ಪ್ರೀತಿಸಿದ ಹುಡುಗಿ ರಿಜೆಕ್ಟ್ ಮಾಡಿದ್ದಕ್ಕೆ ತಲೆ ಬೋಳಿಸಿಕೊಂಡಿದ್ದ ಆಮಿರ್ ಖಾನ್; ಹಳೆ ಘಟನೆ ನೆನೆದ ನಟ
‘ಲಾಲ್ ಸಿಂಗ್ ಚಡ್ಡಾ’ ಚಿತ್ರದಲ್ಲಿ ಆಮಿರ್ ಭಿನ್ನ ಗೆಟಪ್ ತಾಳಿದ್ದಾರೆ. ಹಾಲಿವುಡ್ನ ‘ಫಾರೆಸ್ಟ್ ಗಂಪ್’ ಚಿತ್ರದ ರಿಮೇಕ್ ಇದಾಗಿದೆ. ಈ ಸಿನಿಮಾದಿಂದ ಅವರು ಗೆಲುವಿನ ನಿರೀಕ್ಷೆಯಲ್ಲಿ ಇದ್ದಾರೆ.
ಆಮಿರ್ ಖಾನ್ ಅವರು (Aamir Khan) ಸಿನಿಮಾ ಇಂಡಸ್ಟ್ರಿಯಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ದೊಡ್ಡ ಬಜೆಟ್ನ ಸಿನಿಮಾಗಳಿಗೆ ಹೀರೋ ಆಗುವ ಅವರ ಚಿತ್ರಗಳು ಒಳ್ಳೆಯ ಕಲೆಕ್ಷನ್ ಮಾಡುತ್ತದೆ. ಆದರೆ, ಇತ್ತೀಚೆಗೆ ಆಮಿರ್ ಸಿನಿಮಾಗಳು ಗೆಲುವಿನ ಟ್ರ್ಯಾಕ್ನಲ್ಲಿ ಇಲ್ಲ. ‘ಲಾಲ್ ಸಿಂಗ್ ಚಡ್ಡಾ’ ಚಿತ್ರದಿಂದ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ ಆಮಿರ್. ಈಗ ಅವರು ಅಚ್ಚರಿಯ ವಿಚಾರ ಒಂದನ್ನು ಹೇಳಿಕೊಂಡಿದ್ದಾರೆ. ಹುಡುಗಿ ಪ್ರೀತಿ ರಿಜೆಕ್ಟ್ ಮಾಡಿದಳು ಎನ್ನುವ ಕಾರಣಕ್ಕೆ ಆಮಿರ್ ಖಾನ್ ತಲೆಬೋಳಿಸಿಕೊಂಡಿದ್ದರು. ಈ ವಿಚಾರ ಕೇಳಿ ಫ್ಯಾನ್ಸ್ ಅಚ್ಚರಿಗೊಂಡಿದ್ದಾರೆ.
‘ಲಾಲ್ ಸಿಂಗ್ ಚಡ್ಡಾ’ ಚಿತ್ರದಲ್ಲಿ ಆಮಿರ್ ಭಿನ್ನ ಗೆಟಪ್ ತಾಳಿದ್ದಾರೆ. ಹಾಲಿವುಡ್ನ ‘ಫಾರೆಸ್ಟ್ ಗಂಪ್’ ಚಿತ್ರದ ರಿಮೇಕ್ ಇದಾಗಿದೆ. ಈ ಸಿನಿಮಾದಿಂದ ಅವರು ಗೆಲುವಿನ ನಿರೀಕ್ಷೆಯಲ್ಲಿ ಇದ್ದಾರೆ. 1984ರಲ್ಲಿ ತೆರೆಗೆ ಬಂದ ‘ಹೋಳಿ’ ಚಿತ್ರದಿಂದ ಆಮಿರ್ ಹೀರೋ ಆಗಿ ಬಣ್ಣದ ಬದುಕು ಆರಂಭಿಸಿದರು. ಈ ಸಿನಿಮಾದಲ್ಲಿ ಅವರು ಶಾರ್ಟ್ ಹೇರ್ ಗೆಟಪ್ನಲ್ಲಿ ಕಾಣಿಸಿಕೊಂಡಿದ್ದರು. ಎಲ್ಲರೂ ಸಿನಿಮಾಗಾಗಿಯೇ ಆಮಿರ್ ಈ ಗೆಟಪ್ ತಾಳಿದ್ದಾರೆ ಎಂದು ಭಾವಿಸಿದ್ದರು. ಆದರೆ, ಅಸಲಿ ವಿಚಾರ ಅಲ್ಲಿ ಬೇರೆಯೇ ಇತ್ತು.
‘ನನ್ನ ಸಿನಿಮಾಗೋಸ್ಕರ ನಾನು ತಲೆ ಶೇವ್ ಮಾಡಿಕೊಂಡಿದ್ದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಅದಕ್ಕೆ ಬೇರೆಯದೇ ಕಾರಣ ಇತ್ತು. ನಾನು ಪ್ರೀತಿಸಿದ ಹುಡುಗಿಯನ್ನು ಕಳೆದುಕೊಂಡೆ. ನನ್ನನ್ನು ಪ್ರೀತಿ ಮಾಡುತ್ತಿಲ್ಲ ಎಂದು ಅವಳು ಹೇಳಿದಳು. ನನಗೆ ಬೇಸರವಾಯಿತು. ಹೀಗಾಗಿ, ನಾನು ತಲೆಬೋಳಿಸಿಕೊಂಡೆ. ಈ ಸಂದರ್ಭದಲ್ಲಿ ನಿರ್ದೇಶಕ ಕೇತನ್ ಅವರು ಸಿನಿಮಾ ಬಗ್ಗೆ ಮಾತನಾಡಲು ಕರೆದರು. ನಿಮ್ಮ ಕೂದಲು ಎಲ್ಲಿ ಹೋಯಿತು ಎಂದು ಅವರು ಪ್ರಶ್ನೆ ಮಾಡಿದರು’ ಎಂದಿದ್ದಾರೆ ಆಮಿರ್ ಖಾನ್.
‘ಅದು ಪ್ರಬುದ್ಧ ನಡೆಯಾಗಿರಲಿಲ್ಲ. ನಾನು ಒಂದು ಹುಡುಗಿಯನ್ನು ಪ್ರೀತಿಸುತ್ತೇನೆ ಮತ್ತು ಅದು ಅವಳಿಗೆ ಫೀಲ್ ಆಗಲಿಲ್ಲ ಎಂದಾಗ ಅವರು ತೆಗೆದುಕೊಳ್ಳುವ ನಿರ್ಧಾರವನ್ನು ನಾನು ಸಂಪೂರ್ಣವಾಗಿ ಗೌರವಿಸುತ್ತೇನೆ. ಆದಿನ ಆ ಹುಡುಗಿ ತೆಗೆದುಕೊಂಡ ನಿರ್ಧರದ ಬಗ್ಗೆ ನನಗೆ ಖುಷಿ ಇದೆ’ ಎನ್ನುತ್ತಾರೆ ಆಮಿರ್ ಖಾನ್.
ಭಾನುವಾರ (ಮೇ 29) ನಡೆದ ಐಪಿಎಲ್ ಫೈನಲ್ ಪಂದ್ಯದ ವೇಳೆ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ಚಂದನ್ ಅದ್ವೈತ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಹಾಲಿವುಡ್ನ ‘ಫಾರೆಸ್ಟ್ ಗಂಪ್’ ಚಿತ್ರದ ಹಿಂದಿ ರಿಮೇಕ್ ಆಗಿ ಈ ಸಿನಿಮಾ ಮೂಡಿಬಂದಿದೆ. ಹಲವು ಗೆಟಪ್ಗಳಲ್ಲಿ ಆಮಿರ್ ಖಾನ್ ಕಾಣಿಸಿಕೊಂಡಿದ್ದಾರೆ. ಸಾಮಾನ್ಯ ಮನುಷ್ಯನೊಬ್ಬನ ಎಮೋಷನಲ್ ಸ್ಟೋರಿ ಈ ಚಿತ್ರದಲ್ಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:04 am, Tue, 31 May 22