ಹೇಗಿದೆ ಚಾರ್ಲಿ ಜರ್ನಿ? ಸಾಂಗ್ ಮೂಲಕ ವಿವರಿಸಿದ ರಕ್ಷಿತ್ ಶೆಟ್ಟಿ

ನೋಬಿನ್ ಪೌಲ್ ಅವರು ‘777 ಚಾರ್ಲಿ’ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಜರ್ನಿ ಹಾಡು ಪ್ರೇಕ್ಷಕರಿಗೆ ಇಷ್ಟವಾಗುತ್ತಿದೆ. ರಿಲೀಸ್ ಆದ 12 ಗಂಟೆಗಳಲ್ಲಿ ಈ ಸಾಂಗ್ ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ.

ಹೇಗಿದೆ ಚಾರ್ಲಿ ಜರ್ನಿ? ಸಾಂಗ್ ಮೂಲಕ ವಿವರಿಸಿದ ರಕ್ಷಿತ್ ಶೆಟ್ಟಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: May 31, 2022 | 9:55 AM

ರಕ್ಷಿತ್ ಶೆಟ್ಟಿ ನಟನೆಯ (Rakshit Shetty) ‘777 ಚಾರ್ಲಿ’ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಟ್ರೇಲರ್ ಮೂಲಕ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಗಮನ ಸೆಳೆದಿದೆ. ಈ ಚಿತ್ರ ಗೆದ್ದೇ ಗೆಲ್ಲಲಿದೆ ಎಂಬುದು ರಕ್ಷಿತ್ ಶೆಟ್ಟಿ ನಂಬಿಕೆ. ಆ ನಂಬಿಕೆ ನಿಜವಾಗಲಿದೆ ಎಂದು ಅವರ ಫ್ಯಾನ್ಸ್​​ಗೂ ಭಾಸವಾಗುತ್ತಿದೆ. ಇದಕ್ಕೆಲ್ಲ ಉತ್ತರ ಜೂನ್ 10ರಂದೇ ಸಿಗಬೇಕಿದೆ. ಅದಕ್ಕೂ ಮೊದಲು ರಕ್ಷಿತ್ ಶೆಟ್ಟಿ ಆ್ಯಂಡ್ ಟೀಮ್ ಚಿತ್ರಕ್ಕೆ ದೊಡ್ಡ ಮಟ್ಟದ ಪ್ರಚಾರ ನೀಡುತ್ತಿದೆ. ಈಗ ‘777 ಚಾರ್ಲಿ’ ಸಿನಿಮಾದ (777 Charlie Movie) ಜರ್ನಿ ಸಾಂಗ್ ರಿಲೀಸ್ ಆಗಿದೆ. ಈ ಹಾಡು ಸಖತ್ ಮಜವಾಗಿದೆ.

‘777 ಚಾರ್ಲಿ’ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ ಅವರು ಭಾವರಹಿತವಾಗಿ ಬದುಕುತ್ತಿರುವ ವ್ಯಕ್ತಿಯ ಪಾತ್ರ ಮಾಡಿದ್ದಾರೆ. ಕಥಾ ನಾಯಕನಿಗೆ ಫ್ಯಾಕ್ಟರಿ, ಊಟ, ಕುಡಿತ ಇದೇ ಲೈಫ್​. ಇದರಿಂದ ಹೊರಗೆ ಆತನಿಗೆ ಏನೂ ಇಲ್ಲ. ಆದರೆ, ಅವನ ಜೀವನದಲ್ಲಿ ಒಂದು ಶ್ವಾನದ ಎಂಟ್ರಿ ಆಗುತ್ತದೆ. ಚಾರ್ಲಿ ಎನ್ನುವ ಹೆಸರನ್ನು ಆತನಿಗೆ ಇಡಲಾಗುತ್ತದೆ. ನಂತರ ಈ ಚಾರ್ಲಿಯನ್ನು ಕರೆದುಕೊಂಡು ದೇಶ ಸುತ್ತುತ್ತಾನೆ ಕಥಾ ನಾಯಕ. ಈ ಜರ್ನಿಗೆ ಪೂರಕವಾಗಿ ಹೊಸ ಹಾಡು ಮೂಡಿ ಬಂದಿದೆ.

ನೋಬಿನ್ ಪೌಲ್ ಅವರು ‘777 ಚಾರ್ಲಿ’ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಜರ್ನಿ ಹಾಡು ಪ್ರೇಕ್ಷಕರಿಗೆ ಇಷ್ಟವಾಗುತ್ತಿದೆ. ರಿಲೀಸ್ ಆದ 12 ಗಂಟೆಗಳಲ್ಲಿ ಈ ಸಾಂಗ್ ಲಕ್ಷಾಂತರ ಬಾರಿ ವೀಕ್ಷಣೆ ಕಂಡಿದೆ. ಈ ಸಾಂಗ್​ನಲ್ಲಿ ಸಿನಿಮಾದ ದೃಶ್ಯಗಳನ್ನು ಸೇರಿಸಲಾಗಿದೆ. ಮೇಕಿಂಗ್ ವಿಡಿಯೋ ಕೂಡ ಇದರಲ್ಲಿದೆ. ಹೀಗಾಗಿ, ಪ್ರೇಕ್ಷಕರಿಗೆ ಇದು ಮತ್ತಷ್ಟು ರುಚಿಸಿದೆ. ‘777 ಚಾರ್ಲಿ’ ಸಿನಿಮಾ ಐದು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಬೇರೆ ಬೇರೆ ಭಾಷೆಗಳಲ್ಲಿ ಬೇರೆ ಬೇರೆ ಹೀರೋಗಳು ಈ ಚಿತ್ರಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಈ ಕಾರಣಕ್ಕೆ ಪರಭಾಷಿಗರು ಚಿತ್ರದ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಇದನ್ನೂ ಓದಿ
Image
‘777 ಚಾರ್ಲಿ’ ಟ್ರೇಲರ್​ಗಾಗಿ ರಕ್ಷಿತ್ ಶೆಟ್ಟಿಗೆ ಸಾಯಿ ಪಲ್ಲವಿ ಸಾಥ್​; ಕನ್ನಡಿಗರಿಗೆ ಇನ್ನಷ್ಟು ಹತ್ತಿರವಾದ ‘ಪ್ರೇಮಂ’ ಬ್ಯೂಟಿ
Image
ಹಿಂದಿಯಲ್ಲಿ ‘777 ಚಾರ್ಲಿ’ ಚಿತ್ರಕ್ಕೆ ಸಿಕ್ತು ದೊಡ್ಡ ಬೆಂಬಲ; ರಕ್ಷಿತ್ ಫ್ಯಾನ್ಸ್​ಗೆ ಗುಡ್​ ನ್ಯೂಸ್
Image
‘777 ಚಾರ್ಲಿ’ ಚಿತ್ರ ನೋಡಿ ಮೊದಲ ವಿಮರ್ಶೆ ತಿಳಿಸಿದ ರಾಣಾ ದಗ್ಗುಬಾಟಿ; ಹೇಗಿದೆ ರಕ್ಷಿತ್​ ಶೆಟ್ಟಿ ಸಿನಿಮಾ?
Image
ಜೂ.10ರಂದು ರಿಲೀಸ್​ ಆಗಲಿದೆ ‘777 ಚಾರ್ಲಿ’; ಸಿಹಿ ಸುದ್ದಿ​ ​ ನೀಡಿದ ರಕ್ಷಿತ್​ ಶೆಟ್ಟಿ ಆ್ಯಂಡ್​ ಟೀಮ್​

ಇದನ್ನೂ ಓದಿ: ನಂಗೆ ಲವ್ ಫೈಲ್ಯುರ್ ಆಗಿಲ್ಲ: ರವಿಚಂದ್ರನ್ ಮುಂದೆ ಮನಬಿಚ್ಚಿದ ರಕ್ಷಿತ್ ಶೆಟ್ಟಿ

ಕಿರಣ್ ರಾಜ್ ನಿರ್ದೇಶನದ ’777 ಚಾರ್ಲಿ’ ಚಿತ್ರದ ಟ್ರೇಲರ್ ಇತ್ತೀಚೆಗೆ ರಿಲೀಸ್ ಆಗಿತ್ತು. ಹಾಸ್ಯಮಯ ಹಾಗೂ ಭಾವನಾತ್ಮಕವಾಗಿ ಈ ಟ್ರೇಲರ್ ಪ್ರೇಕ್ಷಕರನ್ನು ಗಮನ ಸೆಳೆದಿತ್ತು. ಟ್ರೇಲರ್​ನಿಂದ ಸಿನಿಮಾ ಬಗ್ಗೆ ಇರುವ ಹೈಪ್ ಹೆಚ್ಚಿದೆ. ಪರಭಾಷೆಯವರು ಟ್ರೇಲರ್​ಅನ್ನು ಮೆಚ್ಚಿಕೊಂಡಿದ್ದಾರೆ.

ನಾಯಿ ಕೂಡ ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದೆ. ಆ ಶ್ವಾನದ ಮೂಡ್​ಗೆ ತಕ್ಕಂತೆ ಚಿತ್ರೀಕರಣವನ್ನು ಮಾಡಬೇಕಿತ್ತು. ಆದ್ದರಿಂದ ಈ ಚಿತ್ರದ ಶೂಟಿಂಗ್​ಗೆ ಹೆಚ್ಚು ಸಮಯ ಹಿಡಿದಿದೆ. ಅದರ ನಡುವೆ ಕೊರೊನಾ ಲಾಕ್​ಡೌನ್​ ಕೂಡ ಬಂದಿದ್ದರಿಂದ ಇನ್ನಷ್ಟ ತಡವಾಗಿತ್ತು. ಈಗ ಅಂತೂ ಈ ಸಿನಿಮಾ ರಿಲೀಸ್​ಗೆ ಸಿದ್ಧವಾಗಿದೆ. ಜೂನ್​ 10ರಂದು ‘777 ಚಾರ್ಲಿ’ ಬಿಡುಗಡೆ ಆಗಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ