Garlic Benefits: ಬೆಳ್ಳುಳ್ಳಿ ಸೇವನೆ ಮಾಡಿ ಈ ರೋಗಗಳಿಂದ ಸದಾ ದೂರವಿರಿ

Garlic Benefits:

Garlic Benefits: ಬೆಳ್ಳುಳ್ಳಿ ಸೇವನೆ ಮಾಡಿ ಈ ರೋಗಗಳಿಂದ ಸದಾ ದೂರವಿರಿ
Garlic
Follow us
TV9 Web
| Updated By: ನಯನಾ ರಾಜೀವ್

Updated on: Jun 02, 2022 | 8:00 AM

ಭಾರತದಲ್ಲಿ ಬಳಸುವ ಹಲವು ಸಾಂಬಾರ ಪದಾರ್ಥಗಳಲ್ಲೂ ಸಾಕಷ್ಟು ಆರೋಗ್ಯ ಗುಣಗಳಿವೆ. ಬೆಳ್ಳುಳ್ಳಿ(Garlic)ಯಲ್ಲಿ ಸಾಕಷ್ಟು ಔಷಧೀಯ ಗುಣಗಳಲಿದ್ದು, ಆರೋಗ್ಯಕ್ಕೆ ಹಲವಾರು ರೀತಿಯ ಲಾಭವನ್ನು ನೀಡುತ್ತದೆ. ಪ್ರತಿನಿತ್ಯ ನಾವು ಅಡುಗೆಯಲ್ಲಿ ಬಳಕೆ ಮಾಡುವ ಸಾಂಬಾರ ಪದಾರ್ಥಗಳಲ್ಲಿ ಬೆಳ್ಳುಳ್ಳಿ ಕೂಡಾ ಒಂದು.

ಬೆಳ್ಳುಳ್ಳಿಯಲ್ಲಿ ಹಲವು ಖನಿಜಾಂಶಗಳು, ವಿಟಮಿನ್ ಗಳು, ಮತ್ತು ರೋಗ ನಿರೋಧಕ ಶಕ್ತಿ ವೃದ್ಧಿಸುವ ಗುಣಗಳಿವೆ. ಪ್ರತಿನಿತ್ಯ ನಾವು ಸೇವಿಸುವ ಆಹಾರದಲ್ಲಿ ಬೆಳ್ಳುಳ್ಳಿಯನ್ನು ಬಳಕೆ ಮಾಡುವುದರಿಂದ ಆರೋಗ್ಯ ಉತ್ತಮಗೊಳಿಸಬಹುದಾಗಿದೆ. ಬೆಳ್ಳುಳ್ಳಿಯಲ್ಲಿ ಔಷಧೀಯ ಗುಣಗಳಿರುವುದನ್ನು ಸಾಕಷ್ಟು ಅಧ್ಯಯನಗಳೂ ಕೂಡ ಸಾಬೀತುಪಡಿಸಿವೆ.

ನಮ್ಮ ಆಹಾರದ ಮೂಲಕ ದಾಳಿಯಿಡುವ ವೈರಸ್ಸುಗಳು, ಬೂಸು, ಯೀಸ್ಟ್ ಮತ್ತು ಕ್ರಿಮಿಗಳಿಂದ ಸೋಂಕು ಆಗದಿರುವಂತೆ ನೋಡಿಕೊಳ್ಳುತ್ತದೆ. ವಿಶೇಷವಾಗಿ ನಮ್ಮ ಕರುಳುಗಳಲ್ಲಿ ಈ ಕ್ರಿಮಿಗಳು ದಾಳಿಯಿಡುವ ಮುನ್ನವೇ ಅವುಗಳೊಂದಿಗೆ ಹೋರಾಡಿ ದೇಹದಿಂದ ವಿಸರ್ಜನೆಯಾಗುವಂತೆ ನೋಡಿಕೊಳ್ಳುತ್ತವೆ. ನಮ್ಮ ಆರೋಗ್ಯವನ್ನು ಕೆಡಿಸುವ ಕೋಲಿ, ಸಾಲ್ಮೊನೆಲ್ಲಾ ಎಂಟರ್‌ಟಿಡಿಸ್ ಮೊದಲಾದ ವೈರಸ್ಸುಗಳಿಗೆ ಬೆಳ್ಳುಳ್ಳಿ ಉತ್ತಮ ಔಷಧಿಯಾಗಿದೆ.

ತೂಕ ಇಳಿಕೆಗೂ ಬೆಳ್ಳುಳ್ಳಿ ಸಹಕಾರಿ ತೂಕ ಇಳಿಸಲು ಬೆಳ್ಳುಳ್ಳಿ ಉತ್ತಮವಾದ ಪದಾರ್ಥವಾಗಿದೆ. ದೇಹದಲ್ಲಿ ಬೊಜ್ಜು ಆವರಿಸಿಕೊಂಡು, ಅನಾರೋಗ್ಯಕಾರಿ ಆಗಿ ತೂಕ ಬೆಳೆದಿದ್ದರೆ ಆಗ ಅದನ್ನು ಇಳಿಸಲು ಹಸಿ ಬೆಳ್ಳುಳ್ಳಿ ಸೇವಿಸಿ. ಹಸಿ ಬೆಳ್ಳಿಯಲ್ಲಿ ಕೆಟ್ಟ ಮತ್ತು ಅಧಿಕ ಕೊಬ್ಬನ್ನು ಕರಗಿಸುವಂತಹ ಅಂಶಗಳು ಇವೆ. ವಿವಿಧ ರೀತಿಯ ಅಧ್ಯಯನಗಳ ಪ್ರಕಾರ ಬೆಳ್ಳುಳ್ಳಿಯು ಚಯಾಪಚಯ ಕ್ರಿಯೆ ವೃದ್ಧಿಸುವುದು ಎಂದು ಕಂಡುಕೊಳ್ಳಲಾಗಿದೆ.

ರಾತ್ರಿ ಮಲಗುವಾಗ ಬೆಳ್ಳುಳ್ಳಿ ಸೇವಿಸಿ ರಾತ್ರಿ ಮಲಗುವಾಗ ಬೆಳ್ಳುಳ್ಳಿ ಸೇವನೆಯಿಂದ ಹಲವು ದೊಡ್ಡ ರೋಗಗಳು ನಿಮ್ಮಿಂದ ದೂರ ಉಳಿಯುತ್ತವೆ. ಹಾಗೆಯೇ ನೀವು ನಿಮ್ಮನ್ನು ಫಿಟ್​ ಆಗಿರಿಸಿಕೊಳ್ಳಲು ಉಪಯುಕ್ತವಾಗಿದೆ.

ರಕ್ತದೊತ್ತಡ ಸಮಸ್ಯೆ ನಿವಾರಣೆ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ಸೇವಿಸಿದರೆ ಅದರಿಂದ ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ಕಡಿಮೆ ಮಾಡಬಹುದು. ಅಧಿಕ ರಕ್ತದೊತ್ತಡದ ಸಮಸ್ಯೆಯ ಅಪಾಯವಿರುವಂತಹ ಜನರಿಗೆ ವೈದ್ಯರು ಕೂಡ ಬೆಳ್ಳುಳ್ಳಿ ಸೇವನೆ ಮಾಡಲು ಸೂಚಿಸುವರು.

ಉರಿಯೂತ ಶಮನ ಬೆಳಗ್ಗೆ ಎದ್ದ ಬಳಿಕ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ಸೇವಿಸಿದರೆ ಅದು ರಕ್ತಕ್ಕೆ ತುಂಬಾ ಒಳ್ಳೆಯದು. ಬೆಳ್ಳುಳ್ಳಿಯಲ್ಲಿ ಇರುವ ನಿರ್ವಿಷಗೊಳಿಸುವ ಅಂಶವು ರಕ್ತನಾಳದಲ್ಲಿ ಇರುವಂತಹ ಕಲ್ಮಶವನ್ನು ತೆಗೆಯುವುದು ಮತ್ತು ರಕ್ತನಾಳದ ಆರೋಗ್ಯವನ್ನು ಸುಧಾರಿಸುವುದು. ಆ್ಯಂಟಿ ಆಕ್ಸಿಡೆಂಟ್, ರೋಗನಿರೋಧಕ ಮತ್ತು ಉರಿಯೂತ ಶಮನಕಾರಿ ಗುಣ ಹೊಂದಿರುವಂತಹ ಬೆಳ್ಳುಳ್ಳಿಯು ರಕ್ತ ಶುದ್ಧೀಕರಿಸಲು ಪ್ರಮುಖ ಪಾತ್ರ ವಹಿಸುವುದು.

ಕ್ಯಾನ್ಸರ್ ತಡೆಯಬಹುದು ಬೆಳ್ಳುಳ್ಳಿಯಲ್ಲಿ ಉರಿಯೂತ ಶಮನಕಾರಿ, ರೋಗನಿರೋಧಕ ಮತ್ತು ಕ್ಯಾನ್ಸರ್ ವಿರೋಧಿ ಅಂಶಗಳು ಇವೆ. ಖಾಲಿ ಹೊಟ್ಟೆಯಲ್ಲಿ ನೀವು ಬೆಳ್ಳುಳ್ಳಿ ಸೇವಿಸಿದರೆ ಅದರಿಂದ ಕೆಲವೊಂದು ರೀತಿಯ ಕ್ಯಾನ್ಸರ್ ನ್ನು ತಡೆಯಬಹುದು. ಬೆಳ್ಳುಳ್ಳಿಯಲ್ಲಿ ಉನ್ನತ ಮಟ್ಟದ ಆ್ಯಂಟಿಆಕ್ಸಿಡೆಂಟ್ ಗಳು ಇವೆ ಮತ್ತು ಇದು ದೇಹವನ್ನು ನಿರ್ವಿಷಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದು.

ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.

ಆರೋಗ್ಯ ಸಂಬಂಧಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ