ಬಾಯ್​ಫ್ರೆಂಡ್​ ಅಮ್ಮನ ಸೀರೆ ಉಟ್ಟು ಮಿಂಚಿದ ಆಮಿರ್​ ಖಾನ್​ ಮಗಳು ಇರಾ​; ವೈರಲ್​ ಆಯ್ತು ಫೋಟೋ

ಬಾಯ್​ಫ್ರೆಂಡ್​ ಅಮ್ಮನ ಸೀರೆ ಉಟ್ಟು ಮಿಂಚಿದ ಆಮಿರ್​ ಖಾನ್​ ಮಗಳು ಇರಾ​; ವೈರಲ್​ ಆಯ್ತು ಫೋಟೋ

ಆಮಿರ್​ ಖಾನ್​ ಮಗಳು ಕಳೆದ ಕೆಲ ವರ್ಷಗಳಿಂದ ನೂಪುರ್​ ಶಿಖಾರೆ ಜತೆ ಡೇಟಿಂಗ್​ ನಡೆಸುತ್ತಿದ್ದಾರೆ. ನೂಪುರ್​ ಜತೆ ಸಮಯ ಕಳೆದ ಸಾಕಷ್ಟು ಫೋಟೋಗಳನ್ನು ಈ ಮೊದಲು ಅವರು ಹಂಚಿಕೊಂಡಿದ್ದಾರೆ.

TV9kannada Web Team

| Edited By: Rajesh Duggumane

Jan 31, 2022 | 6:00 AM

ಆಮಿರ್​ ಖಾನ್​ (Aamir Khan) ಮಗಳು ಇರಾ ಖಾನ್ (Ira Khan)​ ಅವರು ಸದಾ ಸುದ್ದಿಯಲ್ಲಿರುತ್ತಾರೆ. ಅವರು ಈವರೆಗೆ ಚಿತ್ರರಂಗಕ್ಕೆ ಎಂಟ್ರಿ ನೀಡಿಲ್ಲ. ಆದರೆ, ಅವರ ಖ್ಯಾತಿ ತುಂಬಾನೇ ದೊಡ್ಡದಿದೆ. ಸ್ಟಾರ್​ ನಟನ ಮಗಳು ಎನ್ನುವ ಕಾರಣಕ್ಕೆ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಬಾಯ್​ಫ್ರೆಂಡ್ ನೂಪುರ್​ ಶಿಖಾರೆ (Nupur Shikhare)​  ವಿಚಾರದಲ್ಲಿ ಇರಾ ಖಾನ್​ ಎಂದಿಗೂ ಮುಚ್ಚುಮರೆ ಮಾಡಿದವರಲ್ಲ. ಈ ಬಗ್ಗೆ ಓಪನ್​ ಆಗಿಯೇ ಹೇಳಿಕೊಂಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಅವರ ದೇಹದ ತೂಕ ಮಿತಿ ಮೀರಿತ್ತು. ಈ ಬಗ್ಗೆಯೂ ಇತ್ತೀಚೆಗೆ ಬರೆದುಕೊಂಡಿದ್ದರು. ಈಗ ಅವರು ಬಾಯ್​ಫ್ರೆಂಡ್​ ಅಮ್ಮನ ಸೀರೆ ಉಟ್ಟುಕೊಂಡು ಮಿಂಚಿದ್ದಾರೆ. ಈ ಫೋಟೋಗಳನ್ನು ಇರಾ ಹಂಚಿಕೊಂಡಿದ್ದಾರೆ.

ಆಮಿರ್​ ಖಾನ್​ ಮಗಳು ಕಳೆದ ಕೆಲ ವರ್ಷಗಳಿಂದ ನೂಪುರ್​ ಶಿಖಾರೆ ಜತೆ ಡೇಟಿಂಗ್​ ನಡೆಸುತ್ತಿದ್ದಾರೆ. ನೂಪುರ್​ ಜತೆ ಸಮಯ ಕಳೆದ ಸಾಕಷ್ಟು ಫೋಟೋಗಳನ್ನು ಈ ಮೊದಲು ಅವರು ಹಂಚಿಕೊಂಡಿದ್ದಾರೆ. ಈ ಮೊದಲು ಕೂಡ ಅವರು ಇದೇ ರೀತಿ ಮಾಡಿದ್ದರು. ಈ ಬಾರಿ ಅವರು ಹಂಚಿಕೊಂಡ ಫೋಟೋ ವಿಶೇಷವಾಗಿತ್ತು. ಕಾರಣ, ಬಾಯ್​ಫ್ರೆಂಡ್​ ನೂಪುರ್ ತಾಯಿ ಪ್ರೀತಮ್​ ಶಿಖಾರೆ ಅವರ ಸೀರೆ ಉಟ್ಟುಕೊಂಡಿದ್ದಾರೆ ಇರಾ.

ಇರಾ ಅವರು ನೂಪುರ್​ ಹಾಗೂ ಪ್ರೀತಮ್​ ಜತೆ ನಿಂತಿದ್ದಾರೆ. ಇರಾ ಸ್ಯಾರಿಯಲ್ಲಿ ಮಿಂಚುತ್ತಿದ್ದಾರೆ. ಇರಾಗೆ ನೂಪುರ್​ ಕಿಸ್​ ಮಾಡಿದ್ದಾರೆ. ಈ ಫೋಟೋಗೆ ನಾನಾ ರೀತಿಯ ಕಮೆಂಟ್​ಗಳು ಬರುತ್ತಿವೆ. ಇರಾ ಅವರನ್ನು ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಅವರು ಸಖತ್​ ಕ್ಯೂಟ್​ ಎಂದು ಅಭಿಮಾನಿಗಳು ಬರೆದುಕೊಳ್ಳುತ್ತಿದ್ದಾರೆ.

1986ರಲ್ಲಿ ನಟಿ ರೀನಾ ದತ್ತ ಜೊತೆ ಆಮಿರ್​ ಖಾನ್​ ಮೊದಲ ಮದುವೆ ಆಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳು (ಪುತ್ರ ಜುನೈದ್​, ಪುತ್ರಿ ಇರಾ) ಜನಿಸಿದರು. 2002ರಲ್ಲಿ ಆಮಿರ್​ ಮತ್ತು ರೀನಾ ಡಿವೋರ್ಸ್​ ಪಡೆದುಕೊಂಡರು. ಇಬ್ಬರ ಮಕ್ಕಳ ಜವಾಬ್ದಾರಿಯನ್ನು ರೀನಾ ಹೊತ್ತುಕೊಂಡರು. ಮೊದಲ ಪತ್ನಿಯ ಮಕ್ಕಳ ಜೊತೆ ಆಮಿರ್​ ಖಾನ್​ ಇಂದಿಗೂ ಚೆನ್ನಾಗಿಯೇ ಇದ್ದಾರೆ. ರೀನಾ ದತ್ತಾ ಜತೆ ವಿಚ್ಛೇದನ ಪಡೆದ ನಂತರದಲ್ಲಿ ಆಮಿರ್​ ಖಾನ್​ ಕಿರಣ್​ ರಾವ್​ ಅವರನ್ನು ಮದುವೆ ಆಗಿದ್ದರು. ಕಳೆದ ವರ್ಷ ಇಬ್ಬರೂ ಬೇರೆ ಆಗುತ್ತಿರುವ ಬಗ್ಗೆ ಘೋಷಣೆ ಮಾಡಿದ್ದರು.

View this post on Instagram

A post shared by Ira Khan (@khan.ira)

ಸ್ಟಾರ್​ ನಟರ ಮಕ್ಕಳು ಎಂದರೆ ಅಭಿಮಾನಿಗಳು ಒಂದು ಕಣ್ಣು ಇಟ್ಟಿರುತ್ತಾರೆ. ಅವರು ಏನು ಮಾಡುತ್ತಾರೆ? ಅವರ ದಿನಚರಿ ಏನು? ಯಾವ ರೀತಿಯ ಬಟ್ಟೆ ತೊಡುತ್ತಾರೆ, ಹೀಗೆ ಪ್ರತಿ ವಿಚಾರವನ್ನೂ ಗಮನಿಸುತ್ತಾರೆ. ಇನ್ನು, ಮಾಡುವ ಸಣ್ಣ ತಪ್ಪಿಗೆ ಅವರು ಸಾಕಷ್ಟು ಟೀಕೆಗೆ ಗುರಿಯಾಗಿದ್ದಿದೆ. ಕೆಲವರು ಬಾಡಿ ಶೇಮಿಂಗ್​ ಎದುರಿಸಿದ ಘಟನೆಯೂ ಇದೆ. ಇರಾ ಖಾನ್​ ಕೂಡ ಇದೇ ರೀತಿಯ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಮಾನಸಿಕವಾಗಿ ಅವರು ತುಂಬಾನೇ ಕುಗ್ಗಿದ್ದಾರೆ. ಈ ಕಾರಣಕ್ಕೆ ಹೆಚ್ಚು ಆ್ಯಕ್ಟೀವ್​ ಆಗಿರೋಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ, ಅವರ ದೇಹದ ತೂಕ ಬರೋಬ್ಬರಿ 20 ಕೆ.ಜಿ. ಹೆಚ್ಚಿದೆ. ಈ ಬಗ್ಗೆ ಅವರೇ ಬರೆದುಕೊಂಡಿದ್ದರು.

ದೇಹದ ತೂಕ ಈ ಪರಿ ಹೆಚ್ಚಿರುವುದಕ್ಕೆ ಅವರಿಗೆ ಬೇಸರ ಇದೆ. ಅಲ್ಲದೆ, ತೂಕ ಇಳಿಸೋಕೆ ಅವರು ಪಣ ತೊಟ್ಟಿದ್ದಾರೆ. ದೇಹದ ತೂಕ ಏಕಾಏಕಿ ಇಳಿಯುವುದಿಲ್ಲ. ಅದಕ್ಕೆ ಸಾಕಷ್ಟು ಶ್ರಮ ಹಾಕಬೇಕು. ಈ ಬಗ್ಗೆಯೂ ಅವರು ಉಲ್ಲೇಖಿಸಿದ್ದರು. ‘ನನ್ನ ಜೀವನದ ಬಹುಪಾಲು ನಾನು ತುಂಬಾ ಸಕ್ರಿಯಳಾಗಿದ್ದೆ. ಆದರೆ, ಕಳೆದ ನಾಲ್ಕೈದು ವರ್ಷಗಳಿಂದ ನನ್ನಲ್ಲಿ ಆಲಸ್ಯ ಹೊಕ್ಕಿದೆ. ನಾನು ಗೊಂದಲದಲ್ಲಿದ್ದೇನೆ. ಈ ಎಲ್ಲಾ ಕಾರಣದಿಂದ ದೇಹದ ತೂಕ 20 ಕೆ.ಜಿ. ಹೆಚ್ಚಿದೆ. ತೂಕ ಇಳಿಸಿಕೊಳ್ಳುವ ಪ್ರಯತ್ನವನ್ನು ಆರಂಭಿಸಿದ್ದೇನೆ. ನನಗೆ ಏನೆಲ್ಲ ಸಾಧ್ಯವೋ ಅದನ್ನು ಮಾಡುತ್ತಿದ್ದೇನೆ. ಹೆಚ್ಚು ಶ್ರಮ ಹಾಕುತ್ತಿದ್ದೇನೆ. ನಾನು ಇತ್ತೀಚೆಗೆ 15 ದಿನಗಳ ಕಾಲ ಉಪವಾಸ ಮಾಡಿದ್ದೆ. ತೂಕ ಇಳಿಸಿಕೊಳ್ಳೋಕೆ ಸಾಕಷ್ಟು ಶ್ರಮ ಬೇಕು’ ಎಂದಿದ್ದರು ಅವರು.

ಇದನ್ನೂ ಓದಿ: ಯಶ್​ ನಡೆದುಕೊಂಡ ರೀತಿ ನನಗೆ ಇಷ್ಟವಾಯಿತು, ನಾನು ಅವರ​ ಬಳಿ ಕ್ಷಮೆ ಕೇಳಿದೆ; ಆಮಿರ್​ ಖಾನ್​

ಮಗಳ ಪಾತ್ರ ಮಾಡಿದ್ದ ನಟಿ ಜತೆ ಆಮಿರ್​ ಖಾನ್​ ಶಾದಿ? ವೈರಲ್​ ಫೋಟೋದ ಅಸಲಿಯತ್ತು ಇಲ್ಲಿದೆ

Follow us on

Related Stories

Most Read Stories

Click on your DTH Provider to Add TV9 Kannada