‘ಕೆಜಿಎಫ್’ ಆದ್ಮೇಲೆ 30 ಸಿನಿಮಾದಲ್ಲಿ ನಟಿಸಿದ ಕೃಷ್ಣ ರಾವ್; ‘ಮುದುಕನ ಲವ್ಸ್ಟೋರಿ’ ಚಿತ್ರದಲ್ಲಿ ಹೀರೋ ಪಾತ್ರ
‘ಕೆಜಿಎಫ್ 2’ ಸಿನಿಮಾ ತೆರೆಗೆ ಬಂದು 1200 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಬಗ್ಗೆ ಎಲ್ಲರೂ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಈ ರೀತಿಯ ಸಿನಿಮಾ ಮಾಡೋಕೆ ಬಂಡವಾಳ ಹೂಡುವುದು ಮುಖ್ಯವಾಗುತ್ತದೆ ಅನ್ನೋದು ಕೃಷ್ಣ ಅವರ ಮಾತು.
ಕೆಲವೊಮ್ಮೆ ಸಿನಿಮಾ ಹಿಟ್ ಆಗುತ್ತದೆಯೋ ಇಲ್ಲವೋ, ಅಲ್ಲಿ ಬರುವ ಪಾತ್ರ ಸೂಪರ್ ಹಿಟ್ ಆಗಿ ಬಿಡುತ್ತದೆ. ಮಾಡಿದ ಪಾತ್ರ ಚಿಕ್ಕದಿದ್ದರೂ ಲಕ್ ಬದಲಾಗಿ ಬಿಡುತ್ತದೆ. ಸಿನಿಮಾ ಕೂಡ ದೊಡ್ಡ ಯಶಸ್ಸು ಪಡೆಯಿತು ಎಂದರೆ ಕೇಳುವ ಮಾತೇ ಇಲ್ಲ. ‘ಕೆಜಿಎಫ್’ ಚಿತ್ರದಲ್ಲಿ ಅಂಧ ಮುದುಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಕೃಷ್ಣ ಜಿ. ರಾವ್. ಅವರ ಪಾತ್ರ ಇಡೀ ಚಿತ್ರಕ್ಕೆ ಟರ್ನಿಂಗ್ ಪಾಯಿಂಟ್ ಆಗಿತ್ತು. ಈ ಸಿನಿಮಾ ತೆರೆಕಂಡ ನಂತರದಲ್ಲಿ ಅವರ ಅದೃಷ್ಟ ಬದಲಾಗಿದೆ. 2018ರಲ್ಲಿ ಬಂದ ‘ಕೆಜಿಎಫ್’ ಬಳಿಕ (KGF) ಅವರು ಬರೋಬ್ಬರಿ 30 ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಕೆಜಿಎಫ್ 2’ (KGF Chapter 2) ಬಳಿಕ 15 ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಗ್ಗೆ ಟಿವಿ9 ಕನ್ನಡದ ಜತೆಗೆ ಅವರು ಮಾತನಾಡಿದ್ದಾರೆ.
‘ಕೆಜಿಎಫ್ ಆದ್ಮೇಲೆ 30 ಸಿನಿಮಾಗಳಲ್ಲಿ ನಟಿಸಿದ್ದೇನೆ. ‘ಮುದುಕನ ಲವ್ಸ್ಟೋರಿ’ ಚಿತ್ರಕ್ಕೆ ನಾನೇ ಹೀರೋ. ಸಿನಿಮಾ ಶೂಟಿಂಗ್ ಮುಗಿದು, ಪೋಸ್ಟ್ ಪ್ರೊಡಕ್ಷನ್ ಆಗಿ, ಸೆನ್ಸಾರ್ ಪ್ರಕ್ರಿಯೆ ಕೂಡ ಮುಗಿಸಿದೆ’ ಎಂದಿದ್ದಾರೆ ಅವರು. ಈ ಮೂಲಕ ತಮ್ಮ ಜನಪ್ರಿಯತೆ ಎಷ್ಟು ಹೆಚ್ಚಿದೆ ಎಂಬುದನ್ನು ಹೇಳಿಕೊಂಡಿದ್ದಾರೆ.
‘ಕೆಜಿಎಫ್ 2’ ಸಿನಿಮಾ ತೆರೆಗೆ ಬಂದು 1200 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಬಗ್ಗೆ ಎಲ್ಲರೂ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಈ ರೀತಿಯ ಸಿನಿಮಾ ಮಾಡೋಕೆ ಬಂಡವಾಳ ಹೂಡುವುದು ಮುಖ್ಯವಾಗುತ್ತದೆ ಅನ್ನೋದು ಕೃಷ್ಣ ಅವರ ಮಾತು. ‘ಈ ಸಿನಿಮಾವನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿದೆ. ಈ ರೀತಿಯ ಚಿತ್ರಗಳನ್ನು ನಿರ್ಮಿಸೋಕು ಧಮ್ ಬೇಕು’ ಎಂದಿದ್ದಾರೆ ಅವರು.
ಇದನ್ನೂ ಓದಿ: ‘ಕೆಜಿಎಫ್ 3’ ಚಿತ್ರದಲ್ಲಿ ಹೃತಿಕ್ ರೋಷನ್ ಇರ್ತಾರಾ? ಊರ ತುಂಬ ಹಬ್ಬಿದೆ ಹೊಸ ಗಾಸಿಪ್
‘ಕೆಜಿಎಫ್’ ಚಿತ್ರಕ್ಕೆ ಆಯ್ಕೆ ಆದ ಬಗ್ಗೆ ಹೇಳಿಕೊಂಡಿರುವ ಅವರು, ‘ಸಹಾಯಕ ನಿರ್ದೇಶಕನಾಗಿ ನಾನು 40 ಸಿನಿಮಾಗಳಲ್ಲಿ ಕೆಲಸ ಮಾಡಿದ್ದೇನೆ. ಕುಮಾರ್ ಎಂಬುವವರು ಸಿಕ್ಕಿದ್ದರು. ಅವರು ಪ್ರಶಾಂತ್ ನೀಲ್ಗೆ ಫೋಟೋ ಕಳಿಸಿ ಎಂದು ಹೇಳ್ತಾ ಇದ್ರು. ಒಂದು ದಿನ ಅವರೇ ಫೋಟೋ ಕಳುಹಿಸಿದರು. ಒಂದು ದಿನ ಆಡಿಷನ್ಗೆ ಕರೆದರು. ಡೈಲಾಗ್ ಕೊಟ್ರು. ಡೈಲಾಗ್ ಹೊಡೆದೆ. ಮರುದಿನ ನನ್ನನ್ನು ಕರೆದರು. 15 ದಿನ ಶೂಟಿಂಗ್ನಲ್ಲಿ ಪಾಲ್ಗೊಂಡೆ’ ಎಂದಿದ್ದಾರೆ ಕೃಷ್ಣ.
‘ಯಶ್ ಅವರು ತುಂಬಾನೇ ಒಳ್ಳೆಯ ಮನುಷ್ಯ. ಸೆಟ್ ಅಲ್ಲಿ ಜಾಲಿ ಆಗಿ ಇರುತ್ತಿದ್ದರು. ಕೊವಿಡ್ ಟೈಮ್ನಲ್ಲಿ ಸಮಸ್ಯೆ ಆಯ್ತು. ಆಗ ನನಗೆ ಯಶ್ ಹಾಗೂ ಹೊಂಬಾಳೆ ಫಿಲ್ಮ್ಸ್ನವರು ದುಡ್ಡು ಕಳುಹಿಸಿದರು’ ಎಂದು ಸಹಾಯವನ್ನು ನೆನಪು ಮಾಡಿಕೊಂಡಿದ್ದಾರೆ ಅವರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:15 pm, Sat, 28 May 22