತಿದೆ. ತೆಲುಗಿನಲ್ಲಿ ಈ ಚಿತ್ರವನ್ನು ರಾಣಾ ದಗ್ಗುಬಾಟಿ (Rana Daggubati) ಪ್ರೆಸೆಂಟ್ ಮಾಡುತ್ತಿದ್ದಾರೆ. ಈ ಚಿತ್ರದ ಪ್ರಚಾರಕ್ಕಾಗಿ ತಂಡ ಹೈದರಾಬಾದ್ಗೆ ತೆರಳಿತ್ತು. ಈ ವೇಳೆ ಚಾರ್ಲಿ ಜತೆ ರಾಣಾ ದಗ್ಗುಬಾಟಿ ಫ್ರೆಂಡ್ಶಿಪ್ ಮಾಡಿಕೊಂಡಿದ್ದಾರೆ. ಈ ಕ್ಯೂಟ್ ವಿಡಿಯೋ ಎಲ್ಲ ಕಡೆಗಳಲ್ಲಿ ವೈರಲ್ ಆಗಿದೆ.
‘777 ಚಾರ್ಲಿ’ ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಪರಭಾಷೆಯಲ್ಲಿ ಚಿತ್ರದ ಪ್ರಮೋಷನ್ ಅತ್ಯಗತ್ಯ. ದೊಡ್ಡ ಮಟ್ಟದಲ್ಲಿ ಚಿತ್ರಕ್ಕೆ ಪ್ರಮೋಷನ್ ಮಾಡಿದರೆ ಹೆಚ್ಚು ಜನರು ಬಂದು ಸಿನಿಮಾ ನೋಡುತ್ತಾರೆ. ಚಿತ್ರ ಉತ್ತಮವಾಗಿದ್ದರೆ ಚಿತ್ರದ ಕಲೆಕ್ಷನ್ ಹೆಚ್ಚುತ್ತದೆ. ‘777 ಚಾರ್ಲಿ’ ಬಗ್ಗೆ ರಕ್ಷಿತ್ ಶೆಟ್ಟಿ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಕಾರಣಕ್ಕೆ ಚಿತ್ರವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. ಇತ್ತೀಚೆಗೆ ಇಡೀ ತಂಡ ಹೈದರಾಬಾದ್ಗೆ ತೆರಳಿತ್ತು. ಈ ವೇಳೆ ಸೆರೆಹಿಡಿಯಲಾದ ವಿಡಿಯೋವನ್ನು ಪಿಂಕ್ವಿಲ್ಲಾ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಪಾಲ್ಗೊಳ್ಳಲು ರಕ್ಷಿತ್ ಶೆಟ್ಟಿ, ರಾಣಾ ದಗ್ಗುಬಾಟಿ, ಸಂಗೀತಾ ಶೃಂಗೇರಿ ಸೇರಿ ಅನೇಕರು ಹೋಟೆಲ್ಗೆ ಆಗಮಿಸಿದ್ದಾರೆ. ಇವರ ಜತೆ ಚಾರ್ಲಿ ಪಾತ್ರದಲ್ಲಿ ಕಾಣಿಸಿಕೊಂಡ ಶ್ವಾನ ಕೂಡ ಬಂದಿತ್ತು. ಚಾರ್ಲಿ ಜತೆ ರಾಣಾ ಫ್ರೆಂಡ್ಶಿಪ್ ಮಾಡಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿದೆ.
View this post on Instagram
ಇದನ್ನೂ ಓದಿ: ನಂಗೆ ಲವ್ ಫೈಲ್ಯುರ್ ಆಗಿಲ್ಲ: ರವಿಚಂದ್ರನ್ ಮುಂದೆ ಮನಬಿಚ್ಚಿದ ರಕ್ಷಿತ್ ಶೆಟ್ಟಿ
ಕಿರಣ್ ರಾಜ್ ನಿರ್ದೇಶನದ ’777 ಚಾರ್ಲಿ’ ಚಿತ್ರದ ಟ್ರೇಲರ್ ಇತ್ತೀಚೆಗೆ ರಿಲೀಸ್ ಆಗಿತ್ತು. ಹಾಸ್ಯಮಯ ಹಾಗೂ ಭಾವನಾತ್ಮಕವಾಗಿ ಈ ಟ್ರೇಲರ್ ಪ್ರೇಕ್ಷಕರನ್ನು ಗಮನ ಸೆಳೆದಿತ್ತು. ಟ್ರೇಲರ್ನಿಂದ ಸಿನಿಮಾ ಬಗ್ಗೆ ಇರುವ ಹೈಪ್ ಹೆಚ್ಚಿದೆ. ಪರಭಾಷೆಯವರು ಟ್ರೇಲರ್ಅನ್ನು ಮೆಚ್ಚಿಕೊಂಡಿದ್ದಾರೆ.
ನಾಯಿ ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದೆ. ಆ ಶ್ವಾನದ ಮೂಡ್ಗೆ ತಕ್ಕಂತೆ ಚಿತ್ರೀಕರಣವನ್ನು ಮಾಡಬೇಕಿತ್ತು. ಆದ್ದರಿಂದ ಈ ಚಿತ್ರದ ಶೂಟಿಂಗ್ಗೆ ಹೆಚ್ಚು ಸಮಯ ಹಿಡಿದಿದೆ. ಅದರ ನಡುವೆ ಕೊರೊನಾ ಲಾಕ್ಡೌನ್ ಕೂಡ ಬಂದಿದ್ದರಿಂದ ಇನ್ನಷ್ಟ ತಡವಾಗಿತ್ತು. ಈಗ ಅಂತೂ ಈ ಸಿನಿಮಾ ರಿಲೀಸ್ಗೆ ಸಿದ್ಧವಾಗಿದೆ. ಜೂನ್ 10ರಂದು ‘777 ಚಾರ್ಲಿ’ ಬಿಡುಗಡೆ ಆಗಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.