AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ambareesh Birth Anniversary: ಅಂಬರೀಷ್​ 70ನೇ ಜನ್ಮದಿನ; ರೆಬೆಲ್ ಸ್ಟಾರ್ ಬಗೆಗಿನ ಐದು ವಿಶೇಷ ಸಂಗತಿ

ಅಂಬರೀಷ್ ನಾನಾ ರೀತಿಯ ಪಾತ್ರಗಳನ್ನು ಮಾಡಿ ಭೇಷ್ ಎನಿಸಿಕೊಂಡರು. ರಾಜಕೀಯಕ್ಕೂ ಕಾಲಿಟ್ಟು ಯಶಸ್ಸು ಕಂಡರು. ಅವರ ಕುರಿತ ಐದು ವಿಶೇಷ ಮಾಹಿತಿ ಇಲ್ಲಿದೆ.

Ambareesh Birth Anniversary: ಅಂಬರೀಷ್​ 70ನೇ ಜನ್ಮದಿನ; ರೆಬೆಲ್ ಸ್ಟಾರ್ ಬಗೆಗಿನ ಐದು ವಿಶೇಷ ಸಂಗತಿ
ಅಂಬರೀಷ್
TV9 Web
| Updated By: ರಾಜೇಶ್ ದುಗ್ಗುಮನೆ|

Updated on:May 29, 2023 | 8:24 AM

Share

ಅಂಬರೀಷ್ ಅವರು (Ambareesh) ಬದುಕಿದ್ದರೆ ಇಂದು (ಮೇ 29) 70 ವರ್ಷದ ಜನ್ಮದಿನ (Ambareesh Birthday) ಆಚರಿಸಿಕೊಳ್ಳುತ್ತಿದ್ದರು. ಆದರೆ, ಅವರು ನಮ್ಮನ್ನು ಅಗಲಿ ಕೆಲ ವರ್ಷಗಳು ಕಳೆದಿವೆ. ಅವರು ಬಿಟ್ಟು ಹೋದ ನೆನಪು, ಅವರು ಮಾಡಿದ ಪಾತ್ರಗಳು ಸದಾ ಜೀವಂತ. ಅವರನ್ನು ಇಂದು ನೆನಪಿಸಿಕೊಳ್ಳುವ ಕಾರ್ಯ ಆಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಅಂಬಿ ಅಣ್ಣನನ್ನು ಎಲ್ಲರೂ ನೆನಪಿಸಿಕೊಳ್ಳುತ್ತಿದ್ದಾರೆ. ಅವರು ಮಾಡಿದ ಚಿತ್ರಗಳು ಹಾಗೂ ಪಾತ್ರಗಳ ಬಗ್ಗೆ ಮೆಲುಕು ಹಾಕಲಾಗುತ್ತಿದೆ.

ಅಂಬರೀಷ್ ಅವರಿಗೆ ಅನೇಕ ಬಿರುದುಗಳಿವೆ. ಕರ್ನಾಟಕದ ಕರ್ಣ, ಕನ್ವರ್​ಲಾಲ್, ಮಂಡ್ಯದ ಗಂಡು, ರೆಬೆಲ್​ ಸ್ಟಾರ್​ ಹೀಗೆ ಬಿರುದುಗಳ ಸಾಲು ಬೆಳೆಯುತ್ತಲೇ ಹೋಗುತ್ತದೆ. ಐಕಾನಿಕ್ ಸಿನಿಮಾ ‘ನಾಗರಹಾವು’ ಮೂಲಕ ಬಣ್ಣದ ಬದುಕು ಆರಂಭಿಸಿದ ಅವರು ನಾನಾ ರೀತಿಯ ಪಾತ್ರಗಳನ್ನು ಮಾಡಿ ಭೇಷ್ ಎನಿಸಿಕೊಂಡರು. ರಾಜಕೀಯಕ್ಕೂ ಕಾಲಿಟ್ಟು ಯಶಸ್ಸು ಕಂಡರು. ಅವರ ಕುರಿತ ಐದು ವಿಶೇಷ ಮಾಹಿತಿ ಇಲ್ಲಿದೆ.

ಫ್ರೆಂಡ್ಲಿ ನೇಚರ್

ಇದನ್ನೂ ಓದಿ
Image
Ambareesh Birth Anniversary: ರೆಬಲ್ ಸ್ಟಾರ್ ಅಂಬರೀಷ್ ಬರ್ತಡೆ ಆಚರಣೆಗೆ ತೊಡಕಾದ ನೀತಿ ಸಂಹಿತೆ ಶಿಷ್ಟಾಚಾರ
Image
ವೇದಿಕೆ ಮೇಲೆ ಸುಮಲತಾ ಕಾಲೆಳೆದ ಅಂಬರೀಷ್ ಸಹೋದರಿ
Image
Sumalatha Ambareesh: ನಾಳೆ ಕೆಆರ್​ಎಸ್​ ಡ್ಯಾಂನಲ್ಲಿಯೇ ಅಧಿಕಾರಿಗಳ ಜತೆ ಸಭೆ ನಡೆಸುವೆ: ಸಂಸದೆ ಸುಮಲತಾ ಅಂಬರೀಶ್
Image
Sumalatha Ambareesh: ಪತಿ ಅಂಬರೀಶ್​ರನ್ನು ನೆನೆದು ಟಿವಿ9 ಸ್ಟುಡಿಯೋದಲ್ಲಿ ಸುಮಲತಾ ಅಂಬರೀಶ್ ಕಣ್ಣೀರು

ಅಂಬರೀಷ್ ಅವರ ಮಾತು ಸ್ವಲ್ಪ ಒರಟಾಗಿತ್ತು. ಅವರು ಯಾರ ಮೇಲೆ ರೇಗಾಡಿದರೂ ಅದಕ್ಕೊಂದು ಕಾರಣ ಇರುತ್ತಿತ್ತು. ಅವರು ಎಷ್ಟೇ ಸಿಡುಕಿದರೂ ಅದರಲ್ಲಿ ಪ್ರೀತಿ ತೋರುತ್ತಿದ್ದರು. ಸದಾ ಗೆಳೆತನದ ಹಸ್ತಚಾಚುವ ಸ್ವಭಾವ ಅವರದ್ದಾಗಿತ್ತು. ಇದು ಅನೇಕಬಾರಿ ಸಾಬೀತಾಗಿದೆ. ಈ ಗುಣ ಅನೇಕರಿಗೆ ಇಷ್ಟ ಆಗಿತ್ತು.

ಮಕ್ಕಳಂತೆ ತುಂಟತನ

ಅಂಬರೀಷ್​ ಅವರು ವಯಸ್ಸಾದರೂ ತುಂಟಾಟ ಮಾತ್ರ ಕಡಿಮೆ ಮಾಡಿರಲಿಲ್ಲ. ಮಾಧ್ಯಮದವರ ಜತೆಗೆ, ಗೆಳೆಯರ ಜತೆಗೆ, ಚಿತ್ರರಂಗದವರ ಅನೇಕರ ಜತೆ ಅವರು ತುಂಟಾಟ ಮಾಡುತ್ತಲೇ ಇರುತ್ತಿದ್ದರು. ಇದಕ್ಕೆ ಸಾಕ್ಷಿ ಎಂಬಂತೆ ಯೂಟ್ಯೂಬ್​ನಲ್ಲಿ ಈಗಲೂ ಹಲವು ವಿಡಿಯೋಗಳು ಸಿಗುತ್ತವೆ.

ಚಿತ್ರರಂಗದ ದೊಡ್ಡಣ್ಣ

ಚಿತ್ರರಂಗದ ದೊಡ್ಡಣ್ಣನಂತೆ ಇದ್ದವರು ಅಂಬರೀಷ್. ಸದಾ ಜಾಲಿ ಆಗಿರುತ್ತಿದ್ದ ಅವರು ಜವಾಬ್ದಾರಿಯಿಂದ ಎಂದಿಗೂ ಹಿಂದೆ ಸರಿದವರಲ್ಲ. ನಟರ ಮಧ್ಯೆ, ನಿರ್ಮಾಪಕರ ಮಧ್ಯೆ, ಚಿತ್ರತಂಡಗಳ ಮಧ್ಯೆ ಸಮಸ್ಯೆಗಳು ಕಾಣಿಸಿಕೊಂಡಾಗ, ಭಿನ್ನಾಭಿಪ್ರಾಯ ಹುಟ್ಟಿಕೊಂಡಾಗ ಮುಂದೆ ನಿಂತು ಸಮಸ್ಯೆ ಬಗೆಹರಿಸುವ ಕೆಲಸ ಅವರಿಂದ ಆಗುತ್ತಿತ್ತು.

ಹೀರೋ ಆದ ಕನ್ನಡದ ಮೊದಲ ವಿಲನ್

ವಿಲನ್ ಆಗಿ ಕನ್ನಡ ಚಿತ್ರರಂಗದಲ್ಲಿ ಅನೇಕರು ಕಾಣಿಸಿಕೊಂಡಿದ್ದಾರೆ. ಆದರೆ, ಅವರ್ಯಾರೂ ಹೀರೋ ಆಗುವ ಪ್ರಯತ್ನ ಮಾಡಿರಲಿಲ್ಲ. ಅಂಬರೀಷ್ ಅವರಿಂದ ಇಂತಹ ಪ್ರಯತ್ನ ಆಯಿತು. ‘ನಾಗರಹಾವು’ ಚಿತ್ರದಲ್ಲಿ ಜಲೀಲನ ಪಾತ್ರ ಮಾಡಿದ್ದ ಅವರು, ನಂತರ ಹೀರೋ ಆಗಿ ಕನ್ನಡ ಚಿತ್ರರಂಗಕ್ಕೆ ಪರಿಚಯಗೊಂಡರು.

ಸೆಲ್ಫ್​ ಮೇಡ್​ ಸ್ಟಾರ್

ಅಂಬರೀಷ್ ಅವರು ಚಿತ್ರರಂಗದ ಹಿನ್ನೆಲೆಯಿಂದ ಬಂದವರಲ್ಲ. ಅವರು ಸ್ವಂತ ಬಲದಿಂದ ಚಿತ್ರರಂಗದಲ್ಲಿ ನೆಲೆ ಕಂಡುಕೊಂಡರು. ವಿಲನ್ ಪಾತ್ರ, ಹೀರೋ ಪಾತ್ರ, ಪೊಲೀಸ್ ಪಾತ್ರ ಹೀಗೆ ಹಲವು ಪಾತ್ರಗಳಿಗೆ ಜೀವ ತುಂಬಿದರು. ಓರ್ವ ಯಶಸ್ವಿ ನಟನಾಗಿ ಚಿತ್ರರಂಗದಲ್ಲಿ ಮೆರೆದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 6:30 am, Sun, 29 May 22

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!