KGF Chapter 2: ಅಮೆಜಾನ್ ಪ್ರೈಮ್​ನಲ್ಲಿ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೇ ಈ ದಿನಾಂಕದಿಂದ ‘ಕೆಜಿಎಫ್ ಚಾಪ್ಟರ್ 2’ ವೀಕ್ಷಿಸಬಹುದು

Yash | Prashanth Neel | KGF Chapter 2 in Prime: ‘ಕೆಜಿಎಫ್ ಚಾಪ್ಟರ್ 2’ ಚಿತ್ರದ ಓಟಿಟಿ ರಿಲೀಸ್ ದಿನಾಂಕ ಘೋಷಣೆಯಾಗಿದೆ. ಅಮೆಜಾನ್ ಪ್ರೈಮ್​ ಬಳಕೆದಾರರು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೇ ಚಿತ್ರವನ್ನು ವೀಕ್ಷಿಸಬಹುದಾಗಿದೆ. ಚಿತ್ರದ ಪ್ರಸಾರ ಎಂದಿನಿಂದ? ಇಲ್ಲಿದೆ ಮಾಹಿತಿ.

KGF Chapter 2: ಅಮೆಜಾನ್ ಪ್ರೈಮ್​ನಲ್ಲಿ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೇ ಈ ದಿನಾಂಕದಿಂದ ‘ಕೆಜಿಎಫ್ ಚಾಪ್ಟರ್ 2’ ವೀಕ್ಷಿಸಬಹುದು
ಯಶ್
TV9kannada Web Team

| Edited By: shivaprasad.hs

May 31, 2022 | 2:52 PM

ವಿಶ್ವಾದ್ಯಂತ ಸಂಚಲನ ಸೃಷ್ಟಿಸಿದ ‘ಕೆಜಿಎಫ್ ಚಾಪ್ಟರ್ 2’ (KGF Chapter 2) ಚಿತ್ರದ ಓಟಿಟಿ ಬಿಡುಗಡೆಯ ದಿನಾಂಕ ಘೋಷಣೆಯಾಗಿದೆ. ಈ ಹಿಂದೆ ಅಮೆಜಾನ್ ಪ್ರೈಮ್​ನಲ್ಲಿ ರೆಂಟ್​ಗೆ ಪಡೆದು ಚಿತ್ರವನ್ನು ವೀಕ್ಷಿಸುವ ಅವಕಾಶ ಮಾಡಿಕೊಡಲಾಗಿತ್ತು. ಇದೀಗ ಪ್ರೈಮ್ ಬಳಕೆದಾರರಿಗೆ ಎಂದಿನಿಂದ ಚಿತ್ರ ಲಭ್ಯವಿದೆ ಎಂದು ಮಾಹಿತಿ ಹಂಚಿಕೊಳ್ಳಲಾಗಿದೆ. ಅಮೆಜಾನ್ ಪ್ರೈಮ್​ ತನ್ನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಜೂನ್ 3ರಿಂದ ಪ್ರೈಮ್​ ಬಳಕೆದಾರರು ‘ಕೆಜಿಎಫ್ ಚಾಪ್ಟರ್ 2’ ಚಿತ್ರವನ್ನು ವೀಕ್ಷಿಸಬಹುದು ಎಂದು ಘೋಷಿಸಿದೆ. ‘ಕೆಜಿಎಫ್‌ ಚಾಪ್ಟರ್ 2’ ಚಿತ್ರವು ಅಮೆಜಾನ್​ನಲ್ಲಿ ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿ ಭಾಷೆಯಲ್ಲಿ ಪ್ರೈಮ್​ ಸದಸ್ಯರಿಗೆ ವೀಕ್ಷಣೆಗೆ ಲಭ್ಯವಾಗಲಿದೆ.

ಅಮೆಜಾನ್ ಪ್ರೈಮ್ ಹಂಚಿಕೊಂಡ ಮಾಹಿತಿ ಇಲ್ಲಿದೆ:

ಬಾಕ್ಸಾಫೀಸ್​ನಲ್ಲಿ ದಾಖಲೆ ಬರೆದಿರುವ ‘ಕೆಜಿಎಫ್ ಚಾಪ್ಟರ್2’:

ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಕಳೆದ ಕೆಲವು ದಿನಗಳ ಹಿಂದೆಯೇ ಚಿತ್ರವು ರೆಂಟ್​​ಗೆ ಲಭ್ಯವಾಗಿತ್ತು. ಅದಾಗ್ಯೂ ಚಿತ್ರಮಂದಿರಗಳಲ್ಲಿ ‘ಕೆಜಿಎಫ್ ಚಾಪ್ಟರ್ 2’ ಕ್ರೇಜ್ ಕಡಿಮೆಯಾಗಿರಲಿಲ್ಲ. ವಿಶ್ವಾದ್ಯಂತ ಚಿತ್ರವು ಇಲ್ಲಿಯವರೆಗೆ ಸುಮಾರು 1,238 ಕೋಟಿ ರೂಗಳನ್ನು ಗಳಿಸಿದೆ ಎಂದು ಬಾಕ್ಸಾಫೀಸ್ ವಿಶ್ಲೇಷಕರು ಅಂದಾಜಿಸಿದ್ದಾರೆ.

ಸ್ಯಾಂಡಲ್​ವುಡ್​ನಲ್ಲಿ ಜಯಭೇರಿ ಬಾರಿಸಿರುವ ಚಿತ್ರವು, ಹಿಂದಿ ಅವತರಣಿಕೆಯಲ್ಲಿಯೂ ದಾಖಲೆ ಬರೆದಿದೆ. ಭಾರತದಲ್ಲಿ ಅತ್ಯಂತ ಹೆಚ್ಚು ಗಳಿಕೆ ಮಾಡಿದ ಹಿಂದಿ ಚಿತ್ರಗಳ ಪಟ್ಟಿಯಲ್ಲಿ ‘ಕೆಜಿಎಫ್ ಚಾಪ್ಟರ್ 2’ ಹಿಂದಿ ಅವತರಣಿಕೆ ಎರಡನೇ ಸ್ಥಾನ ಪಡೆದಿದೆ. ಮೊದಲ ಸ್ಥಾನದಲ್ಲಿ ‘ಬಾಹುಬಲಿ 2’ ಇದ್ದು, ಹಿಂದಿಯಲ್ಲೇ ತಯಾರಾದ ಇತರ ಸ್ಟಾರ್ ನಟರ​​ ಚಿತ್ರಗಳು ನಂತರದ ಸ್ಥಾನಗಳಲ್ಲಿವೆ. ತಮಿಳುನಾಡು ಬಾಕ್ಸಾಫೀಸ್​​ನಲ್ಲೂ ಅತ್ಯಂತ ಹೆಚ್ಚು ಗಳಿಕೆ ಮಾಡಿದ ಕನ್ನಡ ಚಿತ್ರವಾಗಿ ಯಶ್ ಅಭಿನಯದ ಸಿನಿಮಾ ಗುರುತಿಸಿಕೊಂಡಿದೆ.

ಇದನ್ನೂ ಓದಿ: ‘ಕೆಜಿಎಫ್: ಚಾಪ್ಟರ್​​ 2’ ಸಿನಿಮಾ ಹಿಟ್​ ಆದ್ಮೇಲೆ ಶ್ರೀನಿಧಿ ಶೆಟ್ಟಿ ಕೇಳ್ತಿರುವ ಸಂಭಾವನೆ ಎಷ್ಟು ಕೋಟಿ?

2018 ರಲ್ಲಿ ತೆರೆಕಂಡ ಕೆಜಿಎಫ್‌: ಚಾಪ್ಟರ್ 1 ರ ಮುಂದುವರಿದ ಕತೆಯನ್ನು ‘ಕೆಜಿಎಫ್ ಚಾಪ್ಟರ್ 2’ನಲ್ಲಿ ಹೇಳಲಾಗಿದೆ. ಯಶ್‌ ಜೊತೆಗೆ ಶ್ರೀನಿಧಿ ಶೆಟ್ಟಿ, ಸಂಜಯ್‌ ದತ್‌, ರವೀನಾ ಟಂಡನ್‌, ಪ್ರಕಾಶ್‌ ರಾಜ್‌, ರಾವ್‌ ರಮೇಶ್‌, ಈಶ್ವರಿ ರಾವ್‌, ಅಚ್ಯುತ್ ಕುಮಾರ್ ಮತ್ತು ಅರ್ಚನಾ ಜೋಯಿಸ್‌ ಹಾಗೂ ಇತರರು ಪ್ರಮುಖ ಪಾತ್ರದಲ್ಲಿದ್ದಾರೆ. ಪ್ರಶಾಂತ್‌ ನೀಲ್‌ ಆಕ್ಷನ್ ಕಟ್ ಹೇಳಿರುವ ಈ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ಬ್ಯಾನರ್​ನಲ್ಲಿನ ವಿಜಯ್ ಕಿರಗಂದೂರು ನಿರ್ಮಾಣ ಮಾಡಿದ್ದಾರೆ.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada