AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಧಾಕಡ್​’ ಸೋಲಿನ ಬೆನ್ನಲ್ಲೇ ಮಹತ್ವದ ಕೆಲಸಕ್ಕೆ ಮುಂದಾದ ಕಂಗನಾ ರಣಾವತ್

ಇಷ್ಟು ದೊಡ್ಡ ಸ್ಟಾರ್​ಡಮ್ ಇಟ್ಟುಕೊಂಡು ಚಿತ್ರಕ್ಕೆ ಈ ಮಟ್ಟದ ಸೋಲು ಆಗುತ್ತದೆ ಎಂದರೆ ಅದು ನಿಜಕ್ಕೂ ಅವಮಾನವೇ. ಆದರೆ, ಕಂಗನಾ ಆ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ.

‘ಧಾಕಡ್​’ ಸೋಲಿನ ಬೆನ್ನಲ್ಲೇ ಮಹತ್ವದ ಕೆಲಸಕ್ಕೆ ಮುಂದಾದ ಕಂಗನಾ ರಣಾವತ್
ಕಂಗನಾ
TV9 Web
| Edited By: |

Updated on: May 30, 2022 | 4:54 PM

Share

ಕಂಗನಾ ರಣಾವತ್ (Kangana Ranaut) ಹಾಗೂ ಅವರ ಫ್ಯಾನ್ಸ್​ ಬೇಸರದಲ್ಲಿದ್ದಾರೆ. ಕಂಗನಾ ನಟನೆಯ ‘ಧಾಕಡ್​’ ಸಿನಿಮಾ (Dhaakad Movie) ಹೀನಾಯದಲ್ಲೇ ಹೀನಾಯ ಸೋಲು ಕಂಡಿದೆ. ಕೆಲವೇ ಕೆಲವು ಕೋಟಿ ಕಲೆಕ್ಷನ್ ಮಾಡಿದ ಈ ಚಿತ್ರಕ್ಕೂ ಒಟಿಟಿಯಲ್ಲೂ ಬೆಲೆ ಇಲ್ಲದಂತೆ ಆಗಿದೆ. ಇದರಿಂದ ನಿರ್ಮಾಪಕರು ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಕಂಗನಾ ಈ ಸಿನಿಮಾದಲ್ಲಿ ನಟಿಸಲೇಬಾರದಿತ್ತು ಎಂದು ಫ್ಯಾನ್ಸ್ ಹೇಳಿದ್ದುಂಟು. ಸಿನಿಮಾದಲ್ಲಿ ನಟಿಸಿ, ಅದು ರಿಲೀಸ್ ಆಗಿ, ಸೋತು ಹೋಗಿದ್ದೂ ಆಗಿದೆ. ಈಗ ಯಾವುದನ್ನೂ ತಿದ್ದೋಕೆ ಆಗುವುದಿಲ್ಲ. ಈ ಕಾರಣಕ್ಕೆ ಕಂಗನಾ ಮುಂದಿನ ಸಿನಿಮಾ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಈ ಬಾರಿ ಎಡವಲೇಬಾರದು ಎನ್ನುವ ನಿರ್ಧಾರಕ್ಕೆ ಬಂದಿದ್ದಾರೆ. ಅವರೇ ನಿರ್ದೇಶನ ಮಾಡಿ, ನಟಿಸುತ್ತಿರುವ ‘ಎಮರ್ಜೆನ್ಸಿ’ ಚಿತ್ರದ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ ಕಂಗನಾ. ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅವರು ಹಂಚಿಕೊಂಡಿದ್ದಾರೆ.

‘ಧಾಕಡ್​’ ಬಗ್ಗೆ ಕಂಗನಾಗೆ ಸಾಕಷ್ಟು ನಿರೀಕ್ಷೆ ಇತ್ತು. ಹೀಗಾಗಿ, ತಾವೇ ಮುಂದೆ ನಿಂತು ಸಿನಿಮಾ ಪ್ರಚಾರ ಮಾಡಿದ್ದರು. ತಿರುಪತಿಗೆ ಹೋಗಿ ಪೂಜೆ ಮಾಡಿ ಬಂದಿದ್ದರು. ಆದರೆ, ದೇವರು ಹಾಗೂ ಅಭಿಮಾನಿಗಳು ಅವರ ಕೈ ಹಿಡಿಯಲಿಲ್ಲ. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ 3 ಕೋಟಿ ರೂಪಾಯಿ ಗಳಿಸಲೂ ಒದ್ದಾಡಿದೆ. ಇಷ್ಟು ದೊಡ್ಡ ಸ್ಟಾರ್​ಡಮ್ ಇಟ್ಟುಕೊಂಡು ಚಿತ್ರಕ್ಕೆ ಈ ಮಟ್ಟದ ಸೋಲು ಆಗುತ್ತದೆ ಎಂದರೆ ಅದು ನಿಜಕ್ಕೂ ಅವಮಾನವೇ. ಆದರೆ, ಕಂಗನಾ ಆ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಆಗಿದ್ದು ಆಯಿತು ಮುಂದಾದರೂ ಸರಿಯಾಗಿ ನಡೆಯೋಣ ಎನ್ನುವ ನಿರ್ಧಾರಕ್ಕೆ ಅವರು ಬಂದಂತಿದೆ.

ಇದನ್ನೂ ಓದಿ: ನಿರ್ಮಾಪಕರ​ ಹೊಟ್ಟೆ ಮೇಲೆ ಹೊಡೆದ ಕಂಗನಾ; ಒಟಿಟಿಯಲ್ಲೂ ‘ಧಾಕಡ್​’ ಚಿತ್ರಕ್ಕೆ ಬೇಡಿಕೆ ಇಲ್ಲ

ಇದನ್ನೂ ಓದಿ
Image
ಕಂಗನಾ ನಟನೆಯ ‘ಧಾಕಡ್​’ ಚಿತ್ರ ನೋಡಲು ಒಬ್ಬರೂ ಬರಲಿಲ್ಲ; ಹಲವು ಕಡೆಗಳಲ್ಲಿ ಶೋ ಕ್ಯಾನ್ಸಲ್​
Image
ದೀಪಿಕಾ, ಪ್ರಿಯಾಂಕಾ ರೀತಿ ಹಾಲಿವುಡ್​ಗೆ ಹೋಗ್ತಾರಾ ಕಂಗನಾ? ಖಡಕ್​ ಉತ್ತರ ನೀಡಿದ ‘ಧಾಕಡ್​’ ನಟಿ
Image
‘ಧಾಕಡ್​’ ರಿಲೀಸ್​ಗೂ ಮುನ್ನ ತಿರುಮಲಕ್ಕೆ ಬಂದು ವೆಂಕಟೇಶ್ವರನ ದರ್ಶನ ಪಡೆದ ಕಂಗನಾ ರಣಾವತ್​
Image
ಕಂಗನಾ ರಣಾವತ್​ ಯಾಕಿನ್ನೂ ಮದುವೆ ಆಗಿಲ್ಲ? ಅದಕ್ಕೆ ಕಾರಣ ಆಗಿದ್ದು ಒಂದೇ ಒಂದು ಗಾಸಿಪ್​; ಏನದು?

‘ಮಣಿಕರ್ಣಿಕಾ: ದಿ ಕ್ವೀನ್ ಆಫ್ ಝಾನ್ಸಿ’ ಸಿನಿಮಾ ಮೂಲಕ ನಿರ್ದೇಶನಕ್ಕೆ ಇಳಿದವರು ಕಂಗನಾ. ಆ ಬಳಿಕ ಅವರು ನಿರ್ದೇಶನ ಮಾಡುತ್ತಿರುವ ಎರಡನೇ ಸಿನಿಮಾ ‘ಎಮರ್ಜೆನ್ಸಿ’. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಹುಟ್ಟುವಂತೆ ಮಾಡುವ ಕೆಲಸ ಆಗಬೇಕಿದೆ. ಆ ನಿಟ್ಟಿನಲ್ಲಿ ಕಂಗನಾ ಕೆಲಸ ಮಾಡುತ್ತಿದ್ದಾರೆ.

‘ಧಾಕಡ್​’ ಚಿತ್ರಕ್ಕೆ ಕಥೆ ಬರೆದ ರಿತೇಶ್​ ಷಾ ಅವರೇ ‘ಎಮರ್ಜೆನ್ಸಿ’ ಚಿತ್ರಕ್ಕೂ ಕಥೆ ಬರೆದಿದ್ದಾರೆ. ಈ ಕಾರಣಕ್ಕೆ ಅಭಿಮಾನಿಗಳಿಗೆ ಕೊಂಚ ಅಳಕು ಇದೆ. ‘ಎಮರ್ಜೆನ್ಸಿ’ ಎಂದಾಗ ನೆನಪಿಗೆ ಬರೋದು ಇಂದಿರಾ ಗಾಂಧಿ. ಆದರೆ, ಇದು ಅವರ ಬಯೋಪಿಕ್ ಅಲ್ಲ. ಈ ಬಗ್ಗೆ ಕಂಗನಾ ಈ ಮೊದಲೇ ಸ್ಪಷ್ಟನೆ ನೀಡಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow Us
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ಚಂದ್ರ ಕನ್ಯಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಚಂದ್ರ ಕನ್ಯಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಮೊಬೈಲ್ ನೋಡುತ್ತಾ ಹೋಗುತ್ತಿದ್ದಾಗ ಫ್ಲೋರ್​ನಿಂದ ಕೆಳಗೆ ಬಿದ್ದ ವ್ಯಕ್ತಿ
ಮೊಬೈಲ್ ನೋಡುತ್ತಾ ಹೋಗುತ್ತಿದ್ದಾಗ ಫ್ಲೋರ್​ನಿಂದ ಕೆಳಗೆ ಬಿದ್ದ ವ್ಯಕ್ತಿ
ನಿಮ್ಮ ಏರಿಯಾದಲ್ಲಿ ಗಣೇಶ ಕೂರಿಸ್ಬೇಕಾ? ಹಾಗಾದರೆ ಈ ವಿಡಿಯೋ ನೋಡಿ
ನಿಮ್ಮ ಏರಿಯಾದಲ್ಲಿ ಗಣೇಶ ಕೂರಿಸ್ಬೇಕಾ? ಹಾಗಾದರೆ ಈ ವಿಡಿಯೋ ನೋಡಿ
ಒಂದು ವಾರದಲ್ಲಿ ಮಂಜ ಕಾಮಿಡಿ ಪೀಸ್ ಆಗ್ತಾನೆ; ತಾಂಡವ್ ರಾಮ್ ಭವಿಷ್ಯ
ಒಂದು ವಾರದಲ್ಲಿ ಮಂಜ ಕಾಮಿಡಿ ಪೀಸ್ ಆಗ್ತಾನೆ; ತಾಂಡವ್ ರಾಮ್ ಭವಿಷ್ಯ
ಫಿಲಿಪೈನ್ಸ್ ದೋಣಿ ಬೆಂಕಿ ದುರಂತ; ಮೃತರ ಸಂಖ್ಯೆ 35ಕ್ಕೆ ಏರಿಕೆ
ಫಿಲಿಪೈನ್ಸ್ ದೋಣಿ ಬೆಂಕಿ ದುರಂತ; ಮೃತರ ಸಂಖ್ಯೆ 35ಕ್ಕೆ ಏರಿಕೆ
ಹಾಸನದಲ್ಲಿ ಬೆಚ್ಚಿಬೀಳಿಸಿದ ಸರಣಿ ಹೃದಯಘಾತ ಪ್ರಕರಣಗಳು
ಹಾಸನದಲ್ಲಿ ಬೆಚ್ಚಿಬೀಳಿಸಿದ ಸರಣಿ ಹೃದಯಘಾತ ಪ್ರಕರಣಗಳು
ಬಗೆದಷ್ಟೂ ಬಯಲಾಗ್ತಿದೆ ಮರಿ ವೀರಪ್ಪನ್‌ನ ಅಪರಾಧ ಚಟುವಟಿಕೆಗಳು
ಬಗೆದಷ್ಟೂ ಬಯಲಾಗ್ತಿದೆ ಮರಿ ವೀರಪ್ಪನ್‌ನ ಅಪರಾಧ ಚಟುವಟಿಕೆಗಳು