ಕಂಗನಾ ನಟನೆಯ ‘ಧಾಕಡ್​’ ಚಿತ್ರ ನೋಡಲು ಒಬ್ಬರೂ ಬರಲಿಲ್ಲ; ಹಲವು ಕಡೆಗಳಲ್ಲಿ ಶೋ ಕ್ಯಾನ್ಸಲ್​

Dhaakad Movie Box Office Collection: ಗಲ್ಲಾಪೆಟ್ಟಿಗೆಯಲ್ಲಿ ಕಂಗನಾ ರಣಾವತ್​ ನಟನೆಯ ‘ಧಾಕಡ್​’ ಸಿನಿಮಾ ಊಹಿಸಲೂ ಆಗದ ರೀತಿಯಲ್ಲಿ ಸೋತಿದೆ. ಪ್ರೇಕ್ಷಕರು ಈ ಚಿತ್ರದ ಬಗ್ಗೆ ಕಿಂಚಿತ್ತೂ ಆಸಕ್ತಿ ತೋರಿಸಿಲ್ಲ.

ಕಂಗನಾ ನಟನೆಯ ‘ಧಾಕಡ್​’ ಚಿತ್ರ ನೋಡಲು ಒಬ್ಬರೂ ಬರಲಿಲ್ಲ; ಹಲವು ಕಡೆಗಳಲ್ಲಿ ಶೋ ಕ್ಯಾನ್ಸಲ್​
ಕಂಗನಾ ರಣಾವತ್
Follow us
TV9 Web
| Updated By: ಮದನ್​ ಕುಮಾರ್​

Updated on:May 23, 2022 | 2:01 PM

ಸಿನಿಮಾ ರಂಗದಲ್ಲಿ ಸೋಲು-ಗೆಲುವು ಸಹಜ. ಆದರೆ ತೀರಾ ಹೀನಾಯಾವಾಗಿ ಸೋತರೆ ಸಖತ್​ ಬೇಸರ ಆಗುತ್ತದೆ. ನಟಿ ಕಂಗನಾ ರಣಾವತ್ (Kangana Ranaut) ಅವರಿಗೆ ನಿಜಕ್ಕೂ ಅಂತಹ ದುಸ್ಥಿತಿ ಬಂದಿದೆ. ಅವರು ಬಾಲಿವುಡ್​ನಲ್ಲಿ (Bollywood) ಲೇಡಿ ಸೂಪರ್​ ಸ್ಟಾರ್​ ರೀತಿ ವರ್ತಿಸುತ್ತಿದ್ದರು. ಹಿಂದಿ ಚಿತ್ರರಂಗದ ಬೇರೆ ನಟ-ನಟಿಯರನ್ನು, ನಿರ್ದೇಶಕರನ್ನು ಹೀಯಾಳಿಸುತ್ತಿದ್ದರು. ಆದರೆ ಈಗ ಅವರ ಸಿನಿಮಾವೇ ಹೀನಾಯವಾಗಿ ಸೋತಿದೆ. ಕಂಗನಾ ರಣಾವತ್​ ನಟನೆಯ ‘ಧಾಕಡ್​’ ಚಿತ್ರ (Dhaakad Movie) ಮೇ 20ರಂದು ವಿಶ್ವಾದ್ಯಂತ ಬಿಡುಗಡೆ ಆಯಿತು. ಮೂರು ದಿನ ಕಳೆಯುವುದರೊಳಗೆ ಈ ಚಿತ್ರ ಗಂಟುಮೂಟೆ ಕಟ್ಟಿಕೊಂಡು ಥಿಯೇಟರ್​ನಿಂದ ಎತ್ತಂಗಡಿ ಆಗಿದೆ. ಹಲವು ಕಡೆಗಳಲ್ಲಿ ಈ ಸಿನಿಮಾವನ್ನು ನೋಡಲು ಒಬ್ಬನೇ ಒಬ್ಬ ಪ್ರೇಕ್ಷಕ ಕೂಡ ಬಂದಿಲ್ಲ ಎಂಬುದು ವಿಪರ್ಯಾಸ! ಹಾಗಾಗಿ ಚಿತ್ರಮಂದಿರದವರು ಈ ಸಿನಿಮಾದ ಶೋ ಕ್ಯಾನ್ಸಲ್​ ಮಾಡಿದ್ದಾರೆ. ಇದರಿಂದಾಗಿ ಕಂಗನಾ ರಣಾವತ್​ ಅವರಿಗೆ ತೀವ್ರ ಮುಖಭಂಗ ಆಗಿದೆ. ಇದು ಅವರ ವೃತ್ತಿಜೀವನದ ಅತಿ ದೊಡ್ಡ ಸೋಲು ಎಂದು ಬಣ್ಣಿಸಲಾಗುತ್ತಿದೆ. ‘ಧಾಕಡ್​’ ಚಿತ್ರದ ಕಳಪೆ ಪ್ರದರ್ಶನದಿಂದಾಗಿ ಕಂಗನಾ ರಣಾವತ್​ ಅವರ ಚಾರ್ಮ್​ ಕುಸಿದು ಹೋಗಿದೆ.

‘ಧಾಕಡ್​’ ಸಿನಿಮಾದಲ್ಲಿ ಕಂಗನಾ ರಣಾವತ್​ ಅವರು ಆ್ಯಕ್ಷನ್​ ಅವತಾರ ತಾಳಿದ್ದಾರೆ. ಭರ್ಜರಿಯಾಗಿ ಅವರು ಸಾಹಸ ದೃಶ್ಯಗಳಲ್ಲಿ ನಟಿಸಿದ್ದಾರೆ. ಟ್ರೇಲರ್​ ಬಿಡುಗಡೆ ಆದಾಗ ಅನೇಕರು ಮೆಚ್ಚುಗೆ ಸೂಚಿಸಿದ್ದರು. ಸಲ್ಮಾನ್​ ಖಾನ್​ ಕೂಡ ಈ ಚಿತ್ರದ ಟ್ರೇಲರ್ ಅನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡು ಶುಭ ಹಾರೈಸಿದ್ದರು. ಏನೇ ಮಾಡಿದರೂ ಕೂಡ ಈ ಸಿನಿಮಾ ಬಗ್ಗೆ ಆಸಕ್ತಿ ತೋರಿಸಿಲ್ಲ. ಮೇ 20ರಂದು ‘ಧಾಕಡ್​’ ಬಿಡುಗಡೆಯಾದ ಬಹುತೇಕ ಚಿತ್ರಮಂದಿರಗಳು ಖಾಲಿ ಹೊಡೆಯುತ್ತಿದ್ದವು. ಸಿನಿಮಾ ನೋಡಿದ ಕೆಲವೇ ಕೆಲವು ಮಂದಿ ಕೂಡ ಒಳ್ಳೆಯ ಅಭಿಪ್ರಾಯ ಹಂಚಿಕೊಂಡಿಲ್ಲ. ಇದರಿಂದಾಗಿ ‘ಧಾಕಡ್​’ ಚಿತ್ರ ತೀವ್ರ ಸೋಲು ಅನುಭವಿಸಿದೆ.

ಇದನ್ನೂ ಓದಿ: ಕಂಗನಾ ರಣಾವತ್​ ಯಾಕಿನ್ನೂ ಮದುವೆ ಆಗಿಲ್ಲ? ಅದಕ್ಕೆ ಕಾರಣ ಆಗಿದ್ದು ಒಂದೇ ಒಂದು ಗಾಸಿಪ್​; ಏನದು?

ಇದನ್ನೂ ಓದಿ
Image
Dhaakad Collection: ‘ಧಾಕಡ್’​ ಡಿಸಾಸ್ಟರ್; ಕಂಗನಾ ನಂಬಿ ನೂರಾರು ಕೋಟಿ ರೂಪಾಯಿ ಲಾಸ್​ ಮಾಡಿಕೊಂಡ ನಿರ್ಮಾಪಕರು ಕಂಗಾಲು
Image
ದೀಪಿಕಾ, ಪ್ರಿಯಾಂಕಾ ರೀತಿ ಹಾಲಿವುಡ್​ಗೆ ಹೋಗ್ತಾರಾ ಕಂಗನಾ? ಖಡಕ್​ ಉತ್ತರ ನೀಡಿದ ‘ಧಾಕಡ್​’ ನಟಿ
Image
‘ಇನ್ಮುಂದೆ ನಾನು ಒಂಟಿ ಅಲ್ಲ’ ಎಂದು ಸಲ್ಮಾನ್​ ಖಾನ್​ ಕಡೆ ಕೈ ತೋರಿಸಿ ಹೇಳಿದ ಕಂಗನಾ; ಫ್ಯಾನ್ಸ್​ ಫುಲ್​ ಖುಷ್​​
Image
Kangana Ranaut: ಯೋಗಿ ಆದಿತ್ಯನಾಥ್​ ಭೇಟಿ ಮಾಡಿದ ನಟಿ ಕಂಗನಾ ರಣಾವತ್​; ಈ ಮೀಟಿಂಗ್​ ಉದ್ದೇಶ ಏನು?

ಹಿಂದಿ ಚಿತ್ರರಂಗದಲ್ಲಿ ಇದನ್ನು ಡಿಸಾಸ್ಟರ್​ ಎನ್ನದೇ ಬೇರೇನೂ ಹೇಳಲು ಸಾಧ್ಯವಿಲ್ಲ. ಬಾಲಿವುಡ್​ ಸ್ಟಾರ್​ ಕಲಾವಿದರ ಚಿತ್ರಗಳು ಮೊದಲ ದಿನ ಕನಿಷ್ಠ ಪ್ರಮಾಣದ ಕಲೆಕ್ಷನ್​ ಮಾಡುತ್ತವೆ. ಆದರೆ ಕಂಗನಾ ರಣಾವತ್​ ನಟನೆಯ ‘ಧಾಕಡ್​’ ಮಾಡಿದ್ದು ಕೇವಲ 50 ಲಕ್ಷ ರೂಪಾಯಿ. ಎರಡನೇ ದಿನವಾದ ಶನಿವಾರ (ಮೇ 21) ಕೂಡ ಪರಿಸ್ಥಿತಿ ಸುಧಾರಿಸಲಿಲ್ಲ. ಅಂದು ಕೂಡ ಬರೀ 50 ಲಕ್ಷ ರೂ. ಗಳಿಸುವಲ್ಲಿ ಈ ಚಿತ್ರ ಹೈರಾಣಾಯಿತು. ಮೂರನೇ ದಿನವಾದ ಭಾನುವಾರ (ಮೇ 22) ಕೂಡ ಹೆಚ್ಚು-ಕಡಿಮೆ ಅಷ್ಟೇ ಕಲೆಕ್ಷನ್​ ಆಗಿದೆ. ಇಷ್ಟು ಕಳಪೆ ಪ್ರದರ್ಶನ ನೀಡಿದ ‘ಧಾಕಡ್​’ ಸಿನಿಮಾವನ್ನು ಕಿತ್ತೊಗೆಯದ ಹೊರತು ಚಿತ್ರಮಂದಿರದ ಮಾಲಿಕರಿಗೆ ಬೇರೆ ಯಾವುದೇ ಆಯ್ಕೆ ಉಳಿದಿಲ್ಲ.

ಇದನ್ನೂ ಓದಿ: ‘ಅಜಯ್​ ದೇವಗನ್​ ಹೇಳಿದ್ರಲ್ಲಿ ತಪ್ಪಿಲ್ಲ, ಆದ್ರೆ ಸಂಸ್ಕೃತ ರಾಷ್ಟ್ರ ಭಾಷೆ ಆಗಲಿ’: ಕಂಗನಾ ಹೊಸ ಟ್ವಿಸ್ಟ್​

‘ಧಾಕಡ್​’ ಸಿನಿಮಾದ ಸೋಲಿಗೆ ಕೆಲವು ಕಾರಣಗಳಿವೆ. ಮೊದಲನೆಯದಾಗಿ ಇದು ‘ಎ’ ಪ್ರಮಾಣ ಪತ್ರ ಪಡೆದಿರುವ ಸಿನಿಮಾ. 18 ವರ್ಷ ವಯಸ್ಸಿಗಿಂತ ಚಿಕ್ಕ ಮಕ್ಕಳು ಈ ಸಿನಿಮಾವನ್ನು ನೋಡುವಂತಿಲ್ಲ. ಹಾಗಾಗಿ ಫ್ಯಾಮಿಲಿ ಆಡಿಯನ್ಸ್​ ‘ಧಾಕಡ್​’ ಕಡೆ ಸುಳಿದಿಲ್ಲ. ಇನ್ನು, ಕಂಗನಾ ರಣಾವತ್​ ಅವರ ರಿಯಲ್​ ಲೈಫ್ ವರ್ತನೆ ಕೆಲವರಿಗೆ ಇಷ್ಟ ಆಗುತ್ತಿಲ್ಲ. ಅದು ಕೂಡ ಅವರ ವೃತ್ತಿ ಜೀವನದ ಮೇಲೆ ಪರಿಣಾಮ ಬೀರಿದೆ. ಅದೇ ರೀತಿ, ಮೇ 20ರಂದು ಬಿಡುಗಡೆ ಆಗಿರುವ ಕಾರ್ತಿಕ್​ ಆರ್ಯನ್​ ನಟನೆಯ ‘ಭೂಲ್​ ಭುಲಯ್ಯ 2’ ಚಿತ್ರಕ್ಕೆ ಪೈಪೋಟಿ ನೀಡುವಲ್ಲಿ ‘ಧಾಕಡ್​’ ವಿಫಲವಾಗಿದೆ. ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ‘ಭೂಲ್​ ಭುಲಯ್ಯ 2’ ಸಿನಿಮಾಗೆ ಆದ್ಯತೆ ನೀಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 2:01 pm, Mon, 23 May 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ