ಆಮಿರ್​ ಖಾನ್​ರನ್ನು ‘ಟೈಟಾನಿಕ್’​ ನಿರ್ದೇಶಕನಿಗೆ ಹೋಲಿಸಿದ ಹಾಲಿವುಡ್​ ದಿಗ್ಗಜ; ಇಲ್ಲಿದೆ ಅಚ್ಚರಿ ವಿಚಾರ

Aamir Khan: ಆಮಿರ್ ಖಾನ್​ ಅವರು ಈಗ ‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾದ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ಅದು ಹಾಲಿವುಡ್​ನ ‘ಫಾರೆಸ್ಟ್​ ಗಂಪ್​’ ಸಿನಿಮಾದ ಹಿಂದಿ ರಿಮೇಕ್​.

ಆಮಿರ್​ ಖಾನ್​ರನ್ನು ‘ಟೈಟಾನಿಕ್’​ ನಿರ್ದೇಶಕನಿಗೆ ಹೋಲಿಸಿದ ಹಾಲಿವುಡ್​ ದಿಗ್ಗಜ; ಇಲ್ಲಿದೆ ಅಚ್ಚರಿ ವಿಚಾರ
ಜೇಮ್ಸ್ ಕ್ಯಾಮೆರಾನ್, ಆಮಿರ್ ಖಾನ್​, ಸ್ಟೀವನ್​ ಸ್ಪೀಲ್​ಬರ್ಗ್
Follow us
TV9 Web
| Updated By: ಮದನ್​ ಕುಮಾರ್​

Updated on: May 29, 2022 | 1:56 PM

ನಟ ಆಮಿರ್​ ಖಾನ್ (Aamir Khan) ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರ ಸಿನಿಮಾಗಳನ್ನು ಜಗತ್ತಿನಾದ್ಯಂತ ಇರುವ ಪ್ರೇಕ್ಷಕರು ನೋಡುತ್ತಾರೆ. ಆಮಿರ್​ ಖಾನ್​ ನಟಿಸಿದ್ದ ‘ದಂಗಲ್​’ ಸಿನಿಮಾ ಚೀನಾದಲ್ಲಿ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್​ ಮಾಡಿತ್ತು. ನಂತರ ‘ಸೀಕ್ರೆಟ್​ ಸೂಪರ್​ ಸ್ಟಾರ್​’ ಸಿನಿಮಾ ಕೂಡ ಸಖತ್​ ಸದ್ದು ಮಾಡಿತ್ತು. ಬರೀ ಚೀನಾದಲ್ಲಿ ಮಾತ್ರವಲ್ಲದೇ ಪಾಶ್ಚಿಮಾತ್ಯ ದೇಶಗಳಲ್ಲೂ ಆಮಿರ್ ಖಾನ್​ ಸಿನಿಮಾಗಳಿಗೆ ಮಾರುಕಟ್ಟೆ ಇದೆ. ಜನಸಾಮಾನ್ಯರು ಅಷ್ಟೇ ಅಲ್ಲದೇ ಹಾಲಿವುಡ್​ (Hollywood) ಸೆಲೆಬ್ರಿಟಿಗಳಿಗೂ ಆಮಿರ್​ ಖಾನ್​ ಬಗ್ಗೆ ತಿಳಿದಿದೆ. ಈ ಹಿಂದೆ ಖ್ಯಾತ ನಿರ್ದೇಶಕ ಸ್ಟೀವನ್​ ಸ್ಪೀಲ್​ಬರ್ಗ್​ ಅವರು ಆಮಿರ್​ ಖಾನ್​ರನ್ನು ‘ಟೈಟಾನಿಕ್​’ ಸಿನಿಮಾದ ನಿರ್ದೇಶಕ ಜೇಮ್ಸ್ ಕ್ಯಾಮೆರಾನ್​ಗೆ (James Cameron) ಹೋಲಿಸಿದ್ದರು. ಆ ಬಗ್ಗೆ ಇಲ್ಲಿದೆ ಪೂರ್ತಿ ವಿವರ..

ಆಮಿರ್ ಖಾನ್​ ಅವರು ಈಗ ‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾದ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ. ಅದು ಹಾಲಿವುಡ್​ನ ‘ಫಾರೆಸ್ಟ್​ ಗಂಪ್​’ ಸಿನಿಮಾದ ಹಿಂದಿ ರಿಮೇಕ್​. ‘ಫಾರೆಸ್ಟ್​ ಗಂಪ್​’ ಚಿತ್ರದ ರಿಮೇಕ್​ ಹಕ್ಕುಗಳನ್ನು ಪಡೆಯಲು ಆಮಿರ್ ಖಾನ್​ ಸಾಕಷ್ಟು ಕಷ್ಟಪಟ್ಟಿದ್ದರು. ಆಗ ಅವರ ಸಹಾಯಕ್ಕೆ ಬಂದಿದ್ದೇ ‘ಜ್ಯುರಾಸಿಕ್​ ಪಾರ್ಕ್​’ ಸಿನಿಮಾ ನಿರ್ದೇಶಕ, ಹಾಲಿವುಡ್​ ದಿಗ್ಗಜ ಸ್ಟೀವನ್​ ಸ್ಪೀಲ್​ಬರ್ಗ್​. ಅದರ ಹಿಂದೆ ಒಂದು ಇಂಟರೆಸ್ಟಿಂಗ್​ ಘಟನೆ ಇದೆ.

ಇದನ್ನೂ ಓದಿ: ‘ಲಾಲ್​ ಸಿಂಗ್​ ಚಡ್ಡಾ’ ಚಿತ್ರಕ್ಕೆ ಆಮಿರ್​, ಕರೀನಾ, ನಾಗ ಚೈತನ್ಯ ಪಡೆದ ಸಂಭಾವನೆ ಎಷ್ಟು ಕೋಟಿ?

ಇದನ್ನೂ ಓದಿ
Image
IPL Final ವೇಳೆ ರಿಲೀಸ್​ ಆಗತ್ತೆ ‘ಲಾಲ್​ ಸಿಂಗ್​ ಚಡ್ಡಾ’ ಟ್ರೇಲರ್​: ಇದು ಆಮಿರ್​ ಖಾನ್​ ಹೊಸ ಐಡಿಯಾ
Image
ಫ್ಯಾಮಿಲಿ ಜತೆ ಆಮಿರ್​ ಖಾನ್​ ಪುತ್ರಿ ಇರಾ ಖಾನ್​ ಬರ್ತ್​ಡೇ ಆಚರಣೆ; ಫೋಟೋ ನೋಡಿ ಫ್ಯಾನ್ಸ್​ ಹೇಳಿದ್ದೇನು?
Image
ನಟನೆಗೆ ವಿದಾಯ ಹೇಳಲು ಆಮಿರ್​ ಖಾನ್​ ನಿರ್ಧಾರ ಮಾಡಿದ್ದ ಸಂಗತಿ ಬಯಲು; ಮಾಜಿ ಪತ್ನಿ ಏನು ಹೇಳಿದ್ರು?
Image
‘ಡಿವೋರ್ಸ್​ ಆಗಿರಬಹುದು, ಆದ್ರೆ ಜೊತೆಗಿದ್ದೇವೆ’; ಇಬ್ಬರು ಮಾಜಿ ಪತ್ನಿಯರ ಬಗ್ಗೆ ಮಾತಾಡಿದ ಆಮಿರ್​ ಖಾನ್​

‘ಫಾರೆಸ್ಟ್​ ಗಂಪ್​’ ರಿಮೇಕ್​ ಹಕ್ಕು ಪಡೆಯುವ ಸಲುವಾಗಿ ಅದರ ನಿರ್ದೇಶಕ ರಾಬರ್ಟ್​ ಝೆಮೆಕಿಸ್​ ಅವರನ್ನು ಭೇಟಿಯಾಗಲು ಆಮಿರ್​ ಖಾನ್​ ಬಯಸಿದ್ದರು. ಆದರೆ ಆಮಿರ್​ ಖಾನ್​ರನ್ನು ಭೇಟಿಯಾಗಲು ರಾರ್ಬಟ್​ ಝೆಮೆಕಿಸ್​ ಸಿದ್ಧರಿರಲಿಲ್ಲ. ಇದಕ್ಕಾಗಿ ಸ್ಟೀವನ್​ ಸ್ಪೀಲ್​ಬರ್ಗ್ ಅವರ ಸಹಾಯ ಪಡೆಯಲು ಆಮಿರ್​ ಖಾನ್​ ನಿರ್ಧರಿದರು. ಆಗ ‘ಬ್ರಿಜ್​ ಆಫ್​ ಸ್ಪೈಸ್​’ ಚಿತ್ರದ ಶೂಟಿಂಗ್​ನಲ್ಲಿ ಸ್ಟೀವನ್​ ಸ್ಪೀಲ್​ ಬ್ಯುಸಿ ಆಗಿದ್ದರು.

ಇದನ್ನೂ ಓದಿ: ‘ಕೆಜಿಎಫ್​ 2’ ಜತೆಗಿನ ರೇಸ್​​ನಿಂದ ಹಿಂದೆ ಸರಿದ ‘ಲಾಲ್​ ಸಿಂಗ್​ ಛಡ್ಡಾ’​; ಆಮಿರ್​ ಖಾನ್ ನೀಡಿದ ಕಾರಣ ಏನು?

‘ಬ್ರಿಜ್​ ಆಫ್​ ಸ್ಪೈಸ್​’ ಚಿತ್ರದಲ್ಲಿ ‘ಫಾರೆಸ್ಟ್​ ಗಂಪ್’ ಖ್ಯಾತಿಯ ನಟ ಟಾಮ್​ ಹ್ಯಾಂಕ್ಸ್​ ನಟಿಸುತ್ತಿದ್ದರು. ಅದೇ ಸೆಟ್​ನಲ್ಲಿ ಆಮಿರ್​ ಖಾನ್​ರನ್ನು ಟಾಮ್​ ಹ್ಯಾಂಕ್ಸ್​ಗೆ ಸ್ಟೀವನ್​ ಸ್ಪೀಲ್​ಬರ್ಗ್​ ಪರಿಚಯ ಮಾಡಿಕೊಟ್ಟರು. ‘ಇವರು ಭಾರತದ ಜೇಮ್ಸ್​ ಕ್ಯಾಮೆರಾನ್​ ಇದ್ದಂತೆ. ಯಾಕೆಂದರೆ ಇವರ ದಾಖಲೆಗಳನ್ನು ಇವರೇ ಮುರಿಯುತ್ತಾರೆ’ ಎಂದು ಸ್ಟೀವನ್​ ಸ್ಪೀಲ್​ಬರ್ಗ್ ಹೇಳಿದ್ದರಂತೆ. ಆಗ ಟಾಮ್​ ಹ್ಯಾಂಕ್ಸ್​ ನೀಡಿದ ಪ್ರತಿಕ್ರಿಯೆ ಕೂಡ ಅಚ್ಚರಿ ಮೂಡಿಸಿತ್ತು. ‘ನಾನು ಇವರನ್ನು ಬಲ್ಲೆ. ಇವರು ನಟಿಸಿದ ‘3 ಈಡಿಯಟ್ಸ್’​ ಚಿತ್ರವನ್ನು ಮೂರು ಬಾರಿ ನೋಡಿದ್ದೇನೆ’ ಎಂದು ಅವರು ಹೇಳಿದ್ದರು ಎಂಬ ವಿಷಯ ಕೇಳಿ ಆಮಿರ್ ಖಾನ್​ ಫ್ಯಾನ್ಸ್​ ಖುಷಿ ಪಟ್ಟಿದ್ದಾರೆ.

ಆಗಸ್ಟ್​ 11ರಂದು ‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾ ತೆರೆಕಾಣಲಿದೆ. ಈ ಚಿತ್ರವನ್ನು ನೋಡಲು ಆಮಿರ್​ ಖಾನ್​ ಫ್ಯಾನ್ಸ್​ ಕಾದಿದ್ದಾರೆ. ಈ ಸಿನಿಮಾದಲ್ಲಿ ಕರೀನಾ ಕಪೂರ್​, ನಾಗ ಚೈತನ್ಯ ಕೂಡ ಅಭಿನಯಿಸಿದ್ದಾರೆ. ಹಲವು ಗೆಟಪ್​ಗಳಲ್ಲಿ ಆಮಿರ್​ ಖಾನ್​ ಕಾಣಿಸಿಕೊಳ್ಳಲಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ