Andrea Kevichusa: ‘ಅನೇಕ್’ ಚಿತ್ರದಲ್ಲಿ ಆಂಡ್ರಿಯಾ ಕೆವಿಚುಸಾ; ನಾಗಾಲ್ಯಾಂಡ್​ನ ಬೆಡಗಿಗೆ ಬಾಲಿವುಡ್​ನಲ್ಲಿ ಸಿಕ್ಕ ಸ್ವಾಗತ ಹೇಗಿತ್ತು?

Anek Movie | Ayushmann Khurrana: ಅನುಭವ್ ಸಿನ್ಹಾ ನಿರ್ದೇಶನದ ‘ಅನೇಕ್’ ಚಿತ್ರದಲ್ಲಿ ಆಯುಷ್ಮಾನ್ ಖುರಾನಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಚಿತ್ರದ ನಾಯಕಿ ಆಂಡ್ರಿಯಾ ಕೆವಿಚುಸಾರನ್ನು ಪರಿಚಯಿಸಲಾಗಿದೆ. ಅವರು ಮೂಲತಃ ನಾಗಾಲ್ಯಾಂಡ್​ನವರು. ಇದೀಗ ಆಂಡ್ರಿಯಾಗೆ ಬಾಲಿವುಡ್​ನಲ್ಲಿ ಪ್ರೀತಿಯ ಸ್ವಾಗತ ಸಿಕ್ಕಿದೆ.

Andrea Kevichusa: ‘ಅನೇಕ್’ ಚಿತ್ರದಲ್ಲಿ ಆಂಡ್ರಿಯಾ ಕೆವಿಚುಸಾ; ನಾಗಾಲ್ಯಾಂಡ್​ನ ಬೆಡಗಿಗೆ ಬಾಲಿವುಡ್​ನಲ್ಲಿ ಸಿಕ್ಕ ಸ್ವಾಗತ ಹೇಗಿತ್ತು?
ಆಂಡ್ರಿಯಾ ಕೆವಿಸುಚಾ
Follow us
TV9 Web
| Updated By: shivaprasad.hs

Updated on:May 20, 2022 | 9:25 AM

ಬಾಲಿವುಡ್​ನಲ್ಲಿ ಈಶಾನ್ಯ ರಾಜ್ಯಗಳ ಕಥಾ ವಸ್ತು ಹೊಂದಿರುವ ಚಿತ್ರಗಳು, ಪಾತ್ರಗಳು ಕಡಿಮೆಯೆಂದೇ ಹೇಳಬೇಕು. ಪ್ರಸ್ತುತ ಈ ಆರೋಪದಿಂದ ಮುಕ್ತವಾಗಲು ಬಾಲಿವುಡ್ ಪ್ರಯತ್ನಿಸುತ್ತಿದೆ. ಹೊಸ ಹೊಸ ಪ್ರಯತ್ನಗಳು ನಡೆಯುತ್ತಿವೆ. ಈ ಪೈಕಿ ‘ಅನೇಕ್’ (Anek Movie) ಕೂಡ ಒಂದು. ಅನುಭವ್ ಸಿನ್ಹಾ ನಿರ್ದೇಶನದ ಚಿತ್ರದಲ್ಲಿ ಆಯುಷ್ಮಾನ್ ಖುರಾನಾ (Ayushmann Khurrana) ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಚಿತ್ರದ ನಾಯಕಿ ಆಂಡ್ರಿಯಾ ಕೆವಿಚುಸಾರನ್ನು (Andrea Kevichusa) ಪರಿಚಯಿಸಲಾಗಿದೆ. ಅವರು ಮೂಲತಃ ನಾಗಾಲ್ಯಾಂಡ್​ನವರು. ಚಿತ್ರದಲ್ಲಿ ಅವರ ಪಾತ್ರ ರಿವೀಲ್ ಆಗುತ್ತಿದ್ದಂತೆ ಬಾಲಿವುಡ್​ನಲ್ಲಿ ಈಶಾನ್ಯ ಭಾರತದ ಭರವಸೆಯ ನಟಿಗೆ ಅದ್ದೂರಿ ಸ್ವಾಗತ ಸಿಕ್ಕಿದೆ. ತಮ್ಮ ಮೊದಲ ಚಿತ್ರದಲ್ಲಿ ಅವರು ‘ಐಡೋ’ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಾಲಿವುಡ್​​ನಲ್ಲಿ ಈಶಾನ್ಯ ಭಾರತದ ನಟಿಯರಿಗೆ ಅವಕಾಶ ಕಡಿಮೆ ಎಂಬ ಬಗ್ಗೆ ಮೊದಲಿನಿಂದ ದೊಡ್ಡ ಮಟ್ಟದಲ್ಲಿ ಚರ್ಚೆಯ ನಡುವೆ ಇದೀಗ ನಾಗಾಲ್ಯಾಂಡ್​ನ ಆಂಡ್ರಿಯಾ ನಾಯಕಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ತಾರೆಯರಿಗೆ ಖುಷಿ ತಂದಿದೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಆಂಡ್ರಿಯಾರನ್ನು ಬಾಲಿವುಡ್​ಗೆ ಸ್ವಾಗತಿಸಿ ಪ್ರೀತಿಯಿಂದ ಪೋಸ್ಟ್ ಹಂಚಿಕೊಳ್ಳಲಾಗುತ್ತಿದೆ. ಹಿರಿಯ ನಟಿ ನೀನಾ ಗುಪ್ತಾ ಆಂಡ್ರಿಯಾ ಶ್ವೇತ ವರ್ಣದ ಸೀರೆಯಲ್ಲಿ ಮಿಂಚುತ್ತಿರುವ ಫೋಟೋವೊಂದನ್ನು ಶೇರ್ ಮಾಡಿಕೊಂಡು, ‘‘ಗೆಲ್ಲೋದು ಯಾರು? ಭಾರತ’’ ಎಂದು ಬರೆದುಕೊಂಡಿದ್ದಾರೆ. ಜತೆಗೆ ಶೀರ್ಷಿಕೆಯಲ್ಲಿ ‘‘ಭಾರತದ ಜನರೇ ಆಲಿಸಿ, ‘ಅನೇಕ್​’ ಚಿತ್ರದ “Aido” ನಿಮ್ಮ ಮುಂದೆ. ನಮ್ಮ ಸುಂದರ ನಾಗಾಲ್ಯಾಂಡ್‌ನ ಆಂಡ್ರಿಯಾ ಕೆವಿಚುಸಾ ಅವರನ್ನು ನಿಮಗೆ ಪರಿಚಯಿಸುತ್ತಿದ್ದೇವೆ’’ ಎಂದು ಬರೆದಿದ್ದಾರೆ.

ನೀನಾ ಗುಪ್ತಾ ಪೋಸ್ಟ್:

ಇದನ್ನೂ ಓದಿ
Image
Jr NTR Birthday: ಟಾಲಿವುಡ್ ನಟನಾದರೂ ಕನ್ನಡದ ಮೇಲೆ ವಿಶೇಷ ಪ್ರೀತಿ ಹೊಂದಿರುವ ಜ್ಯೂ. ಎನ್‌ಟಿಆರ್
Image
Jr NTR Birthday: ಜ್ಯೂ.ಎನ್​ಟಿಆರ್​ ಜನ್ಮದಿನ; ಈ ನಟನ ಬಗ್ಗೆ ನಿಮಗೆ ಗೊತ್ತಿರದ ಐದು ಅಪರೂಪದ ವಿಚಾರಗಳು
Image
ಲೈವ್​ನಲ್ಲಿ ಹೆಂಡತಿಗೆ ಕಿಸ್ ಮಾಡಿದ ಬಿಗ್ ಬಾಸ್ ಸ್ಪರ್ಧಿ; ಸಿಟ್ಟಾದ ಪತ್ನಿ, ವೈರಲ್ ಆಯ್ತು ವಿಡಿಯೋ
Image
ಜ್ಯೂ.ಎನ್ಟಿಆರ್ ಚಿತ್ರದಿಂದ ಹೊರ ನಡೆದ ಆಲಿಯಾ; ಸ್ಟಾರ್ ನಟನ ಚಿತ್ರಕ್ಕೆ ನಾಯಕಿ ಯಾರು?
View this post on Instagram

A post shared by Neena Gupta (@neena_gupta)

ಇದನ್ನೂ ಓದಿ: ಭಾರತೀಯ ಚಿತ್ರರಂಗದಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಈಶಾನ್ಯ ರಾಜ್ಯಗಳ ಬೆಡಗಿಯರಿವರು

ಸಿನಿಮಾಗಳಲ್ಲಿ ಸವಾಲಿನ ಪಾತ್ರಗಳನ್ನು ಆಯ್ದುಕೊಳ್ಳುವ ತಾಪ್ಸಿ ಪನ್ನು ಕೂಡ ಆಂಡ್ರಿಯಾರನ್ನು ಸ್ವಾಗತಿಸಿದ್ದಾರೆ. ‘ವೈವಿಧ್ಯತೆಯಲ್ಲಿ ಸೌಂದರ್ಯವಿದೆ. ಇವರಿಗೆ ಹಲೋ ಹೇಳಿ. ನಾಗಾಲ್ಯಾಂಡ್​ನಿಂದ ಆಂಡ್ರಿಯಾ’ ಎಂದು ಬರೆದುಕೊಂಡಿದ್ದಾರೆ.

ತಾಪ್ಸಿ ಪನ್ನು ಪೋಸ್ಟ್​ ಇಲ್ಲಿದೆ:

View this post on Instagram

A post shared by Taapsee Pannu (@taapsee)

ಆಂಡ್ರಿಯಾ ಕೂಡ ಬಾಲಿವುಡ್ ಪ್ರವೇಶದ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ. ಈ ಬಗ್ಗೆ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ನಟಿ ಮೊದಲ ಚಿತ್ರದಲ್ಲೇ ಅನುಭವ್ ಸಿನ್ಹಾ ನಿರ್ದೇಶನದ ಚಿತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿರುವುದು ಸಂತಸ ತಂದಿದೆ. ಆಯುಷ್ಮಾನ್ ಜತೆ ತೆರೆ ಹಂಚಿಕೊಂಡಿರುವುದನ್ನು ವಿವರಿಸಲು ಪದಗಳಿಲ್ಲ ಎಂದಿದ್ದಾರೆ.

ಆಂಡ್ರಿಯಾ ಪೋಸ್ಟ್​​ ಇಲ್ಲಿದೆ:

ಬಾಲಿವುಡ್​ ನಟಿಯರಾದ ಇಶಾ ತಲ್ವಾರ್, ಹುಮಾ ಖುರೇಶಿ ಸೇರಿದಂತೆ ಅನೇಕರು ಆಂಡ್ರಿಯಾಗೆ ಸ್ವಾಗತ ಕೋರಿದ್ದಾರೆ. ಮೇ 27 ರಂದು ಚಿತ್ರಮಂದಿರಗಳಲ್ಲಿ ‘ಅನೇಕ್’ ತೆರೆಕಾಣಲಿದೆ.

ಮತ್ತಷ್ಟು ಮನರಂಜನೆ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:20 am, Fri, 20 May 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ