JK: ಜೆಕೆ ಮದುವೆಯ ಬಗ್ಗೆ ಹರಿದಾಡುತ್ತಿದೆ ವದಂತಿ; ಸ್ಪಷ್ಟನೆ ನೀಡಿದ ನಟ ಹೇಳಿದ್ದೇನು?

TV9 Digital Desk

| Edited By: shivaprasad.hs

Updated on: Jun 01, 2022 | 8:13 PM

Jayaram Karthik: ನಟ ಕಾರ್ತಿಕ್​ ಜಯರಾಮ್ (ಜೆಕೆ) ಹಂಚಿಕೊಂಡ ಪೋಸ್ಟ್​ ಒಂದನ್ನು ಉಲ್ಲೇಖಿಸಿ ಅವರ ವಿವಾಹದ ಬಗ್ಗೆ ವದಂತಿಗಳು ಹರಿದಾಡುತ್ತಿವೆ. ಇದಕ್ಕೆ ಜೆಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟಿವಿ9ನೊಂದಿಗೆ ಮಾತನಾಡಿದ ಅವರು, ರೂಮರ್​ಗಳನ್ನು ನಿರಾಕರಿಸಿದ್ದಾರೆ.

JK: ಜೆಕೆ ಮದುವೆಯ ಬಗ್ಗೆ ಹರಿದಾಡುತ್ತಿದೆ ವದಂತಿ; ಸ್ಪಷ್ಟನೆ ನೀಡಿದ ನಟ ಹೇಳಿದ್ದೇನು?
ನಟ ಕಾರ್ತಿಕ್ ಜಯರಾಮ್​

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸೇರಿದಂತೆ ಹಲವೆಡೆ ಕಿರುತೆರೆ ಹಾಗೂ ಸ್ಯಾಂಡಲ್​ವುಡ್ ನಟ ಕಾರ್ತಿಕ್​ ಜಯರಾಮ್ (​Karthik Jayaram– ಜೆ.ಕೆ) ಅವರ ಮದುವೆಯ ವಿಚಾರ ಹರಿದಾಡುತ್ತಿತ್ತು. ಜೆಕೆ ಹಂಚಿಕೊಂಡ ಪೋಸ್ಟ್​ ಒಂದನ್ನು ಉಲ್ಲೇಖಿಸಿ ಅವರ ವಿವಾಹದ ಬಗ್ಗೆ ಸುದ್ದಿ ಹರಿಬಿಡಲಾಗಿತ್ತು. ಇದಕ್ಕೆ ಜೆಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟಿವಿ9ನೊಂದಿಗೆ ಮಾತನಾಡಿದ ಅವರು, ಎಲ್ಲೆಡೆ ಹರಿದಾಡುತ್ತಿರುವ ರೂಮರ್​ಗಳನ್ನು ನಿರಾಕರಿಸಿದ್ದಾರೆ. ‘‘ನನಗೆ ಅದೆಷ್ಟು ಬಾರಿ ಮದುವೆ ಮಾಡಿಸುತ್ತಾರೋ ಗೊತ್ತಿಲ್ಲ’’ ಎಂದು ಸೋಷಿಯಲ್ ಮೀಡಿಯಾದಲ್ಲಿ ಮದುವೆಯ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳಿಗೆ ನಟ ಬೇಸರ ಹೊರಹಾಕಿದ್ದಾರೆ. ಫ್ಯಾಶನ್ ಡಿಸೈನರ್​ ಆಗಿರುವ ಅಪರ್ಣಾ ಸಮಂತಾ ಅವರೊಂದಿಗಿರುವ ಚಿತ್ರವನ್ನು ಜೆಕೆ ಹಂಚಿಕೊಂಡಿದ್ದರು. ಅದರ ಬೆನ್ನಲ್ಲೇ ಜೆಕೆ ಅವರ ಕಲ್ಯಾಣ ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ ಅವೆಲ್ಲವೂ ಸುಳ್ಳು ಸುದ್ದಿ ಎಂದು ಜೆಕೆ ಸ್ಪಷ್ಟಪಡಿಸಿದ್ದಾರೆ.

ವೈಯಕ್ತಿಕ ವಿಚಾರಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲದೇ ಬರೆಯುತ್ತಾರೆ ಎಂದು ಜೆಕೆ ಬೇಸರ ಹೊರಹಾಕಿದ್ದಾರೆ. ‘‘ಪ್ರೊಫೇಷನಲ್ ಲೈಫ್ ಬಿಟ್ಟು ವೈಯಕ್ತಿಕ ವಿಚಾರಗಳ ಬಗ್ಗೆ ಹೇಳದೆ ಕೇಳದೆ ಬರೆಯುತ್ತಾರೆ. ನಮ್ಮ‌ ಸಿನಿಮಾಗಳ ಬಗ್ಗೆ ಬರೆಯೋದಿಲ್ಲ’’ ಎಂದು ಅವರು ನೋವು ತೋಡಿಕೊಂಡಿದ್ದಾರೆ.

43 ವರ್ಷದ ಜೆಕೆ ‘ಅಶ್ವಿನಿ ನಕ್ಷತ್ರ’ ಧಾರವಾಹಿಯಿಂದ ಅಪಾರ ಖ್ಯಾತಿ ಗಳಿಸಿದ್ದರು. ಪ್ರಸ್ತುತ ಸ್ಯಾಂಡಲ್​ವುಡ್​ನಲ್ಲಿ ಸಕ್ರಿಯರಾಗಿರುವ ಮಯೂರಿ ಅವರು ಈ ಧಾರವಾಹಿಯಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದರು. 2015ರಲ್ಲಿ ಪ್ರಸಾರವಾಗಿದ್ದ ಈ ಧಾರವಾಹಿ ಜೆಕೆಗೆ ಸ್ಟಾರ್ ಪಟ್ಟ ತಂದುಕೊಟ್ಟಿತ್ತು. ಬಳಿಕ ಜೆಕೆಗೆ ಹಲವು ಭಾಷೆಗಳಲ್ಲಿ ಅವಕಾಶಗಳು ಅರಸಿ ಬಂದವು. ಹಿಂದಿಯ ಕಿರುತೆರೆಯಲ್ಲಿ ಪೌರಾಣಿಕ ಧಾರವಾಹಿಯಾದ ‘ಸಿಯಾ ಕೆ ರಾಮ್’ನಲ್ಲಿ ರಾವಣನ ಪಾತ್ರದಲ್ಲಿ ಜೆಕೆ ಕಾಣಿಸಿಕೊಂಡು ಗಮನ ಸೆಳೆದಿದ್ದರು.

ಇದನ್ನೂ ಓದಿ

ಇದನ್ನೂ ಓದಿ: ಉತ್ತರ ಭಾರತದ ಪ್ರೇಕ್ಷಕರಿಂದಲೂ ಭೇಷ್​ ಎನಿಸಿಕೊಂಡ ಕರುನಾಡಿನ ಪ್ರತಿಭಾವಂತ ಕಲಾವಿದ ಜೆಕೆ

‘ಬಿಗ್ ಬಾಸ್ ಕನ್ನಡ 5’ರಲ್ಲಿ ಜೆಕೆ ಸ್ಪರ್ಧಿಸಿದ್ದರು. ಅದರಲ್ಲಿ ಎರಡನೇ ರನ್ನರ್ ಅಪ್ ಆಗಿದ್ದ ಅವರು ಚಂದನವನದಲ್ಲೂ ಹಲವು ಚಿತ್ರಗಳಲ್ಲಿ ಬಣ್ಣಹಚ್ಚಿದ್ದಾರೆ. ‘ಕೆಂಪೇಗೌಡ’, ‘ವಿಷ್ಣುವರ್ಧನ’, ‘ವರದನಾಯಕ’, ‘ವಿಸ್ಮಯ’, ‘ಜರಾಸಂಧ’, ‘ಆ ಕರಾಳ ರಾತ್ರಿ’, ‘ಪುಟ 109’, ‘ಮೇ 1st’, ‘ಓ ಪುಷ್ಪ ಐ ಹೇಟ್ ಟಿಯರ್ಸ್’ ಮೊದಲಾದ ಚಿತ್ರಗಳಲ್ಲಿ ಜೆಕೆ ಕಾಣಿಸಿಕೊಂಡಿದ್ದಾರೆ. ಪ್ರಸ್ತುತ ಹಿಂದಿ ಹಾಗೂ ತಮಿಳು ಭಾಷೆಗಳ ಪ್ರಾಜೆಕ್ಟ್​ಗಳಲ್ಲಿ ಜೆಕೆ ಬ್ಯುಸಿಯಾಗಿದ್ದಾರೆ.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada