‘RRR ಚಿತ್ರದಲ್ಲಿ ಇರೋದು ಸಲಿಂಗಕಾಮದ ಕಥೆ’: ಈ ರೀತಿ ಆರೋಪ ಮಾಡಿದ್ದು ಯಾರು?
‘ಆರ್ಆರ್ಆರ್’ ಚಿತ್ರದಲ್ಲಿ ಇಬ್ಬರು ಸ್ನೇಹಿತರ ನಡುವಿನ ಕಥೆ ಹೈಲೈಟ್ ಆಗಿದೆ. ಒಬ್ಬರಿಗೊಬ್ಬರು ಪ್ರಾಣ ಬೇಕಾದರೂ ನೀಡುವಷ್ಟು ಆತ್ಮೀಯತೆ ಆ ಪಾತ್ರಗಳ ನಡುವೆ ಇದೆ.
ಈ ವರ್ಷ ಭಾರತೀಯ ಚಿತ್ರರಂಗದಲ್ಲಿ ಧೂಳೆಬ್ಬಿಸಿದ ಸಿನಿಮಾಗಳ ಪೈಕಿ ‘ಆರ್ಆರ್ಆರ್’ ಸಿನಿಮಾ (RRR Movie) ಪ್ರಮುಖವಾದದ್ದು. ರಾಮ್ ಚರಣ್ ಮತ್ತು ಜ್ಯೂ. ಎನ್ಟಿಆರ್ (Jr NTR) ಮುಖ್ಯಭೂಮಿಕೆ ನಿಭಾಯಿಸಿದ್ದ ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಸೂಪರ್ ಹಿಟ್ ಆಯಿತು. ಈಗ ಒಟಿಟಿಗೂ ಕಾಲಿಟ್ಟು ಜನಮೆಚ್ಚುಗೆ ಗಳಿಸುತ್ತಿದೆ. ಎಸ್.ಎಸ್. ರಾಜಮೌಳಿ ಅವರ ನಿರ್ದೇಶನಕ್ಕೆ ಪ್ರೇಕ್ಷಕರು ಭರಪೂರ ಮೆಚ್ಚುಗೆ ನೀಡಿದ್ದಾರೆ. ಈ ನಡುವೆ ‘ಆರ್ಆರ್ಆರ್’ ಸಿನಿಮಾ ಬಗ್ಗೆ ಒಂದು ಅಪವಾದ ಕೇಳಿಬಂದಿದೆ. ಈ ಚಿತ್ರದಲ್ಲಿ ಇರುವುದು ಸಲಿಂಗಕಾಮದ ಕಥೆ ಎಂದು ಕೆಲವರು ಆರೋಪಿಸುತ್ತಿದ್ದಾರೆ. ಇಡೀ ಸಿನಿಮಾದ ಪ್ರತಿ ದೃಶ್ಯಗಳನ್ನೂ ಕಣ್ಣರಳಿಸಿ ನೋಡಿದ ಭಾರತೀಯ ಪ್ರೇಕ್ಷಕರಿಗೆ ಸಲಿಂಗಕಾಮದ ವಿಷಯ ಕಾಣಿಸಿಲ್ಲ. ಆದರೆ ವಿದೇಶದ ಕೆಲವು ಮಂದಿ ಮಾತ್ರ ಈ ರೀತಿ ವಿಶ್ಲೇಷಣೆ ಮಾಡುತ್ತಿದ್ದಾರೆ. ಜ್ಯೂ. ಎನ್ಟಿಆರ್ ಹಾಗೂ ರಾಮ್ ಚರಣ್ (Ram Charan) ಮಾಡಿದ ಪಾತ್ರಗಳನ್ನು ಪಾಶ್ಚಿಮಾತ್ಯ ಪ್ರೇಕ್ಷಕರು ತಪ್ಪಾಗಿ ಅರ್ಥೈಸುತ್ತಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪರ-ವಿರೋಧದ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ರಾಜಮೌಳಿ ಅವರ ಕಡೆಯಿಂದಾಗಲಿ ಅಥವಾ ಚಿತ್ರತಂಡ ಇತರ ಸದಸ್ಯರಿಂದಾಗಲಿ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
‘ಆರ್ಆರ್ಆರ್’ ಸಿನಿಮಾ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಹಿಂದಿ ವರ್ಷನ್ ಅನ್ನು ನೆಟ್ಫ್ಲಿಕ್ಸ್ ಪ್ರಸಾರ ಮಾಡುತ್ತಿದೆ. ಇನ್ನುಳಿದ ಭಾಷೆಗಳಲ್ಲಿ ಜೀ5 ಪ್ರಸಾರ ಮಾಡುತ್ತಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಈ ಸಿನಿಮಾವನ್ನು ನೋಡಿದವರು ಇದನ್ನು ಸಲಿಂಗಕಾಮದ ಕಥೆ ಎಂದು ಹೇಳುತ್ತಿದ್ದಾರೆ. ಇದಕ್ಕೆ ಅನೇಕರಿಂದ ವಿರೋಧ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: ಒಟಿಟಿಗೆ ಬಂದ ನಂತರ ಥಿಯೇಟರ್ನಲ್ಲಿ ರೀ-ರಿಲೀಸ್ ಆಗುತ್ತಿದೆ ‘ಆರ್ಆರ್ಆರ್’ ಸಿನಿಮಾ
‘ಆರ್ಆರ್ಆರ್’ ಚಿತ್ರದಲ್ಲಿ ಕೊಮರಮ್ ಭೀಮ್ ಎಂಬ ಪಾತ್ರವನ್ನು ಜ್ಯೂ. ಎನ್ಟಿಆರ್ ನಿಭಾಯಿಸಿದ್ದಾರೆ. ಅಲ್ಲುರಿ ಸೀತಾರಾಮ ರಾಜು ಎಂಬ ಪಾತ್ರವನ್ನು ರಾಮ್ ಚರಣ್ ಮಾಡಿದ್ದಾರೆ. ಇಬ್ಬರ ನಡುವಿನ ಸ್ನೇಹ ಈ ಕಥೆಯಲ್ಲಿ ಹೈಲೈಟ್ ಆಗಿದೆ. ಒಬ್ಬರಿಗೊಬ್ಬರು ಪ್ರಾಣ ಬೇಕಾದರೂ ನೀಡುವಷ್ಟು ಆತ್ಮೀಯತೆ ಆ ಪಾತ್ರಗಳ ನಡುವೆ ಇದೆ. ಆದರೆ ಅದನ್ನು ಸಲಿಂಗಕಾಮ ಎಂದು ತಪ್ಪಾಗಿ ಅರ್ಥೈಸಿಕೊಂಡು ಕೆಲವು ಪಾಶ್ಚಿಮಾತ್ಯ ಪ್ರೇಕ್ಷಕರು ಟ್ವೀಟ್ ಮಾಡಿದ್ದಾರೆ.
me fighting the urge to tell my friends “THEYRE GAY AND IN LOVE” whenever they discuss RRR is so strong pleasE
— Luna⁷ 06.10 ):) (@LunaMage2) May 3, 2022
OKAY Nobody’s saying it. IM GOING IT SAY IT. RRR is super QUEER-CODED. Like it’s so fucking gay, i can’t function. And im sure it wasn’t an accident either. I love it so much and I hope my homiesexuals get together in the second part. Please make it happen????
— Satyaaxx (@sathzee) April 15, 2022
rrr is about two gay boys in love
— ًramtarak on my side? (@rekigender) March 29, 2022
ನೂರಾರು ಕೋಟಿ ರೂಪಾಯಿ ಬಜೆಟ್ನಲ್ಲಿ ಮೂಡಿಬಂದ ‘ಆರ್ಆರ್ಆರ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಬಂಗಾರದ ಬೆಳೆ ತೆಗೆದಿದೆ. ಸಾವಿರಾರು ಕೋಟಿ ರೂಪಾಯಿ ಕಮಾಯಿ ಮಾಡುವಲ್ಲಿ ಯಶಸ್ವಿ ಆಗಿದೆ. ರಾಜಮೌಳಿ ಅವರು ಸೋಲಿಲ್ಲದ ಸರದಾರ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಈ ಸಿನಿಮಾದ ಮೂಲಕ ಮೊದಲ ಬಾರಿಗೆ ನಟಿ ಆಲಿಯಾ ಭಟ್ ಅವರು ದಕ್ಷಿಣ ಭಾರತಕ್ಕೆ ಕಾಲಿಟ್ಟರು. ಅಜಯ್ ದೇವಗನ್ ಕೂಡ ಒಂದು ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದರು. ಇದರಿಂದ ಉತ್ತರ ಭಾರತದ ಪ್ರೇಕ್ಷಕರೂ ಈ ಸಿನಿಮಾವನ್ನು ಕೌತುಕದಿಂದ ನೋಡಿದರು.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:19 am, Sat, 28 May 22