KK’s funeral: ಜೂನ್ 2ರಂದು ಮುಂಬೈನಲ್ಲಿ ಗಾಯಕ ಕೆಕೆ ಅಂತ್ಯಕ್ರಿಯೆ

Mumbai | Krishnakumar Kunnath: ತಮ್ಮ ಗಾಯನದ ಮೋಡಿಯಿಂದ ಎಲ್ಲರ ಮನಗೆದ್ದಿದ್ದ ಕೃಷ್ಣಕುಮಾರ್ ಕುನ್ನತ್ ಮೇ 31 ರಂದು ನಿಧನರಾಗಿದ್ದರು. ಕೆಕೆ ಅವರ ಅಂತ್ಯಕ್ರಿಯೆ ಜೂನ್ 2ರ ಗುರುವಾರದಂದು ಮುಂಬೈನಲ್ಲಿ ನಡೆಯಲಿದೆ ಎಂದು ವರದಿಗಳು ಹೇಳಿವೆ.

KK's funeral: ಜೂನ್ 2ರಂದು ಮುಂಬೈನಲ್ಲಿ ಗಾಯಕ ಕೆಕೆ ಅಂತ್ಯಕ್ರಿಯೆ
ಗಾಯಕ ಕೆಕೆ (ಸಂಗ್ರಹ ಚಿತ್ರ)
Follow us
TV9 Web
| Updated By: shivaprasad.hs

Updated on:Jun 01, 2022 | 6:38 PM

ಕನ್ನಡ, ಹಿಂದಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ತಮ್ಮ ಗಾಯನದ ಮೋಡಿಯಿಂದ ಎಲ್ಲರ ಮನಗೆದ್ದಿದ್ದ ಕೃಷ್ಣಕುಮಾರ್ ಕುನ್ನತ್ (Krishnakumar Kunnath) ಮೇ 31 ರಂದು ನಿಧನರಾಗಿದ್ದರು. ಅವರಿಗೆ 53 ವರ್ಷವಾಗಿತ್ತು. ಕೋಲ್ಕತ್ತಾದಲ್ಲಿ ಸಂಗೀತ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು ನಂತರ ಇಹಲೋಕ ತ್ಯಜಿಸಿದ್ದರು. ಅಸ್ವಸ್ಥರಾಗಿದ್ದ ಅವರನ್ನು ಕೋಲ್ಕತ್ತಾದ ಸಿಎಮ್‌ಆರ್‌ಐ ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಲ್ಲಿ ಕೆಕೆ (KK) ಅವರನ್ನು ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಘೋಷಿಸಲಾಗಿತ್ತು. ಇಂದು (ಜೂ.1) ಕೋಲ್ಕತ್ತದ ರವೀಂದ್ರ ಸದನದಲ್ಲಿ ಅವರ ಪಾರ್ಥಿವ ಶರೀರವನ್ನು ದರ್ಶನಕ್ಕೆ ಇಡಲಾಗಿತ್ತು. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಆಗಮಿಸಿ ನಮನ ಸಲ್ಲಿಸಿದ್ದರು. ಕೆಕೆ ಅವರ ಅಂತ್ಯಕ್ರಿಯೆ ಜೂನ್ 2ರ ಗುರುವಾರದಂದು ಮುಂಬೈನಲ್ಲಿ ನಡೆಯಲಿದೆ ಎಂದು ವರದಿಗಳು ಹೇಳಿವೆ.

ಇತ್ತೀಚಿನ ಮಾಹಿತಿಯ ಪ್ರಕಾರ ಜೂನ್ 1 ರಂದು ಸಂಜೆ 5.15 ಕ್ಕೆ ವಿಮಾನದ ಮೂಲಕ ಕೆಕೆ ಅವರ ಪಾರ್ಥಿವ ಶರೀರವನ್ನು ಮುಂಬೈಗೆ ಸಾಗಿಸಲಾಗುತ್ತದೆ. ವಿಮಾನವು ರಾತ್ರಿ 7.45 ಕ್ಕೆ ಮುಂಬೈ ತಲುಪಲಿದ್ದು, ಜೂನ್ 2 ರಂದು ಅಂತ್ಯಕ್ರಿಯೆ ನಡೆಯಲಿದೆ.

ಇದನ್ನೂ ಓದಿ: ಬಾಲ್ಯದ ಗೆಳತಿ ಜತೆ ಪ್ರೇಮ ವಿವಾಹವಾಗಿದ್ದ ಗಾಯಕ ಕೆಕೆ

ಇದನ್ನೂ ಓದಿ
Image
Hansika Motwani: ಹೊಸ ಫೋಟೋಶೂಟ್​ನಲ್ಲಿ ಮಿಂಚಿದ ಹನ್ಸಿಕಾ; ‘ಬಿಂದಾಸ್’ ಬೆಡಗಿಯ ಫೋಟೋಗಳು ವೈರಲ್​
Image
KK Death: ಸಾವಿಗಿಂತ ಕೆಲವೇ ನಿಮಿಷಗಳ ಮುನ್ನ ವೇದಿಕೆ ತೊರೆದಿದ್ದ ಗಾಯಕ ಕೆಕೆ; ಇಲ್ಲಿದೆ ವೈರಲ್​ ವಿಡಿಯೋ
Image
KK Death Case: ಸಿಂಗರ್​ ಕೆಕೆ ಸಾವಿನಲ್ಲಿ ಮೂಡಿದೆ ಅನುಮಾನ; ಮುಖ, ತಲೆಯಲ್ಲಿ ಗಾಯದ ಗುರುತು? ಕೇಸ್​ ದಾಖಲು
Image
KK Death News: ಗಾಯಕ ಕೆಕೆ ನಿಧನ; 1 ಕೋಟಿ ರೂ. ಕೊಟ್ಟರೂ ಅಂಥ ಸ್ಥಳದಲ್ಲಿ ಹಾಡುವುದಿಲ್ಲ ಎಂದಿದ್ದ ಸಿಂಗರ್​

ಪ್ರಧಾನಿ ಸೇರಿದಂತೆ ನಾಯಕರು, ತಾರೆಯರು, ಅಭಿಮಾನಿಗಳ ಕಂಬನಿ:

ಕೆಕೆ ಅವರು ಪತ್ನಿ ಜ್ಯೋತಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಖ್ಯಾತ ಗಾಯಕನ ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದಿದೆ. ಪ್ರಧಾನಿ ಮೋದಿ ಸೇರಿದಂತೆ ಅನೇಕ ನಾಯಕರು ಕೆಕೆ ಅವರ ನಿಧನಕ್ಕೆ ಅತೀವ ಶೋಕ ವ್ಯಕ್ತಪಡಿಸಿದ್ದಾರೆ.

ಹಲವು ಭಾಷೆಗಳಲ್ಲಿ ಮಿಂಚಿದ್ದ ಗಾಯಕ ಕೆಕೆ: 1990ರ ದಶಕದ ಉತ್ತರಾರ್ಧದಲ್ಲಿ ದೊಡ್ಡ ಮಟ್ಟದಲ್ಲಿ ಹಿಟ್ ಆದ ‘ಪಾಲ್’ ಮತ್ತು ‘ಯಾರೋನ್’ ನಂತಹ ಹಾಡುಗಳಿಗೆ ಕೆಕೆ ಧ್ವನಿ ನೀಡಿದ್ದರು. ಅಲ್ಲಿಂದ ಕೆಕೆ ಧ್ವನಿ ಅಜರಾಮರವಾಯಿತು. ಎಲ್ಲಾ ವಯೋಮನದವರಿಗೆ ಕೆಕೆ ಅಚ್ಚುಮೆಚ್ಚಿನ ಗಾಯಕರಾಗಿದ್ದರು. 2000ರ ದಶಕದ ಆರಂಭದಿಂದ ಅವರು ಹಿನ್ನೆಲೆ ಗಾಯನದ ವೃತ್ತಿಜೀವನದಲ್ಲಿ ಮಿಂಚಿದರು. ಕೆಕೆ ಹಿಂದಿ, ತಮಿಳು, ತೆಲುಗು, ಕನ್ನಡ, ಮಲಯಾಳಂ, ಮರಾಠಿ ಮತ್ತು ಬೆಂಗಾಲಿ ಮೊದಲಾದ ಭಾಷೆಗಳಲ್ಲಿ ಗಾಯನ ಮಾಡಿದ್ದರು. ಒಂಟಿಯಾಗಿರುವವರ ಮನದಲ್ಲೂ ಪ್ರೀತಿಯ ಭಾವ ತುಂಬುವಂತೆ ಕೆಕೆ ಭಾವಪೂರ್ಣವಾಗಿ ಹಾಡುತ್ತಿದ್ದರು ಎಂದು ಅಭಿಮಾನಿಗಳು ಗಾಯಕನನ್ನು ಸ್ಮರಿಸಿಕೊಳ್ಳುತ್ತಿದ್ದಾರೆ.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:30 pm, Wed, 1 June 22

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ