ಕೃತಿ ಶೆಟ್ಟಿಗೆ ರಶ್ಮಿಕಾ ಮಂದಣ್ಣ ರೀತಿ ಆಗುವ ಕನಸು; ದೊಡ್ಡ ಹೀರೋಗಳಿಂದ ಬಂದ ಉತ್ತರದಿಂದ ನಿರಾಸೆ?

ಕೃತಿ ಶೆಟ್ಟಿಗೆ ರಶ್ಮಿಕಾ ಮಂದಣ್ಣ ರೀತಿ ಆಗುವ ಕನಸು; ದೊಡ್ಡ ಹೀರೋಗಳಿಂದ ಬಂದ ಉತ್ತರದಿಂದ ನಿರಾಸೆ?
ರಶ್ಮಿಕಾ-ಕೃತಿ

ಗ್ಲಾಮರ್​ ಲುಕ್​ನಲ್ಲಿ ಕಾಣಿಸಿಕೊಳ್ಳಲು ಕೃತಿ ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ. ಇನ್ನು ಅವರು ನಟನೆಯಲ್ಲಿ ಸಂಪೂರ್ಣವಾಗಿ ಪಳಗಿಲ್ಲ. ಇದರಿಂದ ದೊಡ್ಡ ಹೀರೋಗಳು ಎರಡು ಬಾರಿ ಆಲೋಚಿಸುವಂತೆ ಆಗಿದೆ. ‘

TV9kannada Web Team

| Edited By: Rajesh Duggumane

May 07, 2022 | 3:58 PM

ನಟಿ ಕೃತಿ ಶೆಟ್ಟಿ (Krithi Shetty) ಅವರು ದಕ್ಷಿಣ ಭಾರತದ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ. ‘ಉಪ್ಪೇನಾ’ ಸಿನಿಮಾದಿಂದ (Uppena Movie) ದೊಡ್ಡ ಹಿಟ್ ಪಡೆದ ಅವರ ಕೈಯಲ್ಲಿ ಈಗ ಹಲವು ಸಿನಿಮಾಗಳಿವೆ. ಆದರೆ, ದೊಡ್ಡ ದೊಡ್ಡ ಸ್ಟಾರ್​ ನಟರ ಜತೆ ತೆರೆಹಂಚಿಕೊಳ್ಳುವ ಅವಕಾಶ ಅವರಿಗೆ ಒದಗಿ ಬಂದಿಲ್ಲ. ರಶ್ಮಿಕಾ ಮಂದಣ್ಣ (Rashmika Mandanna) ಟಾಲಿವುಡ್​ಗೆ ಕಾಲಿಟ್ಟ ಕೆಲವೇ ವರ್ಷಗಳಲ್ಲಿ ಸ್ಟಾರ್​ ಹೀರೋಗಳ ಜತೆ ತೆರೆ ಹಂಚಿಕೊಂಡರು. ಕೃತಿ ಶೆಟ್ಟಿಗೂ ಹೀಗೊಂದು ಆಸೆ ಇದೆ. ಆದರೆ, ಈ ಆಸೆ ಸದ್ಯಕ್ಕೆ ಈಡೇರುವ ಲಕ್ಷಣ ಗೋಚರವಾಗುತ್ತಿಲ್ಲ. ಕೆಲ ಸ್ಟಾರ್​ಗಳು ನೀಡಿದ ಉತ್ತರವೂ ಅವರಿಗೆ ಶಾಕ್​ ನೀಡಿದೆ ಎನ್ನಲಾಗುತ್ತಿದೆ.

ಕೃತಿ ಶೆಟ್ಟಿ ನಟನೆಯ ‘ಶ್ಯಾಮ್​ ಸಿಂಗ ರಾಯ್​’ ಚಿತ್ರದಿಂದ ಕೃತಿ ಖ್ಯಾತಿ ಹೆಚ್ಚಿದೆ. ಅವರು ನಾಗ ಚೈತನ್ಯ ನಟನೆಯ ‘ಬಂಗಾರ್ರಾಜು’ ಚಿತ್ರದಲ್ಲಿ ಬಣ್ಣ ಹಚ್ಚಿದ್ದರು. ಈ ಸಿನಿಮಾ ತಕ್ಕ ಮಟ್ಟಿಗೆ ಗೆಲುವು ಕಂಡಿತು. ಆದರೆ, ಅವರ ವೃತ್ತಿ ಜೀವನದಲ್ಲಿ ಈ ಸಿನಿಮಾಗಳು ದೊಡ್ಡ ಬದಲಾವಣೆ ತಂದಿಲ್ಲ. ಹೀಗಾಗಿ, ತಮ್ಮ ಮ್ಯಾನೇಜರ್​ಗೆ ಕೃತಿ ಒತ್ತಡ ಹೇರುತ್ತಿದ್ದಾರೆ. ದೊಡ್ಡ ಸ್ಟಾರ್​ ಸಿನಿಮಾಗಳನ್ನು ತರುವಂತೆ ಕೃತಿ ಅವರು ಸೂಚನೆ ನೀಡಿದ್ದಾರೆ. ಆದರೆ, ಹೀರೋಗಳು ಇದಕ್ಕೆ ಅಷ್ಟಾಗಿ ಆಸಕ್ತಿ ತೋರಿಲ್ಲ.

ಗ್ಲಾಮರ್​ ಲುಕ್​ನಲ್ಲಿ ಕಾಣಿಸಿಕೊಳ್ಳಲು ಕೃತಿ ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ. ಇನ್ನು ಅವರು ನಟನೆಯಲ್ಲಿ ಸಂಪೂರ್ಣವಾಗಿ ಪಳಗಿಲ್ಲ. ಇದರಿಂದ ದೊಡ್ಡ ಹೀರೋಗಳು ಎರಡು ಬಾರಿ ಆಲೋಚಿಸುವಂತೆ ಆಗಿದೆ. ‘ಕೃತಿಗೆ ಸಂಪೂರ್ಣ ಗ್ಲಾಮರ್ ಲುಕ್ ತೊಡಲು ಸೂಚಿಸಿ’ ಎಂದು ಕೆಲ ನಟರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಆದರೆ, ಇದಕ್ಕೆ ಅವರು ಸದ್ಯದ ಮಟ್ಟಿಗಂತೂ ರೆಡಿ ಇಲ್ಲ. ಒಳ್ಳೆಯ ಪಾತ್ರ ಸಿಕ್ಕರೆ ಮಾತ್ರ ನಟಿಸುವ ಆಲೋಚನೆಯಲ್ಲಿ ಅವರಿದ್ದಾರೆ.

ಇದನ್ನೂ ಓದಿ

ಗ್ಲಾಮರ್ ಲುಕ್​ನಲ್ಲಿ ಕಾಣಿಸಿಕೊಳ್ಳಲು ರೆಡಿ ಇಲ್ಲದಿದ್ದರೆ ಕೀರ್ತಿ ಸುರೇಶ್ ರೀತಿಯಲ್ಲಿ ನಟನೆ ತೋರುವಂತೆ ಕೆಲ ಹೀರೋಗಳು ಕಿವಿಮಾತು ಹೇಳಿದ್ದಾರೆ ಎನ್ನಲಾಗಿದೆ. ಆದರೆ, ನಟನೆ ಎನ್ನುವುದು ಏಕಾಏಕಿ ಬರುವಂತಹದ್ದಲ್ಲ. ಹೀಗಾಗಿ, ಕೃತಿ ದೊಡ್ಡ ಹೀರೋಗಳ ಜತೆ ನಟಿಸಲು ಇನ್ನಷ್ಟು ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ.

Follow us on

Related Stories

Most Read Stories

Click on your DTH Provider to Add TV9 Kannada