Jr NTR Birthday: ಜ್ಯೂ.ಎನ್ಟಿಆರ್ ಜನ್ಮದಿನ; ಈ ನಟನ ಬಗ್ಗೆ ನಿಮಗೆ ಗೊತ್ತಿರದ ಐದು ಅಪರೂಪದ ವಿಚಾರಗಳು
ಜ್ಯೂ.ಎನ್ಟಿಆರ್ ಹಾಗೂ ಕೊರಟಾಲ ಶಿವ ಮುಂದಿನ ಚಿತ್ರಕ್ಕಾಗಿ ಒಂದಾಗಿದ್ದಾರೆ. ಬರ್ತ್ಡೇ ಪ್ರಯುಕ್ತ ಈ ಬಗ್ಗೆ ಅಧಿಕೃತ ಘೋಷಣೆ ಆಗಿದೆ. ಈ ಮೂಲಕ ಕೊರಟಾಲ ಶಿವ ಅಭಿಮಾನಿಗಳಿಗೆ ಗಿಫ್ಟ್ ನೀಡಿದ್ದಾರೆ.
ಜ್ಯೂ.ಎನ್ಟಿಆರ್ ಅವರು (JR. NTR) ಇಂದು (ಮೇ 20) 39ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಈ ನಟನಿಗೆ ಶುಭಾಶಯತಿಳಿಸುತ್ತಿದ್ದಾರೆ. ಕಳೆದ ಎರಡು ವರ್ಷ ಕೊವಿಡ್ ಕಾರಣದಿಂದ ಜ್ಯೂ.ಎನ್ಟಿಆರ್ ಬರ್ತ್ಡೇ (JR. NTR Birthday) ಆಚರಿಸಿಕೊಂಡಿರಲಿಲ್ಲ. ಈ ಬಾರಿ ಕೊವಿಡ್ ಇಲ್ಲ. ಹೀಗಾಗಿ, ಅಭಿಮಾನಿಗಳ ಸಂಭ್ರಮ ಜೋರಾಗಿದೆ. ಸಾಕಷ್ಟು ಕಡೆಗಳಲ್ಲಿ ಸಾಮಾಜಿಕ ಕಾರ್ಯಗಳು ನಡೆಯುತ್ತಿವೆ.
ಜ್ಯೂ.ಎನ್ಟಿಆರ್ ಹಾಗೂ ಕೊರಟಾಲ ಶಿವ ಮುಂದಿನ ಚಿತ್ರಕ್ಕಾಗಿ ಒಂದಾಗಿದ್ದಾರೆ. ಬರ್ತ್ಡೇ ಪ್ರಯುಕ್ತ ಈ ಬಗ್ಗೆ ಅಧಿಕೃತ ಘೋಷಣೆ ಆಗಿದೆ. ಈ ಮೂಲಕ ಕೊರಟಾಲ ಶಿವ ಅಭಿಮಾನಿಗಳಿಗೆ ಗಿಫ್ಟ್ ನೀಡಿದ್ದಾರೆ. ಈ ಚಿತ್ರಕ್ಕೆ ಯಾವ ಟೈಟಲ್ ಇಡಲಾಗುತ್ತದೆ ಅನ್ನೋದು ಸದ್ಯದ ಕುತೂಹಲ. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿದೆ. ಜ್ಯೂ.ಎನ್ಟಿಆರ್ ಬರ್ತ್ಡೇ ಪ್ರಯುಕ್ತ ‘ಆರ್ಆರ್ಆರ್’ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿದೆ. ಜ್ಯೂ.ಎನ್ಟಿಆರ್ ಓರ್ವ ಅದ್ಭುತ ನಟ. ‘ಆರ್ಆರ್ಆರ್’ ಸಿನಿಮಾದಿಂದ ಅವರ ಖ್ಯಾತಿ ಹೆಚ್ಚಿದೆ. ತಾವು ಅದ್ಭುತ ನಟ ಎಂಬುದನ್ನು ಅವರು ಅನೇಕ ಬಾರಿ ಸಾಬೀತು ಮಾಡಿದ್ದಾರೆ. ಅವರ ಬಗ್ಗೆ ಗೊತ್ತಿಲ್ಲದ ಅನೇಕ ವಿಚಾರಗಳಿವೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
BIGGG NEWS… JR NTR – KORATALA SIVA REUNITE FOR NEW PAN-INDIA PROJECT… #JrNTR and director Koratala Siva collaborate for the second time, after #JanathaGarage [2016]… An out-and-out action entertainer with strong emotions… Not titled yet. #NTR30pic.twitter.com/ILk9RrjGU0
ಇದನ್ನೂ ಓದಿ
ಜೀ5ನಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಜತೆ ಪ್ರಸಾರಕ್ಕೆ ಸಜ್ಜಾದ ಕನ್ನಡದ ‘ತಲೆದಂಡ’, ‘ಮುಗಿಲ್ ಪೇಟೆ’ ಸಿನಿಮಾಗಳು
ಒಟಿಟಿಗೆ ಕಾಲಿಟ್ಟ ‘ಮಗಳು ಜಾನಕಿ’ ಖ್ಯಾತಿಯ ಗಾನವಿ ಲಕ್ಷ್ಮಣ್ ನಟನೆಯ ‘ಭಾವಚಿತ್ರ’ ಸಿನಿಮಾ
ಮತ್ತೆ ಹಳೇ ಚಾರ್ಮ್ ಪಡೆದ ಶಾರುಖ್ ಖಾನ್; ‘ಪಠಾಣ್’ ಚಿತ್ರದ ಒಟಿಟಿ ಪ್ರಸಾರ ಹಕ್ಕು 200 ಕೋಟಿ ರೂ.ಗೆ ಸೇಲ್?
‘ಕೆಜಿಎಫ್ 2’ ಎದುರು ಸೋತ ‘ಬೀಸ್ಟ್’ ಚಿತ್ರಕ್ಕೆ ಈಗ ಉಳಿದಿದ್ದು ಒಟಿಟಿ ಆಯ್ಕೆ ಮಾತ್ರ; ಯಾವಾಗ ರಿಲೀಸ್?
ಕೂಚಿಪುಡಿ ಡ್ಯಾನ್ಸರ್: ಕೂಚಿಪುಡಿ ನೃತ್ಯದ ಬಗ್ಗೆ ಎಲ್ಲರೂ ಕೇಳಿರುತ್ತೀರಿ. ಜ್ಯೂ.ಎನ್ಟಿಆರ್ ಈ ನೃತ್ಯವನ್ನು ಕಲಿತಿದ್ದಾರೆ. ಟಾಲಿವುಡ್ನ ಓರ್ವ ಅದ್ಭುತ ಡ್ಯಾನ್ಸರ್ ಅವರು ಎನ್ನುವುದರಲ್ಲಿ ಯಾವುದೇ ಅನುಮಾನ ಬೇಡ. ‘ಆರ್ಆರ್ಆರ್’ ಸಿನಿಮಾದ ‘ಹಳ್ಳಿ ನಾಟು..’ ಹಾಡಿನಲ್ಲಿ ಅವರು ಅದ್ಭುತವಾಗಿ ಹೆಜ್ಜೆ ಹಾಕಿದ್ದಾರೆ. ಅವರ ಡ್ಯಾನ್ಸ್ ನೋಡಿ ಎಲ್ಲರೂ ಫಿದಾ ಆಗಿದ್ದಾರೆ.
ರಾಜಮೌಳಿ-ಜ್ಯೂ.ಎನ್ಟಿಆರ್ ಕಾಂಬಿನೇಷನ್: 2001ರಲ್ಲಿ ತೆರೆಗೆ ಬಂದ ‘ಸ್ಟೂಡೆಂಟ್ ನಂಬರ್ 1’ ಸೂಪರ್ ಹಿಟ್ ಆಯಿತು. ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು ರಾಜಮೌಳಿ. ‘ಸಿಂಹಾದ್ರಿ’ ಸಿನಿಮಾದಲ್ಲಿ ರಾಜಮೌಳಿ ಹಾಗೂ ಜ್ಯೂ.ಎನ್ಟಿಆರ್ ಒಟ್ಟಾಗಿ ಕೆಲಸ ಮಾಡಿದರು. ಇದು ಕೂಡ ಹಿಟ್ ಆಯಿತು. ಇತ್ತೀಚೆಗೆ ತೆರೆಗೆ ಬಂದ ‘ಆರ್ಆರ್ಆರ್’ ಸಿನಿಮಾ ದೊಡ್ಡ ಯಶಸ್ಸು ಕಂಡಿದೆ. ಈ ಸಿನಿಮಾಗೆ ರಾಜಮೌಳಿ ನಿರ್ದೇಶನ ಇದೆ.
ಆಡಿಯೋ ರಿಲೀಸ್ಗೆ 10 ಲಕ್ಷ ಮಂದಿ: ಜ್ಯೂ.ಎನ್ಟಿಆರ್ ನಟನೆಯ ‘ಆಂಧ್ರವಾಲಾ’ ಚಿತ್ರ 2004ರಲ್ಲಿ ತೆರೆಗೆ ಬಂತು. ಈ ಸಿನಿಮಾದ ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ 10 ಲಕ್ಷ ಜನರು ಸೇರಿದ್ದರು. ಭಾರತೀಯ ರೈಲ್ವೇ ಈ ಕಾರ್ಯಕ್ರಮಕ್ಕೆ ಹತ್ತು ವಿಶೇಷ ರೈಲುಗಳನ್ನು ಬಿಟ್ಟಿತ್ತು. ಇದು ಒಂದು ವಿಶಿಷ್ಠ ದಾಖಲೆ ಆಗಿ ಉಳಿದುಕೊಂಡಿದೆ.
ಲಕ್ಕಿ ಸಂಖ್ಯೆ: ಜ್ಯೂ.ಎನ್ಟಿಆರ್ ಅವರ ಲಕ್ಕಿ ಸಂಖ್ಯೆ 9. ಅವರ ಬೈಕ್, ಕಾರ್ ಹಾಗೂ ಇತರ ವಾಹನಗಳ ನಂಬರ್ ಪ್ಲೇಟ್ಗೆ ಇದೇ ಸಂಖ್ಯೆ ಇದೆ ಅನ್ನೋದು ವಿಶೇಷ.
ಕನ್ನಡದ ಬಗ್ಗೆ ಗೌರವ: ಜ್ಯೂ.ಎನ್ಟಿಆರ್ ಅವರಿಗೆ ಕನ್ನಡದ ಬಗ್ಗೆ ವಿಶೇಷ ಗೌರವ ಇದೆ. ಅವರು ಸಮಯ ಸಿಕ್ಕಾಗಲೆಲ್ಲ ಕನ್ನಡದಲ್ಲಿ ಮಾತನಾಡುತ್ತಾರೆ. ಈ ಕಾರಣಕ್ಕೆ ಅವರಿಗೆ ಕರ್ನಾಟಕದಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ.