AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Aamir Khan: ‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾ ಬಹಿಷ್ಕಾರಕ್ಕೆ ನೆಟ್ಟಿಗರ ಒತ್ತಾಯ; ಆಮಿರ್​ ಖಾನ್​ ಮಾಡಿದ ತಪ್ಪೇನು?

Boycott Laal Singh Chaddha: ಈ ಹಿಂದೆ ಆಮಿರ್​ ಖಾನ್​ ಅವರ ಕೆಲವು ಹೇಳಿಕೆಗಳು ವಿವಾದ ಸೃಷ್ಟಿಸಿದ್ದವು. ಈಗ ‘ಲಾಲ್​ ಸಿಂಗ್​ ಚಡ್ಡಾ’ ಚಿತ್ರದ ರಿಲೀಸ್​ ಸಂದರ್ಭದಲ್ಲಿ ಆ ಹೇಳಿಕೆಗಳು ಮುಳುವಾಗುತ್ತಿವೆ.

Aamir Khan: ‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾ ಬಹಿಷ್ಕಾರಕ್ಕೆ ನೆಟ್ಟಿಗರ ಒತ್ತಾಯ; ಆಮಿರ್​ ಖಾನ್​ ಮಾಡಿದ ತಪ್ಪೇನು?
ಆಮಿರ್ ಖಾನ್, ಕರೀನಾ ಕಪೂರ್​ ಖಾನ್​
TV9 Web
| Edited By: |

Updated on:May 30, 2022 | 11:07 PM

Share

ನಟ ಆಮಿರ್ ಖಾನ್​ (Aamir Khan) ಅವರು ಭಾರಿ ಉತ್ಸಾಹದಿಂದ ಹೊಸ ಸಿನಿಮಾದ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ಅವರು ಮತ್ತು ಕರೀನಾ ಕಪೂರ್​ ಜೋಡಿಯಾಗಿ ನಟಿಸಿರುವ ‘ಲಾಲ್​ ಸಿಂಗ್​ ಚಡ್ಡಾ’ (Laal Singh Chaddha) ಸಿನಿಮಾ ಆಗಸ್ಟ್​ 11ರಂದು ವಿಶ್ವಾದ್ಯಂತ ತೆರೆಕಾಣಲಿದೆ. ಹಲವು ಕಾರಣಗಳಿಂದಾಗಿ ಈ ಸಿನಿಮಾ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ. ಆದರೆ ಕೆಲವರು ಈ ಚಿತ್ರವನ್ನು ವಿರೋಧಿಸುತ್ತಿದ್ದಾರೆ. ಆಮಿರ್​ ಖಾನ್​ ಅವರು ಈ ಹಿಂದೆ ನೀಡಿದ್ದ ಕೆಲವು ಹೇಳಿಕೆಗಳನ್ನು ಇಟ್ಟುಕೊಂಡು ‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾವನ್ನು ಬಹಿಷ್ಕಾರ ಮಾಡಬೇಕು ಎಂದು ನೆಟ್ಟಿಗರು ಅಭಿಯಾನ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ #BoycottLaalSinghChaddha ಹ್ಯಾಶ್​​ ಟ್ಯಾಗ್​ ಟ್ರೆಂಡ್​ ಆಗಿದೆ. ಇದರಿಂದ ಚಿತ್ರದ ಬಾಕ್ಸ್​ ಆಫೀಸ್​ ಮೇಲೆ ನೆಗೆಟಿವ್​ ಪರಿಣಾಮ ಬೀರುವ ಸಾಧ್ಯತೆ ದಟ್ಟವಾಗಿದೆ. ನಟಿ ಕರೀನಾ ಕಪೂರ್​ (Kareena Kapoor Khan) ಅವರು ಈ ಮೊದಲು ನೀಡಿದ್ದ ಕೆಲವು ಹೇಳಿಕೆಗಳು ಕೂಡ ಕಾಂಟ್ರವರ್ಸಿ ಸೃಷ್ಟಿ ಮಾಡಿದ್ದವು. ಅವುಗಳನ್ನು ಜನರು ಈಗ ಮತ್ತೆ ನೆನಪಿಸಿಕೊಂಡಿದ್ದಾರೆ. ಆ ಹೇಳಿಕೆಗಳನ್ನು ಮುಂದಿಟ್ಟುಕೊಂಡು ‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾವನ್ನು ವಿರೋಧಿಸಲಾಗುತ್ತಿದೆ. ಅಂತಿಮವಾಗಿ ಈ ವಿವಾದ ಯಾವ ಸ್ವರೂಪ ಪಡೆದುಕೊಳ್ಳಲಿದೆ ಎಂಬ ಕೌತುಕ ಮೂಡಿದೆ.

ಭಾರತದಲ್ಲಿ ಅಸಹಿಷ್ಣತೆ ಇದೆ ಎಂದು ಈ ಹಿಂದೆ ಆಮಿರ್​ ಖಾನ್​ ಹೇಳಿದ್ದರು. ಅದೇ ರೀತಿ, ದೇವರಿಗೆ ಹಾಲಿನ ಅಭಿಷೇಕ ಮಾಡುವ ಬದಲು ಅದೇ ಹಾಲನ್ನು ಬಡಮಕ್ಕಳಿಗೆ ನೀಡಿ ಎಂದು ಹೇಳಿಕೆ ನೀಡಿದ್ದರು. ಇಂಥ ಕೆಲವು ಹೇಳಿಕೆಗಳಿಂದ ಅವರು ನೆಟ್ಟಿಗರ ವಿರೋಧ ಕಟ್ಟಿಕೊಂಡಿದ್ದರು. ಈಗ ‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾದ ಬಿಡುಗಡೆ ಸಂದರ್ಭದಲ್ಲಿ ಆ ಹೇಳಿಕೆಗಳು ಆಮಿರ್​ ಖಾನ್​ಗೆ ಮುಳುವಾಗುತ್ತಿವೆ.

ಇದನ್ನೂ ಓದಿ
Image
ಆಮಿರ್​ ಖಾನ್​ರನ್ನು ‘ಟೈಟಾನಿಕ್’​ ನಿರ್ದೇಶಕನಿಗೆ ಹೋಲಿಸಿದ ಹಾಲಿವುಡ್​ ದಿಗ್ಗಜ; ಇಲ್ಲಿದೆ ಅಚ್ಚರಿ ವಿಚಾರ
Image
ಬಾಯ್​ಫ್ರೆಂಡ್​ ಜತೆ ಇರಾ ಖಾನ್​ ಬರ್ತ್​​ಡೇ ಆಚರಣೆ​; ಮತ್ತಷ್ಟು ಫೋಟೋ ಹಂಚಿಕೊಂಡ ಆಮಿರ್ ಮಗಳು  
Image
ನಟನೆಗೆ ವಿದಾಯ ಹೇಳಲು ಆಮಿರ್​ ಖಾನ್​ ನಿರ್ಧಾರ ಮಾಡಿದ್ದ ಸಂಗತಿ ಬಯಲು; ಮಾಜಿ ಪತ್ನಿ ಏನು ಹೇಳಿದ್ರು?
Image
‘ಡಿವೋರ್ಸ್​ ಆಗಿರಬಹುದು, ಆದ್ರೆ ಜೊತೆಗಿದ್ದೇವೆ’; ಇಬ್ಬರು ಮಾಜಿ ಪತ್ನಿಯರ ಬಗ್ಗೆ ಮಾತಾಡಿದ ಆಮಿರ್​ ಖಾನ್​

ಇದನ್ನೂ ಓದಿ: Laal Singh Chaddha Trailer: ಐಪಿಎಲ್ ಫೈನಲ್​ನಲ್ಲಿ ರಿಲೀಸ್ ಆಯ್ತು ಲಾಲ್ ಸಿಂಗ್ ಚಡ್ಡಾ ಟ್ರೇಲರ್; ಮತ್ತೆ ಭಿನ್ನ ಗೆಟಪ್ ತೊಟ್ಟ ಆಮಿರ್

ಭಾನುವಾರ (ಮೇ 29) ನಡೆದ ಐಪಿಎಲ್​ ಫೈನಲ್​ ಪಂದ್ಯದ ವೇಳೆ ‘ಲಾಲ್​ ಸಿಂಗ್​ ಚಡ್ಡಾ’ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ಚಂದನ್​ ಅದ್ವೈತ್​ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಹಾಲಿವುಡ್​ನ ‘ಫಾರೆಸ್ಟ್​ ಗಂಪ್​’ ಚಿತ್ರದ ಹಿಂದಿ ರಿಮೇಕ್​ ಆಗಿ ಈ ಸಿನಿಮಾ ಮೂಡಿಬಂದಿದೆ. ಹಲವು ಗೆಟಪ್​ಗಳಲ್ಲಿ ಆಮಿರ್​ ಖಾನ್​ ಕಾಣಿಸಿಕೊಂಡಿದ್ದಾರೆ. ಸಾಮಾನ್ಯ ಮನುಷ್ಯನೊಬ್ಬನ ಎಮೋಷನಲ್​ ಸ್ಟೋರಿ ಈ ಚಿತ್ರದಲ್ಲಿದೆ.

ಇದನ್ನೂ ಓದಿ: ಫ್ಯಾಮಿಲಿ ಜತೆ ಆಮಿರ್​ ಖಾನ್​ ಪುತ್ರಿ ಇರಾ ಖಾನ್​ ಬರ್ತ್​ಡೇ ಆಚರಣೆ; ಫೋಟೋ ನೋಡಿ ಫ್ಯಾನ್ಸ್​ ಹೇಳಿದ್ದೇನು?

ವೈಯಕ್ತಿಕವಾಗಿ ತುಂಬ ಆಸಕ್ತಿ ತೆಗೆದುಕೊಂಡು ಆಮಿರ್​ ಖಾನ್​ ಅವರು ಈ ಸಿನಿಮಾ ಮಾಡಿದ್ದಾರೆ. ಮೂಲ ಹಾಲಿವುಡ್​ ಸಿನಿಮಾ ‘ಫಾರೆಸ್ಟ್​ ಗಂಪ್​’ ಈಗಾಗಲೇ ಒಟಿಟಿಯಲ್ಲಿ ಲಭ್ಯವಿದೆ. ಅದನ್ನು ನೋಡಿದ ಅನೇಕರು ‘ಲಾಲ್​ ಸಿಂಗ್​ ಚಡ್ಡಾ’ ಒಂದು ಕಾಪಿ ಸಿನಿಮಾ ಎಂದೆಲ್ಲ ಟೀಕೆ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 12:39 pm, Mon, 30 May 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ