ಶಾರುಖ್​ ಖಾನ್​-ಅಟ್ಲೀ ಹೊಸ ಸಿನಿಮಾ ಅನೌನ್ಸ್​; ಟೈಟಲ್ ಘೋಷಣೆ ಮಾಡಿದ ಕಿಂಗ್ ಖಾನ್

ಅಟ್ಲೀ ಅವರು ದಕ್ಷಿಣ ಭಾರತದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ವಿಜಯ್ ಜತೆ ಮೂರು ಚಿತ್ರಗಳನ್ನು ಮಾಡಿ ಗೆದ್ದಿದ್ದಾರೆ. ಈಗ ‘ಜವಾನ್​’ ಸಿನಿಮಾ ಮೂಲಕ ಅವರು ಬಾಲಿವುಡ್​ಗೆ ಕಾಲಿಡುತ್ತಿದ್ದಾರೆ.

ಶಾರುಖ್​ ಖಾನ್​-ಅಟ್ಲೀ ಹೊಸ ಸಿನಿಮಾ ಅನೌನ್ಸ್​; ಟೈಟಲ್ ಘೋಷಣೆ ಮಾಡಿದ ಕಿಂಗ್ ಖಾನ್
ಶಾರುಖ್ ಖಾನ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Jun 03, 2022 | 3:12 PM

ನಟ ಶಾರುಖ್ ಖಾನ್ (Shah Rukh Khan) ಹಾಗೂ ದಕ್ಷಿಣ ಭಾರತದ ಸ್ಟಾರ್ ನಿರ್ದೇಶಕ ಅಟ್ಲೀ (Atlee) ಒಟ್ಟಾಗಿ ಸಿನಿಮಾ ಮಾಡುತ್ತಾರೆ ಎಂಬ ಸುದ್ದಿ ಈ ಮೊದಲೇ ಹಬ್ಬಿತ್ತು. ಶೂಟಿಂಗ್ ಸಂದರ್ಭದ ಫೋಟೋ ಕೂಡ ವೈರಲ್ ಆಗಿತ್ತು. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿರಲಿಲ್ಲ. ಈಗ ಚಿತ್ರದ ಬಗ್ಗೆ ಅಧಿಕೃತ ಘೋಷಣೆ ಆಗಿದೆ. ಸಿನಿಮಾಗೆ ‘ಜವಾನ್​’ (Jawan Movie)ಎನ್ನುವ ಟೈಟಲ್ ಇಡಲಾಗಿದೆ. ಚಿತ್ರದ ಟೈಟಲ್​ ಹೇಳುವಂತೆ ಈ ಸಿನಿಮಾ ಸೈನಿಕನ ಕುರಿತ ಸಿನಿಮಾ. ಶಾರುಖ್ ಖಾನ್​ ಸೈನಿಕನ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಟೀಸರ್ ಬಿಡುಗಡೆ ಆಗಿದೆ.

ಅಟ್ಲೀ ಅವರು ದಕ್ಷಿಣ ಭಾರತದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ವಿಜಯ್ ಜತೆ ಮೂರು ಚಿತ್ರಗಳನ್ನು ಮಾಡಿ ಗೆದ್ದಿದ್ದಾರೆ. ಈಗ ‘ಜವಾನ್​’ ಸಿನಿಮಾ ಮೂಲಕ ಅವರು ಬಾಲಿವುಡ್​ಗೆ ಕಾಲಿಡುತ್ತಿದ್ದಾರೆ. ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ರಿಲೀಸ್ ಆಗಿರುವ ಟೀಸರ್ ಸಾಕಷ್ಟು ಕುತೂಹಲ ಮೂಡಿಸಿದೆ.

ಇದನ್ನೂ ಓದಿ
Image
‘ಡಂಕಿ’ ಸಿನಿಮಾದ ಫೋಟೋ ಲೀಕ್; 40ರ ಹರೆಯದವರಂತೆ ಕಂಡ ಶಾರುಖ್ ಖಾನ್
Image
‘ಆಚಾರ್ಯ’ ಸಿನಿಮಾದಿಂದ ವಿತರಕರಿಗೆ ನಷ್ಟ; ಮಹತ್ವದ ನಿರ್ಧಾರ ತೆಗೆದುಕೊಂಡ ಚಿರು
Image
ಮುಂಬೈ: ಶಾರುಖ್ ಖಾನ್ ಬಂಗಲೆ ಮನ್ನತ್ ಸಮೀಪದ ಕಟ್ಟಡದಲ್ಲಿ ಬೆಂಕಿ; ಯಾವುದೇ ಅಪಾಯ ಇಲ್ಲ
Image
ನಿರ್ದೇಶಕನ ಎದುರು ತಮ್ಮ ಹೊಸ ಸಿನಿಮಾ ಟೈಟಲ್ ತಪ್ಪಾಗಿ ಓದಿದ ಶಾರುಖ್; ಮುಂದೇನಾಯ್ತು ನೋಡಿ

ಅದು ಕತ್ತಲ ಕೋಣೆ. ಅಲ್ಲಿಗೆ ಶಾರುಖ್ ಎಂಟ್ರಿ ಆಗುತ್ತದೆ. ಚೀಲದ ತುಂಡನ್ನು ತಲೆಗೆ ಸುತ್ತಿಕೊಳ್ಳುತ್ತಾರೆ ಶಾರುಖ್. ಅಲ್ಲಿಯೇ ಇರುವ ಗನ್ ಒಂದನ್ನು ಹಿಡಿದು ಅವರು ಕೂರುತ್ತಾರೆ. ಅವರ ಗೆಟಪ್​ ನೋಡಿ ಪ್ರೇಕ್ಷಕರು ನಿಜಕ್ಕೂ ಅಚ್ಚರಿ ಹೊರ ಹಾಕಿದ್ದಾರೆ. ಇದು ಪ್ಯಾನ್ ಇಂಡಿಯಾ ಸಿನಿಮಾ. ಹಿಂದಿ, ಕನ್ನಡ, ತಮಿಳು ಹಾಗೂ ಮಲಯಾಳಂನಲ್ಲಿ ಸಿನಿಮಾ ತೆರೆಗೆ ಬರುತ್ತಿದೆ. 2023ರ ಜೂನ್​ 2ರಂದು ಸಿನಿಮಾ ರಿಲೀಸ್ ಆಗಲಿದೆ.

View this post on Instagram

A post shared by Taran Adarsh (@taranadarsh)

ಈ ಚಿತ್ರದಲ್ಲಿ ನಯನತಾರಾ ನಟಿಸಲಿದ್ದಾರೆ ಎನ್ನುವ ಸುದ್ದಿ ಈ ಮೊದಲೇ ಹಬ್ಬಿತ್ತು. ಅವರು ಶೀಘ್ರವೇ ಮದುವೆ ಆಗುತ್ತಿದ್ದಾರೆ. ಹೀಗಾಗಿ ಅವರು ಚಿತ್ರದಿಂದ ಹೊರ ನಡೆದಿದ್ದಾರೆ ಎನ್ನುವ ಸುದ್ದಿ ಹರಡಿತ್ತು. ಈ ಬಗ್ಗೆ ಚಿತ್ರತಂಡದಿಂದ ಇನ್ನಷ್ಟೇ ಅಧಿಕೃತ ಮಾಹಿತಿ ಬರಬೇಕಿದೆ.

2018ರಲ್ಲಿ ತೆರೆಗೆ ಬಂದ ‘ಝೀರೋ’ ಚಿತ್ರದ ಸೋಲಿನಿಂದ ಶಾರುಖ್ ಬೇಸರಗೊಂಡರು. ಆ ಬಳಿಕ ಅವರು ಸಿನಿಮಾ ಕೆಲಸಗಳಿಂದ ಬ್ರೇಕ್ ಪಡೆದುಕೊಂಡರು. ಈಗ ‘ಪಠಾಣ್​’, ‘ಡಂಕಿ’ ಹಾಗೂ ‘ಜವಾನ್’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಮೂರು ಚಿತ್ರಗಳು ದೊಡ್ಡ ಬಜೆಟ್​ನ ಸಿನಿಮಾಗಳಾದ್ದರಿಂದ ಸಾಕಷ್ಟು ನಿರೀಕ್ಷೆ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 3:10 pm, Fri, 3 June 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ