ಮಂಗಳೂರಿನ ಅಪ್ಪು ಅಭಿಮಾನಿ ಮರಳಿನಲ್ಲಿ ಅಗಲಿದ ನಟನ ಚಿತ್ರ ಬರೆದು ಅಭಿಮಾನ ವ್ಯಕ್ತಪಡಿಸಿದರು

ಮಂಗಳೂರಿನ ಅಪ್ಪು ಅಭಿಮಾನಿ ಮರಳಿನಲ್ಲಿ ಅಗಲಿದ ನಟನ ಚಿತ್ರ ಬರೆದು ಅಭಿಮಾನ ವ್ಯಕ್ತಪಡಿಸಿದರು

TV9 Web
| Updated By: shruti hegde

Updated on: Nov 11, 2021 | 9:10 AM

ಮರಳಿನಲ್ಲಿ ಚಿತ್ರ ಬಿಡಿಸುವುದು ಸುಲಭವಲ್ಲ. ಮರಳು ಶಿಲ್ಪದಲ್ಲಿ ಪರಣಿತಿ ಸಾಧಿಸಬೇಕಾಗುತ್ತದೆ. ಅದಕ್ಕೆ ಜಾಣ್ಮೆ, ತಾಳ್ಮೆ ಮತ್ತು ವ್ಯವಧಾನವೂ ಬೇಕು.

ಪುನೀತ್ ರಾಜಕುಮಾರ ಅವರ ನಿಧನರಾದ ನಂತರ 11ನೇ ದಿನದ ಸಂಸ್ಕಾರವನ್ನು ಡಾ ರಾಜಕುಮಾರ ಕುಟುಂಬ ಸೋಮವಾರದಂದು ಬೆಂಗಳೂರಿನ ಕಂಠೀರವ ಸ್ಟುಡಿಯೋನಲ್ಲಿ ನೆರವೇರಿಸಿತು. ಆ ಸಂಸ್ಕಾರದ ವಿಧಿವಿಧಾನಗಳು ಪೂರ್ಣಗೊಂಡ ನಂತರ ಅಪ್ಪು ಅಭಿಮಾನಿಗಳಿಗೆ ಸ್ಟುಡಿಯೋದೊಳಗೆ ಬಿಡಲಾಯಿತು. ಅಪ್ಪು ಅವರ ಸಮಾಧಿಗೆ ಪ್ರತಿದಿನ ಸಾಗರೋಪಾದಿಯಲ್ಲಿ ಜನ ಹರಿದು ಬರುತ್ತಿದ್ದಾರೆ. ಇದು ನಿಲ್ಲಲಾರದು. ಅವರ ಖ್ಯಾತಿ ಎಷ್ಟೆತ್ತಿಂದು ಈಗ ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಅಪ್ಪು ಅಭಿಮಾನಿಗಳು ಬೇರೆ ಬೇರೆ ರೀತಿಯಲ್ಲಿ ತಮ್ಮ ಪ್ರೀತಿ ಮತ್ತು ಅಭಿಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ.

ಇಲ್ಲಿರುವ ವಿಡಿಯೋ ನೋಡಿ. ಮರಳಿನಲ್ಲಿ ಅಪ್ಪು ಅವರು ಚಿತ್ರವನ್ನು ರಚಿಸಲಾಗಿದೆ. ಇದಕ್ಕೆ ಮೊದಲು ಇಬ್ಬರು ಕಲಾವಿದರನ್ನು ನಿಮಗೆ ಪರಿಚಯಿಸಲಾಗಿತ್ತು. ಒಬ್ಬರು ಕೆಲವೇ ನಿಮಿಷಗಳಲ್ಲಿ ಅಪ್ಪು ಅವರ ತೈಲಚಿತ್ರವನ್ನು ರಚಿಸಿದ್ದರೆ ಮತ್ತೊಬ್ಬರು ಅರಳೀಮರದ ಎಲೆಯ ಮೇಲೆ ಪುನೀತ್ ರಾಜಕುಮಾರ್ ಅವರ ಚಿತ್ರ ಬಿಡಿಸಿದ್ದರು.

ಈ ವಿಡಿಯೋನಲ್ಲಿ ನಿಮಗೆ ಕಾಣುತ್ತಿರುವ ದೃಶ್ಯ ಮಂಗಳೂರಿನ ಪಣಂಬೂರ್ ಬೀಚ್​​ನದ್ದು. ಮರಳಿನಲ್ಲಿ ಚಿತ್ರ ಬಿಡಿಸುವುದು ಸುಲಭವಲ್ಲ. ಮರಳು ಶಿಲ್ಪದಲ್ಲಿ ಪರಣಿತಿ ಸಾಧಿಸಬೇಕಾಗುತ್ತದೆ. ಅದಕ್ಕೆ ಜಾಣ್ಮೆ, ತಾಳ್ಮೆ ಮತ್ತು ವ್ಯವಧಾನವೂ ಬೇಕು.

ಅಂದಹಾಗೆ, ಮರಳಿನಲ್ಲಿ ಚಿತ್ರ ಬಿಡಿಸಿರುವ ಕಲಾವಿದನನ್ನು ನೀವಿಲ್ಲಿ ನೋಟಬಹುದು. ಅವರ ಹೆಸರು ಹರೀಶ್ ಆಚಾರ್ಯ ಅಂತ. ಹರೀಶ್ ಅಪ್ಪು ಅವರ ಅಪ್ಪಟ ಅಭಿಮಾನಿ. ಹೀಗೆ ಮರಳಿನಲ್ಲಿ ಅವರ ಚಿತ್ರ ಬಿಡಿಸಿ ಅಗಲಿದ ನಟನಿಗೆ ಹರೀಶ್ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ಇದನ್ನೂ ಓದಿ:  ಪಟಾಕಿ ಹಚ್ಚೋದು ಬೇಡ, ದೇಹದ ಕ್ಯಾಲೋರಿ ಬರ್ನ್ ಮಾಡೋಣ; ದೀಪಾವಳಿಗೆ ಮನವಿ ಮಾಡಿದ್ದ ಪುನೀತ್ ಹಳೆಯ ವಿಡಿಯೋ ವೈರಲ್​