AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಭೂಲ್ ಭುಲಯ್ಯ 2’ ಚಿತ್ರ ಗೆಲ್ಲಿಸಿದ ಕಾರ್ತಿಕ್ ಆರ್ಯನ್​ಗೆ ನಾಲ್ಕು ಕೋಟಿ ರೂಪಾಯಿ ಕಾರ್ ಗಿಫ್ಟ್​

‘ಭೂಲ್ ಭುಲಯ್ಯ 2’ ಚಿತ್ರವನ್ನು ನಿರ್ಮಿಸಿ ಭೂಷಣ್ ಕುಮಾರ್ ಯಶಸ್ಸು ಕಂಡಿದ್ದಾರೆ. ಹೀಗಾಗಿ, ಕಾರ್ತಿಕ್​ಗೆ ಕಾರನ್ನು ಉಡುಗೊರೆಯಾಗಿ ನೀಡಲಾಗಿದೆ.

‘ಭೂಲ್ ಭುಲಯ್ಯ 2’ ಚಿತ್ರ ಗೆಲ್ಲಿಸಿದ ಕಾರ್ತಿಕ್ ಆರ್ಯನ್​ಗೆ ನಾಲ್ಕು ಕೋಟಿ ರೂಪಾಯಿ ಕಾರ್ ಗಿಫ್ಟ್​
ಕಾರ್ತಿಕ್ ಆರ್ಯನ್
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Jun 24, 2022 | 4:20 PM

Share

‘ಭೂಲ್ ಭುಲಯ್ಯ 2’ ಚಿತ್ರ (Bhool Bhulaiyaa 2 Movie ) ಗೆದ್ದು ಬೀಗಿದೆ. ಈ ಸಿನಿಮಾದಿಂದ ನಟ ಕಾರ್ತಿಕ್ ಆರ್ಯನ್ ವೃತ್ತಿ ಜೀವನಕ್ಕೆ ಒಳ್ಳೆಯ ಮೈಲೇಜ್ ಸಿಕ್ಕಿದೆ. ಈ ಚಿತ್ರ ಗೆಲ್ಲೋಕೆ ಕಾರ್ತಿಕ್ ಆರ್ಯನ್ (Kartik Aaryan) ಮುಖ್ಯ ಕಾರಣ ಅನ್ನೋದು ಕೆಲವರ ವಾದ. ಇದು ಚಿತ್ರದ ನಿರ್ಮಾಪಕ ಭೂಷಣ್​ ಕುಮಾರ್ ಅವರಿಗೂ ಮನವರಿಕೆ ಆದಂತಿದೆ. ಅವರು ನಟ ಕಾರ್ತಿಕ್​ ಆರ್ಯನ್​ಗೆ ಸುಮಾರು ನಾಲ್ಕು ಕೋಟಿ ರೂಪಾಯಿ ಮೌಲ್ಯದ ಮೆಕ್​​ಲಾರೆನ್ (McLaren GT) ಕಾರನ್ನು ಉಡುಗೊರೆ ರೂಪದಲ್ಲಿ ನೀಡಿದ್ದಾರೆ. ಇದು ಕಾರ್ತಿಕ್ ಆರ್ಯನ್ ಖುಷಿಯನ್ನು ದ್ವಿಗುಣ ಮಾಡಿದೆ.

ಬಾಲಿವುಡ್​ನಲ್ಲಿ ದೊಡ್ಡ ಸಿನಿಮಾಗಳು ಗೆಲ್ಲುತ್ತಿಲ್ಲ. ಅಕ್ಷಯ್ ಕುಮಾರ್ ಅವರಂತಹ ಸ್ಟಾರ್​ ನಟರ ಚಿತ್ರಗಳೇ ಬಾಕ್ಸ್ ಆಫೀಸ್​ನಲ್ಲಿ ಹಣ ಮಾಡಲಾಗದೆ ಒದ್ದಾಡುತ್ತಿವೆ. ಇಂತಹ ಸಂದರ್ಭದಲ್ಲಿ ತೆರೆಗೆ ಬಂದ ‘ಭೂಲ್​ ಭುಲಯ್ಯ 2’ ಚಿತ್ರ ಭಾರತದ ಬಾಕ್ಸ್ ಆಫೀಸ್​ನಲ್ಲಿ 184 ಕೋಟಿ ರೂಪಾಯಿ ಬಾಚಿಕೊಂಡಿದೆ. 65 ಕೋಟಿ ರೂಪಾಯಿ ಬಜೆಟ್​ನಲ್ಲಿ ಸಿದ್ಧವಾದ ಈ ಸಿನಿಮಾ ಒಳ್ಳೆಯ ಕಮಾಯಿ ಮಾಡಿದೆ. ಒಟಿಟಿಯಲ್ಲೂ ಚಿತ್ರ ಒಳ್ಳೆಯ ಮೊತ್ತಕ್ಕೆ ಸೇಲ್​ ಆಗಿದೆ. ಇದರಿಂದ ನಿರ್ಮಾಪಕರಿಗೆ ದುಡ್ಡಿನ ಹೊಳೆ ಹರಿದಿದೆ.

ಇದನ್ನೂ ಓದಿ
Image
150 ಕೋಟಿ ರೂ. ಬಾಚಿದ ‘ಭೂಲ್​ ಭುಲಯ್ಯ 2’; ಬಾಲಿವುಡ್​ ಗುಂಪುಗಾರಿಕೆಗೆ ತಕ್ಕ ಉತ್ತರ ನೀಡಿದ ನಟ
Image
ಮೂರೇ ದಿನಕ್ಕೆ ಅರ್ಧಶತಕ ಬಾರಿಸಿದ ಕಾರ್ತಿಕ್ ಆರ್ಯನ್ ಸಿನಿಮಾ; ಬಾಲಿವುಡ್​ಗೆ ಸಿಕ್ತು ಹೊಸ ಬೂಸ್ಟ್​
Image
ವಿಮಾನ ನಿಲ್ದಾಣದಲ್ಲಿ ಕಾರ್ತಿಕ್​ ಆರ್ಯನ್​ಗೆ​ ದುಂಬಾಲುಬಿದ್ದ ಲೇಡಿ ಫ್ಯಾನ್ಸ್​; ವೈರಲ್​ ಆಯ್ತು ವಿಡಿಯೋ
Image
ಸುಶಾಂತ್​ ಸಿಂಗ್​ ರಜಪೂತ್ ರೀತಿಯೇ ಕಾರ್ತಿಕ್​ ಆರ್ಯನ್​ಗೆ ಅನ್ಯಾಯ ಆಗಲು ಕತ್ರಿನಾ ಕಾರಣವೇ?

ಅಕ್ಷಯ್ ಕುಮಾರ್ ನಟನೆಯ ‘ಭೂಲ್​ ಭುಲಯ್ಯ’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಚಿತ್ರವನ್ನು ಭೂಷಣ್ ಕುಮಾರ್ ಅವರೇ ನಿರ್ಮಾಣ ಮಾಡಿದ್ದರು. ಈಗ ‘ಭೂಲ್ ಭುಲಯ್ಯ 2’ ಚಿತ್ರವನ್ನು ನಿರ್ಮಿಸಿ ಅವರು ಯಶಸ್ಸು ಕಂಡಿದ್ದಾರೆ. ಹೀಗಾಗಿ, ಕಾರನ್ನು ಉಡುಗೊರೆ ನೀಡಲಾಗಿದೆ.

ಕಾರ್ತಿಕ್ ಆರ್ಯನ್​ಗೆ ಸಿಕ್ಕ ಕಾರಿನ ಮೌಲ್ಯ 3.75 ಕೋಟಿ ರೂಪಾಯಿ. ಭಾರತದಲ್ಲಿ ಹಲವು ಮೆಕ್​ಲಾರೆನ್ ಕಾರುಗಳು ಇವೆ. ಆದರೆ, ಜಿಟಿ ಮಾಡೆಲ್ ಭಾರತಕ್ಕೆ ಕಾಲಿಟ್ಟಿರುವುದು ಇದೇ ಮೊದಲು ಅನ್ನೋದು ವಿಶೇಷ. ಈ ಕಾರು 4.0-ಲೀಟರ್ ಟ್ವಿನ್ ಟರ್ಬೋ ವಿ8 ಇಂಜಿನ್ ಹೊಂದಿದೆ. ಈ ಕಾರು 0-100 ಕಿ.ಮೀ. ವೇಗವನ್ನು ಕೇವಲ 3.2 ಸೆಕೆಂಡ್​ನಲ್ಲಿ ಹಾಗೂ 0-200 ಕಿ.ಮೀ. ವೇಗವನ್ನು 9 ಸೆಕೆಂಡ್​ನಲ್ಲಿ ಪಡೆದುಕೊಳ್ಳುತ್ತದೆ. ಈ ಕಾರಿನ ಗರಿಷ್ಠ ವೇಗ 327 ಕಿ.ಮೀ. ಆಗಿದೆ.

ಭೂಷಣ್ ಕುಮಾರ್ ನಿರ್ಮಾಣ ಮಾಡಿದ್ದ ‘ಸೋನು ಕಿ ಟಿಟ್ಟೂಕಿ ಸ್ವೀಟಿ’ ಚಿತ್ರ ಗೆಲುವು ಕಂಡಿತ್ತು. ಈ ಚಿತ್ರದಲ್ಲಿ ಕಾರ್ತಿಕ್ ಆರ್ಯನ್ ನಟಿಸಿದ್ದರು. ಈಗ ‘ಭೂಲ್​ ಭುಲಯ್ಯ 2’ ಚಿತ್ರ ಕೂಡ ಗೆದ್ದಿದೆ. ಈ ಮೊದಲು ಕಾರ್ತಿಕ್ ಆರ್ಯನ್​ ಕೋಟಿಕೋಟಿ ರೂಪಾಯಿ ನೀಡಿ ಲ್ಯಾಂಬೋರ್ಗಿನಿ ಕಾರನ್ನು ಖರೀದಿ ಮಾಡಿದ್ದರು. ಈಗ ಅವರ ಕಾರ್ ಕಲೆಕ್ಷನ್​ಗೆ ಮತ್ತೊಂದು ದುಬಾರಿ ಸ್ಪೋರ್ಟ್ಸ್​ ಕಾರು ಸೇರ್ಪಡೆ ಆಗಿದೆ.

ಇದನ್ನೂ ಓದಿ: 150 ಕೋಟಿ ರೂ. ಬಾಚಿದ ‘ಭೂಲ್​ ಭುಲಯ್ಯ 2’; ಬಾಲಿವುಡ್​ ಗುಂಪುಗಾರಿಕೆಗೆ ತಕ್ಕ ಉತ್ತರ ನೀಡಿದ ನಟ

ಮೂರೇ ದಿನಕ್ಕೆ ಅರ್ಧಶತಕ ಬಾರಿಸಿದ ಕಾರ್ತಿಕ್ ಆರ್ಯನ್ ಸಿನಿಮಾ; ಬಾಲಿವುಡ್​ಗೆ ಸಿಕ್ತು ಹೊಸ ಬೂಸ್ಟ್​

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ