ವೀರ್ ಸಾವರ್ಕರ್ ಸಿನಿಮಾ ಫಸ್ಟ್ ಲುಕ್ ನೋಡಿ ಥ್ರಿಲ್ ಆದ ಫ್ಯಾನ್ಸ್; ಗಮನ ಸೆಳೆದ ರಣದೀಪ್ ಹೂಡಾ
ವೀರ ಸಾವರ್ಕರ್ ಅವರು ಅನೇಕರಿಗೆ ಸ್ಫೂರ್ತಿ. ಸ್ವಾತಂತ್ರ್ಯ ಹೋರಾಟದಲ್ಲಿ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಇವರನ್ನು 1922ರಲ್ಲಿ ಸೆರವಾಸಕ್ಕೆ ಕಳುಹಿಸಲಾಯಿತು. ಇವರ ಜೀವನವನ್ನು ಬೆಳ್ಳಿಪರದೆಯ ಮೇಲೆ ತರುವ ಪ್ರಯತ್ನಕ್ಕೆ ಮಹೇಶ್ ಮಂಜ್ರೇಕರ್ ಮುಂದಾಗಿದ್ದಾರೆ.
ನಟ ರಣದೀಪ್ ಹೂಡಾ ಅವರು (Randeep Hooda) ಬಾಲಿವುಡ್ನಲ್ಲಿ ಭಿನ್ನವಾಗಿ ಗುರುತಿಸಿಕೊಂಡಿದ್ದಾರೆ. ಅವರು ಸಿಕ್ಕಸಿಕ್ಕ ಪಾತ್ರಗಳನ್ನು ಒಪ್ಪಿಕೊಂಡು ಸಿನಿಮಾ ಮಾಡಿದವರಲ್ಲ. ಬದಲಿಗೆ ತಮಗೆ ಸರಿ ಹೊಂದುವ ಪಾತ್ರಗಳನ್ನು ಮಾತ್ರ ಆಯ್ಕೆ ಮಾಡಿಕೊಂಡು ನಟಿಸುತ್ತಾರೆ. 2021ರಲ್ಲಿ ತೆರೆಗೆ ಬಂದ ಸಲ್ಮಾನ್ ಖಾನ್ (Salman Khan) ನಟನೆಯ ‘ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್’ ಚಿತ್ರದಲ್ಲಿ ನಟಿಸಿದ್ದರು. ಅದಾದ ಬಳಿಕ ಅವರ ನಟನೆಯ ಯಾವುದೇ ಸಿನಿಮಾ ತೆರೆಕಂಡಿಲ್ಲ. ಈಗ ಅವರು ಫ್ಯಾನ್ಸ್ಗೆ ಅಚ್ಚರಿ ನೀಡಿದ್ದಾರೆ. ‘ಸ್ವತಂತ್ರ ವೀರ ಸಾವರ್ಕರ್’ ಚಿತ್ರದಲ್ಲಿ (SwatantraVeer Savarkar ) ನಟಿಸುತ್ತಿರುವ ಅವರು ಫಸ್ಟ್ಲುಕ್ ರಿಲೀಸ್ ಮಾಡಿದ್ದಾರೆ. ಇದನ್ನು ನೋಡಿ ಫ್ಯಾನ್ಸ್ ಅಚ್ಚರಿ ಹೊರಹಾಕಿದ್ದಾರೆ.
ವೀರ ಸಾವರ್ಕರ್ ಅವರು ಅನೇಕರಿಗೆ ಸ್ಫೂರ್ತಿ. ಸ್ವಾತಂತ್ರ್ಯ ಹೋರಾಟದಲ್ಲಿ ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಇವರನ್ನು 1922ರಲ್ಲಿ ಸೆರವಾಸಕ್ಕೆ ಕಳುಹಿಸಲಾಯಿತು. ಇವರ ಜೀವನವನ್ನು ಬೆಳ್ಳಿಪರದೆಯ ಮೇಲೆ ತರುವ ಪ್ರಯತ್ನಕ್ಕೆ ಮಹೇಶ್ ಮಂಜ್ರೇಕರ್ ಮುಂದಾಗಿದ್ದಾರೆ. 2021ರಲ್ಲಿ ತೆರೆಗೆ ಬಂದ ‘ದಿ ಅಂತಿಮ್’ ಮೊದಲಾದ ಚಿತ್ರಗಳಿಗೆ ನಿರ್ದೇಶನ ಮಾಡಿದ ಅನುಭವ ಅವರಿಗೆ ಇದೆ. ಈಗ ರಿಲೀಸ್ ಆಗಿರುವ ಅವರ ಹೊಸ ಸಿನಿಮಾ ಪೋಸ್ಟರ್ ಗಮನ ಸೆಳೆಯುತ್ತಿದೆ.
View this post on Instagram
ಇಂದು (ಮೇ 28) ಸಾವರ್ಕರ್ ಜನ್ಮದಿನ. ಸಾವರ್ಕರ್ ಜಯಂತಿ ಹಿನ್ನೆಲೆಯಲ್ಲಿ ರಣದೀಪ್ ಹೂಡ ಅವರು ಈ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಿದ್ದಾರೆ. ‘ಭಾರತದ ಸ್ವಾತಂತ್ರ್ಯ ಹೋರಾಟದ ಹೀರೋಗೆ ಸೆಲ್ಯೂಟ್ ಮಾಡುವ ಉದ್ದೇಶದಿಂದ ಮಾಡುತ್ತಿರುವ ಸಿನಿಮಾ ಇದು. ಕ್ರಾಂತಿಕಾರಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲು ನಾನು ಯಶಸ್ವಿ ಆಗುತ್ತೇನೆ ಎಂದು ಭಾವಿಸಿದ್ದೇನೆ. ಇಷ್ಟು ದಿನ ಮುಚ್ಚಿಡಲಾದ ಕಥೆಯನ್ನು ನಾವು ಹೇಳುತ್ತಿದ್ದೇವೆ. ನಿಮಗೆಲ್ಲರಿಗೂ ವೀರಸಾವರ್ಕರ್ ಜಯಂತಿಯ ಶುಭಾಶಯಗಳು’ ಎಂದಿದ್ದಾರೆ ಅವರು.
ಇದನ್ನೂ ಓದಿ: ‘ಕೆಜಿಎಫ್’ ಆದ್ಮೇಲೆ 30 ಸಿನಿಮಾದಲ್ಲಿ ನಟಿಸಿದ ಕೃಷ್ಣ ರಾವ್; ‘ಮುದುಕನ ಲವ್ಸ್ಟೋರಿ’ ಚಿತ್ರದಲ್ಲಿ ಹೀರೋ ಪಾತ್ರ
ರಣದೀಪ್ ಹೂಡ ಅವರು ವೀರ ಸಾವರ್ಕರ್ ರೀತಿಯಲ್ಲೇ ಕಾಣಿಸಿಕೊಂಡಿದ್ದು ಅನೇಕರಿಗೆ ಖುಷಿ ನೀಡಿದೆ. ಅವರು ಈ ಪಾತ್ರಕ್ಕೆ ಸಂಪೂರ್ಣ ನ್ಯಾಯ ಒದಗಿಸುತ್ತಾರೆ ಎಂಬುದು ಅನೇಕರ ನಂಬಿಕೆ. ಸದ್ಯ, ಹೊಸ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನಟನ ಪ್ರಯತ್ನಕ್ಕೆ ಎಲ್ಲರೂ ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.