IPL Final ವೇಳೆ ರಿಲೀಸ್​ ಆಗತ್ತೆ ‘ಲಾಲ್​ ಸಿಂಗ್​ ಚಡ್ಡಾ’ ಟ್ರೇಲರ್​: ಇದು ಆಮಿರ್​ ಖಾನ್​ ಹೊಸ ಐಡಿಯಾ

Laal Singh Chaddha Trailer: ಸಿನಿಮಾ ಪ್ರಚಾರ ಮತ್ತು ಮಾರ್ಕೆಟಿಂಗ್​ ತಂತ್ರದಲ್ಲಿ ಇದನ್ನು ಹೊಸ ಐಡಿಯಾ ಎಂದು ಬಣ್ಣಿಸಲಾಗುತ್ತಿದೆ. ಈ ಬಗ್ಗೆ ‘ಲಾಲ್​ ಸಿಂಗ್​ ಚಡ್ಡಾ’ ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.

IPL Final ವೇಳೆ ರಿಲೀಸ್​ ಆಗತ್ತೆ ‘ಲಾಲ್​ ಸಿಂಗ್​ ಚಡ್ಡಾ’ ಟ್ರೇಲರ್​: ಇದು ಆಮಿರ್​ ಖಾನ್​ ಹೊಸ ಐಡಿಯಾ
ಆಮಿರ್ ಖಾನ್, ಐಪಿಎಲ್
Follow us
TV9 Web
| Updated By: ಮದನ್​ ಕುಮಾರ್​

Updated on:May 21, 2022 | 2:10 PM

ಚಿತ್ರರಂಗದಲ್ಲಿ ನಟ ಆಮಿರ್​ ಖಾನ್ (Aamir Khan)​ ಅವರಿಗೆ ಹಲವು ವರ್ಷಗಳ ಅನುಭವ ಇದೆ. ಒಂದಿಕ್ಕಿಂತ ಒಂದು ಡಿಫರೆಂಟ್​ ಸಿನಿಮಾ ಮಾಡುವ ಮೂಲಕ ಅವರು ಗುರುತಿಸಿಕೊಂಡಿದ್ದಾರೆ. ಆ ಕಾರಣಕ್ಕಾಗಿ ಅವರನ್ನು ಅಭಿಮಾನಿಗಳು ಇಷ್ಟ ಪಡುತ್ತಾರೆ. ಸಿನಿಮಾ ಪ್ರಮೋಷನ್​ ವಿಚಾರದಲ್ಲಿಯೂ ಅವರು ಹೊಸ ಹೊಸ ಐಡಿಯಾಗಳನ್ನು ಹೊತ್ತು ತರುತ್ತಾರೆ. ಈಗ ಅವರು ‘ಲಾಲ್​ ಸಿಂಗ್​ ಚಡ್ಡಾ’ (Laal Singh Chaddha) ಸಿನಿಮಾದಲ್ಲಿ ನಟಿಸಿದ್ದಾರೆ. ಆಗಸ್ಟ್​ 11ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಈಗಾಗಲೇ ಚಿತ್ರದ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಟ್ರೇಲರ್​ ಬಿಡುಗಡೆ ಆಗಲಿದೆ. ಅದಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಈಗೊಂದು ಎಗ್ಸೈಟಿಂಗ್​ ನ್ಯೂಸ್​ ಕೇಳಿಬಂದಿದೆ. ಈ ಬಾರಿ ಐಪಿಎಲ್​ ಫೈನಲ್​ ದಿನವೇ ‘ಲಾಲ್​ ಸಿಂಗ್​ ಚಡ್ಡಾ’ ಚಿತ್ರದ ಟ್ರೇಲರ್​ ರಿಲೀಸ್​ ಮಾಡಲಾಗುವುದು ಎಂದು ವರದಿ ಆಗಿದೆ. ಈ ಸುದ್ದಿ ಕೇಳಿ ಫ್ಯಾನ್ಸ್​ ಖುಷಿ ಆಗಿದ್ದಾರೆ. ಮೇ 29ರಂದು ಈ ಬಾರಿ ಐಪಿಎಲ್ ಕೊನೇ ಪಂದ್ಯ (IPL Final) ನಡೆಯಲಿದೆ. ಟಿವಿಯಲ್ಲಿ ಈ ಕೊನೇ ಮ್ಯಾಚ್​ ಪ್ರಚಾರ ಆಗುವಾಗ ಅದರ ಜೊತೆಗೆ ‘ಲಾಲ್​ ಸಿಂಗ್​ ಚಡ್ಡಾ’ ಚಿತ್ರದ ಟ್ರೇಲರ್​ ತೋರಿಸಲು ಪ್ಲ್ಯಾನ್​ ಮಾಡಲಾಗಿದೆ.

ಯಾವುದೇ ಚಿತ್ರದ ಟೀಸರ್​​, ಟ್ರೇಲರ್​ ಮುಂತಾದ್ದನ್ನು ಸಿನಿಮಾಗೆ ಸಂಬಂಧಿಸಿದ ಮನರಂಜನಾ ವಾಹಿನಿಯಲ್ಲಿ ಬಿಡುಗಡೆ ಮಾಡುವುದು ಸಹಜ. ಆದರೆ ಈ ಬಾರಿ ಆಮಿರ್​ ಖಾನ್​ ಅವರ ‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾ ತಂಡ ಬೇರೆ ಮಾರ್ಗ ಹಿಡಿದಿದೆ. ಕ್ರೀಡೆಗೆ ಮೀಸಲಾಗಿರುವ ಹಾಗೂ ಪ್ರಸ್ತುತ ಐಪಿಎಲ್​ ಪ್ರಸಾರ ಮಾಡುತ್ತಿರುವ ‘ಸ್ಟಾರ್​ ಸ್ಪೋರ್ಟ್ಸ್​’ ವಾಹಿನಿ ಮೂಲಕ ಚಿತ್ರದ ಟ್ರೇಲರ್​ ಬಿಡುಗಡೆ ಮಾಡುವ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ.

ಐಪಿಎಲ್​ ಫೈನಲ್​ ದಿನ ಹೆಚ್ಚು ಜನರು ಟಿವಿ ಮುಂದೆ ಕುಳಿತಿರುತ್ತಾರೆ. ಈ ಸಂದರ್ಭದಲ್ಲಿ ಮ್ಯಾಚ್​ ಮಧ್ಯೆ ಟ್ರೇಲರ್​ ಪ್ರಸಾರ ಮಾಡಿದರೆ ಹೆಚ್ಚು ಜನರನ್ನು ತಲುಪಬಹುದು ಎಂಬುದು ‘ಲಾಲ್​ ಸಿಂಗ್​ ಚಡ್ಡಾ’ ಬಳಗದ ಪ್ಲ್ಯಾನ್​. ಸಿನಿಮಾ ಪ್ರಚಾರ ಮತ್ತು ಮಾರ್ಕೆಟಿಂಗ್​ ತಂತ್ರದಲ್ಲಿ ಇದು ಹೊಸ ಐಡಿಯಾ ಎಂದು ಬಣ್ಣಿಸಲಾಗುತ್ತಿದೆ. ಆದರೆ ಈ ಸುದ್ದಿಯ ಬಗ್ಗೆ ಅಧಿಕೃತವಾಗಿ ಚಿತ್ರತಂಡದಿಂದ ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ.

ಇದನ್ನೂ ಓದಿ
Image
ಫನ್ನಿ ಕಾರಣಕ್ಕೆ ಮತ್ತೆ ಒಂದಾದ ಕರೀನಾ ಕಪೂರ್​​-ಆಮಿರ್​ ಖಾನ್​; ವಿಡಿಯೋ ವೈರಲ್​
Image
‘ಲಾಲ್​ ಸಿಂಗ್​ ಚಡ್ಡಾ’ ಚಿತ್ರಕ್ಕೆ ಆಮಿರ್​, ಕರೀನಾ, ನಾಗ ಚೈತನ್ಯ ಪಡೆದ ಸಂಭಾವನೆ ಎಷ್ಟು ಕೋಟಿ?
Image
ನಟನೆಗೆ ವಿದಾಯ ಹೇಳಲು ಆಮಿರ್​ ಖಾನ್​ ನಿರ್ಧಾರ ಮಾಡಿದ್ದ ಸಂಗತಿ ಬಯಲು; ಮಾಜಿ ಪತ್ನಿ ಏನು ಹೇಳಿದ್ರು?
Image
‘ಡಿವೋರ್ಸ್​ ಆಗಿರಬಹುದು, ಆದ್ರೆ ಜೊತೆಗಿದ್ದೇವೆ’; ಇಬ್ಬರು ಮಾಜಿ ಪತ್ನಿಯರ ಬಗ್ಗೆ ಮಾತಾಡಿದ ಆಮಿರ್​ ಖಾನ್​

ಹಾಲಿವುಡ್​ನಲ್ಲಿ ಟಾಮ್​ ಹ್ಯಾಂಕ್ಸ್​ ನಟಿಸಿದ ‘ಫಾರೆಸ್ಟ್​ ಗಂಪ್​’ ಚಿತ್ರದ ಹಿಂದಿ ರಿಮೇಕ್​ ಆಗಿ ‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾ ಮೂಡಿಬರುತ್ತಿದೆ. ಈ ಸಿನಿಮಾದಲ್ಲಿ ಆಮಿರ್​ ಖಾನ್​ಗೆ ಜೋಡಿಯಾಗಿ ಕರೀನಾ ಕಪೂರ್​ ಖಾನ್​ ನಟಿಸಿದ್ದಾರೆ. ವಿಶೇಷ ಪಾತ್ರದಲ್ಲಿ ನಾಗ ಚೈತನ್ಯ ಕೂಡ ಅಭಿನಯಿಸಿದ್ದಾರೆ. ಅನೇಕ ಐತಿಹಾಸಿಕ ಘಟನೆಗಳಿಗೆ ಅನುಗುಣವಾಗಿ ಈ ಕಥೆ ಸಾಗುತ್ತದೆ. ಈ ಎಲ್ಲ ಕಾರಣಗಳಿಂದಾಗಿ ‘ಲಾಲ್​ ಸಿಂಗ್​ ಚಡ್ಡಾ’ ನಿರೀಕ್ಷೆ ಮೂಡಿಸಿದೆ.

ಕೆಲವೇ ದಿನಗಳ ಹಿಂದೆ ‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾದಿಂದ ಎರಡು ಲಿರಿಕಲ್​ ವಿಡಿಯೋಗಳನ್ನು ಬಿಡುಗಡೆ ಮಾಡಲಾಗಿದೆ. ಅವುಗಳಿಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಈಗ ಟ್ರೇಲರ್​ ಹೇಗಿರಲಿದೆ ಎಂದು ತಿಳಿದುಕೊಳ್ಳುವ ಕೌತುಕ ಹೆಚ್ಚಾಗಿದೆ. ಈ ಸಿನಿಮಾದಲ್ಲಿ ಆಮಿರ್​ ಖಾನ್​ ಅವರು ಹತ್ತು ಹಲವು ಗೆಟಪ್​ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟಿ ಕರೀನಾ ಕಪೂರ್​ ಖಾನ್​ ಅವರಿಗೂ ಈ ಚಿತ್ರದ ಮೇಲೆ ಹೆಚ್ಚು ನಿರೀಕ್ಷೆ ಇದೆ. ‘ಸೀಕ್ರೆಟ್​ ಸೂಪರ್​ ಸ್ಟಾರ್​’ ಸಿನಿಮಾ ನಿರ್ದೇಶಿಸಿ ಗಮನ ಸೆಳೆದಿದ್ದ ಅದ್ವೈತ್​ ಚಂದನ್​ ಅವರು ‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 2:10 pm, Sat, 21 May 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ