55ನೇ ವಸಂತಕ್ಕೆ ಕಾಲಿಟ್ಟ ಮಾಧುರಿ ದೀಕ್ಷಿತ್; ಜನ್ಮದಿನಕ್ಕೆ ಹರಿದುಬಂತು ಶುಭಾಶಯಗಳ ಮಹಾಪೂರ

ಮೇ 15ರಂದು ಮಾಧುರಿ ದೀಕ್ಷಿತ್​ ಅವರಿಗೆ ಜನ್ಮದಿನದ ಸಂಭ್ರಮ. ಅಭಿಮಾನಿಗಳು, ಸ್ನೇಹಿತರು, ಸೆಲೆಬ್ರಿಟಿಗಳು ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರುತ್ತಿದ್ದಾರೆ.

May 15, 2022 | 4:03 PM
TV9kannada Web Team

| Edited By: Madan Kumar

May 15, 2022 | 4:03 PM

70ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಮಾಧುರಿ ದೀಕ್ಷಿತ್ ಅಸಂಖ್ಯಾತ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. 1980ರ ದಶಕದಿಂದ ಇಂದಿನವರೆಗೂ ಅವರು ಬಣ್ಣದ ಲೋಕದಲ್ಲಿ ಆ್ಯಕ್ಟೀವ್​ ಆಗಿದ್ದಾರೆ. ಅವರ ಡ್ಯಾನ್ಸ್​ ಕಂಡು ಬೆರಗಾಗದವರೇ ಇಲ್ಲ. ಇಂದು (ಮೇ 15) ಅವರು 55ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಬರ್ತ್​ಡೇ ಪ್ರಯುಕ್ತ ಮಾಧುರಿ ದೀಕ್ಷಿತ್​ ಅವರಿಗೆ ಶುಭಾಶಯಗಳ ಮಹಾಪೂರ ಹರಿದು ಬಂದಿದೆ.

1 / 5
ವಯಸ್ಸು 55 ಆಗಿದ್ದರೂ ಮಾಧುರಿ ದೀಕ್ಷಿತ್​ ಅವರಿಗೆ ಇರುವ ಬೇಡಿಕೆ ಕಡಿಮೆ ಆಗಿಲ್ಲ. ಪ್ರತಿ ಚಿತ್ರಕ್ಕೆ ಉತ್ತಮ ಸಂಭಾವನೆ ಪಡೆಯುವ ಅವರು ಶ್ರೀಮಂತ ನಟಿ ಕೂಡ ಹೌದು. ಅವರ ಒಟ್ಟು ಆಸ್ತಿ ಮೌಲ್ಯ 250 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.

2 / 5
ಮಾಧುರಿ ದೀಕ್ಷಿತ್ ಪ್ರತಿ ಚಿತ್ರಕ್ಕೆ ಅವರು 4-5 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ರಿಯಾಲಿಟಿ ಶೋ ಜಡ್ಜ್​ ಆಗಲು ಪ್ರತಿ ಸೀಸನ್​ಗೆ 25 ಕೋಟಿ ರೂಪಾಯಿ ಹಾಗೂ ಒಂದು ಜಾಹೀರಾತಿನಲ್ಲಿ ನಟಿಸಲು 8 ಕೋಟಿ ರೂಪಾಯಿ ಪಡೆಯುತ್ತಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

3 / 5
ಇದು ಒಟಿಟಿ ಜಮಾನಾ. ಅನೇಕ ನಟ-ನಟಿಯರ ರೀತಿಯಲ್ಲಿ ಮಾಧುರಿ ದೀಕ್ಷಿತ್​ ಕೂಡ ವೆಬ್​ ಸರಣಿಯಲ್ಲಿ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದಾರೆ. ಈ ವರ್ಷ ಫೆಬ್ರವರಿಯಲ್ಲಿ ಬಿಡುಗಡೆಯಾದ ‘ದಿ ಫೇಮ್​ ಗೇಮ್​’ ವೆಬ್​ ಸರಣಿಯಲ್ಲಿ ನಟಿಸುವ ಮೂಲಕ ಅವರು ಒಟಿಟಿ ಜಗತ್ತಿಗೆ ಕಾಲಿಟ್ಟರು. ಅದು ನೆಟ್​ಫ್ಲಿಕ್ಸ್​ನಲ್ಲಿ ಪ್ರಸಾರ ಆಯಿತು.

4 / 5
‘ಅಮೇಜಾನ್​ ಪ್ರೈಂ ವಿಡಿಯೋ’ ನಿರ್ಮಾಣದ ‘ಮಜಾ ಮಾ’ ಸಿನಿಮಾದಲ್ಲಿ ಮಾಧುರಿ ದೀಕ್ಷಿತ್ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರು ಸಲಿಂಗಕಾಮಿ ಪಾತ್ರ ಮಾಡುತ್ತಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಈ ಬಗ್ಗೆ ಕೆಲವೆಡೆ ಸುದ್ದಿ ಪ್ರಕಟ ಆಗಿದೆ.

5 / 5

Follow us on

Most Read Stories

Click on your DTH Provider to Add TV9 Kannada