AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫ್ಯಾಮಿಲಿ ಜತೆ ಆಮಿರ್​ ಖಾನ್​ ಪುತ್ರಿ ಇರಾ ಖಾನ್​ ಬರ್ತ್​ಡೇ ಆಚರಣೆ; ಫೋಟೋ ನೋಡಿ ಫ್ಯಾನ್ಸ್​ ಹೇಳಿದ್ದೇನು?

Ira Khan Birthday: ಇರಾ ಖಾನ್​ ಅವರು ಹುಟ್ಟುಹಬ್ಬ ಆಚರಿಸಿಕೊಂಡ ಈ ಫೋಟೋ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ. ಇದನ್ನು ಕಂಡು ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್​ ಮಾಡಿದ್ದಾರೆ.

ಫ್ಯಾಮಿಲಿ ಜತೆ ಆಮಿರ್​ ಖಾನ್​ ಪುತ್ರಿ ಇರಾ ಖಾನ್​ ಬರ್ತ್​ಡೇ ಆಚರಣೆ; ಫೋಟೋ ನೋಡಿ ಫ್ಯಾನ್ಸ್​ ಹೇಳಿದ್ದೇನು?
ಇರಾ ಖಾನ್​ ಜನ್ಮದಿನ ಸಂಭ್ರಮ
Follow us
TV9 Web
| Updated By: ಮದನ್​ ಕುಮಾರ್​

Updated on: May 09, 2022 | 8:57 AM

ಬಾಲಿವುಡ್​ನ ಖ್ಯಾತ ನಟ ಆಮಿರ್ ಖಾನ್​ (Aamir Khan) ಅವರ ಪುತ್ರಿ ಇರಾ ಖಾನ್​ ಅವರು ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಕುಟುಂಬದವರು, ಸ್ನೇಹಿತರು ಹಾಗೂ ಪ್ರಿಯಕರನ ಜೊತೆ ಪ್ರತ್ಯೇಕವಾಗಿ ಕೇಕ್​ ಕಟ್​ ಮಾಡುವ ಮೂಲಕ ಅವರು ಜನ್ಮದಿನವನ್ನು (Ira Khan Birthday) ಸೆಲೆಬ್ರೇಟ್​ ಮಾಡಿಕೊಂಡಿದ್ದಾರೆ. ಈ ಸಂದರ್ಭದ ಕೆಲವು ಫೋಟೋಗಳು ಇಂಟರ್​ನೆಟ್​ನಲ್ಲಿ ವೈರಲ್​ ಆಗಿವೆ. ಭಾನುವಾರ (ಮೇ 8) ಮಗಳ 25ನೇ ವರ್ಷದ ಹುಟ್ಟುಹಬ್ಬವನ್ನು ಆಮಿರ್​ ಖಾನ್​ ಹಾಗೂ ಮಾಜಿ ಪತ್ನಿ ರೀನಾ ದತ್ತ ಅವರು ಜೊತೆಯಾಗಿ ಸೇರಿ ಆಚರಿಸಿದ್ದಾರೆ. ಎರಡನೇ ಪತ್ನಿ ಕಿರಣ್​ ರಾವ್​ ಅವರ ಪುತ್ರ ಆಜಾದ್​ ಖಾನ್​ ಕೂಡ ಇರಾ ಖಾನ್ (Ira Khan)​ ಜನ್ಮದಿನವನ್ನು ಸಂಭ್ರಮಿಸಿದ್ದಾನೆ. ಎಲ್ಲರೂ ಒಟ್ಟಾಗಿ ಸೇರಿಕೊಂಡು ಸ್ವಿಮಿಂಗ್​ ಪೂಲ್​ ಸಮೀಪವೇ ಕೇಕ್​ ಕತ್ತರಿಸಿದ್ದಾರೆ. ಈ ಸಂದರ್ಭದಲ್ಲಿ ಇರಾ ಖಾನ್​ ಅವರು ಬಿಕಿನಿ ಧರಿಸಿದ್ದಾರೆ. ಆಮಿರ್​ ಖಾನ್​ ಹಾಗೂ ಆಜಾದ್​ ಖಾನ್​ ಸ್ವಿಮ್ಮಿಂಗ್​ ಡ್ರೆಸ್​ನಲ್ಲಿಯೇ ಕಾಣಿಸಿಕೊಂಡಿದ್ದಾರೆ. ಈ ಫೋಟೋ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ. ಇದನ್ನು ಕಂಡು ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್​ ಮಾಡಿದ್ದಾರೆ.

ಆಮಿರ್ ಖಾನ್​ ಪುತ್ರಿ ಇರಾ ಖಾನ್​ ಅವರು ಬಾಲಿವುಡ್​ಗೆ ಇನ್ನೂ ಕಾಲಿಟ್ಟಿಲ್ಲ. ಹಾಗಿದ್ದರೂ ಕೂಡ ಅವರು ಸೆಲೆಬ್ರಿಟಿ ಆಗಿದ್ದಾರೆ. ಸ್ಟಾರ್​ ನಟನ ಪುತ್ರಿ ಎಂಬ ಕಾರಣಕ್ಕೆ ಅವರ ಕಡೆಗೆ ಎಲ್ಲರೂ ಗಮನ ಹರಿಸುತ್ತಾರೆ. ಒಂದಿಲ್ಲೊಂದು ಕಾರಣಕ್ಕೆ ಇರಾ ಖಾನ್​ ಸುದ್ದಿ ಆಗುತ್ತಲೇ ಇರುತ್ತಾರೆ. ಫಿಟ್ನೆಸ್​ ಕೋಚ್​ ನೂಪುರ್​ ಶಿಖಾರೆ ಜೊತೆಗೆ ಇರಾ ಖಾನ್​ ಅವರು ಪ್ರೀತಿಯಲ್ಲಿ ಮುಳುಗಿರುವ ವಿಚಾರ ಕೂಡ ಈಗ ಗುಟ್ಟಾಗಿ ಉಳಿದಿಲ್ಲ. 25ನೇ ವರ್ಷದ ಹುಟ್ಟುಹಬ್ಬವನ್ನು ಅವರು ನೂಪುರ್​ ಶಿಖಾರೆ ಜೊತೆಗೂ ಸೇರಿ ಆಚರಿಸಿಕೊಂಡಿದ್ದಾರೆ.

ಇದನ್ನೂ ಓದಿ
Image
ತಂದೆ ನಡೆದು ಬಂದ ಹಾದಿಯಲ್ಲಿ ಸಾಗಲ್ಲ ಎಂದ ಆಮಿರ್ ಖಾನ್ ಮಗಳು ಇರಾ
Image
ಬಾಯ್​ಫ್ರೆಂಡ್​ ಅಮ್ಮನ ಸೀರೆ ಉಟ್ಟು ಮಿಂಚಿದ ಆಮಿರ್​ ಖಾನ್​ ಮಗಳು ಇರಾ​; ವೈರಲ್​ ಆಯ್ತು ಫೋಟೋ
Image
ಹೆಚ್ಚಿತು 20 ಕೆ.ಜಿ. ದೇಹದ ತೂಕ; ವೇಟ್ ಲಾಸ್​ಗಾಗಿ 15 ದಿನ ಉಪವಾಸ ಮಾಡಿದ ಆಮಿರ್ ಖಾನ್ ಮಗಳು
Image
ಬಾಯ್​ಫ್ರೆಂಡ್​ ಬಗ್ಗೆ ಹೊಸ ದೂರು ತಂದ ಆಮಿರ್ ಖಾನ್​ ಮಗಳು ಇರಾ ಖಾನ್​

ಫ್ಯಾಮಿಲಿ ಜೊತೆ ಕೇಕ್​ ಕತ್ತರಿಸುವಾಗ ಇರಾ ಖಾನ್​ ಅವರು ಬಿಕಿನಿ ಧರಿಸಿದ್ದಕ್ಕೆ ಕೆಲವು ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೊನೇ ಪಕ್ಷ ಈ ಸಂದರ್ಭದಲ್ಲಾದರೂ ಸರಿಯಾಗಿ ಬಟ್ಟೆ ಧರಿಸಬೇಕಿತ್ತು ಎಂದು ಅನೇಕರು ಕಮೆಂಟ್​ ಮಾಡಿದ್ದಾರೆ. ಸದ್ಯ ಈ ಫೋಟೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಇನ್ನು, ಇರಾ ಖಾನ್​ ಅವರ ಪ್ರಿಯತಮ ನೂಪುರ್​ ಶಿಖಾರೆ ಕೂಡ ಕೆಲವು ರೊಮ್ಯಾಂಟಿಕ್​ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆ ಮೂಲಕ ಇರಾ ಖಾನ್​ಗೆ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ.

View this post on Instagram

A post shared by POP Diaries (@ipopdiaries)

ಆ್ಯಂಕ್ಸೈಟಿ ಅಟ್ಯಾಕ್​ನಿಂದ ಬಳಲುತ್ತಿರುವ ಇರಾ ಖಾನ್​:

ತಮ್ಮ ಖಾಸಗಿ ವಿಚಾರಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಳ್ಳುವಲ್ಲಿ ಇರಾ ಖಾನ್​ ಅವರು ಹಿಂದೇಟು ಹಾಕಿಲ್ಲ. ತಾವು ಎಂಕ್ಸೈಟಿ ಅಟ್ಯಾಕ್​ನಿಂದ ಬಳಲುತ್ತಿರುವ ಬಗ್ಗೆ ಇತ್ತೀಚೆಗೆ ಅವರು ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ‘ನನಗೆ ಆ್ಯಂಕ್ಸೈಟಿ ಸಮಸ್ಯೆ ಕಾಡುತ್ತಿದೆ. ನನಗೆ ಅಳುವ ಸಮಸ್ಯೆ ಇತ್ತು. ಆದರೆ, ಯಾವತ್ತೂ ಈ ರೀತಿ ಆಗಿರಲಿಲ್ಲ. ಆ್ಯಂಕ್ಸೈಟಿ ಮತ್ತು ಆ್ಯಂಕ್ಸೈಟಿ ಅಟ್ಯಾಕ್​ ಮಧ್ಯೆ ವ್ಯತ್ಯಾಸವಿದೆ. ಆ್ಯಂಕ್ಸೈಟಿ ಅಟ್ಯಾಕ್​ಗೆ ಒಂದಷ್ಟು ಲಕ್ಷಣಗಳಿವೆ. ಎದೆ ಬಡಿತ ಹೆಚ್ಚುವುದು, ಉಸಿರಾಟದ ತೊಂದರೆ, ಅಳುವುದು. ಜತೆಗೆ ಎಲ್ಲವೂ ಮುಗಿದಂತೆ ಭಾಸವಾಗುತ್ತದೆ. ಮೊದಲು ತಿಂಗಳಿಗೆ ಒಮ್ಮೆ ಹೀಗೆ ಆಗುತ್ತಿತ್ತು. ಈಗ ನಿತ್ಯವೂ ಹೀಗೇ ಆಗುತ್ತಿದೆ’ ಎಂದು ಅವರು ಪೋಸ್ಟ್​ ಮಾಡಿದ್ದರು.

‘ನನಗೆ ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ. ನನ್ನ ಹೆದರಿಕೆಗಳೇನು ಎಂಬುದನ್ನು ನಾನು ಆಲೋಚಿಸುತ್ತಿರುತ್ತೇನೆ. ನನ್ನ ಜತೆಗೆ ನಾನು ಮಾತನಾಡಿಕೊಳ್ಳುತ್ತೇನೆ. ಅದು ಒಮ್ಮೆ ನಿಮ್ಮ ಮೇಲೆ ದಾಳಿ ಮಾಡಿದರೆ ಅದನ್ನು ನಿಲ್ಲಿಸಲು ದಾರಿಗಳು ಸಿಗುವುದಿಲ್ಲ’ ಎಂದು ಇರಾ ಖಾನ್​ ಬರೆದುಕೊಂಡಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಮಳೆಯಲ್ಲಿ ಕೊಚ್ಚಿಹೋಗುತ್ತಿದ್ದ ಶೇಂಗಾ ಉಳಿಸಿಕೊಳ್ಳಲು ಯುವಕನ ಪರದಾಟ
ಮಳೆಯಲ್ಲಿ ಕೊಚ್ಚಿಹೋಗುತ್ತಿದ್ದ ಶೇಂಗಾ ಉಳಿಸಿಕೊಳ್ಳಲು ಯುವಕನ ಪರದಾಟ
ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ