Asia Cup Hockey ಏಷ್ಯಾ ಕಪ್ ಹಾಕಿ: ಜಪಾನ್ ತಂಡವನ್ನು ಮಣಿಸಿ ಕಂಚು ಗೆದ್ದ ಭಾರತ

ಎರಡನೇ ಕ್ವಾರ್ಟರ್‌ನಲ್ಲಿ ಜಪಾನ್ ಮತ್ತು ಭಾರತ ಎರಡೂ ತಂಡಗಳಿಗೆ ಇನ್ನೂ ಕೆಲವು ಅವಕಾಶಗಳು ಇದ್ದವು ಆದರೆ ಅಂತಿಮ ಮೂರನೇ ಹಂತದಲ್ಲಿ ಎರಡೂ ತಂಡಗಳು ಎಡವಿದವು. ಸಮಬಲದ ಹುಡುಕಾಟದಲ್ಲಿ ಜಪಾನ್ ತಂಡ ಕೊನೆಯ ಎರಡು ಕ್ವಾರ್ಟರ್‌ಗಳಲ್ಲಿ ಭಾರತದ ಮೇಲೆ ಒತ್ತಡ ಹಾಕಿದ್ದರೂ...

Asia Cup Hockey ಏಷ್ಯಾ ಕಪ್ ಹಾಕಿ: ಜಪಾನ್ ತಂಡವನ್ನು ಮಣಿಸಿ ಕಂಚು ಗೆದ್ದ ಭಾರತ
ಹಾಕಿ ತಂಡ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jun 01, 2022 | 5:12 PM

ಜಕಾರ್ತ: ಜಕಾರ್ತದಲ್ಲಿ (Jakarta) ಬುಧವಾರ ನಡೆದ ಏಷ್ಯಾಕಪ್‌  ಹಾಕಿ (Hero Asia Cup 2022 ) ಹಣಾಹಣಿಯಲ್ಲಿ ಭಾರತದ ಪುರುಷರ ಹಾಕಿ ತಂಡ 1-0 ಗೋಲುಗಳಿಂದ ಜಪಾನ್ (Japan) ತಂಡವನ್ನು ಸೋಲಿಸಿ ಕಂಚಿನ ಪದಕವನ್ನು ಗೆದ್ದುಕೊಂಡಿತು. ಮಂಗಳವಾರ ನಡೆದ ದಕ್ಷಿಣ ಕೊರಿಯಾ ವಿರುದ್ಧದ ರೋಚಕ 4-4 ಡ್ರಾ ನಂತರ ಗೋಲು ವ್ಯತ್ಯಾಸದ ಮೇಲೆ ಪ್ರಶಸ್ತಿ ಹಣಾಹಣಿಯಲ್ಲಿ ಸ್ಥಾನ ಕಳೆದುಕೊಂಡ ನಂತರ, ಹಾಲಿ ಚಾಂಪಿಯನ್ ಭಾರತ ಏಳನೇ ನಿಮಿಷದಲ್ಲಿ ರಾಜ್ ಕುಮಾರ್ ಪಾಲ್ ಮೂಲಕ ಗೋಲು ಗಳಿಸಿದೆ. ಪಂದ್ಯದ ಮೊದಲ ಐದು ನಿಮಿಷಗಳಲ್ಲಿ ಭಾರತವು ಉತ್ತಮ ಪ್ರದರ್ಶ ನೀಡಿದ್ದರೂ ಎದುರಾಳಿ ತಂಡ ಭಾರತದ ಗೋಲು ತಡೆಯುವುದರಲ್ಲಿ ಯಶಸ್ವಿಯಾಗಿತ್ತು ಮೊದಲ ಕ್ವಾರ್ಟರ್‌ನ ಕೊನೆಯ ಐದು ನಿಮಿಷಗಳಲ್ಲಿ ಜಪಾನ್ ಗೋಲು ದಾಖಲಿಸಿಲು ಪ್ರಯತ್ನಿಸಿದರೂ ಭಾರತ ತಂಡ ಸಮರ್ಥವಾಗಿ ಗೋಲುಗಳನ್ನು ತಡೆಹಿಡಿಯಿತು. ಒಂದು ಗೋಲಿನಿಂದ ಭಾರತ ಮುನ್ನಡೆ ಸಾಧಿಸಿದಾಗ ಜಪಾನ್ ಗೋಲು ಗಳಿಸುವ ಆಕ್ರಮಣಕಾರಿ ಪ್ರಯತ್ನ ಮುಂದುವರೆಸಿತು. ಈ ಪ್ರಕ್ರಿಯೆಯಲ್ಲಿ 20 ನೇ ನಿಮಿಷದಲ್ಲಿ ಸತತ ಎರಡು ಪೆನಾಲ್ಟಿ ಕಾರ್ನರ್​​ಗಳನ್ನು ಗಳಿಸಿತು. ಆದರೆ ಭಾರತೀಯ ತಂಡ ಮುನ್ನಡೆ ಕಾಪಾಡಿಕೊಂಡಿತು.

ಎರಡನೇ ಕ್ವಾರ್ಟರ್‌ನಲ್ಲಿ ಜಪಾನ್ ಮತ್ತು ಭಾರತ ಎರಡೂ ತಂಡಗಳಿಗೆ ಇನ್ನೂ ಕೆಲವು ಅವಕಾಶಗಳು ಇದ್ದವು ಆದರೆ ಅಂತಿಮ ಮೂರನೇ ಹಂತದಲ್ಲಿ ಎರಡೂ ತಂಡಗಳು ಎಡವಿದವು. ಸಮಬಲದ ಹುಡುಕಾಟದಲ್ಲಿ ಜಪಾನ್ ತಂಡ ಕೊನೆಯ ಎರಡು ಕ್ವಾರ್ಟರ್‌ಗಳಲ್ಲಿ ಭಾರತದ ಮೇಲೆ ಒತ್ತಡ ಹಾಕಿದ್ದರೂ ಭಾರತ ತಂಡದ ರಕ್ಷಣಾತ್ಮಕ ಆಟದಿಂದ ಗೋಲು ಗಳಿಸಲು ಸಾಧ್ಯವಾಗಲಿಲ್ಲ.

ಫೈನಲ್ ಪಂದ್ಯ ಮಲೇಷ್ಯಾ ಮತ್ತು ದಕ್ಷಿಣ ಕೊರಿಯ ನಡುವೆ ನಡೆಯಲಿದೆ.

ನಾಯಕ ಬೀರೇಂದ್ರ ಲಾಕ್ರಾ ಪ್ಲೇಯರ್ ಆಫ್ ದಿ ಮ್ಯಾಚ್

“ಇದು ಸಾಕಷ್ಟು ಕಷ್ಟಕರವಾಗಿತ್ತು. ನಾವು ಫೈನಲ್‌ಗೆ ಅರ್ಹತೆ ಪಡೆಯದ ಕಾರಣ ಈ ರೀತಿಯ ಪಂದ್ಯಕ್ಕೆ ನಮ್ಮನ್ನು ಪ್ರೇರೇಪಿಸುವುದು ಕಷ್ಟ. ಆದರೆ ತರಬೇತುದಾರರು ಈ ರೀತಿಯ ಆಟಕ್ಕೆ ಹೇಗೆ ಪ್ರೇರೇಪಿಸಲ್ಪಡಬೇಕು ಎಂಬ ಸಲಹೆಗಳನ್ನು ನಮಗೆ ನೀಡಿದರು. ಈ ಟೂರ್ನಿಯಲ್ಲಿ ಜಪಾನ್ ವಿರುದ್ಧದ ಮೊದಲ ಪಂದ್ಯದಲ್ಲಿ ನಾವು ಸೋತಿದ್ದೆವು. ಆದರೆ ತಂಡದ ಹುಡುಗರು ತರಬೇತಿ ಪಡೆದರು, ವಿಡಿಯೊಗಳನ್ನು ನೋಡಿದರು. ಪ್ರತಿ ಆಟದೊಂದಿಗೆ ತಮ್ಮನ್ನು ತಾವು ಸುಧಾರಿಸಿಕೊಂಡರು. ನಾನು ಅವರ ಬಗ್ಗೆ ತುಂಬಾ ಹೆಮ್ಮೆಪಡುತ್ತೇನೆ, ಇದು ಯುವ ತಂಡ ಮತ್ತು ಅವರು ತಮ್ಮ ತಪ್ಪುಗಳನ್ನು ಬೇಗನೆ ಸರಿಪಡಿಸಿಕೊಂಡಿದ್ದಾರೆ ಎಂದು ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಗೆದ್ದ ಭಾರತದ ನಾಯಕ ಬೀರೇಂದ್ರ ಲಾಕ್ರಾ ಹೇಳಿದ್ದಾರೆ.

ಇತರ ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ  ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 4:39 pm, Wed, 1 June 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ