ವಿಜಯ್ ದೇವರಕೊಂಡ ಕಟ್ಟು ಮಸ್ತಾದ ದೇಹ ನೋಡಿ ಫ್ಯಾನ್ಸ್ ಫಿದಾ; ‘ಲೈಗರ್’ ಥೀಮ್ ರಿಲೀಸ್
‘ಲೈಗರ್’ ಚಿತ್ರದಲ್ಲಿ ವಿಜಯ್ ದೇವರಕೊಂಡ ಅವರು ಬಾಕ್ಸಿಂಗ್ ಪಟುವಾಗಿ ಕಾಣಿಸಿಕೊಳ್ಳಲಿದ್ದಾರೆ. ಅವರ ಪಾತ್ರದ ಝಲಕ್ ಹೇಗಿರಲಿದೆ ಎಂಬುದನ್ನು ತೋರಿಸುವಲ್ಲಿ ‘ಲೈಗರ್ ಹಂಟ್’ ಥೀಮ್ ಲಿರಿಕಲ್ ಟೀಸರ್ ಯಶಸ್ವಿ ಆಗಿದೆ.
ನಟ ವಿಜಯ್ ದೇವರಕೊಂಡ ಅವರು (Vijay Devarakonda) ಇಂದು (ಮೇ 9) ಬರ್ತ್ಡೇ ಸಂಭ್ರಮದಲ್ಲಿದ್ದಾರೆ. ‘ಗೀತ ಗೋವಿಂದಂ’, ‘ಡಿಯರ್ ಕಾಮ್ರೇಡ್’, ‘ಅರ್ಜುನ್ ರೆಡ್ಡಿ’ ಮೊದಲಾದ ಚಿತ್ರಗಳ ಮೂಲಕ ಅವರು ಜನರನ್ನು ರಂಜಿಸಿದ್ದಾರೆ. ಈಗ ‘ಲೈಗರ್ ಸಿನಿಮಾ ಮೂಲಕ ಬೇರೆಯದೇ ಗೆಟಪ್ ತಾಳಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮೂಡಿಬರುತ್ತಿರುವ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಈ ಮೊದಲು ರಿಲೀಸ್ ಆಗಿದ್ದ ‘ಲೈಗರ್’ ಸಿನಿಮಾದ (Liger Movie) ಗ್ಲಿಂಪ್ಸ್ ವಿಡಿಯೋ ಕೋಟಿಕೋಟಿ ವೀಕ್ಷಣೆ ಕಂಡಿತ್ತು. ಈಗ ಬರ್ತ್ಡೇ ಪ್ರಯುಕ್ತ ಚಿತ್ರದ ಥೀಮ್ ಲಿರಿಕಲ್ ಟೀಸರ್ ರಿಲೀಸ್ ಆಗಿದೆ. ‘ಲೈಗರ್ ಹಂಟ್’ ಹೆಸರಲ್ಲಿ ರಿಲೀಸ್ ಆದ ವಿಡಿಯೋ ನೋಡಿ ದೇವರಕೊಂಡ ಫ್ಯಾನ್ಸ್ ಫಿದಾ ಆಗಿದ್ದಾರೆ. ಚಿತ್ರಕ್ಕೆ ಪುರಿ ಜಗನ್ನಾಥ್ (Puri Jagannadh) ನಿರ್ದೇಶನ ಮಾಡುತ್ತಿದ್ದು, ವಿಜಯ್ ದೇವರಕೊಂಡಗೆ ಜೋಡಿಯಾಗಿ ಅನನ್ಯಾ ಪಾಂಡೆ ನಟಿಸುತ್ತಿದ್ದಾರೆ.
‘ಲೈಗರ್’ ಚಿತ್ರದಲ್ಲಿ ವಿಜಯ್ ದೇವರಕೊಂಡ ಅವರು ಬಾಕ್ಸಿಂಗ್ ಪಟುವಾಗಿ ಕಾಣಿಸಿಕೊಳ್ಳಲಿದ್ದಾರೆ. ಅವರ ಪಾತ್ರದ ಝಲಕ್ ಹೇಗಿರಲಿದೆ ಎಂಬುದನ್ನು ತೋರಿಸುವಲ್ಲಿ ‘ಲೈಗರ್ ಹಂಟ್’ ಥೀಮ್ ಲಿರಿಕಲ್ ಟೀಸರ್ ಯಶಸ್ವಿ ಆಗಿದೆ. ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಈ ವಿಡಿಯೋ ಸಾವಿರಾರು ವೀವ್ಸ್ ಪಡೆದಿದೆ. ಇದು ವಿಜಯ್ ಫ್ಯಾನ್ಸ್ಗೆ ಫರ್ಪೆಕ್ಟ್ ಬರ್ತ್ಡೇ ಗಿಫ್ಟ್ ಆಗಿದೆ.
ಈ ಚಿತ್ರವನ್ನು ಕರಣ್ ಜೋಹರ್ ನಿರ್ಮಾಣ ಮಾಡುತ್ತಿದ್ದಾರೆ. ಪ್ರಮುಖ ಪಾತ್ರವೊಂದರಲ್ಲಿ ವಿಶ್ವ ವಿಖ್ಯಾತ ಬಾಕ್ಸರ್ ಮೈಕ್ ಟೈಸನ್ ಕೂಡ ಅಭಿನಯಿಸಿರುವುದು ವಿಶೇಷ. ಬಾಕ್ಸಿಂಗ್ ಜಗತ್ತಿನಲ್ಲಿ ಮೈಕ್ ಟೈಸನ್ ಅವರದ್ದು ದೊಡ್ಡ ಹೆಸರು. ಎದುರಾಳಿಗಳಿಗೆ ನಡುಕ ಹುಟ್ಟಿಸುವ ಅವರ ಬಾಕ್ಸಿಂಗ್ ಪರಾಕ್ರಮಕ್ಕೆ ಸರಿಸಾಟಿ ಆಗಬಲ್ಲ ಮತ್ತೊಬ್ಬ ವ್ಯಕ್ತಿಯೇ ಇಲ್ಲ. ಅಂಥ ದಿಗ್ಗಜನನ್ನು ‘ಲೈಗರ್’ ಸಿನಿಮಾ ತಂಡ ಭಾರತಕ್ಕೆ ಕರೆತರುತ್ತಿದೆ.
My Birthday Morning thoughts – Between you and Me 🙂
I love you all ❤️ Sending strength your way 🙂 pic.twitter.com/Ot5N0Xic0c
— Vijay Deverakonda (@TheDeverakonda) May 9, 2022
2022ರ ಆಗಸ್ಟ್ 25ಕ್ಕೆ ‘ಲೈಗರ್’ ತೆರೆಗೆ ಬರುತ್ತಿದೆ. ಈ ಸಿನಿಮಾ ಸುಮಾರು 125 ಕೋಟಿ ರೂಪಾಯಿ ವೆಚ್ಚದಲ್ಲಿ ತಯಾರಾಗುತ್ತಿದ್ದು, ಪುರಿ ಜಗನ್ನಾಥ್, ಕರಣ್ ಜೋಹರ್, ಚಾರ್ಮಿ ಕೌರ್, ಅಪೂರ್ವ ಮೆಹ್ತಾ, ಹೀರೂ ಯಶ್ ಜೋಹರ್ ಒಟ್ಟಾಗಿ ನಿರ್ಮಿಸುತ್ತಿದ್ದಾರೆ. ಈ ಚಿತ್ರ ಕನ್ನಡದಲ್ಲೂ ತೆರೆಗೆ ಬರುತ್ತಿದೆ.
‘ಅರ್ಜುನ್ ರೆಡ್ಡಿ’ ಸಿನಿಮಾದಲ್ಲಿ ವಿಜಯ್ ದೇವರಕೊಂಡ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಈ ಚಿತ್ರ ಹಿಂದಿಗೆ ‘ಕಬೀರ್ ಸಿಂಗ್’ ಹೆಸರಲ್ಲಿ ರಿಮೇಕ್ ಆಗಿತ್ತು. ಈ ಕಾರಣದಿಂದಲೂ ವಿಜಯ್ ಹೆಸರು ಬಾಲಿವುಡ್ ಮಂದಿಗೆ ಪರಿಚಯ ಆಗಿತ್ತು.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:16 pm, Mon, 9 May 22