Deepika Padukone: ಕಾನ್ ಫಿಲ್ಮ್​​ ಫೆಸ್ಟಿವಲ್ ಆರಂಭ; ಜ್ಯೂರಿ ಆಗಿ ಕಾಣಿಸಿಕೊಂಡ ದೀಪಿಕಾ ಪಡುಕೋಣೆ

Cannes Film Festival 2022: ಚಿತ್ರರಂಗದಲ್ಲಿ ನಟಿ ದೀಪಿಕಾ ಪಡುಕೋಣೆ ಅವರ ಸಾಧನೆ ದೊಡ್ಡದು. ಈಗ ಅವರು ಕಾನ್​ ಸಿನಿಮೋತ್ಸವದಲ್ಲಿ ಜ್ಯೂರಿ ಆಗಿ ಪಾಲ್ಗೊಂಡಿರುವುದು ಅವರ ಕೀರ್ತಿಯನ್ನು ಹೆಚ್ಚಿಸಿದೆ.

Deepika Padukone: ಕಾನ್ ಫಿಲ್ಮ್​​ ಫೆಸ್ಟಿವಲ್ ಆರಂಭ; ಜ್ಯೂರಿ ಆಗಿ ಕಾಣಿಸಿಕೊಂಡ ದೀಪಿಕಾ ಪಡುಕೋಣೆ
ಕಾನ್ ಫಿಲ್ಮ್​​ ಫೆಸ್ಟಿವಲ್ ಜ್ಯೂರಿ ದೀಪಿಕಾ ಪಡುಕೋಣೆ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: May 17, 2022 | 1:21 PM

ಫ್ರಾನ್ಸ್​​ನಲ್ಲಿ ಇಂದಿನಿಂದ (ಮೇ 17) ಕಾನ್​ ಫಿಲ್ಮ್​ ಫೆಸ್ಟಿವಲ್ (Cannes Film Festival 2022)​ ಆರಂಭ ಆಗಿದೆ. ಮೇ 28ರ ವರೆಗೆ ನಡೆಯುವ ಈ ಕಾರ್ಯಕ್ರಮಕ್ಕೆ ವಿಶ್ವದ ನಾನಾ ಕಡೆಗಳಿಂದ ಕಲಾವಿದರು ಆಗಮಿಸುತ್ತಿದ್ದಾರೆ. ವಿಶೇಷ ಎಂದರೆ ಈ ಬಾರಿ ಕನ್ನಡತಿ, ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ ಅವರು (Deepika Padukone) ಜ್ಯೂರಿ ಆಗಿ ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ಅವರು ಈ ಫಿಲ್ಮ್​ ಫೆಸ್ಟಿವಲ್​ನಲ್ಲಿ ಕಾಣಿಸಿಕೊಂಡ ಫೋಟೋಗಳು ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಿನಿಮೋತ್ಸವ ಆರಂಭಕ್ಕೂ ಮುನ್ನ ಜ್ಯೂರಿಗಳಿಗಾಗಿ ಔತಣಕೂಟ ಏರ್ಪಡಿಸಲಾಗುತ್ತದೆ. ಈ ಔತಣಕೂಟದಲ್ಲಿ ದೀಪಿಕಾ ಭಾಗಿ ಆಗಿದ್ದಾರೆ. ಅವರ ಡ್ರೆಸ್ ಎಲ್ಲರ ಗಮನ ಸೆಳೆದಿದೆ.

ಚಿತ್ರರಂಗದಲ್ಲಿ ನಟಿ ದೀಪಿಕಾ ಪಡುಕೋಣೆ ಅವರ ಸಾಧನೆ ದೊಡ್ಡದು. ಭಿನ್ನ ವಿಭಿನ್ನ ಸಿನಿಮಾ ಮತ್ತು ಪಾತ್ರಗಳ ಮೂಲಕ ಅವರು ಜನರನ್ನು ರಂಜಿಸಿದ್ದಾರೆ. ಕನ್ನಡದಿಂದ ಬಾಲಿವುಡ್​ಗೆ ಕಾಲಿಟ್ಟ ಅವರು ನಂತರ ಹಾಲಿವುಡ್​ನಲ್ಲಿ ನಟಿಸಿ ಸೈ ಎನಿಸಿಕೊಂಡರು. ಅನೇಕ ಪ್ರಶಸ್ತಿಗಳು ಅವರ ಮುಡಿಗೇರಿವೆ. ಈಗ ಅವರು ಕಾನ್​ ಸಿನಿಮೋತ್ಸವದಲ್ಲಿ ಜ್ಯೂರಿ ಆಗಿ ಪಾಲ್ಗೊಂಡಿರುವುದು ಅವರ ಕೀರ್ತಿಯನ್ನು ಹೆಚ್ಚಿಸಿದೆ.

ಇದನ್ನೂ ಓದಿ
Image
‘ಸೆಟ್​ನಲ್ಲಿ ಇಟ್ಟಿಗೆ ಎಸೆದರೂ ನಾನು ದೀಪಿಕಾಗೆ ಕಿಸ್ ಮಾಡುತ್ತಲೇ ಇದ್ದೆ’; ಅಚ್ಚರಿಯ ವಿಚಾರ ಬಿಚ್ಚಿಟ್ಟ ರಣವೀರ್
Image
ಪ್ರಭಾಸ್-ದೀಪಿಕಾ ಸಿನಿಮಾಗೆ ಮತ್ತೋರ್ವ ನಟಿಯ ಎಂಟ್ರಿ; ಸಿಕ್ತು ವಿಶೇಷ ಸ್ವಾಗತ
Image
ರಣಬೀರ್​​-ಆಲಿಯಾ ಮದುವೆಗೆ ದೀಪಿಕಾ, ಕತ್ರಿನಾ ಗಿಫ್ಟ್​ ಏನು? ದಂಪತಿಗೆ ಕೋಟ್ಯಂತರ ರೂ. ಬೆಲೆಯ ಉಡುಗೊರೆ
Image
ಮಾಜಿ ಪ್ರಿಯಕರ ರಣಬೀರ್​ ಕಪೂರ್​ ಮದುವೆ ಸಮಯದಲ್ಲಿ ಮುಂಬೈ ತೊರೆದ ದೀಪಿಕಾ; ಸಖತ್​ ಟ್ರೋಲ್​

ಈ ಹಿಂದೆ ಅನೇಕ ಬಾರಿ ಸೌಂದರ್ಯ ವರ್ಧಕ ಕಂಪನಿಗಳ ಪ್ರಚಾರ ರಾಯಭಾರಿಯಾಗಿ ದೀಪಿಕಾ ಪಡುಕೋಣೆ ಅವರು ಕಾನ್​ ಚಿತ್ರೋತ್ಸವದಲ್ಲಿ ಭಾಗಿ ಆಗಿದ್ದುಂಟು. ಆದರೆ ಇದೇ ಮೊದಲ ಬಾರಿಗೆ ಅವರು ಜ್ಯೂರಿ ತಂಡದ ಸದಸ್ಯರಾಗಿದ್ದಾರೆ. ಇದು ಅವರ ಅಭಿಮಾನಿಗಳಿಗೆ ಖುಷಿ ನೀಡಿದೆ.

ಕಾನ್​ ಚಿತ್ರೋತ್ಸವಕ್ಕೆ ಜಗತ್ತಿನಾದ್ಯಂತ ಮನ್ನಣೆ ಇದೆ. ಈ ಸಿನಿಮೋತ್ಸವದಲ್ಲಿ ತಮ್ಮ ಚಿತ್ರ ಪ್ರದರ್ಶನ ಆಗಬೇಕು ಎಂದು ಎಷ್ಟೋ ನಿರ್ದೇಶಕರು, ಕಲಾವಿದರು, ನಿರ್ಮಾಪಕರು, ತಂತ್ರಜ್ಞರು ಕನಸು ಕಾಣುತ್ತಾರೆ. ಈ ಬಾರಿ 21 ಸಿನಿಮಾಗಳು ಸ್ಪರ್ಧಿಸುತ್ತಿವೆ. ಈ ಹಿಂದೆ ಭಾರತದ ನಟಿಯರಾದ ಐಶ್ವರ್ಯಾ ರೈ ಬಚ್ಚನ್​, ವಿದ್ಯಾ ಬಾಲನ್, ಶರ್ಮಿಳಾ ಟಾಗೋರ್​, ನಂದಿತಾ ದಾಸ್​ ಅವರು ಕಾನ್​ ಚಿತ್ರೋತ್ಸವದ ಜ್ಯೂರಿಗಳಾಗಿ ಕೆಲಸ ಮಾಡಿದ್ದರು. ಈಗ ಆ ನಟಿಯರ ಸಾಲಿಗೆ ದೀಪಿಕಾ ಪಡುಕೋಣೆ ಕೂಡ ಸೇರ್ಪಡೆ ಆಗಿದ್ದಾರೆ.

ಈ ಬಾರಿ ಕಾನ್​ ಚಿತ್ರೋತ್ಸವದ ಜ್ಯೂರಿ ತಂಡದಲ್ಲಿ ದೀಪಿಕಾ ಪಡುಕೋಣೆ ಜೊತೆ ‘ಐರನ್​ ಮ್ಯಾನ್​ 3’ ಸಿನಿಮಾ ಖ್ಯಾತಿಯ ನೂಮಿ ರಪಾಸ್​, ‘ಶೆರ್ಲಾಕ್​ ಹೋಮ್ಸ್​: ಎ ಗೇಮ್​ ಆಫ್​ ಶಾಡೋಸ್​’ ಖ್ಯಾತಿಯ ರೆಬಿಕಾ ಹಾಲ್, ಅಸ್ಗರ್​ ಫರ್ಹಾದಿ, ಜಾಸ್ಮಿನ್​ ತ್ರಿಂಕಾ, ಜೆಫ್​ ನಿಕೋಲ್ಸ್​​ ಮುಂತಾದವರು ಇದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ