ಅಬ್ಬಬ್ಬಾ ಸೆಟ್​ನಲ್ಲೇ ಶೂಟ್ ಆದ ದೃಶ್ಯಕ್ಕೆ ಇಷ್ಟೊಂದು ಗ್ರಾಫಿಕ್ಸ್​; ಇಲ್ಲಿದೆ ‘ಆರ್​ಆರ್​ಆರ್’ ಸಿನಿಮಾದ ಅಸಲಿ ವಿಡಿಯೋ

ಡಿವಿವಿ ದಾನಯ್ಯ ಅವರು ‘ಆರ್​ಆರ್​ಆರ್’ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಅವರು ಈ ಚಿತ್ರಕ್ಕಾಗಿ 500 ಕೋಟಿ ರೂಪಾಯಿಗೂ ಅಧಿಕ ಹಣ ಖರ್ಚು ಮಾಡಿದ್ದಾರೆ. ನೀರಿನಂತೆ ಹಣ ಹೆಚ್ಚು ಖರ್ಚಾಗಿದ್ದರಿಂದ ಪ್ರತಿ ದೃಶ್ಯಗಳೂ ಅದ್ಭುತವಾಗಿ ಮೂಡಿ ಬಂದಿದೆ.

ಅಬ್ಬಬ್ಬಾ ಸೆಟ್​ನಲ್ಲೇ ಶೂಟ್ ಆದ ದೃಶ್ಯಕ್ಕೆ ಇಷ್ಟೊಂದು ಗ್ರಾಫಿಕ್ಸ್​; ಇಲ್ಲಿದೆ ‘ಆರ್​ಆರ್​ಆರ್’ ಸಿನಿಮಾದ ಅಸಲಿ ವಿಡಿಯೋ
ಆರ್​ಆರ್​ಆರ್ ಸಿನಿಮಾ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: May 31, 2022 | 6:49 AM

‘ಆರ್​ಆರ್​ಆರ್’ ಸಿನಿಮಾ (RRR Movie) ಸಾವಿರಾರು ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಸಿನಿಮಾದಿಂದ ನಿರ್ದೇಶಕ ರಾಜಮೌಳಿ ಅವರು ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ರಾಮ್ ಚರಣ್ (Ram Charan) ಹಾಗೂ ಜ್ಯೂ.ಎನ್​ಟಿಆರ್ ಅವರು ಈ ಚಿತ್ರದಿಂದ ಗೆದ್ದು ಬೀಗಿದ್ದಾರೆ. ಈ ಚಿತ್ರದಲ್ಲಿ ಹಲವು ಮೈನವಿರೇಳಿಸುವ ದೃಶ್ಯಗಳಿವೆ. ಇದನ್ನು ಹೇಗೆ ಶೂಟ್ ಮಾಡಿರಬಹುದು ಎಂಬ ಪ್ರಶ್ನೆ ಅಭಿಮಾನಿಗಳಲ್ಲಿತ್ತು. ಇದಕ್ಕೆ ಉತ್ತರವಾಗಿ ಈಗ ‘ಆರ್​ಆರ್​ಆರ್’ ಚಿತ್ರದ (RRR Movie) ಮೇಕಿಂಗ್ ವಿಡಿಯೋ ರಿಲೀಸ್ ಆಗಿದೆ. ಇದನ್ನು ನೋಡಿದ ಫ್ಯಾನ್ಸ್ ಅವಾಕ್ಕಾಗಿದ್ದಾರೆ.

ಡಿವಿವಿ ದಾನಯ್ಯ ಅವರು ‘ಆರ್​ಆರ್​ಆರ್’ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಅವರು ಈ ಚಿತ್ರಕ್ಕಾಗಿ 500 ಕೋಟಿ ರೂಪಾಯಿಗೂ ಅಧಿಕ ಹಣ ಖರ್ಚು ಮಾಡಿದ್ದಾರೆ. ನೀರಿನಂತೆ ಹಣ ಹೆಚ್ಚು ಖರ್ಚಾಗಿದ್ದರಿಂದ ಪ್ರತಿ ದೃಶ್ಯಗಳೂ ಅದ್ಭುತವಾಗಿ ಮೂಡಿ ಬಂದಿದೆ. ಆದರೆ, ಪ್ರತಿ ದೃಶ್ಯದ ಹಿಂದಿರುವ ಶ್ರಮ ಎಷ್ಟು ಎಂಬುದನ್ನು ನೋಡಿದರೆ ನಿಜಕ್ಕೂ ಅಚ್ಚರಿ ಆಗಲೇಬೇಕು.

ಇದನ್ನೂ ಓದಿ: ಒಟಿಟಿಗೆ ಬಂದ ನಂತರ ಥಿಯೇಟರ್​ನಲ್ಲಿ ರೀ-ರಿಲೀಸ್ ಆಗುತ್ತಿದೆ ‘ಆರ್​ಆರ್​ಆರ್​’ ಸಿನಿಮಾ

ಇದನ್ನೂ ಓದಿ
Image
ಜೀ5ನಲ್ಲಿ ‘ದಿ ಕಾಶ್ಮೀರ್​ ಫೈಲ್ಸ್​’ ಜತೆ ಪ್ರಸಾರಕ್ಕೆ ಸಜ್ಜಾದ ಕನ್ನಡದ ‘ತಲೆದಂಡ’, ‘ಮುಗಿಲ್​ ಪೇಟೆ’ ಸಿನಿಮಾಗಳು
Image
ಒಟಿಟಿಗೆ ಕಾಲಿಟ್ಟ ‘ಮಗಳು ಜಾನಕಿ’ ಖ್ಯಾತಿಯ ಗಾನವಿ ಲಕ್ಷ್ಮಣ್ ನಟನೆಯ ‘ಭಾವಚಿತ್ರ’ ಸಿನಿಮಾ 
Image
ಮತ್ತೆ ಹಳೇ ಚಾರ್ಮ್​ ಪಡೆದ ಶಾರುಖ್​ ಖಾನ್​; ‘ಪಠಾಣ್​’ ಚಿತ್ರದ ಒಟಿಟಿ ಪ್ರಸಾರ ಹಕ್ಕು 200 ಕೋಟಿ ರೂ.ಗೆ ಸೇಲ್​?
Image
‘ಕೆಜಿಎಫ್​ 2’ ಎದುರು ಸೋತ ‘ಬೀಸ್ಟ್​’ ಚಿತ್ರಕ್ಕೆ ಈಗ ಉಳಿದಿದ್ದು ಒಟಿಟಿ ಆಯ್ಕೆ ಮಾತ್ರ; ಯಾವಾಗ ರಿಲೀಸ್​?

ಕೋಮರಂ ಭೀಮ್ (ಜ್ಯೂ.ಎನ್​ಟಿಆರ್​) ಹಾಗೂ ಅಲ್ಲೂರಿ ಸೀತಾರಾಮರಾಜು (ರಾಮ್​ ಚರಣ್​) ಭೇಟಿ ಆಗುವ ದೃಶ್ಯ ಸಿನಿಮಾದ ಆರಂಭದಲ್ಲೇ ಬರುತ್ತದೆ. ಈ ದೃಶ್ಯ ನಡೆಯೋದು ಒಂದು ಸೇತುವೆ ಮೇಲೆ. ಒಂದು ಕಡೆ ಸೇತುವೆ ಮೇಲೆ ಚಲಿಸುತ್ತಿರುವ ಟ್ರೇನ್​ಗೆ ಬೆಂಕಿ ಬಿದ್ದಿರುತ್ತದೆ. ಮತ್ತೊಂದು ಕಡೆ ಅದೇ ಸೇತುವೆ ಕೆಳ ಭಾಗದಲ್ಲಿ ಬಾಲಕನೋರ್ವ ತೆಪ್ಪದ ಮೇಲೆ ಹೋಗುತ್ತಿರುತ್ತಾನೆ. ಬಾಲಕನ ರಕ್ಷಣೆಗೆ ಕೋಮರಂ ಭೀಮ್ ಹಾಗೂ ಅಲ್ಲೂರಿ ಸೀತಾರಾಮರಾಜು ಒಂದಾಗುತ್ತಾರೆ. ಈ ದೃಶ್ಯಕ್ಕೆ ಎಲ್ಲ ಕಡೆಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿತ್ತು.

ಈ ದೃಶ್ಯವನ್ನು ಸಂಪೂರ್ಣವಾಗಿ ಶೂಟ್ ಮಾಡಿದು ಒಂದು ಸೆಟ್​ನಲ್ಲಿ. ಆದರೆ, ಇದಕ್ಕೆ ಬಳಕೆ ಆದ ಗ್ರಾಫಿಕ್ಸ್ ಮಾತ್ರ ಅತ್ಯುತ್ತಮ ಗುಣಮಟ್ಟದ್ದು. ಈ ಕಾರಣಕ್ಕೆ ಆ ದೃಶ್ಯ ಅಷ್ಟು ಅದ್ಭುತವಾಗಿ ಮೂಡಿ ಬಂದಿದೆ. ವಿದೇಶದ ಗ್ರಾಫಿಕ್ಸ್​ ಸಂಸ್ಥೆಗಳು ಇದಕ್ಕಾಗಿ ಕೆಲಸ ಮಾಡಿವೆ. ಈಗ ಹಂಚಿಕೊಂಡಿರುವ ಮೇಕಿಂಗ್ ವಿಡಿಯೋದಲ್ಲಿ ಆ ಬಗ್ಗೆ ಮಾಹಿತಿ ನೀಡಲಾಗಿದೆ. ಈ ವಿಡಿಯೋ ನೋಡಿದ ಫ್ಯಾನ್ಸ್ ನಿಜಕ್ಕೂ ಅಚ್ಚರಿಗೊಂಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ