AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೃತಿ ಶೆಟ್ಟಿಗೆ ಪ್ರ್ಯಾಂಕ್ ಮಾಡಿದ ಆ್ಯಂಕರ್​; ನಿಲ್ಲಲೇ ಇಲ್ಲ ನಟಿಯ ಕಣ್ಣೀರು

ಇದೊಂದು ಪ್ರ್ಯಾಂಕ್ ವಿಡಿಯೋ ಎಂದು ಕೃತಿಗೆ ಹೇಳಾಯಿತು. ಆದರೆ, ಅವರಿಗೆ ಆಗಲೇ ದುಃಖ ಉಮ್ಮಳಿಸಿ ಬಂದಿತ್ತು. ಅವರು ಗಳಗಳನೆ ಕಣ್ಣೀರು ಹಾಕಿದರು.

ಕೃತಿ ಶೆಟ್ಟಿಗೆ ಪ್ರ್ಯಾಂಕ್ ಮಾಡಿದ ಆ್ಯಂಕರ್​; ನಿಲ್ಲಲೇ ಇಲ್ಲ ನಟಿಯ ಕಣ್ಣೀರು
ಕೃತಿ ಶೆಟ್ಟಿ (Credit: Galatta Tamil )
TV9 Web
| Updated By: ರಾಜೇಶ್ ದುಗ್ಗುಮನೆ|

Updated on:May 31, 2022 | 8:47 AM

Share

ಶೋ ಅಥವಾ ಸಂದರ್ಶನದ ಸಂದರ್ಭದಲ್ಲಿ ಸೆಲೆಬ್ರಿಟಿಗಳಿ ಪ್ರ್ಯಾಂಕ್ ಮಾಡೋದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಕೆಲವರು ಇದನ್ನು ಹಗುರವಾಗಿ ಸ್ವೀಕರಿಸಿದರೆ ಇನ್ನೂ ಕೆಲವರು ಇದನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಪ್ರ್ಯಾಂಕ್ ವಿಡಿಯೋದಿಂದ (Prank Video) ಕೆಲವೊಮ್ಮೆ ಶೋನಿಂದ ಸ್ಟಾರ್​​ಗಳು ಅರ್ಧಕ್ಕೆ ಎದ್ದು ಹೋಗಿದ್ದೂ ಇದೆ. ಇನ್ನೂ ಕೆಲವರು ಕಣ್ಣೀರು ಹಾಕುತ್ತಾರೆ. ಈಗ ನಟಿ ಕೃತಿ ಶೆಟ್ಟಿ ಅವರಿಗೆ (Krithi Shetty) ಪ್ರ್ಯಾಂಕ್ ಮಾಡಲಾಗಿದೆ. ಆರಂಭದಲ್ಲಿ ಏನಾಗುತ್ತಿದೆ ಎಂಬುದನ್ನು ಅರ್ಥೈಸಿಕೊಳ್ಳಲು ಅವರಿಗೆ ಸಾಧ್ಯವಾಗಿಲ್ಲ. ಆ ಬಳಿಕ ಅವರು ಕಣ್ಣೀರು ಹಾಕಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ. ಕೆಲವರು ನಟಿಗೆ ಪ್ರ್ಯಾಂಕ್ ಮಾಡಿದ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ.

‘ಉಪ್ಪೇನಾ’ ಸಿನಿಮಾ ಮೂಲಕ ಕೃತಿ ಶೆಟ್ಟಿ ಖ್ಯಾತಿ ಹೆಚ್ಚಿಸಿಕೊಂಡರು. ಆ ಬಳಿಕ ಅವರಿಗೆ ಭರಪೂರ ಆಫರ್​​ಗಳು ಬರೋಕೆ ಆರಂಭವಾದವು. ‘ಶ್ಯಾಮ್​ ಸಿಂಗ ರಾಯ್​’ ಚಿತ್ರದಿಂದ ಕೃತಿ ಬೇಡಿಕೆ ಮತ್ತಷ್ಟು ಹೆಚ್ಚಿತು. ಸದ್ಯ ಅವರು ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಬೇರೆಬೇರೆ ಭಾಷೆಗಳಿಂದ ಅವರಿಗೆ ಆಫರ್​ಗಳು ಬರುತ್ತಿವೆ.

ತಮಿಳು ಶೋ ‘ವಡಾ ಪೋಚೆ’ದಲ್ಲಿ ಕೃತಿ ಭಾಗಿ ಆಗಿದ್ದರು. ಆರಂಭದಲ್ಲಿ ಎಲ್ಲವೂ ಸರಿಯಾಗಿಯೇ ಇತ್ತು. ಇಬ್ಬರು ಆ್ಯಂಕರ್​ಗಳು ಅವರಿಗೆ ಪ್ರಶ್ನೆ ಕೇಳೋಕೆ ಆರಂಭಿಸಿದರು. ಈ ಪ್ರಶ್ನೆಗೆ ನಟಿ ಉತ್ತರ ಕೊಡುತ್ತಾ ಹೋದರು. ಆದರೆ, ಸಮಯ ಕಳೆದಂತೆ ಇಬ್ಬರು ಆ್ಯಂಕರ್​ಗಳ ಮಧ್ಯೆ ಭಿನ್ನಾಭಿಪ್ರಾಯ ಉಂಟಾಯಿತು. ಯಾರು ಪ್ರಶ್ನೆ ಕೇಳಬೇಕು ಎನ್ನುವ ಬಗ್ಗೆ ಚರ್ಚೆಗಳು ಆರಂಭವಾದವು. ಇಬ್ಬರು ಆ್ಯಂಕರ್​ಗಳ ನಡುವೆ ಜಗಳ ಏರ್ಪಡುವ ಮಟ್ಟಕ್ಕೆ ಇದು ಬೆಳೆಯಿತು. ಇದು ತಾರಕಕ್ಕೇರಿದ್ದನ್ನು ನೋಡಿ ಕೃತಿಗೆ ಮುಜುಗರವಾಗಿದೆ. ಅವರಿಗೆ ಏನು ಮಾಡಬೇಕು ಎಂಬುದೇ ತಿಳಿಯಲಿಲ್ಲ.

ಇದನ್ನೂ ಓದಿ
Image
ಕೃತಿ ಶೆಟ್ಟಿಗೆ ರಶ್ಮಿಕಾ ಮಂದಣ್ಣ ರೀತಿ ಆಗುವ ಕನಸು; ದೊಡ್ಡ ಹೀರೋಗಳಿಂದ ಬಂದ ಉತ್ತರದಿಂದ ನಿರಾಸೆ?
Image
ಅಪರೂಪದ ಸಾಧನೆ ಮಾಡಿದ ರಶ್ಮಿಕಾ ಮಂದಣ್ಣ; ಇವರಿಗೆ ಸರಿಸಾಟಿ ಯಾರು?
Image
Rashmika Mandanna: ರಶ್ಮಿಕಾ ಮಂದಣ್ಣ ರಿಜೆಕ್ಟ್ ಮಾಡಿದ್ದ ಈ ಸಿನಿಮಾಗಳು ಸೋತಿದ್ದು ಹಾಗೀಗಲ್ಲ
Image
ಶೀಘ್ರವೇ ಆರಂಭಗೊಳ್ಳಲಿದೆ ‘ಕಾಫಿ ವಿತ್ ಕರಣ್’ ಶೋ; ಅತಿಥಿಯಾಗಿ ಬರಲಿದ್ದಾರೆ ರಶ್ಮಿಕಾ ಮಂದಣ್ಣ

ಇದನ್ನೂ ಓದಿ: ಕೃತಿ ಶೆಟ್ಟಿಗೆ ರಶ್ಮಿಕಾ ಮಂದಣ್ಣ ರೀತಿ ಆಗುವ ಕನಸು; ದೊಡ್ಡ ಹೀರೋಗಳಿಂದ ಬಂದ ಉತ್ತರದಿಂದ ನಿರಾಸೆ?

ಇದೊಂದು ಪ್ರ್ಯಾಂಕ್ ವಿಡಿಯೋ ಎಂದು ಕೃತಿಗೆ ಹೇಳಾಯಿತು. ಆದರೆ, ಅವರಿಗೆ ಆಗಲೇ ದುಃಖ ಉಮ್ಮಳಿಸಿ ಬಂದಿತ್ತು. ಅವರು ಗಳಗಳನೆ ಕಣ್ಣೀರು ಹಾಕಿದರು. ಈ ವಿಡಿಯೋಗೆ ನಾನಾ ರೀತಿಯ ಕಮೆಂಟ್​ಗಳು ಬರುತ್ತಿವೆ. ಕೆಲವರು ನಟಿಗೆ ಈ ರೀತಿ ಪ್ರ್ಯಾಂಕ್ ಮಾಡಿದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಈ ವಿಡಿಯೋ ನೋಡಿ ಎಂಜಾಯ್ ಮಾಡಿದ್ದಾರೆ. ಸದ್ಯ ಈ ವಿಡಿಯೋ 20 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:30 am, Tue, 31 May 22

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ