100 ಕೋಟಿ ರೂಪಾಯಿ ಕ್ಲಬ್ ಸೇರಿದ ‘ಭೂಲ್​ ಭುಲಯ್ಯ 2’; ಇಲ್ಲಿದೆ ಸಂಪೂರ್ಣ ಮಾಹಿತಿ

‘ಭೂಲ್​ ಭುಲಯ್ಯ 2’ ಚಿತ್ರದಿಂದ ಬಾಲಿವುಡ್​ಗೆ ಒಳ್ಳೆಯ ಮೈಲೇಜ್ ಸಿಕ್ಕಿದೆ. ಈ ಸಿನಿಮಾ 200 ಕೋಟಿ ರೂಪಾಯಿ ಗಳಿಕೆ ಮಾಡಲಿದೆಯೇ ಅನ್ನೋದು ಸದ್ಯದ ಕುತೂಹಲ.

100 ಕೋಟಿ ರೂಪಾಯಿ ಕ್ಲಬ್ ಸೇರಿದ ‘ಭೂಲ್​ ಭುಲಯ್ಯ 2’; ಇಲ್ಲಿದೆ ಸಂಪೂರ್ಣ ಮಾಹಿತಿ
ಭೂಲ್ ಭುಲಯ್ಯ 2 ತಂಡ
TV9kannada Web Team

| Edited By: Rajesh Duggumane

May 29, 2022 | 1:13 PM

ಕಾರ್ತಿಕ್ ಆರ್ಯನ್ (Kartik Aaryan)​ ವೃತ್ತಿ ಜೀವನದಲ್ಲಿ ‘ಭೂಲ್​ ಭುಲಯ್ಯ 2’ ಸಿನಿಮಾ (Bhool Bhulaiyaa 2 ) ತುಂಬಾನೇ ವಿಶೇಷವಾಗಿದೆ. ಅವರಿಗೆ ಈ ಸಿನಿಮಾ ದೊಡ್ಡ ಯಶಸ್ಸು ತಂದುಕೊಟ್ಟಿದೆ. 100 ಕೋಟಿ ರೂಪಾಯಿ ಕ್ಲಬ್ ಸೇರುವ ಮೂಲಕ ಚಿತ್ರ ಮತ್ತೊಂದು ಮೈಲುಗಲ್ಲು ದಾಟಿದೆ. ಇಂದು (ಮೇ 29) ಈ ಚಿತ್ರ ಒಳ್ಳೆಯ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ. ಹೀಗಾಗಿ ಸಿನಿಮಾ 200 ಕೋಟಿ ರೂಪಾಯಿ ಕ್ಲಬ್ ಸೇರುವತ್ತ ಹೆಜ್ಜೆ ಹಾಕುತ್ತಿದೆ. ಚಿತ್ರದ ಯಶಸ್ಸಿನ ಬಗ್ಗೆ ಚಿತ್ರತಂಡ ಸಖತ್ ಖುಷಿಪಟ್ಟಿದೆ.

ಇತ್ತೀಚಿನ ದಿನಗಳಲ್ಲಿ ಬಾಲಿವುಡ್​ಗೆ ಗ್ರಹಣ ಮೆಟ್ಟಿಕೊಂಡಿತ್ತು. ಹಿಂದಿ ಚಿತ್ರಗಳನ್ನು ನೋಡುವವರ ಸಂಖ್ಯೆ ಕಡಿಮೆ ಆಗಿತ್ತು. ಒಳ್ಳೆಯ ಸಿನಿಮಾಗಳು ಬರುತ್ತಿಲ್ಲ ಅನ್ನೋದು ಇದಕ್ಕೆ ಪ್ರಮುಖ ಕಾರಣ. ಆದರೆ, ಈಗ ‘ಭೂಲ್​ ಭುಲಯ್ಯ 2’ ಚಿತ್ರದಿಂದ ಬಾಲಿವುಡ್​ಗೆ ಒಳ್ಳೆಯ ಮೈಲೇಜ್ ಸಿಕ್ಕಿದೆ. ಈ ಸಿನಿಮಾ 200 ಕೋಟಿ ರೂಪಾಯಿ ಗಳಿಕೆ ಮಾಡಲಿದೆಯೇ ಅನ್ನೋದು ಸದ್ಯದ ಕುತೂಹಲ.

ಈ ಚಿತ್ರ ರಿಲೀಸ್ ಆದ ಮೊದಲ ವಾರವೇ 50+ ಕೋಟಿ ರೂಪಾಯಿ ಗಳಿಸಿತ್ತು. ಎರಡನೇ ವಾರವೂ ಚಿತ್ರದ ಕಮಾಯಿ ಚೆನ್ನಾಗಿಯೇ ಆಗುತ್ತಿದೆ. ಶುಕ್ರವಾರ (ಮೇ 27) 6.52 ಕೋಟಿ ರೂಪಾಯಿ, ಶನಿವಾರ (ಮೇ 28) 11.32 ಕೋಟಿ ರೂಪಾಯಿ ಗಳಿಕೆ ಆಗಿದೆ. ಈ ಮೂಲಕ ಚಿತ್ರದ ಕಲೆಕ್ಷನ್ 109 ಕೋಟಿ ರೂಪಾಯಿ ದಾಟಿದೆ. ಇಂದಿನ ಕಲೆಕ್ಷನ್ ಅನಾಯಾಸವಾಗಿ 15 ಕೋಟಿ ರೂಪಾಯಿ ದಾಟುವುದರಿಂದ ಚಿತ್ರದ ಒಟ್ಟಾರೆ ಕಲೆಕ್ಷನ್ 125 ಕೋಟಿ ರೂಪಾಯಿ ಸಮೀಪಿಸಲಿದೆ.

ಕಾರ್ತಿಕ್ ಆರ್ಯನ್ ಹಾಗೂ ಕಿಯಾರಾ ಅಡ್ವಾಣಿ ಅವರು ‘ಭೂಲ್​ ಭುಲ್ಲಯ್ಯ 2’ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದಾರೆ. ‘ಶೇರ್ಷಾ’ ಬಳಿಕ ಕಿಯಾರಾಗೆ ಮತ್ತೊಂದು ಗೆಲುವು ಸಿಕ್ಕಿದೆ. ಇವರ ಕೆಮಿಸ್ಟ್ರಿ ವರ್ಕ್ ಆಗಿದೆ. ಇತ್ತೀಚೆಗೆ ಪುಣೆಯಲ್ಲಿ ಸಿನಿಮಾ ಪ್ರಚಾರಕ್ಕೆ ತೆರಳಿದ ಸಂದರ್ಭದಲ್ಲಿ ಕಾರ್ತಿಕ್ ಆರ್ಯನ್ ಅವರು ರಸ್ತೆ ಬದಿಯ ಹೋಟೆಲ್​ನಲ್ಲಿ ನಿಂತು ಊಟ ಮಾಡಿದ್ದರು. ಈ ಫೋಟೋಗಳು ವೈರಲ್ ಆಗಿದ್ದವು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada