Running: ಹೆಚ್ಚು ಓಡುವುದರಿಂದ ನಿಮ್ಮನ್ನು ಈ ಸಮಸ್ಯೆಗಳು ಕಾಡಬಹುದು

ಬೆಳಗ್ಗೆ ಜಾಗಿಂಗ್ ಮಾಡುವುದು ಓಡುವ ಅಭ್ಯಾಸ ಸಾಮಾನ್ಯವಾಗಿ ಬಹಳಷ್ಟು ಮಂದಿಗಿದೆ. ಆದರೆ ಅತಿಯಾಗಿ ಓಡುವುದರಿಂದ ಹಲವು ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಹೆಚ್ಚು ಓಡುವುದು ನಿಮ್ಮ ಸ್ನಾಯುಗಳ ಮೇಲೆ ಪರಿಣಾಮ ಬೀರಬಹುದು. ಅವು ದುರ್ಬಲಗೊಂಡು ಗಾಯಗೊಳ್ಳುತ್ತವೆ.

Running: ಹೆಚ್ಚು ಓಡುವುದರಿಂದ ನಿಮ್ಮನ್ನು ಈ ಸಮಸ್ಯೆಗಳು ಕಾಡಬಹುದು
Running
Follow us
TV9 Web
| Updated By: ನಯನಾ ರಾಜೀವ್

Updated on:Jun 01, 2022 | 4:08 PM

ಬೆಳಗ್ಗೆ ಜಾಗಿಂಗ್ ಮಾಡುವುದು ಓಡುವ ಅಭ್ಯಾಸ ಸಾಮಾನ್ಯವಾಗಿ ಬಹಳಷ್ಟು ಮಂದಿಗಿದೆ. ಆದರೆ ಅತಿಯಾಗಿ ಓಡುವುದರಿಂದ ಹಲವು ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಹೆಚ್ಚು ಓಡುವುದು ನಿಮ್ಮ ಸ್ನಾಯುಗಳ ಮೇಲೆ ಪರಿಣಾಮ ಬೀರಬಹುದು. ಅವು ದುರ್ಬಲಗೊಂಡು ಗಾಯಗೊಳ್ಳುತ್ತವೆ.

ಇದಲ್ಲದೇ ದಿನನಿತ್ಯ ಹೆಚ್ಚು ಓಡುವವರಲ್ಲಿ ದೈಹಿಕ ಬಳಲಿಕೆಯೂ ಹೆಚ್ಚಾಗಿರುತ್ತದೆ ಮತ್ತು ಇಂತಹ ಪರಿಸ್ಥಿತಿಯಲ್ಲಿ ಅವರು ಪ್ಲಾಂಟರ್ ಫ್ಯಾಸಿಟಿಸ್, ಸ್ನಾಯುಗಳ ಉರಿಯೂತಕ್ಕೆ ಗುರಿಯಾಗಬಹುದು. ಜೊತೆಗೆ, ಇದು ಹಿಮ್ಮಡಿಯಲ್ಲಿ ಅತಿಯಾದ ನೋವು ಉಂಟಾಗಬಹುದು.

ದೇಹ ಬೆಚ್ಚಗಿರಿಸಲು ಓಡಬೇಡಿ: ವಾರ್ಮ್ ಅಪ್ ಎಂದರೆ ವ್ಯಾಯಾಮ ಅಥವಾ ಯಾವುದೇ ಚಟುವಟಿಕೆಗಾಗಿ ದೇಹದ ಸ್ನಾಯುಗಳನ್ನು ಸಿದ್ಧಪಡಿಸುವುದು. ಇದರಿಂದ ದೇಹವು ಬೆಚ್ಚಗಾಗುತ್ತದೆ ಮತ್ತು ಚಟುವಟಿಕೆಯ ಸಮಯದಲ್ಲಿ ಕೈ ಕಾಲು ನೋವು ಬರುವುದಿಲ್ಲ.

ಜಿಮ್‌ನಲ್ಲಿ ಕೆಲವರು ಬೆಚ್ಚಗಾಗಲು ಓಡಲು ಪ್ರಾರಂಭಿಸುವುದನ್ನು ನೀವು ಹೆಚ್ಚಾಗಿ ನೋಡಿರಬಹದು. ಅದು ತಪ್ಪು. ಓಡುವುದರಿಂದ ದೇಹ ಬೆಚ್ಚಗಾಗುವುದಿಲ್ಲ. ಟ್ರೆಡ್ ಮಿಲ್, ನೆಲದ ಅಥವಾ ಟ್ರ್ಯಾಕ್ನಲ್ಲಿ ಓಡುವ ಮೊದಲು, ಬೆಚ್ಚಗಾಗುವುದು ಅವಶ್ಯಕ.

ಓಡುವ ಮೊದಲು ದೇಹ ಬೇಗನೇ ಬೆಚ್ಚಗಾದರೆ ಜನರು ಆಯಾಸಗೊಳ್ಳುತ್ತಾರೆ. ಅಂಗಾಂಗಳಲ್ಲಿ ನೋವು ಕಾಣಿಸಿಕೊಳ್ಳಬಹುದು. 10-15 ನಿಮಿಷ ಜಾಗಿಂಗ್ ಮಾಡಿ ಇಲ್ಲವೆ ನಡೆಯಿರಿ. ಇದು ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ.

ಓಡುವ ಮೊದಲು ಕಾರ್ಬೋಹೈಡ್ರೇಟ್‌ ಪದಾರ್ಥ ಸೇವಿಸಿ: ರನ್ನಿಂಗ್ ಮಾಡುವಾಗ ಸಾಕಷ್ಟು ಶಕ್ತಿಯ ಅಗತ್ಯವಿರುತ್ತದೆ. ಸಾಮಾನ್ಯವಾಗಿ ಜನರು ಬೆಳಗ್ಗೆ ಓಡಲು ಹೋದಾಗ ಅವರು ಖಾಲಿ ಹೊಟ್ಟೆಯಲ್ಲಿ ಹೋಗುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ದೇಹದಲ್ಲಿ ಶಕ್ತಿಯಿರುವುದಿಲ್ಲ. ಹೀಗಾಗಿ ಬೇಗನೆ ದಣಿವಾಗುತ್ತದೆ.ರಾತ್ರಿ ಸೇವಿಸಿದ ಆಹಾರವು ರಾತ್ರಿಯಿಡೀ ಶಕ್ತಿಯನ್ನು ನೀಡುತ್ತದೆ. ಬೆಳಗ್ಗೆ ಶಕ್ತಿಯನ್ನು ಪಡೆಯಲು ಓಡುವ 30 ನಿಮಿಷಗಳ ಮೊದಲು ಕಾರ್ಬೋಹೈಡ್ರೇಟ್ ಆಹಾರವನ್ನು ಸೇವಿಸಿ., ಇದರಿಂದ ಶಕ್ತಿ ದೊರೆಯುತ್ತದೆ. ಆದರೆ ಅತಿಯಾಗಿ ತಿನ್ನಬೇಡಿ.

ರೋಗನಿರೋಧಕ ಶಕ್ತಿ ಕಮ್ಮಿಯಾಗುತ್ತದೆ ಓಡುವುದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆದರೆ ನೀವು ಪ್ರತಿದಿನ ಅತಿಯಾಗಿ ಓಡಲು ಪ್ರಾರಂಭಿಸಿದರೆ, ಅದರಿಂದ ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆ ಆಯಾಸಕ್ಕೆ ಒಳಗಾಗಿ, ದುರ್ಬಲಗೊಳ್ಳಲು ಕಾರಣವಾಗಬಹುದು

ನಿಮ್ಮ ಉಸಿರಾಟವನ್ನು ನಿಯಂತ್ರಿಸಿ: ಓಡುವಾಗ ಹೃದಯ ಬಡಿತ ಹೆಚ್ಚಾದಾಗ ಉಸಿರಾಟದ ಪ್ರಮಾಣವೂ ಹೆಚ್ಚುತ್ತದೆ. ಉಸಿರಾಟ ವೇಗವಾದಾಗ ದೇಹವು ಹೆಚ್ಚಿನ ಪ್ರಮಾಣದ ಕಾರ್ಬನ್ ಡೈಆಕ್ಸೈಡ್ ಅನ್ನು ಹೊರಸೂಸುತ್ತದೆ. ಇದರಿಂದ ಆಮ್ಲಜನಕವನ್ನು ಸರಿಯಾಗಿ ತೆಗೆದುಕೊಳ್ಳಲು ಕಷ್ಟವಾಗುತ್ತದೆ.

ಮಧ್ಯಂತರ ತರಬೇತಿ: ನೀವು ಸುಸ್ತಾಗದೆ ಹೆಚ್ಚು ಸಮಯ ಓಡಲು ಬಯಸಿದರೆ, ನಿಮ್ಮ ತರಬೇತಿಗೆ ಮಧ್ಯಂತರ ತರಬೇತಿಯನ್ನು ಸೇರಿಸುವುದು ಉತ್ತಮ ಪ್ರಯೋಜನವನ್ನು ನೀಡುತ್ತದೆ. ದೇಹವನ್ನು ವಿವಿಧ ರೀತಿಯಲ್ಲಿ ಹುರಿಗೊಳಿಸುವುದು ವೇಗ, ಸಹಿಷ್ಣುತೆ ಮತ್ತು ತ್ರಾಣವನ್ನು ಹೆಚ್ಚಿಸುತ್ತದೆ.

ಮೂಡ್ ಸ್ವಿಂಗ್ ಹೆಚ್ಚಾಗುತ್ತದೆ: ನೀವು ಹೆಚ್ಚು ಓಡಿದಾಗ ಎಂಡಾರ್ಫಿನ್‌ ಪ್ರಭಾವಕ್ಕೆ ಒಳಗಾಗಿ ಆಯಾಸ ಮತ್ತು ನಿದ್ರೆಯ ಮೇಲೆ ಪರಿಣಾಮ ಉಂಟಾಗುತ್ತದೆ. ಈ ಹಾರ್ಮೋನುಗಳ ಅಸಮತೋಲನ ಉಂಟಾಗಿ ಅದು ಮೂಡ್ ಸ್ವಿಂಗ್ಗೆ ಕಾರಣವಾಗುತ್ತದೆ. ವ್ಯಾಯಾಮವು ನಿಮ್ಮ ಮೆದುಳಿನಲ್ಲಿ ಧನಾತ್ಮಕ ಪ್ರತಿಕ್ರಿಯೆಯನ್ನು ಪ್ರಚೋದಿಸುವ ಎಂಡಾರ್ಫಿನ್‌ ಹಾರ್ಮೊನಿನ ಉತ್ಪತ್ತಿಗೆ ಕಾರಣವಾಗುತ್ತದೆ.

ಈ ಮೇಲಿನ ಲೇಖನ ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನಾಧರಿಸಿರುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:08 pm, Wed, 1 June 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ