ಪವನ್​​ ಕಲ್ಯಾಣ್​ ಜತೆ ಸಿನಿಮಾ ಮಾಡಲಿದ್ದಾರೆ ರಾಜಮೌಳಿ; ಸೆಟ್ಟೇರೋದು ಯಾವಾಗ?

TV9kannada Web Team

TV9kannada Web Team | Edited By: Rajesh Duggumane

Updated on: May 31, 2022 | 1:31 PM

ಈ ಮೊದಲೇ ಪವನ್​ ಕಲ್ಯಾಣ್​ ಹಾಗೂ ರಾಜಮೌಳಿ ಇಬ್ಬರೂ ಒಟ್ಟಾಗಿ ಕೆಲಸ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದರು. ಆದರೆ, ಕಾರಣಾಂತರಗಳಿಂದ ಅದು ಸಾಧ್ಯವಾಗಿರಲಿಲ್ಲ.

ಪವನ್​​ ಕಲ್ಯಾಣ್​ ಜತೆ ಸಿನಿಮಾ ಮಾಡಲಿದ್ದಾರೆ ರಾಜಮೌಳಿ; ಸೆಟ್ಟೇರೋದು ಯಾವಾಗ?
ಪವನ್ ಕಲ್ಯಾಣ್-ರಾಜಮೌಳಿ

ನಟ ಪವನ್ ಕಲ್ಯಾಣ್ (Pawan Kalyan) ಹಾಗೂ ನಿರ್ದೇಶಕ ಎಸ್​.ಎಸ್​. ರಾಜಮೌಳಿ ಅವರು (SS Rajamouli) ಟಾಲಿವುಡ್​ನಲ್ಲಿ ಗುರುತಿಸಿಕೊಂಡಿದ್ದಾರೆ. ಇಬ್ಬರೂ ದೊಡ್ಡ ಮಟ್ಟದ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಸ್ಟಾರ್ ನಟರ ಚಿತ್ರಕ್ಕೆ ಆ್ಯಕ್ಷನ್​ ಕಟ್ ಹೇಳಿ ರಾಜಮೌಳಿ ಭೇಷ್ ಎನಿಸಿಕೊಂಡರೆ, ದೊಡ್ಡದೊಡ್ಡ ನಿರ್ದೇಶಕರ ಜತೆ ಕೆಲಸ ಮಾಡಿ ಪವನ್​ ಕಲ್ಯಾಣ್ ಗೆಲುವು ಕಂಡಿದ್ದಾರೆ. ಆದರೆ, ಇಬ್ಬರಿಗೂ ಒಟ್ಟಾಗಿ ಕೆಲಸ ಮಾಡುವ ಭಾಗ್ಯ ಸಿಕ್ಕಿರಲಿಲ್ಲ. ಈಗ ಟಾಲಿವುಡ್​ ಅಂಗಳದಿಂದ ಈ ಬಗ್ಗೆ ವದಂತಿ ಒಂದು ಹುಟ್ಟಿಕೊಂಡಿದೆ. ಇಬ್ಬರೂ ಒಟ್ಟಾಗಿ ಕೆಲಸ ಮಾಡುವ ದಿನ ಹತ್ತಿರವಾಗಿದೆ ಎನ್ನುವ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಯಾಗಿದ್ದಾರೆ.

ಈ ಮೊದಲೇ ಪವನ್​ ಕಲ್ಯಾಣ್​ ಹಾಗೂ ರಾಜಮೌಳಿ ಇಬ್ಬರೂ ಒಟ್ಟಾಗಿ ಕೆಲಸ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದರು. ಆದರೆ, ಕಾರಣಾಂತರಗಳಿಂದ ಅದು ಸಾಧ್ಯವಾಗಿರಲಿಲ್ಲ. ರಾಜಮೌಳಿ ಅವರು ಪವನ್​ ಕಲ್ಯಾಣ್​ಗೆ ಕಥೆ ಕೂಡ ಹೇಳಿದ್ದರು. ಆದರೆ, ಕಾರಣಾಂತರಗಳಿಂದ ಆ ಪ್ರಾಜೆಕ್ಟ್​ ಫೈನಲ್ ಆಗಲೇ ಇಲ್ಲ. ನಂತರ ಈ ಸುದ್ದಿ ತಣ್ಣಗಾಯಿತು. ಈಗ ಈ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಬೆಂಕಿ ಇಲ್ಲದೆ ಹೊಗೆ ಆಡುವುದಿಲ್ಲ ಅನ್ನೋದು ಗಾಸಿಪ್​ ಮಂದಿಯ ಅಭಿಪ್ರಾಯ.

ತಾಜಾ ಸುದ್ದಿ

ಸದ್ಯ, ಮಹೇಶ್ ಬಾಬು ಜತೆ ಕೈ ಜೋಡಿಸೋಕೆ ರಾಜಮೌಳಿ ರೆಡಿ ಆಗಿದ್ದಾರೆ. 2023ರಲ್ಲಿ ಇವರ ಕಾಂಬಿನೇಷನ್ ಚಿತ್ರ ಸೆಟ್ಟೇರಲಿದೆ. ಪವನ್ ಕಲ್ಯಾಣ್ ಕೂಡ ಬೇರೆಬೇರೆ ಪ್ರಾಜೆಕ್ಟ್​ಗಳಲ್ಲಿ ಬ್ಯುಸಿ ಆಗಿದ್ದಾರೆ. ಅವರು ಒಪ್ಪಿಕೊಂಡ ಪ್ರಾಜೆಕ್ಟ್ ಪೂರ್ಣಗೊಳಿಸಲು ಇನ್ನೂ ಎರಡು ವರ್ಷ ಬೇಕು. ರಾಜಮೌಳಿ ಅವರು ಕೂಡ 2024ರ ಬಳಿಕವೇ ಫ್ರೀ ಆಗಲಿದ್ದಾರೆ. ಹೀಗಾಗಿ ಇವರ ಕಾಂಬಿನೇಷನ್​ ಸಿನಿಮಾ 2025ರಲ್ಲಿ ಸೆಟ್ಟೇರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಚಿತ್ರಕ್ಕೆ ಬಂಡವಾಳ ಹೂಡಲು ನಿರ್ಮಾಣ ಸಂಸ್ಥೆ ಕೂಡ ಫೈನಲ್ ಆಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ರಾಜಮೌಳಿ ಜತೆ ಕೆಲಸ ಮಾಡಿದ್ದಕ್ಕೆ ರಾಮ್​ಚರಣ್ ಹೊಸ​ ಚಿತ್ರಕ್ಕೆ ಸೋಲು?; ಆತಂಕದಲ್ಲಿ ಜ್ಯೂ.ಎನ್​ಟಿಆರ್​ ಫ್ಯಾನ್ಸ್

‘ಆರ್​ಆರ್​ಆರ್’ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದೆ. ಈ ಚಿತ್ರದಿಂದ ರಾಜಮೌಳಿ ಅವರ ಮಾರುಕಟ್ಟೆ ಹಿರಿದಾಗಿದೆ. ಪವನ್ ಕಲ್ಯಾಣ್ ನಟನೆಯ ‘ಭೀಮ್ಲಾ ನಾಯಕ್​’ ಈ ವರ್ಷ ತೆರೆಗೆ ಬಂತು. ಈ ಚಿತ್ರ ಕೂಡ ಯಶಸ್ಸು ಗಳಿಸಿತು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada