ಬಟ್ಟೆ ಸಿಗಲಿಲ್ಲ ಅಂತ 4 ರಾತ್ರಿ ನಿದ್ದೆ ಮಾಡಲಿಲ್ಲ ಮೀರಾ ಚೋಪ್ರಾ; ದೀಪಿಕಾ ಮೇಲೆ ಆರೋಪ ಹೊರಿಸಿದ ನಟಿ

Meera Chopra | Deepika Padukone: ‘ನನ್ನ ಮೇಲೆ ತುಂಬ ಒತ್ತಡ ಇತ್ತು. ನಾನು 3-4 ರಾತ್ರಿ ನಿದ್ದೆ ಮಾಡಲಿಲ್ಲ’ ಎಂದು ಮೀರಾ ಚೋಪ್ರಾ ಹೇಳಿದ್ದಾರೆ.

ಬಟ್ಟೆ ಸಿಗಲಿಲ್ಲ ಅಂತ 4 ರಾತ್ರಿ ನಿದ್ದೆ ಮಾಡಲಿಲ್ಲ ಮೀರಾ ಚೋಪ್ರಾ; ದೀಪಿಕಾ ಮೇಲೆ ಆರೋಪ ಹೊರಿಸಿದ ನಟಿ
ದೀಪಿಕಾ ಪಡುಕೋಣೆ, ಮೀರಾ ಚೋಪ್ರಾ
TV9kannada Web Team

| Edited By: Madan Kumar

May 29, 2022 | 7:59 AM

2022ರ ಕಾನ್​ ಚಿತ್ರೋತ್ಸವಕ್ಕೆ ತೆರೆ ಬಿದ್ದಿದೆ. ಈ ಬಾರಿ ಫಿಲ್ಮ್​ ಫೆಸ್ಟಿವಲ್​ (Cannes 2022) ಹಲವು ಕಾರಣಕ್ಕಾಗಿ ಗಮನ ಸೆಳೆಯಿತು. ಭಾರತದ ಪಾಲಿಗೆ ಇದು ತುಂಬ ವಿಶೇಷವಾಗಿತ್ತು. ಯಾಕೆಂದರೆ ಭಾರತೀಯ ಚಿತ್ರರಂಗಕ್ಕೆ ಕಾನ್​ ಚಿತ್ರೋತ್ಸವದಲ್ಲಿ ಗೌರವ ಸಲ್ಲಿಸಲಾಯಿತು. ಭಾರತದ ಅನೇಕ ನಟ-ನಟಿಯರನ್ನು ಆಹ್ವಾನಿಸಲಾಗಿತ್ತು. ದೀಪಿಕಾ ಪಡುಕೋಣೆ, ಪೂಜಾ ಹೆಗ್ಡೆ, ತಮನ್ನಾ ಭಾಟಿಯಾ ಮುಂತಾದ ಟಾಪ್ ನಟಿಯರು ಮಾತ್ರವಲ್ಲದೇ ಇನ್ನಿತರ ಹೀರೋಯಿನ್​ಗಳಿಗೂ ಈ ಚಿತ್ರೋತ್ಸವದಲ್ಲಿ ಭಾಗವಹಿಸುವ ಅವಕಾಶ ನೀಡಲಾಗಿತ್ತು. ಆ ಪೈಕಿ ಮೀರಾ ಚೋಪ್ರಾ (Meera Chopra) ಅವರು ಕೂಡ ಒಬ್ಬರು. ಕಾನ್​ ಚಿತ್ರೋತ್ಸವದಲ್ಲಿ ಭಾಗಿಯಾಗಿ ಬಂದಿರುವ ಮೀರಾ ಒಂದಷ್ಟು ವಿಚಾರಗಳನ್ನು ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದಾರೆ. ದೀಪಿಕಾ ಪಡುಕೋಣೆ ಮೇಲೆ ಅವರು ಕೆಲವು ಆರೋಪಗಳನ್ನು ಹೊರಿಸಿದ್ದಾರೆ. ಕಾನ್​ ಫಿಲ್ಮ್​ ಫೆಸ್ಟಿವಲ್​ನಲ್ಲಿ ಭಾಗವಹಿಸಲು ತಮಗೆ ಸೂಕ್ತವಾದ ಬಟ್ಟೆ ಸಿಗದೇ ಇರುವುದಕ್ಕೆ ದೀಪಿಕಾ ಪಡುಕೋಣೆ (Deepika Padukone) ಕಾರಣ ಎಂಬರ್ಥದಲ್ಲಿ ಮೀರಾ ಚೋಪ್ರಾ ಹೇಳಿಕೆ ನೀಡಿದ್ದಾರೆ. ಅಭಿಮಾನಿಗಳ ವಲಯದಲ್ಲಿ ಈ ವಿಚಾರ ಚರ್ಚೆ ಆಗುತ್ತಿದೆ. ಅಷ್ಟಕ್ಕೂ ಮೀರಾ ಈ ರೀತಿ ಹೇಳಿದ್ದೇಕೆ? ಇಲ್ಲಿದೆ ವಿವರ..

ಸೆಲೆಬ್ರಿಟಿಗಳು ರೆಡ್​ ಕಾರ್ಪೆಟ್​ ಮೇಲೆ ಹೆಜ್ಜೆ ಹಾಕುವುದು ಕಾನ್​ ಚಿತ್ರೋತ್ಸವದ ಒಂದು ವಿಶೇಷ ಆಕರ್ಷಣೆ. ದೇಶ-ವಿದೇಶದಿಂದ ಬರುವ ನೂರಾರು ಸೆಲೆಬ್ರಿಟಿಗಳು ಇದರಲ್ಲಿ ಭಾಗಿ ಆಗುತ್ತಾರೆ. ಮನಮೋಹಕವಾದ ಉಡುಗೆಗಳನ್ನು ತೊಟ್ಟು ಅವರೆಲ್ಲ ಪೋಸ್​ ನೀಡುತ್ತಾರೆ. ಸೆಲೆಬ್ರಿಟಿಗಳ ಫೋಟೋ, ವಿಡಿಯೋಗಾಗಿ ಸಾವಿರಾರು ಕ್ಯಾಮೆರಾಗಳು ಮುಗಿ ಬೀಳುತ್ತವೆ. ಇಂಥ ಸಮಾರಂಭದಲ್ಲಿ ಭಾಗವಹಿಸಲು ಮೀರಾ ಚೋಪ್ರಾ ಅವರಿಗೆ ಸೂಕ್ತವಾದ ಕಾಸ್ಟ್ಯೂಮ್​ ಸಿಗಲಿಲ್ಲ ಎಂಬುದು ಈಗ ಸುದ್ದಿ ಆಗಿದೆ.

ಇದನ್ನೂ ಓದಿ: Deepika Padukone: ಕೆಂಪು ಬಣ್ಣದ ಉಡುಗೆಯಲ್ಲಿ ಎಲ್ಲರ ಗಮನ ಸೆಳೆದ ನಟಿ ದೀಪಿಕಾ ಪಡುಕೋಣೆ

‘ಫ್ಯಾಷನ್​ ಎಂಬುದು ಮುಖ್ಯ ವಿಷಯ ಆಗಿದೆ. ಯಾವುದೂ ತಪ್ಪಾಗುವಂತಿಲ್ಲ. ಕಾನ್​ ಚಿತ್ರೋತ್ಸವಕ್ಕಾಗಿ ಕಾಸ್ಟ್ಯೂಮ್​ ಹೊಂದಿಸುವುದು ನನಗೆ ಬಹಳ ಕಷ್ಟ ಆಯಿತು. ಯಾಕೆಂದರೆ ಎಲ್ಲ ಡಿಸೈನರ್​ಗಳು ದೀಪಿಕಾ ಪಡುಕೋಣೆಗೆ ಬಟ್ಟೆ ನೀಡುತ್ತಿದ್ದರು. ನನ್ನ ಮೇಲೆ ತುಂಬ ಒತ್ತಡ ಇತ್ತು. ನಾನು 3-4 ರಾತ್ರಿ ನಿದ್ದೆ ಮಾಡಲಿಲ್ಲ’ ಎಂದು ಮೀರಾ ಚೋಪ್ರಾ ಹೇಳಿದ್ದಾರೆ ಅಂತ ಹಿಂದೂಸ್ತಾನ್​ ಟೈಮ್ಸ್​ ವರದಿ ಮಾಡಿದೆ.

ಇದನ್ನೂ ಓದಿ: ದೀಪಿಕಾ ಪಡುಕೋಣೆ ಬಿಕಿನಿ ಫೋಟೋಗಳು ಲೀಕ್​; ಶಾರುಖ್​ ಕೂಡ ಇದ್ದಾರೆ ಅಂತ ಪತ್ತೆಹಚ್ಚಿದ ಫ್ಯಾನ್ಸ್​

ಅನೇಕ ನಟಿಯರು ಪ್ರತಿಷ್ಠಿತ ಕಂಪನಿಗಳ ರಾಯಭಾರಿಗಳಾಗಿ ಕಾನ್​ ಚಿತ್ರೋತ್ಸವದಲ್ಲಿ ಭಾಗವಹಿಸುತ್ತಾರೆ. ತಾವು ಆ ರೀತಿ ಅಲ್ಲ ಎಂದು ಮೀರಾ ಚೋಪ್ರಾ ಹೇಳಿದ್ದಾರೆ. ‘ನಾನು ಯಾವುದೋ ಲಿಕ್ಕರ್​ ಬ್ರ್ಯಾಂಡ್​ ಸಲುವಾಗಿ ಅಥವಾ ಸುಮ್ಮನೆ ರೆಡ್​ ಕಾರ್ಪೆಟ್​ನಲ್ಲಿ ಪೋಸ್​ ನೀಡುವುದಕ್ಕಾಗಿ ಅಲ್ಲಿಗೆ ಹೋಗಿಲ್ಲ. ನನ್ನ ಸಿನಿಮಾದ ಪ್ರಚಾರಕ್ಕಾಗಿ ನಾನು ಅಲ್ಲಿಗೆ ತೆರಳಿದ್ದು’ ಎಂದು ಅವರು ಹೇಳಿದ್ದಾರೆ. ಆ ಮೂಲಕ ಅವರು ಬೇರೆ ನಟಿಯರ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada