AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shah Rukh Khan: ಶಾರುಖ್​ ಖಾನ್​ ಬಾಲಿವುಡ್​ಗೆ ಕಾಲಿಟ್ಟು ಕಳೆಯಿತು 30 ವರ್ಷ; 14 ಬಾರಿ ‘ಫಿಲ್ಮ್​ಫೇರ್’​ ಪಡೆದ ಕಿಂಗ್​ ಖಾನ್

30 Years of Shah Rukh Khan: ಬಾಕ್ಸ್​ ಆಫೀಸ್​ನಲ್ಲಿ ಶಾರುಖ್​ ಖಾನ್​ ಅವರ ಸಿನಿಮಾಗಳು ಲೆಕ್ಕವಿಲ್ಲದಷ್ಟು ದಾಖಲೆಗಳನ್ನು ಮಾಡಿವೆ. ಪ್ರಶಸ್ತಿಗಳಲ್ಲಿ ಬಾಚಿಕೊಳ್ಳುವಲ್ಲಿಯೂ ಅವರು ಹಿಂದೆ ಬಿದ್ದಿಲ್ಲ.

Shah Rukh Khan: ಶಾರುಖ್​ ಖಾನ್​ ಬಾಲಿವುಡ್​ಗೆ ಕಾಲಿಟ್ಟು ಕಳೆಯಿತು 30 ವರ್ಷ; 14 ಬಾರಿ ‘ಫಿಲ್ಮ್​ಫೇರ್’​ ಪಡೆದ ಕಿಂಗ್​ ಖಾನ್
ಶಾರುಖ್ ಖಾನ್
TV9 Web
| Updated By: ಮದನ್​ ಕುಮಾರ್​|

Updated on: Jun 25, 2022 | 11:46 AM

Share

ನಟ ಶಾರುಖ್​ ಖಾನ್​ (Shah Rukh Khan) ಪಾಲಿಗೆ ಜೂನ್​ 25 ವಿಶೇಷ ದಿನ. ಯಾಕೆಂದರೆ ಇದು ಅವರ ಮೊದಲ ಸಿನಿಮಾ ಬಿಡುಗಡೆ ಆದ ದಿನಾಂಕ. ಹೌದು, ಶಾರುಖ್​ ಖಾನ್​ ಹೀರೋ ಆಗಿ ನಟಿಸಿದ್ದ ‘ದೀವಾನ’ ಸಿನಿಮಾ 1992ರ ಜೂನ್​ 25ರಂದು ಬಿಡುಗಡೆ ಆಯಿತು. ಮೊದಲ ಚಿತ್ರಕ್ಕೆ ಫಿಲ್ಮ್​ಫೇರ್​ (Filmfare) ಪ್ರಶಸ್ತಿ ಪಡೆಯುವಲ್ಲಿ ಅವರು ಯಶಸ್ವಿ ಆದರು. ಆ ಬಳಿಕ ಅವರಿಗೆ ಬ್ಯಾಕ್​ ಟು ಬ್ಯಾಕ್​ ಹಿಟ್​ ಸಿಗುತ್ತಾ ಹೋಯಿತು. ಬಳಿಕ ಬಾಲಿವುಡ್​ನಲ್ಲಿ (Bollywood) ಶಾರುಖ್​ ಅವರು ಸ್ಟಾರ್​ ನಟನಾಗಿ ಮೆರೆದರು. ಹಲವು ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿ ‘ಕಿಂಗ್​ ಖಾನ್​’ ಎನಿಸಿಕೊಂಡರು. ಇಷ್ಟೆಲ್ಲ ಸಾಧನೆ ಮಾಡಿದ ಶಾರುಖ್​ ಖಾನ್​ ಅವರು ಚಿತ್ರರಂಗಕ್ಕೆ ಕಾಲಿಟ್ಟು ಇಂದಿಗೆ 30 ವರ್ಷ ಕಳೆದಿದೆ. ಹಾಗಾಗಿ ಈ ದಿನವನ್ನು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

ಶಾರುಖ್​ ಖಾನ್​ ಅವರು ಸಿನಿಮಾ ಜಗತ್ತಿಗೆ ಕಾಲಿಡುವುದಕ್ಕೂ ಮುನ್ನ ಕಿರುತೆರೆಯಲ್ಲಿ ನಟಿಸುತ್ತಿದ್ದರು. ಬಳಿಕ ಅವರಿಗೆ ದೊಡ್ಡ ಪರದೆಯಲ್ಲಿ ಬ್ರೇಕ್​ ಸಿಕ್ಕಿತು. 90ರ ದಶಕದಲ್ಲಿ ಶಾರುಖ್​ ಖಾನ್​ ಅವರು ಮೋಸ್ಟ್​ ಸೆಲೆಬ್ರೇಟೆಡ್​ ನಟನಾಗಿ ಮೆರೆದರು. 1993ರಲ್ಲಿ ‘ಬಾಜಿಗರ್​’, ‘ಡರ್​’ ಸಿನಿಮಾಗಳಲ್ಲಿನ ಅವರ ಅಭಿನಯಕ್ಕೆ ಜನರು ಫಿದಾ ಆದರು. ಈ ಎರಡೂ ಚಿತ್ರಗಳಿಗೆ ಅವರು ಫಿಲ್ಮ್​ ಫೇರ್​ ಪ್ರಶಸ್ತಿ ಪಡೆದುಕೊಂಡರು. ಮರುವರ್ಷ ತೆರೆಕಂಡ ‘ಕಭಿ ಹಾ ಕಭಿ ನಾ’ ಸಿನಿಮಾಗೂ ಶಾರುಖ್​ ಫಿಲ್ಮ್​ ಫೇರ್ ಅವಾರ್ಡ್​ ಬಾಚಿಕೊಂಡರು. ಈವರೆಗೂ 14 ಬಾರಿ ಫಿಲ್ಮ್​ ಫೇರ್ ಪಡೆದ ಖ್ಯಾತಿ ಅವರಿಗೆ ಸಲ್ಲುತ್ತದೆ.

ಬಾಕ್ಸ್​ ಆಫೀಸ್​ನಲ್ಲಿ ಶಾರುಖ್​ ಖಾನ್​ ಅವರ ಸಿನಿಮಾಗಳು ಲೆಕ್ಕವಿಲ್ಲದಷ್ಟು ದಾಖಲೆಗಳನ್ನು ಮಾಡಿವೆ. ವಿದೇಶದಲ್ಲಿಯೂ ಅವರಿಗೆ ಅಭಿಮಾನಿಗಳಿದ್ದಾರೆ. ವಿಶ್ವ ಬಾಕ್ಸ್​ ಆಫೀಸ್​ನಲ್ಲಿ ಬಾಲಿವುಡ್​ ಸಿನಿಮಾಗಳು ಬಹುಕೋಟಿ ಕಮಾಯಿ ಮಾಡಲು ಕಾರಣರಾದ ಮೊದಲಿಗರಲ್ಲಿ ಶಾರುಖ್​ ಕೂಡ ಪ್ರಮುಖರು. ಇತ್ತೀಚಿನ ವರ್ಷಗಳಲ್ಲಿ ಶಾರುಖ್​ ಖಾನ್​ ಅವರ ಅದೃಷ್ಟ ಕೊಂಚ ಕೈಕೊಟ್ಟಿದೆ. ಮಾಡಿದ ಸಿನಿಮಾಗಳು ಕೈ ಹಿಡಿಯುತ್ತಿಲ್ಲ. ಹೋದಲ್ಲೆಲ್ಲ ವಿವಾದ ಆಗುತ್ತಿದೆ. ಪುತ್ರ ಆರ್ಯನ್​ ಖಾನ್​ ಮೇಲಿನ ಡ್ರಗ್ಸ್​ ಕೇಸ್​ ಆರೋಪದಿಂದ ಒಂದಷ್ಟು ಹಿನ್ನಡೆ ಆಯಿತು. ಆದರೂ ಶಾರುಖ್​ಗೆ ಇರುವ ಬೇಡಿಕೆ ಕಡಿಮೆ ಆಗಿಲ್ಲ. ಸದ್ಯ ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ. ‘ಜವಾನ್​’, ‘ಡಂಕಿ’, ‘ಪಠಾಣ್​’ ಸಿನಿಮಾಗಳ ಕೆಲಸಗಳು ಭರದಿಂದ ಸಾಗುತ್ತಿವೆ.

ಇದನ್ನೂ ಓದಿ
Image
ಶಾರುಖ್​ ಖಾನ್​-ಅಟ್ಲೀ ಹೊಸ ಸಿನಿಮಾ ಅನೌನ್ಸ್​; ಟೈಟಲ್ ಘೋಷಣೆ ಮಾಡಿದ ಕಿಂಗ್ ಖಾನ್
Image
ಮತ್ತೆ ಹಳೇ ಚಾರ್ಮ್​ ಪಡೆದ ಶಾರುಖ್​ ಖಾನ್​; ‘ಪಠಾಣ್​’ ಚಿತ್ರದ ಒಟಿಟಿ ಪ್ರಸಾರ ಹಕ್ಕು 200 ಕೋಟಿ ರೂ.ಗೆ ಸೇಲ್​?
Image
ಸೌದಿ ಮಿನಿಸ್ಟರ್​ ಜೊತೆ ಶಾರುಖ್​, ಸಲ್ಮಾನ್​​, ಅಕ್ಷಯ್​ ಕುಮಾರ್​ ಪೋಸ್; ಏನಿದು ಸಮಾಚಾರ?
Image
ಶಾರುಖ್​ ಖಾನ್​ 8 ಪ್ಯಾಕ್​ ಬಾಡಿ ಫೋಟೋ ವೈರಲ್​; ‘ಪಠಾಣ್​’ ಚಿತ್ರದಲ್ಲಿ ಹೊಸ ಗೆಟಪ್​

ಇದನ್ನೂ ಓದಿ: Suhana Khan: ಶಾರುಖ್​ ಖಾನ್​ ಮಗಳು ಸುಹಾನಾ ಖಾನ್​ಗೆ ಏನು ಚಿಂತೆ? ಗಡಿಬಿಡಿಯಲ್ಲಿ ಹೊರಟ ಸ್ಟಾರ್​ ಕಿಡ್​

ಶಾರುಖ್​ ಖಾನ್​-ಅಟ್ಲೀ ಹೊಸ ಸಿನಿಮಾ ಅನೌನ್ಸ್​; ಟೈಟಲ್ ಘೋಷಣೆ ಮಾಡಿದ ಕಿಂಗ್ ಖಾನ್

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ