- Kannada News Photo gallery Cannes 2022: Beast actress Pooja Hegde pink gown for 75th Cannes film festival red carpet
ಗುಲಾಬಿ ಬಣ್ಣದ ಗೌನ್ ಧರಿಸಿ ಕಾನ್ ಚಿತ್ರೋತ್ಸವದಲ್ಲಿ ಮಿಂಚಿದ ನಟಿ ಪೂಜಾ ಹೆಗ್ಡೆ; ಫೋಟೋ ವೈರಲ್
Cannes 2022 | Pooja Hegde: 75ನೇ ವರ್ಷದ ಕಾನ್ ಚಿತ್ರೋತ್ಸವದಲ್ಲಿ ನಟಿ ಪೂಜಾ ಹೆಗ್ಡೆ ಮಿಂಚಿದ್ದಾರೆ. ಅವರ ಫೋಟೋಗಳನ್ನು ಕಂಡು ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.
Updated on: May 19, 2022 | 12:56 PM

Cannes 2022: Beast actress Pooja Hegde pink gown for 75th Cannes film festival red carpet

Cannes 2022: Beast actress Pooja Hegde pink gown for 75th Cannes film festival red carpet

ಸೋಶಿಯಲ್ ಮೀಡಿಯಾದಲ್ಲಿ ಪೂಜಾ ಹೆಗ್ಡೆ ಅವರು ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಭಿಮಾನಿಗಳ ವಲಯದಲ್ಲಿ ಈ ಫೋಟೋಸ್ ಸಖತ್ ವೈರಲ್ ಆಗಿವೆ. ಪೂಜಾ ಹೆಗ್ಡೆ ಅವರ ಫ್ಯಾನ್ಸ್ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಬಗೆಬಗೆಯಲ್ಲಿ ಕಮೆಂಟ್ ಮಾಡುವ ಮೂಲಕ ತಮ್ಮ ನೆಚ್ಚಿನ ನಟಿಯನ್ನು ಕೊಂಡಾಡಿದ್ದಾರೆ.

ಬಹುಭಾಷೆಯಲ್ಲಿ ಪೂಜಾ ಹೆಗ್ಡೆ ಫೇಮಸ್ ಆಗಿದ್ದಾರೆ. ತೆಲುಗು, ತಮಿಳು, ಹಿಂದಿ ಭಾಷೆಯ ಚಿತ್ರಗಳಲ್ಲಿ ನಟಿಸುವ ಮೂಲಕ ದೇಶಾದ್ಯಂತ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಈ ವರ್ಷ ಪೂಜಾ ಹೆಗ್ಡೆ ನಟಿಸಿದ ‘ರಾಧೆ ಶ್ಯಾಮ್’, ‘ಬೀಸ್ಟ್’, ‘ಆಚಾರ್ಯ’ ಚಿತ್ರಗಳು ರಿಲೀಸ್ ಆಗಿವೆ.

ಪ್ರಸ್ತುತ ಸಲ್ಮಾನ್ ಖಾನ್ ಜೊತೆ ‘ಕಭಿ ಈದ್ ಕಭಿ ದಿವಾಲಿ’ ಸಿನಿಮಾದ ಕೆಲಸಗಳಲ್ಲಿ ಪೂಜಾ ಹೆಗ್ಡೆ ಬ್ಯುಸಿ ಆಗಿದ್ದಾರೆ. ಇತ್ತೀಚೆಗಷ್ಟೇ ಈ ಚಿತ್ರಕ್ಕೆ ಶೂಟಿಂಗ್ ಆರಂಭ ಆಗಿದೆ. ಕಾನ್ ಚಿತ್ರೋತ್ಸವದಲ್ಲಿ ಭಾಗವಹಿಸುವ ಸಲುವಾಗಿ ಅವರು ಶೂಟಿಂಗ್ನಿಂದ ಬ್ರೇಕ್ ಪಡೆದುಕೊಂಡಿದ್ದಾರೆ.




