ಕನ್ನಡವನ್ನು ಕಡೆಗಣಿಸಿದ ಶಾರುಖ್ ಖಾನ್; ಮರುಕ್ಷಣವೇ ತಿರುಗೇಟು ನೀಡಿದ ಕನ್ನಡಿಗರು

ಶಾರುಖ್ ಖಾನ್​ ಅವರು ಬಾಲಿವುಡ್​ನ ಬೇಡಿಕೆಯ ನಟ ನಿಜ. ಆದರೆ, ಅವರು ತಪ್ಪು ಮಾಡಿದಾಗ ಅನೇಕರು ತಿದ್ದಿ ಹೇಳಿದ್ದಾರೆ. ಈ ಬಾರಿ ಕನ್ನಡಿಗರು ಕಿಂಗ್ ಖಾನ್​ಗೆ ಬುದ್ಧಿವಾದ ಹೇಳಿದ್ದಾರೆ. ಎಲ್ಲಾ ಭಾಷೆಯನ್ನು ಗೌರವಿಸುವಂತೆ ಕನ್ನಡಿಗರು ಅವರನ್ನು ತಿವಿದಿದ್ದಾರೆ.

ಕನ್ನಡವನ್ನು ಕಡೆಗಣಿಸಿದ ಶಾರುಖ್ ಖಾನ್; ಮರುಕ್ಷಣವೇ ತಿರುಗೇಟು ನೀಡಿದ ಕನ್ನಡಿಗರು
ಶಾರುಖ್
TV9kannada Web Team

| Edited By: Rajesh Duggumane

Jun 25, 2022 | 3:50 PM

ಶಾರುಖ್​ ಖಾನ್​ಗೆ (Shah Rukh Khan) ನಮ್ಮ ದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಅಭಿಮಾನಿಗಳಿದ್ದಾರೆ. ರಾಜ್ಯ, ಭಾಷೆಗಳನ್ನೂ ಮೀರಿ ಅವರನ್ನು ಪ್ರೀತಿಸುತ್ತಾರೆ, ಗೌರವಿಸುತ್ತಾರೆ. ಅವರು ಚಿತ್ರರಂಗದಲ್ಲಿ ಈಗ 30 ವರ್ಷ ಪೂರೈಸಿದ್ದಾರೆ. ಶಾರುಖ್ ಅವರ ಈ ಸುದೀರ್ಘ ಪಯಣ ಅಷ್ಟು ಸುಲಭದ್ದಾಗಿರಲಿಲ್ಲ. ಈ ಅವಧಿಯಲ್ಲಿ ಸಾಕಷ್ಟು ಹಿಟ್​ ಚಿತ್ರಗಳನ್ನು ನೀಡಿದ್ದಾರೆ. ಜತೆಗೆ ಕೆಲ ವಿವಾದಗಳನ್ನು ಅವರು ಮಾಡಿಕೊಂಡಿದ್ದಾರೆ. ಕೆಲವು ಕಣ್ತಿಪ್ಪಿನಿಂದ ಆದರೆ, ಕೆಲವು ಗೊತ್ತಿದ್ದೂ ಮಾಡಿದ ತಪ್ಪುಗಳು. ಈಗ ಶಾರುಖ್ ಕನ್ನಡವನ್ನು (Kannada) ಕಡೆಗಣಿಸಿ ತಪ್ಪು ಮಾಡಿದ್ದಾರೆ. ಇದಕ್ಕೆ ಕನ್ನಡಿಗರು ಕ್ಷಣಮಾತ್ರದಲ್ಲಿ ತಿರುಗೇಟು ನೀಡಿದ್ದಾರೆ.

ಶಾರುಖ್ ಖಾನ್​ ಅವರು ಬಾಲಿವುಡ್​ನ ಬೇಡಿಕೆಯ ನಟ ನಿಜ. ಆದರೆ, ಅವರು ತಪ್ಪು ಮಾಡಿದಾಗ ಅನೇಕರು ತಿದ್ದಿ ಹೇಳಿದ್ದಾರೆ. ಈ ಬಾರಿ ಕನ್ನಡಿಗರು ಕಿಂಗ್ ಖಾನ್​ಗೆ ಬುದ್ಧಿವಾದ ಹೇಳಿದ್ದಾರೆ. ಎಲ್ಲಾ ಭಾಷೆಯನ್ನು ಗೌರವಿಸುವಂತೆ ಕನ್ನಡಿಗರು ಅವರನ್ನು ತಿವಿದಿದ್ದಾರೆ. ಅಷ್ಟಕ್ಕೂ ಶಾರುಖ್ ಮಾಡಿದ ತಪ್ಪೇನು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ಶಾರುಖ್ ಖಾನ್ ಅವರು ಇಂದು (ಜೂನ್ 25) ಚಿತ್ರತರಂಗದಲ್ಲಿ 30 ವರ್ಷ ಪೂರೈಸಿದ್ದಾರೆ. ಈ ವಿಶೇಷ ದಿನದ ಅಂಗವಾಗಿ ಶಾರುಖ್ ನಟನೆಯ ‘ಪಠಾಣ್​’ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ಇದರಲ್ಲಿ ಒಂದು ವಿಚಾರ ಸ್ಪಷ್ಟವಾಗಿದೆ. ಈ ಸಿನಿಮಾ ಹಿಂದಿ, ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಮಾತ್ರ ರಿಲೀಸ್ ಆಗುತ್ತಿದೆ. ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ಚಿತ್ರ ತೆರೆಗೆ ಬರುತ್ತಿಲ್ಲ. ಇದಕ್ಕೆ ಕನ್ನಡಿಗರಿಂದ ವಿರೋಧ ವ್ಯಕ್ತವಾಗಿದೆ.

ಇತ್ತೀಚೆಗೆ ‘ನೋ ಕನ್ನಡ ನೋ ಬಿಸ್ನೆಸ್​’ ಎನ್ನುವ ಹ್ಯಾಶ್​ಟ್ಯಾಗ್ ವೈರಲ್ ಆಗಿತ್ತು. ಕಮಲ್ ಹಾಸನ್​ ನಟನೆಯ ‘ವಿಕ್ರಮ್’ ಸಿನಿಮಾ ಕನ್ನಡದಲ್ಲಿ ರಿಲೀಸ್ ಆಗಿರಲಿಲ್ಲ. ಈ ಸಂದರ್ಭದಲ್ಲಿ ಕರ್ನಾಟಕದಲ್ಲಿ ಅನೇಕರಿಂದ ಈ ಚಿತ್ರಕ್ಕೆ ವಿರೋಧ ವ್ಯಕ್ತವಾಗಿತ್ತು. ಈಗ ‘ಪಠಾಣ್​’ ಚಿತ್ರದ ಹೊಸ ಪೋಸ್ಟರ್​ಗೂ ಅನೇಕರು ವಿರೋಧ ತೋರಿದ್ದಾರೆ. ಸಿನಿಮಾ ರಿಲೀಸ್ ಸಂದರ್ಭದಲ್ಲಿ ಈ ಕಾವು ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.

‘ಕನ್ನಡ ಹಾಗೂ ಮಲಯಾಳಂ ಭಾಷೆಯನ್ನು ನೀವು ಕಡೆಗಣಿಸುತ್ತಿರುವುದು ಏಕೆ?’ ಎಂದು ಕೆಲವರು ಶಾರುಖ್​ ಖಾನ್​ ಹಾಗೂ ಚಿತ್ರತಂಡವನ್ನು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ‘ನಿಮ್ಮ ಸಿನಿಮಾ ನಮ್ಮ ನಾಡಲ್ಲಿ ರಿಲೀಸ್ ಮಾಡುವುದೇ ಬೇಡ’ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಶಾರುಖ್​ ಖಾನ್​ ಮಗಳು ಸುಹಾನಾ ಖಾನ್​ಗೆ ಏನು ಚಿಂತೆ? ಗಡಿಬಿಡಿಯಲ್ಲಿ ಹೊರಟ ಸ್ಟಾರ್​ ಕಿಡ್​

ಇದನ್ನೂ ಓದಿ

ಶಾರುಖ್​ ಖಾನ್​-ಅಟ್ಲೀ ಹೊಸ ಸಿನಿಮಾ ಅನೌನ್ಸ್​; ಟೈಟಲ್ ಘೋಷಣೆ ಮಾಡಿದ ಕಿಂಗ್ ಖಾನ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada