ಒಟಿಟಿಯಲ್ಲಿ ‘RRR’ ವೀಕ್ಷಿಸಲು ಹೆಚ್ಚುವರಿ ಹಣ ನೀಡಬೇಕಿಲ್ಲ; ನಿರ್ಧಾರ ಬದಲಿಸಿ ಸಿಹಿ ಸುದ್ದಿ ನೀಡಿದ ಜೀ5

RRR OTT Release: ಪೇ ಪರ್​ ವ್ಯೂ ಮಾದರಿಯಲ್ಲಿ ಸಿನಿಮಾ ಪ್ರಸಾರ ಮಾಡಲು ತೀರ್ಮಾನಿಸಿದ್ದ ಜೀ5 ಒಟಿಟಿ ಸಂಸ್ಥೆ ಈಗ ತನ್ನ ನಿರ್ಧಾರ ಬದಲಿಸಿದೆ. ಇದು ಚಂದಾದಾರರಿಗೆ ಖುಷಿ ನೀಡಿದೆ.

ಒಟಿಟಿಯಲ್ಲಿ ‘RRR’ ವೀಕ್ಷಿಸಲು ಹೆಚ್ಚುವರಿ ಹಣ ನೀಡಬೇಕಿಲ್ಲ; ನಿರ್ಧಾರ ಬದಲಿಸಿ ಸಿಹಿ ಸುದ್ದಿ ನೀಡಿದ ಜೀ5
ಆರ್​ಆರ್​ಆರ್
Follow us
TV9 Web
| Updated By: ಮದನ್​ ಕುಮಾರ್​

Updated on: May 19, 2022 | 4:12 PM

ಟಾಲಿವುಡ್​ ಹೀರೋಗಳಾದ ರಾಮ್​ ಚರಣ್​ ಹಾಗೂ ಜ್ಯೂ. ಎನ್​ಟಿಆರ್ ಮುಖ್ಯ ಭೂಮಿಕೆ ನಿಭಾಯಿಸಿದ ‘ಆರ್​ಆರ್​ಆರ್​’ ಸಿನಿಮಾ (RRR Movie) ಚಿತ್ರಮಂದಿರದಲ್ಲಿ ಬಹುದೊಡ್ಡ ಗೆಲುವು ಕಂಡಿದೆ. ಈ ಸಿನಿಮಾ ಮಾಡಿದ ದಾಖಲೆಗಳು ಅನೇಕ. ಈಗ ‘ಆರ್​ಆರ್​ಆರ್​’ ಚಿತ್ರ ಒಟಿಟಿಯಲ್ಲಿ ರಿಲೀಸ್​ ಆಗುತ್ತಿದೆ. ಮೇ 20ರಂದು ಪ್ರೇಕ್ಷಕರು ಮನೆಯಲ್ಲೇ ಕುಳಿತು ಈ ಸಿನಿಮಾ ವೀಕ್ಷಿಸಬಹುದು. ಜೀ5 ಒಟಿಟಿ (OTT Platform) ಮೂಲಕ ಈ ಚಿತ್ರ ಪ್ರಸಾರ ಆಗಲಿದೆ. ಈ ಮೊದಲು ಒಟಿಟಿ ಪ್ರಸಾರಕ್ಕೆ ಒಂದಿಷ್ಟು ಷರತ್ತು ಹಾಕಲಾಗಿತ್ತು. ಈಗಾಗಲೇ ಜೀ5 ಚಂದಾದಾರರಾಗಿದ್ದರೂ ಕೂಡ ಹೆಚ್ಚುವರಿ ಹಣ ನೀಡಿ ‘ಆರ್​ಆರ್​ಆರ್​’ ಸಿನಿಮಾವನ್ನು ವೀಕ್ಷಿಸಬೇಕು ಎಂದು ಹೇಳಲಾಗಿತ್ತು. ಆದರೆ ಆ ನಿರ್ಧಾರದಿಂದ ಜೀ5 (Zee5) ಹಿಂದೆ ಸರಿದಿದೆ. ಜನರಿಂದ ತೀವ್ರ ಒತ್ತಾಯ ಕೇಳಿಬಂದ ಹಿನ್ನೆಲೆಯಲ್ಲಿ ಹೊಸ ಸುದ್ದಿ ನೀಡಲಾಗಿದೆ. ಈಗಾಗಲೇ ಸಬ್​ಸ್ಕ್ರಿಪ್ಷನ್​ ಹೊಂದಿರುವವರು ಯಾವುದೇ ಹೆಚ್ಚುವರಿ ಹಣ ನೀಡದೇ ‘ಆರ್​ಆರ್​ಆರ್’ ಸಿನಿಮಾವನ್ನು ನೋಡಬಹುದು ಎಂದು ತಿಳಿಸಿದೆ. ಈ ಸುದ್ದಿ ಕೇಳಿ ಫ್ಯಾನ್ಸ್​ ಖುಷಿ​ ಆಗಿದ್ದಾರೆ.

‘ಆರ್​ಆರ್​ಆರ್​’ ಸಿನಿಮಾದ ಅಸಲಿ ಮಜಾ ಇರುವುದೇ ಅದರ ಮೇಕಿಂಗ್​ನಲ್ಲಿ. ಅದ್ದೂರಿಯಾಗಿ ಮೂಡಿಬಂದಿರುವ ದೃಶ್ಯಗಳನ್ನು ಚಿತ್ರಮಂದಿರದಲ್ಲಿ ನೋಡಿ ಪ್ರೇಕ್ಷಕರು ಎಂಜಾಯ್​ ಮಾಡಿದ್ದಾರೆ. ಈಗ ಒಟಿಟಿಯಲ್ಲೂ 4K ರೆಸೊಲ್ಯೂಷನ್​ ಲಭ್ಯವಾಗುತ್ತಿದೆ. 5.1 ಸೌಂಡ್​ ಕೂಡ ಇರಲಿದೆ. ಇದು ಒಟಿಟಿ ಪ್ರೇಕ್ಷಕರಿಗೆ ಇನ್ನಷ್ಟು ಥ್ರಿಲ್​ ನೀಡಿದೆ. ಮೇ 19ರ ಮಧ್ಯರಾತ್ರಿಯಿಂದಲೇ ಜೀ5ನಲ್ಲಿ ‘ಆರ್​ಆರ್​ಆರ್​’ ಪ್ರಸಾರ ಆರಂಭ ಆಗಲಿದೆ.

ಇದನ್ನೂ ಓದಿ
Image
ರಾಜಮೌಳಿ ಜತೆ ಕೆಲಸ ಮಾಡಿದ್ದಕ್ಕೆ ರಾಮ್​ಚರಣ್ ಹೊಸ​ ಚಿತ್ರಕ್ಕೆ ಸೋಲು?; ಆತಂಕದಲ್ಲಿ ಜ್ಯೂ.ಎನ್​ಟಿಆರ್​ ಫ್ಯಾನ್ಸ್
Image
‘ಆರ್​ಆರ್​ಆರ್​’ ಚಿತ್ರದಲ್ಲಿ ಮಲ್ಲಿ ಅಮ್ಮನಾಗಿ ಕಾಣಿಸಿಕೊಂಡವರು ಇವರೇ ನೋಡಿ
Image
ಸೋಲಿಲ್ಲದ ಸರದಾರ ರಾಜಮೌಳಿ ಗೆಲುವಿನ ಗುಟ್ಟೇನು? ಇಲ್ಲಿವೆ ‘ಆರ್​ಆರ್​ಆರ್​’ ನಿರ್ದೇಶಕನ 5 ಸೂತ್ರಗಳು
Image
ಹೇಗಿದೆ ರಾಮ್​ ಚರಣ್​ ಹೊಸ ಕಾರು? ಇದರ ಬೆಲೆ ಬರೋಬ್ಬರಿ 4 ಕೋಟಿ ರೂಪಾಯಿ

ಇದನ್ನೂ ಓದಿ: ‘ಆರ್​ಆರ್​ಆರ್​’ ನಿರ್ದೇಶಕ ರಾಜಮೌಳಿ ಮನೆಗೆ ಬಂತು ಹೊಸ ಕಾರು; ಇದರ ಬೆಲೆ ಎಷ್ಟು?

ರಾಜಮೌಳಿ ನಿರ್ದೇಶನದಲ್ಲಿ ಮೂಡಿಬಂದ ‘ಆರ್​ಆರ್​ಆರ್​’ ಸಿನಿಮಾ ಗಲ್ಲಾಪೆಟ್ಟಿಯಲ್ಲಿ ಸಾವಿರಾರು ಕೋಟಿ ರೂಪಾಯಿ ಬಾಚಿಕೊಂಡಿದೆ. 3ಡಿ ಅವತರಣಿಕೆಯಲ್ಲೂ ಈ ಸಿನಿಮಾ ತೆರೆಕಂಡಿತ್ತು. ರಾಮ್​ ಚರಣ್​ ಮತ್ತು ಜ್ಯೂ. ಎನ್​ಟಿಆರ್​ ಅವರ ವೃತ್ತಿಜೀವನಕ್ಕೆ ಈ ಸಿನಿಮಾದಿಂದ ದೊಡ್ಡ ಮೈಲೇಜ್​ ಸಿಕ್ಕಿದೆ. ನಟಿ ಆಲಿಯಾ ಭಟ್​ ಈ ಚಿತ್ರದ ಮೂಲಕ ಮೊದಲ ಬಾರಿಗೆ ದಕ್ಷಿಣ ಭಾರತಕ್ಕೆ ಕಾಲಿಟ್ಟರು. ರಾಮ್​ ಚರಣ್​ಗೆ ಜೋಡಿಯಾಗಿ ಅವರು ಕಾಣಿಸಿಕೊಂಡರು. ಇನ್ನು ಅಜಯ್​ ದೇವಗನ್​ ಅವರ ಪಾತ್ರಕ್ಕೆ ಸ್ಕ್ರೀನ್​ ಸ್ಪೇಸ್​ ಕಡಿಮೆ ಆಗಿದ್ದರೂ ಕೂಡ ಕಥೆಗೆ ತಿರುವು ನೀಡುವಂತಹ ಪಾತ್ರದಲ್ಲಿ ಅವರು ನಟಿಸಿದ್ದಾರೆ. ಹಾಗಾಗಿ ಉತ್ತರ ಭಾರತದಲ್ಲಿ ಹಿಂದಿ ಪ್ರೇಕ್ಷಕರು ಈ ಚಿತ್ರವನ್ನು ಮುಗಿಬಿದ್ದು ನೋಡಿದರು. ನೆಟ್​ಫ್ಲಿಕ್ಸ್​ ಮೂಲಕ ‘ಆರ್​ಆರ್​ಆರ್​’ ಹಿಂದಿ ವರ್ಷನ್​ ಪ್ರಸಾರ ಆಗಲಿದೆ.

ಜ್ಯೂ. ಎನ್​ಟಿಆರ್​ ಜನ್ಮದಿನಕ್ಕೆ ಒಟಿಟಿ ರಿಲೀಸ್​:

ಮೇ 20ರಂದು ಜ್ಯೂ. ಎನ್​ಟಿಆರ್​ ಜನ್ಮದಿನ. ಆ ಪ್ರಯುಕ್ತವೇ ‘ಆರ್​ಆರ್​ಆರ್​’ ಸಿನಿಮಾ ಒಟಿಟಿಯಲ್ಲಿ ಪ್ರಸಾರ ಆರಂಭಿಸುತ್ತಿರುವುದಕ್ಕೆ ಫ್ಯಾನ್ಸ್​ ಖುಷಿ ಆಗಿದ್ದಾರೆ. ‘ಆರ್​ಆರ್​ಆರ್​’ ಸಿನಿಮಾದಲ್ಲಿ ಕೊಮರಮ್​ ಭೀಮ್​ ಎಂಬ ಪಾತ್ರದಲ್ಲಿ ಜ್ಯೂ. ಎನ್​ಟಿಆರ್​ ನಟಿಸಿದ್ದಾರೆ. ಅವರ ಜೊತೆ ಅಲ್ಲುರಿ ಸೀತಾರಾಮ ರಾಜು ಪಾತ್ರವನ್ನು ರಾಮ್​ ಚರಣ್​ ನಿಭಾಯಿಸಿದ್ದಾರೆ. ಇಬ್ಬರ ಪಾತ್ರಗಳು ಕೂಡ ಈ ಸಿನಿಮಾದಲ್ಲಿ ಸಖತ್​ ಹೈಲೈಟ್​ ಆಗಿದೆ. ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಅಬ್ಬರಿಸಿದ ರೀತಿ ಕಂಡು ಬಾಲಿವುಡ್​ ಮಂದಿ ಕೂಡ ನಿಬ್ಬೆರಗಾಗಿದ್ದಾರೆ. ರಾಜಮೌಳಿ ಸೋಲಿಲ್ಲದ ಸರದಾರ ಎಂಬುದು ಈ ಸಿನಿಮಾ ಮೂಲಕ ಮತೊಮ್ಮೆ ಸಾಬೀತಾಗಿದೆ. ‘ಆರ್​ಆರ್​ಆರ್​’ ಚಿತ್ರಕ್ಕೆ ಬಂಡವಾಳ ಹೂಡಿದ ‘ಡಿವಿವಿ ಎಂಟರ್​ಟೇನ್​ಮೆಂಟ್​’ ಸಂಸ್ಥೆ ಭರ್ಜರಿ ಲಾಭ ಮಾಡಿಕೊಂಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ