ಆಯುಷ್ಮಾನ್ ಖುರಾನಾ ಪತ್ನಿ ತಾಹಿರಾ ಕಶ್ಯಪ್ ದಿಟ್ಟೆ ಅಂತ ಕರೆಸಿಕೊಳ್ಳವುದಕ್ಕೆ ಹಲವಾರು ಕಾರಣಗಳಿವೆ!

ತಾಹಿರಾ 2018 ರಲ್ಲಿ ಅವರು ಸ್ತನದ ಕ್ಯಾನ್ಸರ್ ಗೆ ಈಡಾಗಿದ್ದರು. ಕಾಯಿಲೆ ವಿರುದ್ಧ ದಿಟ್ಟತನದಿಂದ ಹೋರಾಡಿ ಅದನ್ನು ಸೋಲಿಸಿದರು.

ತಾವು ಕೆಲಸ ಮಾಡುವ ಕ್ಷೇತ್ರದಲ್ಲಿ ಮೆರೆದ ಪ್ರತಿಭೆ ಮತ್ತು ಸಾಧನೆಗಳ ಮೂಲಕ ಜನ ಬೇರೆಯವರಿಗೆ ಪ್ರೇರಣೆಯಾಗುತ್ತಾರೆ. ಅದು ಕಲಾವಿದರೇ ಅಗಿರಬಹುದು ಅಥವಾ ಮತ್ತಿನ್ಯಾರಾದರೂ ಅಗಿರಬಹುದು. ಬಾಲಿವುಡ್ ಪ್ರತಿಭಾವಂತ ನಟ ಆಯುಷ್ಮಾನ್ ಖುರಾನಾ ಅವರ ಪತ್ನಿ ತಾಹಿರಾ ಕಶ್ಯಪ್ ಬಹಳಷ್ಟು ಜನಕ್ಕೆ ಗೊತ್ತಿರಲಾರರು. ಅದರೆ ಮೊನ್ನೆಯಷ್ಟೇ ಒಂದು ಬೋಲ್ಡ್ ಸ್ಟೇಟ್ಮೆಂಟ್ ನೀಡಿ ಜನರಲ್ಲಿ ಕುತೂಹಲ ಮೂಡಿಸಿದ್ದಾರೆ. ಪೋಷಕಾಂಶಗಳಿಗಾಗಿ ನನ್ನ ಎದೆಹಾಲನ್ನು ಕುಡಿದಿದ್ದರು ಆಯುಷ್ಮಾನ್ ಕುಡಿದಿದ್ದರು ಎಂದು ತಾಹಿರಾ ಹೇಳಿದ್ದರು. ಅವರು ದಿಟ್ಟೆ ಅನ್ನೋದು ಕೇವಲ ಅ ಹೇಳಿಕೆಯಿಂದ ಮಾತ್ರ ಗೊತ್ತಾಗುವಂಥದಲ್ಲ. ಅಸಿಗೆ ಈ ವಿಷಯವೂ ಬಹಳ ಜನರಿಗೆ ಗೊತ್ತಿಲ್ಲ.

ತಾಹಿರಾ 2018 ರಲ್ಲಿ ಅವರು ಸ್ತನದ ಕ್ಯಾನ್ಸರ್ ಗೆ ಈಡಾಗಿದ್ದರು. ಕಾಯಿಲೆ ವಿರುದ್ಧ ದಿಟ್ಟತನದಿಂದ ಹೋರಾಡಿ ಅದನ್ನು ಸೋಲಿಸಿದರು. ಅದಾದ ಮೇಲೆ ಮತ್ತೇ ಚಿತ್ರ ಸಾಹಿತಿಯಾಗಿ, ಕತೆಗಾತಿಯಾಗಿ ಇಂಡಸ್ಟ್ರೀಯಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಕಾಯಿಲೆಯಿಂದ ಬಳಲುತ್ತಿದ್ದಾಗ ಅವರು ತಲೆಗೂದಲು ಬೋಳಿಸ ಬೇಕಾಗಿತ್ತು.

ತಾಹಿರಾ ತಲೆ ಬೋಳಿಸಿಕೊಂಡಿದ್ದೂ ಅಲ್ಲದೆ ತಮ್ಮ ಇಮೇಜ್ಗಳನ್ನು ಸೋಷಿಯಲ್ ಮಿಡಿಯಾನಲ್ಲಿ ಶೇರ್ ಮಾಡಿದ್ದರು. ಬದುಕಿನಲ್ಲಿ ಸಕಾರಾತ್ಮಕ ಧೋರಣೆ ಹೊಂದಿರುವುದು ಮತ್ತು ನಮ್ಮನ್ನು ಪ್ರೀತಿಸಿಕೊಳ್ಳುವ ಬಗ್ಗೆ ಅವರು ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ.

ತಾಹಿರಾ ಎರಡು ಮಕ್ಕಳ ತಾಯಿಯೂ ಅಗಿದ್ದಾರೆ. ಅವರ ಫ್ಯಾಶನ್ ಸ್ಟೇಟ್ ಮೆಂಟ್ ಅದ್ಭುತವಾಗಿದೆ. ಎಲ್ಲ ಬಗೆಯ ಉಡುಗೆಗಳಲ್ಲೂ ಅವರು ಮಿನುಗುತ್ತಾರೆ. ಇಲ್ಲಿರುವ ಅವವ ಚಿತ್ರಗಳನ್ನು ನೋಡಿದರೆ ನಿಮಗೆ ಗೊತ್ತಾಗುತ್ತದೆ.

ಇದನ್ನೂ ಓದಿ:   ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್​ಗೆ ದೃಷ್ಟಿ ತೆಗೆದು ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿದ ಜೋಗತಿ ಮಂಜಮ್ಮ; ವಿಡಿಯೋ ಫುಲ್ ವೈರಲ್

Click on your DTH Provider to Add TV9 Kannada