- Kannada News Photo gallery Deepika Padukone stylish look in Cannes Film Festival goes viral and actress talk about Indian Cinema see pics here
Cannes 2022: ಕಾನ್ ಫಿಲ್ಮ್ ಫೆಸ್ಟಿವಲ್ನಲ್ಲಿ ಮಿಂಚಿದ ದೀಪಿಕಾ; ಇಲ್ಲಿವೆ ಫೋಟೋಗಳು
Deepika Padukone in Cannes Film Festival 2022: ಕಾನ್ ಫಿಲ್ಮ್ ಫೆಸ್ಟಿವಲ್ನಲ್ಲಿ ಸಖತ್ ಕಲರ್ಫುಲ್ ಆಗಿ ಹೆಜ್ಜೆಹಾಕಿದ ದೀಪಿಕಾ ಪಡುಕೋಣೆ ಎಲ್ಲರ ಮನಗೆದ್ದಿದ್ದಾರೆ. ಕಪ್ಪು ವರ್ಣದ ದಿರಿಸಿನದಲ್ಲಿ ನಟಿ ಮಿಂಚುತ್ತಿರುವ ಮನಮೋಹಕ ಫೋಟೋಗಳೀಗ ವೈರಲ್ ಆಗಿವೆ.
Updated on:May 18, 2022 | 10:18 PM



ಉತ್ಸವದಲ್ಲಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರೊಂದಿಗೆ ದೀಪಿಕಾ ಪಡುಕೋಣೆ ವೇದಿಕೆ ಹಂಚಿಕೊಂಡಿದ್ದಾರೆ.

ಕಾರ್ಯಕ್ರಮದಲ್ಲಿ ವೃತ್ತಿ ಜೀವನದ ಆರಂಭದ ದಿನಗಳ ಬಗ್ಗೆ ಮಾತನಾಡಿದ್ದಾರೆ ದೀಪಿಕಾ.

ತಮ್ಮ ವಿಭಿನ್ನ ಬಗೆಯ ವಸ್ತ್ರ ವಿನ್ಯಾಸದಿಂದ ಗಮನ ಸೆಳೆದ ದೀಪಿಕಾ ವಿಶಿಷ್ಟ ವಿನ್ಯಾಸದ ಆಭರಣ ಹಾಗೂ ಸರಳ ಮೇಕಪ್ನಿಂದ ಫ್ಯಾಶನ್ ಪ್ರಿಯರ ಮನಗೆದ್ದಿದ್ದಾರೆ.

ಚಿತ್ರೋತ್ಸವದಲ್ಲಿ ದೀಪಿಕಾ ‘ಘೂಮರ್’ ಹಾಡಿಗೆ ದನಿಯಾಗುತ್ತಾ ಹೆಜ್ಜೆಹಾಕಿದ್ಧಾರೆ. ಅವರಿಗೆ ತಮನ್ನಾ ಭಾಟಿಯಾ, ಪೂಜಾ ಹೆಗ್ಡೆ ಮೊದಲಾದವರು ಜತೆಯಾಗಿದ್ದಾರೆ.

ಇದೇ ಮೊದಲ ಬಾರಿಗೆ ಕಾನ್ ಚಿತ್ರೋತ್ಸವದಲ್ಲಿ ತೀರ್ಪುಗಾರರಾಗಿ ದೀಪಿಕಾ ಕಾಣಿಸಿಕೊಳ್ಳುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ದೀಪಿಕಾ ಗೆಟಪ್ ಸದ್ಯ ವೈರಲ್ ಆಗಿದೆ. ಅಲ್ಲದೇ ದೀಪಿಕಾ ಭಾರತವನ್ನು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರತಿನಿಧಿಸುತ್ತಿರುವುದು ಹೆಮ್ಮೆಯ ವಿಚಾರ ಎಂದು ಅಭಿಮಾನಿಗಳು ಕಾಮೆಂಟ್ ಮೂಲಕ ಅನಿಸಿಕೆ ಹಂಚಿಕೊಳ್ಳುತ್ತಿದ್ದಾರೆ.
Published On - 9:13 pm, Wed, 18 May 22




