Deepika Padukone: ಕೆಂಪು ಬಣ್ಣದ ಉಡುಗೆಯಲ್ಲಿ ಎಲ್ಲರ ಗಮನ ಸೆಳೆದ ನಟಿ ದೀಪಿಕಾ ಪಡುಕೋಣೆ
Cannes 2022: ಫ್ರಾನ್ಸ್ನಲ್ಲಿ ಮೇ 17ರಂದು ಕಾನ್ ಫಿಲ್ಮ್ ಫೆಸ್ಟಿವಲ್ ಆರಂಭ ಆಗಿದೆ. ಕನ್ನಡತಿ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ಜ್ಯೂರಿ ಆಗಿ ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ.
ಫ್ರಾನ್ಸ್ನಲ್ಲಿ ಕಾನ್ ಫಿಲ್ಮ್ ಫೆಸ್ಟಿವಲ್ (2022 Cannes Film Festival) ನಡೆಯುತ್ತಿದೆ. ಹಲವು ರಾಷ್ಟ್ರಗಳ ಸೆಲೆಬ್ರಿಟಿಗಳು ರೆಡ್ ಕಾರ್ಪೇಟ್ ಮೆಲೆ ಹೆಜ್ಜೆ ಹಾಕುತ್ತಿದ್ದಾರೆ. ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುವಾಗ ಅವರು ತೊಡುವ ಡ್ರೆಸ್ ಸಾಕಷ್ಟು ಗಮನ ಸೆಳೆಯುತ್ತದೆ. ಅದೇ ರೀತಿ ‘ಕಾನ್ ಸಿನಿಮೋತ್ಸವ 2022’ರಲ್ಲಿ ಜ್ಯೂರಿ ಆಗಿ ತೆರಳಿರುವ ದೀಪಿಕಾ ಪಡುಕೋಣೆ (Deepika Padukone) ಅವರು ನಿತ್ಯ ಒಂದೊಂದು ರೀತಿಯ ಉಡುಗೆ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಈಗ ಮೇ 19ರಂದು ಕೆಂಪು ಬಣ್ಣದ ಹಾಟ್ ಡ್ರೆಸ್ನಲ್ಲಿ ಅವರು ಟೆಂಪ್ರೇಚರ್ ಹೆಚ್ಚಿಸಿದ್ದಾರೆ.
ಇದನ್ನೂ ಓದಿ: ಕಾನ್ ಫಿಲ್ಮ್ ಫೆಸ್ಟಿವಲ್ನಲ್ಲಿ ಮಿಂಚಿದ ದೀಪಿಕಾ; ಇಲ್ಲಿವೆ ಫೋಟೋಗಳು
ಫ್ರಾನ್ಸ್ನಲ್ಲಿ ಮೇ 17ರಂದು ಕಾನ್ ಫಿಲ್ಮ್ ಫೆಸ್ಟಿವಲ್ ಆರಂಭ ಆಗಿದೆ. ಮೇ 28ರ ವರೆಗೆ ನಡೆಯುವ ಈ ಕಾರ್ಯಕ್ರಮಕ್ಕೆ ವಿಶ್ವದ ನಾನಾ ಕಡೆಗಳಿಂದ ಕಲಾವಿದರು ಆಗಮಿಸಿದ್ದಾರೆ. ಕನ್ನಡತಿ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ಜ್ಯೂರಿ ಆಗಿ ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ಅವರು ಈ ಫಿಲ್ಮ್ ಫೆಸ್ಟಿವಲ್ನಲ್ಲಿ ಕಾಣಿಸಿಕೊಂಡ ಫೋಟೋಗಳು ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
View this post on Instagram
ಈ ಬಾರಿ ಕಾನ್ ಚಿತ್ರೋತ್ಸವದ ಜ್ಯೂರಿ ತಂಡದಲ್ಲಿ ದೀಪಿಕಾ ಪಡುಕೋಣೆ ಜೊತೆ ‘ಐರನ್ ಮ್ಯಾನ್ 3’ ಸಿನಿಮಾ ಖ್ಯಾತಿಯ ನೂಮಿ ರಪಾಸ್, ‘ಶೆರ್ಲಾಕ್ ಹೋಮ್ಸ್: ಎ ಗೇಮ್ ಆಫ್ ಶಾಡೋಸ್’ ಖ್ಯಾತಿಯ ರೆಬಿಕಾ ಹಾಲ್, ಅಸ್ಗರ್ ಫರ್ಹಾದಿ, ಜಾಸ್ಮಿನ್ ತ್ರಿಂಕಾ, ಜೆಫ್ ನಿಕೋಲ್ಸ್ ಮುಂತಾದವರು ಇದ್ದಾರೆ.
ಇದನ್ನೂ ಓದಿ: ‘ಸೆಟ್ನಲ್ಲಿ ಇಟ್ಟಿಗೆ ಎಸೆದರೂ ನಾನು ದೀಪಿಕಾಗೆ ಕಿಸ್ ಮಾಡುತ್ತಲೇ ಇದ್ದೆ’; ಅಚ್ಚರಿಯ ವಿಚಾರ ಬಿಚ್ಚಿಟ್ಟ ರಣವೀರ್
ಮೋದಿ ಸಂತಸ:
ಈ ಬಾರಿ ನಡೆಯುತ್ತಿರುವ 75ನೇ ಕಾನ್ ಫಿಲ್ಮ್ ಫೆಸ್ಟಿವಲ್ನಲ್ಲಿ ಭಾರತಕ್ಕೆ ವಿಶೇಷ ಗೌರವ ಸಿಕ್ಕಿದೆ. ಭಾರತಕ್ಕೆ ಸಿಕ್ಕಿರುವ ಗೌರವದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಪತ್ರ ಬರೆದಿದ್ದಾರೆ. ‘ಸಿನಿಮಾ ಮತ್ತು ಸಮಾಜ ಒಂದಕ್ಕೊಂದು ಕನ್ನಡಿ ಇದ್ದಂತೆ. ಮಾನವನ ಭಾವನೆಗಳನ್ನು ಕಲಾತ್ಮಕವಾಗಿ ಸಿನಿಮಾ ತೋರಿಸುತ್ತದೆ. ಇಡೀ ಜಗತ್ತಿನಲ್ಲಿ ಅತಿ ಹೆಚ್ಚು ಸಿನಿಮಾ ನಿರ್ಮಿಸುವ ದೇಶ ಭಾರತ. ಇಲ್ಲಿನ ಹಲವು ಭಾಷೆಗಳಲ್ಲಿ ವಿವಿಧ ರೀತಿಯ ಸಿನಿಮಾಗಳು ಮೂಡಿಬರುತ್ತಿವೆ. ಸಮೃದ್ಧವಾದ ಸಂಪ್ರದಾಯ ಮತ್ತು ಸಾಂಸ್ಕೃತಿಕ ವೈವಿಧ್ಯತೆಯು ಭಾರತದ ಶಕ್ತಿ. ಅನ್ವೇಷಿಸಲು ಇಲ್ಲಿ ಸಾಕಷ್ಟು ಕಥೆಗಳಿವೆ’ ಎಂದು ಈ ಪತ್ರದಲ್ಲಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:51 pm, Fri, 20 May 22